ಜ.26 ರಂದು ಚಿತ್ರಕಲೆ ಮತ್ತು ವೇಷ ಭೂಷಣ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ಕದ್ರಿ ಜಿಲ್ಲಾ ಬಾಲಭವನದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಮತ್ತು ವೇಷ ಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತಿ ಇರುವ ಮಕ್ಕಳು ಜನವರಿ 24 ರ ಒಳಗಾಗಿ ನಿಗದಿತ ನಮೂನೆಯಲ್ಲಿ ಜನನ ಪ್ರಮಾಣ ಪತ್ರ ಹಾಗೂ ಭಾವಚಿತ್ರದೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ ಉರ್ವಸ್ಟೋರ್ ಮಂಗಳೂರು ಇಲ್ಲಿ ಸಲ್ಲಿಸಬೇಕು. ಹೆಚ್ಚಿನ […]

ಜ.26 ರಂದು ಚಿತ್ರಕಲೆ ಮತ್ತು ವೇಷ ಭೂಷಣ ಸ್ಪರ್ಧೆ Read More »

ಕರಾವಳಿ

ಸಾ. ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21   ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ  ದ.ಕ ಜಿಲ್ಲಾ ಶಾಖೆ ವತಿಯಿಂದ, ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಜಿಲ್ಲೆಯ ಉಪನಿರ್ದೇಶಕರಾಗಿ (ಆಡಳಿತ) ಕರ್ತವ್ಯಕ್ಕೆ ಹಾಜರಾದ ಮಲ್ಲೇಸ್ವಾಮಿ ಇವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪರವಾಗಿ ಹೂಗುಚ್ಛವನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಸಂಘಟನಾ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಶರ್ಲಿ ಸುಮಾಲಿನಿ, ರಾಜ್ಯ ಪರಿಷತ್ ಸದಸ್ಯ, ದ.ಕ ಜಿಲ್ಲೆ ಉಪಾಧ್ಯಕ್ಷ

ಸಾ. ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಕರ್ತವ್ಯಕ್ಕೆ ಹಾಜರು Read More »

ಕರಾವಳಿ

ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು – ರಾಮಕೃಷ್ಣ ರೈ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಜೀವವನ್ನು ಉಳಿಸುವುದು ನಮ್ಮ  ಮೊದಲ ಕರ್ತವ್ಯವಾಗಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಹೇಳಿದರು. ಪ್ರಾದೇಶಿಕ ಸಾರಿಗೆ ಕಚೇರಿಯ ಸಭಾಂಗಣದಲ್ಲಿ  ಶನಿವಾರ ಏರ್ಪಡಿಸಿದ್ದ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ಎಲ್ಲರೂ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು, ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಸಬಾರದು ಹಾಗೂ ದ್ವಿಚಕ್ರ ವಾಹನ

ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು – ರಾಮಕೃಷ್ಣ ರೈ Read More »

ಕರಾವಳಿ

ಮಂಗಳೂರು ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ – ಶಾಸಕ ಡಿ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ಮಂಗಳೂರು ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದು ಮಂಗಳೂರು ದಕ್ಷಿಣ ಶಾಸಕ  ಡಿ ವೇದವ್ಯಾಸ ಕಾಮತ್ ಹೇಳಿದರು. ಶನಿವಾರ  ಮಂಗಳೂರು ನಗರ ಪ್ರಾಧಿಕಾರ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಂಗಳೂರು ಇವರು ಹಮ್ಮಿಕೊಂಡಿದ್ದ ನಗರ ಮಟ್ಟದ ಸಲಹಾ ಸಮಿತಿ ಸಭೆ (ಸಿಟಿ ಲೆವೆಲ್ ಅಡ್ವೈಸರಿ ಫಾರಮ್)ಯಲ್ಲಿ ಅವರು ಮಾತನಾಡಿದರು. ಮಂಗಳೂರು ಸ್ಮಾರ್ಟ್‍ಸಿಟಿ ಯೋಜನೆಯು ಯಶಸ್ವಿಯಾಗಬೇಕಾದರೆ ಎಲ್ಲ ಇಲಾಖೆಗಳು ಕೈಜೋಡಿಸಿ ಕೆಲಸ ಮಾಡಬೇಕು.  ಜೊತೆಗೆ ಯಾವುದೇ ಯೋಜನೆಯನ್ನು

ಮಂಗಳೂರು ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ – ಶಾಸಕ ಡಿ ವೇದವ್ಯಾಸ ಕಾಮತ್ Read More »

ಕರಾವಳಿ

ಬಾಗ್ದಾದ್: ಅಮೆರಿಕಾ ರಾಯಬಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್

ಬಾಗ್ದಾದ್, ಜ.21: ಇರಾಕ್‌ನ ಅತೀ ಭದ್ರತೆ ಇರುವ ಹಸಿರು ವಲಯ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ಸಮೀಪವೇ 3 ರಾಕೆಟ್ ಗಳು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಉನ್ನತ ಭದ್ರತಾ ಸ್ಥಳವಾದ ಇರಾಕ್ ರಾಜಧಾನಿ ಹಸಿರು ವಲಯಕ್ಕೆ ಈ ರಾಕೆಟ್ ಗಳು ಅಪ್ಪಳಿಸಿದ್ದು ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಅವರಿಸಿರುವ ಯುದ್ಧ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅಮೇರಿಕಾ ರಾಯಭಾರ ಕಚೇರಿ ಸೇರಿದಂತೆ, ಹಲವು ದೇಶಗಳ ರಾಯಭಾರೀ ಕಚೇರಿಯನ್ನೊಳಗೊಂಡ ಹಸಿರುವ

ಬಾಗ್ದಾದ್: ಅಮೆರಿಕಾ ರಾಯಬಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಮನವಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ರಾಷ್ಟ್ರೀಯ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮದಂದು ಬೂತ್ ಕಾರ್ಯ ಚಟುವಟಿಕೆಯಲ್ಲಿ ಜಿಲ್ಲೆಯ 148817 ಮಕ್ಕಳಲ್ಲಿ 122856, 0-5 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಎರಡು ದಿನಗಳು ಮತ್ತು ನಗರ ಪ್ರದೇಶಗಳಲ್ಲಿ ಮೂರು ದಿನಗಳು ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೂತ್ ದಿನದಿಂದು ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಮನೆ ಭೇಟಿ ಕಾರ್ಯಕ್ರಮದ ದಿನಗಳಂದು ಆರೋಗ್ಯ ಇಲಾಖೆಯವರು ಬಂದಾಗ ಮಕ್ಕಳಿಗೆ ಲಸಿಕೆ ಹಾಕಿಸಲು ಹೆತ್ತವರು ಅಥವಾ ಪೋಷಕರಲ್ಲಿ

ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಮನವಿ Read More »

ಕರಾವಳಿ

ಆಲಂಕಾರು: ಕ್ರೀಡಾಕೂಟದ ಉದ್ಟಾಟನೆ

(ನ್ಯೂಸ್ ಕಡಬ) newskadaba.com, ಕಡಬ, ಜ.21    ಸರಕಾರಿ ಶಾಲೆಗಳ ಉಳಿವಿಗೆ ಗ್ರಾಮದ ಜನತೆಯ ಜೊತೆಗೆ ಪೂರ್ವ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದು ವಿಶ್ರಾಂತ ಪ್ರಾಂಶುಪಾಲ ಎಸ್ ದುಗ್ಗಪ್ಪ ಗೌಡ ನುಡಿದರು. ಅವರು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ನಡೆದ ಪೂರ್ವ ವಿದ್ಯಾರ್ಥಿಗಳ ಹಾಗೂ ಪೊಷಕರ ಕ್ರೀಡಾಕೂಟವನ್ನು ಉದ್ಟಾಟಿಸಿ ಮಾತನಾಡಿದರು. ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಆದರೆ ಜನತೆಯ ಚಿತ್ತ ಖಾಸಗಿ ಶಾಲೆಗಳತ್ತ

ಆಲಂಕಾರು: ಕ್ರೀಡಾಕೂಟದ ಉದ್ಟಾಟನೆ Read More »

ಕರಾವಳಿ

ಡಯಾಸ್ಟೆಮಾ ✍ ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ಜ.21    ಮುಂಭಾಗದ ಎರಡು ಮಧ್ಯದ ಬಾಚಿ ಹಲ್ಲುಗಳ ನಡುವೆ ಖಾಲಿ ಜಾಗ ಅಥವಾ ಎಡೆ ಇದ್ದಲ್ಲಿ ಅದನ್ನು ‘ಡಯಾಸ್ಟೆಮಾ’ ಎಂದು ದಂತ ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಇದೊಂದು ನೋಡಲು ಸಹ್ಯವಲ್ಲದ ಮತ್ತು ವ್ಯಕ್ತಿಯ ಸೌಂದರ್ಯಕ್ಕೆ ಪೂರಕವಲ್ಲದ ಪರಿಸ್ಥಿತಿಯಾಗಿದ್ದು ಮುಖದ ಅಂದವನ್ನು ಕೆಡಿಸುತ್ತದೆ. ಯಾವ ವ್ಯಕ್ತಿಯೂ ತನ್ನ ಮುಂಭಾಗದ ಬಾಚಿ ಹಲ್ಲುಗಳ ನಡುವೆ ಖಾಲಿಜಾಗ ಅಥವಾ ಎಡೆ ಇರುವುದನ್ನು ಇಷ್ಟ ಪಡುವುದಿಲ್ಲ. ಎಲ್ಲರಿಗೂ ಪೋಣಿಸಿದ ರೀತಿಯಲ್ಲಿ ಹಲ್ಲು ಇರುವುದನ್ನೇ ಇಷ್ಟಪಡುತ್ತಾರೆ.

ಡಯಾಸ್ಟೆಮಾ ✍ ಡಾ| ಮುರಲೀ ಮೋಹನ್ ಚೂಂತಾರು Read More »

ಆರೋಗ್ಯ ಮಾಹಿತಿ

ಚಲಿಸುತ್ತಿದ್ದ ವೋಲ್ವೋ ಬಸ್‌ನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು

ಚಿತ್ರದುರ್ಗ, ಜ.21: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚಲಿಸುತ್ತಿದ್ದ ವೋಲ್ವೋ ಬಸ್ಸೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಗುಯಿಲಾಳು ಟೋಲ್ ಬಳಿಯ ಗಿಡ್ಡೋಬನಹಳ್ಳಿ ಬಳಿ ನಡೆದಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸು ಬೆಳಗಾವಿಯಿಂದ ಬೆಂಗಳೂರಿಗೆ ಹೋಗುತ್ತಿತ್ತು. ಕೆ ಎಸ್ ಅರ್ ಟಿಸಿ ಹವಾ ನಿಯಂತ್ರಿತ ಬಸ್ ಇದಾಗಿದ್ದು, ಬಸ್ ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು. ಕೂಡಲೇ ಎಚ್ಚೆತ್ತು

ಚಲಿಸುತ್ತಿದ್ದ ವೋಲ್ವೋ ಬಸ್‌ನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಕರ್ನಾಟಕ

ಸುರತ್ಕಲ್: ಎನ್‌ಐಟಿಕೆ ಬೀಚ್‌ನಲ್ಲಿ ಮುಳುಗಿ ವಿದ್ಯಾರ್ಥಿನಿ ಮೃತ್ಯು

ಸುರತ್ಕಲ್‌, ಜ 21:ಸುರತ್ಕಲ್‌ ಎನ್‌ಐಟಿಕೆ ಬೀಚ್‌ನಲ್ಲಿ ಆಟವಾಡಲು ತೆರಳಿದ್ದ 20ರಷ್ಟು ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇನ್ನಿಬ್ಬರನ್ನು ಸ್ಥಳಿಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ಮಧ್ಯಪ್ರದೇಶದ ಸಾಗರ್‌ ನಿವಾಸಿ ವಾರಂಗಲ್‌ ಎನ್‌ಐಟಿಕೆ ವಿದ್ಯಾರ್ಥಿನಿ ನಿರ್ಮಲಾ ದಂಗವಾಲ್‌ ಎಂದು ಗುರುತಿಸಲಾಗಿದೆ. ಎನ್‌ಐಟಿ ವಾರಂಗಲ್‌ನ 20ರಷ್ಟು ವಿದ್ಯಾರ್ಥಿಗಳು ಸುರತ್ಕಲ್‌ ಎನ್‌ಐಟಿಕೆಯಲ್ಲಿ ನಡೆದಿದ್ದ ಆಲ್‌ ಇಂಡಿಯಾ ಅಂತರ್‌ ಎನ್‌ಐಟಿ ಕ್ರೀಡಕೂಟದಲ್ಲಿ ಭಾಗವಹಿಸಿದ್ದು ಈ ಕ್ರೀಡಾಕೂಟ ಮುಗಿದ ಬಳಿಕ ದೈಹಿಕ ಶಿಕ್ಷಕ ರಾಜು ಒಡೆಲಾ

ಸುರತ್ಕಲ್: ಎನ್‌ಐಟಿಕೆ ಬೀಚ್‌ನಲ್ಲಿ ಮುಳುಗಿ ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ
Scroll to Top