ಸಿಎಎ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು, ಜ.21: ಬದಿಯಡ್ಕದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತರನ್ನು ನೀರ್ಚಾಲು ಬಿರ್ಮಿನಡ್ಕದ ಇಕ್ಬಾಲ್(28) ಎಂದು ಗುರುತಿಸಲಾಗಿದೆ. ಎಸ್ಕೆಎಸ್ಸೆಸ್ಸೆಫ್‌ನ ಸ್ವಯಂ ಸೇವಕರಾಗಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಇಕ್ಬಾಲ್ ಕುಸಿದುಬಿದ್ದಿದ್ದು, ಕೂಡಲೇ ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಎ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕ ಕುಸಿದು ಬಿದ್ದು ಮೃತ್ಯು Read More »

ಕರಾವಳಿ

ಬಂಟ್ವಾಳ: ವನ್ಯ ಜೀವಿಗಳ ಕೊಂಬುಗಳ ಅಕ್ರಮ ಸಾಗಾಟ; ಓರ್ವ ಪೊಲೀಸ್ ವಶಕ್ಕೆ

ಬಂಟ್ವಾಳ, ಜ 21: ಅಳವಿನಂಚಿನಲ್ಲಿರುವ ವನ್ಯ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆ ಮೃಗದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಒರ್ವನನ್ನು ವಳವೂರು ಎಂಬಲ್ಲಿ ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದವರು ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ಗಂಗಾದರ ಅವರ ಮಗ ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ. ಬಂಧಿತನ ಕೈಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ.

ಬಂಟ್ವಾಳ: ವನ್ಯ ಜೀವಿಗಳ ಕೊಂಬುಗಳ ಅಕ್ರಮ ಸಾಗಾಟ; ಓರ್ವ ಪೊಲೀಸ್ ವಶಕ್ಕೆ Read More »

ಕರಾವಳಿ

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಶ್ರೀ ಶಕ್ತಿ ಆಂಜನೇಯಸ್ವಾಮಿ ಆರಾಧಕರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ. ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ. 9945410150 ಮೇಷ ರಾಶಿ ಹೊರಗಿನ ಕೋಪವನ್ನು ಮನೆಯಲ್ಲಿ ತೋರ್ಪಡಿಸಬೇಡಿ. ಕುಟುಂಬದಲ್ಲಿ ಸಂಕಷ್ಟ ತಲೆದೋರಬಹುದು.

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ. Read More »

ವಿಶೇಷ ಲೇಖನಗಳು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಇಟ್ಟ ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಮಂಗಳೂರು, ಜ 20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಅಮಾನಸ್ಪದ ಬ್ಯಾಗೊಂದು ಪತ್ತೆಯಾಗಿದ್ದು, ಬ್ಯಾಗಿಟ್ಟ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಶಂಕಿತ ವ್ಯಕ್ತಿ ಆಟೊರಿಕ್ಷಾ ಮೂಲಕ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಇಟ್ಟು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಧಿಕೃತವಾಗಿ ಆಟೊರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಹಾಗೂ ಹುಬ್ಬಳ್ಳಿ ವಿಮಾಣ ನಿಲ್ದಾಣದಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ‘ಬಾಂಬ್’

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಇಟ್ಟ ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೂಜಿಬಾಳ್ತಿಲ: ಪುತ್ತೂರು ಧರ್ಮಪ್ರಾಂತ್ಯದ 11ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com, ಕಡಬ, ಜ.20    ಪುತ್ತೂರು ಧರ್ಮಪ್ರಾಂತ್ಯದ 11ನೇ ಸ್ಥಾಪನಾ ವಾರ್ಷಿಕೋತ್ಸವ ಹಾಗೂ ಧರ್ಮಗುರುಗಳ ಪುಣ್ಯಸ್ಮರಣಾ ಕಾರ್ಯಕ್ರಮ ನೂಜಿಬಾಳ್ತಿಲ ಸಂತ ಮೇರೀಸ್ ಕಥೇಡ್ರಲ್ ಚರ್ಚ್‍ನಲ್ಲಿ ರವಿವಾರ ನಡೆಯಿತು. ಸಭಾ ಕಾರ್ಯಕ್ರಮವನ್ನು ವಂ.ಡಾ.ಗೀವರ್ಗೀಸ್ ಮಕಾರಿಯೋಸ್ ಉದ್ಘಾಟಿಸಿದರು. ವೇದಿಕೆಯಲ್ಲಿ ವಂ.ಡಾ. ಎಲ್ದೋಪುತ್ತನ್ ಕಂಡತ್ತಿಲ್, ವಂ.ಪೀಟರ್ ಜಾನ್ ಒಐಸಿ, ವಂ.ಫಾ.ಜಾನ್ ನೆಲ್ಲಿವಿಳ, ಸಿಸ್ಟರ್ ಸಿಲ್ವಿಯಾ ಎಸ್‍ಐಸಿ, ಯೋಹನ್ನಾನ್ ಓ.ಎಂ., ರಾಬರ್ಟ್ ಉಪಸ್ಥಿತರಿದ್ದರು. ಮಲಂಕರ ಕ್ಯಾಥೋಲಿಕ್ ಧರ್ಮಸಭೆಯ ದಿವಂಗತರಾದ ಮೇಜರ್ ಆರ್ಚ್ ಬಿಷಪ್ ವಂ. ಸಿರಿಲ್ ಮಾರ್ ಬಸೇಲಿಯೋಸ್ ಕಾಥೋಲಿಕೊಸ್,

ನೂಜಿಬಾಳ್ತಿಲ: ಪುತ್ತೂರು ಧರ್ಮಪ್ರಾಂತ್ಯದ 11ನೇ ವಾರ್ಷಿಕೋತ್ಸವ Read More »

ಕರಾವಳಿ

ಜ.21ರಂದು ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಕೈಪಿಡಿ ಬಿಡುಗಡೆ

ಮಂಗಳೂರು, ಜ.20: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾ. 7 ಮತ್ತು 8 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಕೈಪಿಡಿ ಬಿಡುಗಡೆ ಜ.21ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸಮ್ಮೇಳನ ದ ಕೈಪಿಡಿಯನ್ನು ಬಿಡುಗಡೆಗೊಳಿಸಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು

ಜ.21ರಂದು ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಕೈಪಿಡಿ ಬಿಡುಗಡೆ Read More »

ಕರಾವಳಿ

ವಿಟ್ಲ: ಆಲ್ಟೋ ಕಾರು ಹಾಗೂ ಝೈಲೋ ಕಾರಿನ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com, ವಿಟ್ಲ, ಜ.20    ಆಲ್ಟೋ ಕಾರು ಹಾಗೂ ಝೈಲೋ ಕಾರಿನ ನಡುವೆ ಅಪಘಾತ ಸಂಭವಿಸಿ ಎರಡೂ ಕಾರಿನಲ್ಲಿದ್ದವರಿಗೆ ಗಾಯಗಳಾದ ಘಟನೆ ವಿಟ್ಲದಲ್ಲಿ ಸಂಭವಿಸಿದೆ. ಅಪಘಾತವಾದ ಪರಿಣಾಮ ಝೈಲೋ ಕಾರು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಿಂತಿತು, ಆಲ್ಟೋ ಕಾರು ರಸ್ತೆಯ ಎಡಬದಿಯಲ್ಲಿದ್ದ ಕಂಪೌಂಡ್ ಗೆ ಗುದ್ದಿ ಎರಡೂ ವಾಹನಗಳು ಜಖಂಗೊಂಡಿದ್ದಲ್ಲದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಆಲ್ಟೋ ಕಾರು ಹಾಗೂ ಝೈಲೋ ಕಾರಿನ ನಡುವೆ ಅಪಘಾತ Read More »

ಕರಾವಳಿ

ಉಡುಪಿ: ಸೇನಾ ನೇಮಕಾತಿಗೆ  ಅರ್ಜಿ ಅಹ್ವಾನ

ಉಡುಪಿ, ಜ.20:  ಭಾರತೀಯ ಸೇನೆಗೆ ಸೇನಾ ನೇಮಕಾತಿಯು ಉಡುಪಿಯಲ್ಲಿ ಎಪ್ರಿಲ್ 4 ರಿ೦ದ 14ರವರೆಗೆ ನಡಿಯಲಿದೆ. ನೇಮಕಾತಿ ಪ್ರವೇಶವು ಜನವರಿ 15ರಿಂದ ಪ್ರಾರಂಭವಾಗಿದ್ದು, ನೇಮಕಾತಿಯಲ್ಲಿ  ವಿಜಯಪುರ, ಬಾಗಲಕೋಟ, ಗದಗ್, ಹಾವೆರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮತ್ತು ಧಾರವಾಡ ಜಿಲ್ಲೆಯವರು ಭಾಗವಹಿಸಬಹುದು. ಅಶಕ್ತರು ವಿದ್ಯಾರ್ಹತೆ ಎಸೆಸೆಲ್ಸಿಯಲ್ಲಿ ಶೇ.45ರಷ್ಟು ಅಂಕ ಪಡೆದಿರಬೇಕು. ಗರಿಷ್ಟ  ವಯಸ್ಸು 23 ಆಗಿದ್ದು, 162ಸೆ.ಮೀ. ಹೊಂದಿರಬೇಕು ಈ ಸೇನಾ ನೇಮಕಾತಿಗೆ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ದೈಹಿಕ

ಉಡುಪಿ: ಸೇನಾ ನೇಮಕಾತಿಗೆ  ಅರ್ಜಿ ಅಹ್ವಾನ Read More »

ಕರಾವಳಿ

ತಮಿಳುನಾಡು: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ; ಓರ್ವ ಮೃತ್ಯು

ಚೆನ್ನೈ, ಜ.20: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ತಮಿಳುನಾಡು ಮಧುರೈನ ಅವನಿಪುರದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಒಂದು ಹೋರಿಯೂ ಮೃತಪಟ್ಟಿದೆ ಎನ್ನಲಾಗಿದೆ. ಅವನಿಪುರಂನ ಸೈಂಟ್ ಅಂಥೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಈ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. ಸಚಿವ ಜೆ. ಭಾಸ್ಕರನ್ ಮತ್ತು ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು. ಒಟ್ಟು 600ಕ್ಕೂ ಹೆಚ್ಚು ಹೋರಿಗಳು ಕೂಟದಲ್ಲಿ

ತಮಿಳುನಾಡು: ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಢ; ಓರ್ವ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ

ಮಂಗಳೂರು, ಜ.20: ಮಂಗಳೂರು ಅಂತಾಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‌ ಪತ್ತೆಯಾಗಿದ್ದು, ಈ ಬ್ಯಾಗ್ ನಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಆಟೋದಲ್ಲಿ ಬಂದಂತಹ ಇಬ್ಬರು ವ್ಯಕ್ತಿಗಳು ಬ್ಯಾಗ್ ಗನ್ನು ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸಿಸಿ ಟಿವಿ ಪರಿಶೀಲನೆ ವೇಳೆ ಸುಮಾರು 9.45 ರ ವೇಳೆಗೆ ಆಟೋದಲ್ಲಿ ಬಂದಂತಹ ಇಬ್ಬರು ವ್ಯಕ್ತಿಗಳು ಲ್ಯಾಪ್ ಟಾಪ್ ಬ್ಯಾಗ್ ನ್ನು ಅಲ್ಲಿರಿಸಿ ಪರಾರಿಯಾಗಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ Read More »

ಕರಾವಳಿ
Scroll to Top