ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ➤ ಕಾರಿನಲ್ಲಿದ್ದವರಿಗೆ ಗಾಯ

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.13   ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡು ಕಾರಿನಲ್ಲಿದ್ದವರಿಗೆ ಗಾಯಗಳಾದ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಓಡ್ಲ ಎಂಬಲ್ಲಿ ನಿನ್ನೆ ನಡೆದಿದೆ. ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಕುಬ್ರ, ಕಮರುನ್ನೀಸಾ, ಚಾಲಕ ಅಲಿ ಮತ್ತು ಇತರರು ಗಾಯಗೊಂಡರು ಮತ್ತು ಎರಡೂ ವಾಹನಗಳು ಜಖಂಗೊಂಡ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ➤ ಕಾರಿನಲ್ಲಿದ್ದವರಿಗೆ ಗಾಯ Read More »

ಕರಾವಳಿ

ಮೂಡುಬಿದಿರೆ: ಬಸ್ ಢಿಕ್ಕಿ ಹೊಡೆದು ಯುವ ವೈದ್ಯ ಮೃತ್ಯು

ಮೂಡಬಿದಿರೆ, ಜ.13: ಬೈಕ್‌‌‌‌‌ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರ್‌ಗದ್ದೆ ಬಳಿ ನಡೆದಿದೆ. ಮೃತಪಟ್ಟವರನ್ನು ಕೇರಳದ ಕೊಲ್ಲಂ ಮೂಲದ ಡಾ.ಕೃಷ್ಣಾನಂದ(24) ಎಂದು ಗುರುತಿಸಲಾಗಿದೆ. ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ಇಂಟರ್ನ್‌ಶಿಪ್‌ ನಡೆಸುತ್ತಿದ್ದ ಕೃಷ್ಣಾನಂದ ಅವರು ಭಾನುವಾರ ಬೆಳಗ್ಗೆ ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಮೂಡಬಿದಿರೆಯಿಂದ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಕೆಸರ್‌ಗದ್ದೆ ಬಳಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಓವರ್‌ ಟೇಕ್‌ ಮಾಡುವ ಸಂದರ್ಭ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ

ಮೂಡುಬಿದಿರೆ: ಬಸ್ ಢಿಕ್ಕಿ ಹೊಡೆದು ಯುವ ವೈದ್ಯ ಮೃತ್ಯು Read More »

ಕರಾವಳಿ

ದೇರಳಕಟ್ಟೆ: ಪ್ರತಿಭಟನೆಗೆ ಬಳಸಿದ ಕುರ್ಚಿ ತುಂಬಿದ ಲಾರಿಗೆ ಬೆಂಕಿ ಹಚ್ಚಿದ ಕೀಡಿಗೇಡಿಗಳು?

ಸೂಕ್ತ ತನಿಖೆಗೆ ಸ್ಥಳೀಯರ ಆಗ್ರಹ ಮಂಗಳೂರು‌, ಜ.13: ದೇರಳಕಟ್ಟೆಯಲ್ಲಿ ರವಿವಾರ ನಡೆದ ಸಿಎಎ, ಎನ್ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಳಸಲಾಗಿದ್ದ  2,500 ಕುರ್ಚಿಗಳನ್ನು ತುಂಬಿದ್ದ ಈಚರ್‌ ವಾಹನವು ರಾತ್ರಿ ಸುಮಾರು 2:30 ಗಂಟೆಗೆ ಬೆಂಕಿಗಾಹುತಿಯಾಗಿದ್ದು, ಯಾರೂ ಕೀಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೌರತ್ವ ಸಂರಕ್ಷಣಾ ಸಮಿತಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ರ್‍ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಈಚರ್‌ ವಾಹನಕ್ಕೆ ಲೋಡ್‌ ಮಾಡಲಾಗಿದ್ದು, ಕುರ್ಚಿಗಳನ್ನು ತುಂಬಿದ್ದ ವಾಹನಕ್ಕೆ ಅಪರಿಚಿತರು ಬೆಂಕಿ ಹಚ್ಚಿದ್ದಾರೋ ಅಥವಾ ಆಕಸ್ಮಕವಾಗಿ ಬೆಂಕಿ ಹತ್ತಿಕೊಂಡಿದೆಯೋ

ದೇರಳಕಟ್ಟೆ: ಪ್ರತಿಭಟನೆಗೆ ಬಳಸಿದ ಕುರ್ಚಿ ತುಂಬಿದ ಲಾರಿಗೆ ಬೆಂಕಿ ಹಚ್ಚಿದ ಕೀಡಿಗೇಡಿಗಳು? Read More »

ಕರಾವಳಿ

ಕೊಣಾಜೆ ಒಕ್ಕೂಟ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com, ಕಡಬ, ಜ.13    ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶನಿವಾರ ಶ್ರಮದಾನ ನಡೆಸಲಾಯಿತು. ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವವು ಜ.29ರಿಂದ ಆರಂಭವಾಗಲಿದ್ದು, ದೈವಸ್ಥಾನದ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ಒಕ್ಕೂಟದ ಸದಸ್ಯರು ಶ್ರಮದಾನದ ಮೂಲಕ ಮದ್ಯಾಹ್ನದ ವರೆಗೆ ಕೆಲಸ ನಿರ್ವಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ

ಕೊಣಾಜೆ ಒಕ್ಕೂಟ ಸದಸ್ಯರಿಂದ ಶ್ರಮದಾನ Read More »

ಕರಾವಳಿ

ಮಂಗಳೂರು: ಸ್ಕೂಟರ್ ಸ್ಕಿಡ್; ವಿದ್ಯಾರ್ಥಿ ಮೃತ್ಯು

ಮಂಗಳೂರು, ಜ.13: ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸವಾರ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಹಂಪನಕಟ್ಟೆ ಬಳಿ ರವಿವಾರ ರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿ ಮುಹಮ್ಮದ್ ಉಮರ್(18 )ಎಂದು ಗುರುತಿಸಲಾಗಿದೆ. ವಾಮಂಜೂರಿನ‌ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಉಮರ್ ರವಿವಾರ ರಾತ್ರಿ ಹಂಪನಕಟ್ಟೆ ಬಳಿ ದ್ವಿಚಕ್ರದಲ್ಲಿ ಸಾಗುತ್ತಿರುವಾಗ ತನ್ನ ವಾಹನ ಸ್ಕಿಡ್ ಆದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ‌ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ

ಮಂಗಳೂರು: ಸ್ಕೂಟರ್ ಸ್ಕಿಡ್; ವಿದ್ಯಾರ್ಥಿ ಮೃತ್ಯು Read More »

ಕರಾವಳಿ

ಒರುಂಬಾಳು: ಪ್ರತಿಷ್ಠಾ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.13    ನೂಜಿಬಾಳ್ತಿಲ ಗ್ರಾಮದ ಒರುಂಬಾಳು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಗಣಹೋಮ ಕಾರ್ಯಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ನಡೆಯಿತು. ಶುಕ್ರವಾರ ಭಕ್ತಾಧಿಗಳಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಿತು. ಶನಿವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ

ಒರುಂಬಾಳು: ಪ್ರತಿಷ್ಠಾ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಕರಾವಳಿ

ನಿಧನ ನ್ಯೂಸ್

(ನ್ಯೂಸ್ ಕಡಬ) newskadaba.com, ಕಡಬ, ಜ.13    ಕಡಬ ತಾಲೂಕು ಆಲಂಕಾರು ಗ್ರಾಮದ ಬುಡೇರಿಯಾ ನಿವಾಸಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಕ್ಕ ಮುಗೇರ (67ವ) ಅಲ್ಪ ಕಾಲದ ಅಸೌಖ್ಯದಿಂದ ಸ್ವ-ಗೃಹದಲ್ಲಿ ಆದಿತ್ಯವಾರ ನಿಧನರಾದರು. ಮೃತರು ಒರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಿಧನ ನ್ಯೂಸ್ Read More »

ಕರಾವಳಿ

ದೇರಳಕಟ್ಟೆ: 2500 ಚಯರ್ ತುಂಬಿಸಿಟ್ಟಿದ್ದ ಲಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಲಾರಿ ಸಂಪೂರ್ಣ ಸುಟ್ಟು ಕರಕಲು – ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ದೇರಳಕಟ್ಟೆ, ಜ.13. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಭಾನುವಾರದಂದು ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಳಸಲಾಗಿದ್ದ 2,500 ಕುರ್ಚಿಗಳಿಗೆ ಹಾಗೂ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ನಡೆದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾನುವಾರ ದೇರಳಕಟ್ಟೆಯಲ್ಲಿ ಪೌರತ್ವ ಸಂರಕ್ಷಣಾ ಸಮಿತಿಯ ವತಿಯಿಂದ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿ ಮುಗಿದ ನಂತರ, 2500 ಕುರ್ಚಿಗಳನ್ನು ಐಷರ್ ವಾಹನಕ್ಕೆ ತುಂಬಿಸಿಡಲಾಗಿತ್ತು. ಕುರ್ಚಿಗಳು ಮತ್ತು ಅವುಗಳನ್ನು ಲೋಡ್

ದೇರಳಕಟ್ಟೆ: 2500 ಚಯರ್ ತುಂಬಿಸಿಟ್ಟಿದ್ದ ಲಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಲಾರಿ ಸಂಪೂರ್ಣ ಸುಟ್ಟು ಕರಕಲು – ಲಕ್ಷಾಂತರ ರೂ. ನಷ್ಟ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುದ್ಲೂರು ಹಯಾತುಲ್‌ ಇಸ್ಲಾಂ ಮದ್ರಸ ಆತೂರು ➤ ನಾಳೆ(ಜ.14) ನೂತನ ಕಟ್ಟಡದ ಶಿಲಾನ್ಯಾಸ

(ನ್ಯೂಸ್ ಕಡಬ) Newskadaba.com ಜ.12. ಕಡಬ. ಮುಬಾರಕ್ ಜುಮಾ ಮಸೀದಿ ಕುದ್ಲೂರು (ಆತೂರು) ಇದರ ಆಶ್ರಯದಲ್ಲಿ ನಡೆಸುತ್ತಿರುವ ಹಯಾತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸವು ಜ.14ರಂದು ಸಂಜೆ 3 ಗಂಟೆಗೆ ನಡೆಯಲಿದೆ. ಮದರಸ ಕಟ್ಟಡದ ಶಿಲಾನ್ಯಾಸವನ್ನು ಸಮಸ್ತ ಕೇರಳ ಜಂ- ಇಯ್ಯತ್ತುಲ್ ಉಲಮಾ ಇದರ ಅಧ್ಯಕ್ಷರಾದ ಬಹು| ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ರವರು ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕುದ್ಲೂರು ಹಯಾತುಲ್‌ ಇಸ್ಲಾಂ ಮದ್ರಸ ಆತೂರು ➤ ನಾಳೆ(ಜ.14) ನೂತನ ಕಟ್ಟಡದ ಶಿಲಾನ್ಯಾಸ Read More »

ಕರಾವಳಿ

ಮಂಗಳೂರಿನ ಕಾಲೇಜು ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಬೆದರಿಕೆ ➤ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.12. ನಗರದ ಹೊರವಲಯದ ಸುರತ್ಕಲ್ ಸಮೀಪದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜಿಲ್ಲಾ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪಂಜಿಮೊಗರು ನಿವಾಸಿ ಮುಹಮ್ಮದ್ ತಬ್ಸೀದ್ (24), ಮರಕಡದ ನಿವಾಸಿ ಸೈಯದ್ ಆಫ್ರಿದಿ (24), ಕುಂಜತ್‌ಬೈಲ್‌ನ ಮುಹಮ್ಮದ್ ಮುಕ್ಸಿತ್ (24), ಮೂಡುಬಿದಿರೆಯ ಅಹ್ಮದ್ ಹುಸೈನ್ (24), ಖಾದರ್ ಸಫ್ವಾ (24) ಜೀವಾವಧಿ ಶಿಕ್ಷೆಗೊಳಗಾದವರು. 2015ರಲ್ಲಿ ಸುರತ್ಕಲ್‌ನ ಖಾಸಗಿ

ಮಂಗಳೂರಿನ ಕಾಲೇಜು ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಬೆದರಿಕೆ ➤ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top