ಕುಂದಾಪುರ: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು

ಕುಂದಾಪುರ, ಫೆ.14: ನಾಲ್ಕು ವಾಹನಗಳು ಏಕಮುಖ ಸಂಚಾರದಲ್ಲಿದ್ದಾಗ ಅಪಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.           ಮೃತಪಟ್ಟ ಬೈಕ್ ಸವಾರನನ್ನು ಸಮೀಪದ ಹೊಸಾಡು ಗ್ರಾಮದ ಮುಲ್ಲಿಮನೆ ನಿವಾಸಿ ನಾರಾಯಣ ದೇವಾಡಿಗ ಎಂಬುವರ ಪುತ್ರ ಸುಕುಮಾರ ದೇವಾಡಿಗ(55) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿತ್ತು. ಲಾರಿಯ ಹಿಂದೆ […]

ಕುಂದಾಪುರ: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು Read More »

ಕರಾವಳಿ

ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆ

ವುಹಾನ್, ಫೆ.15: ಚೀನಾದಲ್ಲಿ ಮಹಾ ಮಾರಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಶುಕ್ರವಾರ ಒಂದೇ ದಿನ 143 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಕೊರೊನಾ ವೈರಸ್ ನ ಮೂಲ ಹುಬೈ ಪ್ರಾಂತ್ಯದಲ್ಲಿ ಮತ್ತೆ 2,420 ಜನರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಮಾತ್ರವಲ್ಲದೆ ಶುಕ್ರವಾರ ಈ ಪ್ರಾಂತ್ಯದಲ್ಲಿ  139 ಜನರು ಮೃತಪಟ್ಟಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇಂದಿನ ವರದಿಯ ಪ್ರಕಾರ ಒಟ್ಟಾರೆ ಸೋಂಕು ತಗುಲಿದವರ

ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಬಂದಿಳಿದ ದುಬೈ-ಮಂಗಳೂರು ವಿಮಾನ

ಮಂಗಳೂರು, ಫೆ.15: ಹವಾಮಾನ ವೈಪರೀತ್ಯದಿಂದಾಗಿ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಮುಂಜಾನೆ ಬಂದಿಳಿಯಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಮಾರ್ಗ ಬದಲಿಸಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿರುವ ಬಗ್ಗೆ ವರದಿಯಾಗಿದೆ. ದಮ್ಮಾಮ್ ಮತ್ತು ದುಬೈ ನಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಮುಂಜಾವು 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಆದರೆ 8:30 ಕ್ಕೆ ಬಂದಿದ್ದ ಮತ್ತೊಂದು ವಿಮಾನ ನೇರವಾಗಿ ಬೆಂಗಳೂರಿನಲ್ಲಿ ಇಳಿದಿದೆ. ಬೆಂಗಳೂರಿನಿಂದ ಬೆಳಗ್ಗೆ 8ಗಂಟೆಗೆ ಹೊರಟಿದ್ದ ಸ್ಪೈಸ್ ಜೆಟ್, ಇಂಡಿಗೋ ವಿಮಾನಗಳು ಮಂಗಳೂರಿನಲ್ಲಿ

ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಬಂದಿಳಿದ ದುಬೈ-ಮಂಗಳೂರು ವಿಮಾನ Read More »

ಕರಾವಳಿ

ದುಷ್ಟ ಪ್ರಯೋಗಗಳಿಗೆ ಇದರಿಂದ ಶಾಶ್ವತ ಮುಕ್ತಿ.

ಲೇಖನ: ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಗೇಹಾಭಿವೃದ್ಧಿ ಹೋಮ ನಮ್ಮ ಪೂರ್ವಿಕರು ನಮ್ಮ ಜೀವನದ ಸುಸ್ಥಿರಕ್ಕಾಗಿ ಹಾಗೂ ಇರುವ ಸಮಸ್ಯೆಗಳಿಂದ ಪಾರಾಗಲು ಹಲವು ರೀತಿಯ ಮಾರ್ಗಗಳನ್ನು ಸೂಚಿಸಿದ್ದಾರೆ ಇದು ನಮ್ಮೆಲ್ಲರ ಭಾಗ್ಯ ಅಂತಹ ಒಂದು ಪೂಜಾಕಾರ್ಯ ಗೇಹಾಭಿವೃದ್ಧಿ ಹೋಮ ಇದು ಒಂದು ನಡೆಸಿದರೆ ಇದರ ಫಲ ಹಲವಾರು ಪಡೆಯಬಹುದು. ನಂಬಿಕೆ ಅಪನಂಬಿಕೆ ಅವರಿಗೆ ಬಿಟ್ಟ ವಿಚಾರ ಇದರ ಪ್ರಯೋಜನ ತಿಳಿದುಕೊಳ್ಳೋಣ. ಮನೆಯಲ್ಲಿ ಮಾಟ ಮಂತ್ರದಂತಹ ಸಮಸ್ಯೆ, ವ್ಯವಹಾರದಲ್ಲಿ ವಿಘ್ನಗಳು ಹೆಚ್ಚಾಗಿದ್ದರೆ, ಜಮೀನಿನಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ,

ದುಷ್ಟ ಪ್ರಯೋಗಗಳಿಗೆ ಇದರಿಂದ ಶಾಶ್ವತ ಮುಕ್ತಿ. Read More »

ಭವಿಷ್ಯ, ವಿಶೇಷ ಲೇಖನಗಳು

ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ. ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ. 9945410150 ಮೇಷ ರಾಶಿ ನಿಯಮಿತ ಆಹಾರ ಸೇವನೆಗೆ ಪ್ರಾತಿನಿಧ್ಯತೆ ನೀಡುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಗಳು

ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ Read More »

ಭವಿಷ್ಯ, ವಿಶೇಷ ಲೇಖನಗಳು

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ. 14. ಕೆ.ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ಗಳು (ರಿ) ಹಿರಿಯ ವಿದ್ಯಾರ್ಥಿ ಸಂಘ ಕೆ. ಎಸ್. ಗೌಡ ಪದವಿ ಪೂರ್ವ ಕಾಲೇಜು, ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 3 ಹಾಗೂ 4ರಂದು ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರವು ನಡೆಯಲಿರುವುದು. ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವವರು ಮಾರ್ಚ್ 1 ನೇ ತಾರೀಖಿನಂದು ಹೆಸರು

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ Read More »

ಕರಾವಳಿ

ನಿರ್ಭಯಾ ಪ್ರಕಣದ ತೀರ್ಪು ಓದುವಾಗ ಕುಸಿದು ಬಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ

ಹೊಸದಿಲ್ಲಿ, ಫೆ.14: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ಕುರಿತು ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್. ಭಾನುಮತಿ ತೀರ್ಪು ಓದುತ್ತಲೇ ಕುಸಿದು ಬಿದ್ದ ಪ್ರಕರಣ ಶುಕ್ರವಾರ ನಡೆದಿದೆ. ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಇಂದು ಈ ಕುರಿತು ತನ್ನ ತೀರ್ಪು ನೀಡಿತು. ತೀರ್ಪು ಓದುತ್ತಿದ್ದಾಗ ನ್ಯಾಯಮೂರ್ತಿ ಆರ್ .ಭಾನುಮತಿ ಅವರು ಅನಾರೋಗ್ಯಕ್ಕೀಡಾಗಿ ಕುಸಿದು ಬಿದ್ದರು. ತೀರ್ಪು ಓದುತ್ತಿದ್ದಾಗ

ನಿರ್ಭಯಾ ಪ್ರಕಣದ ತೀರ್ಪು ಓದುವಾಗ ಕುಸಿದು ಬಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ Read More »

ರಾಷ್ಟ್ರೀಯ ನ್ಯೂಸ್

ಲ್ಯಾಂಡಿಂಗ್ ವೇಳೆ ತಪ್ಪೆಸಗಿದ ಆರೋಪ: ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆ ಅಮಾನತು

ಮಂಗಳೂರು, ಫೆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಪ್ಪು ಎಸಗಿದ್ದ ಇಬ್ಬರು ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆಯನ್ನು ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ಪ್ರಧಾನ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 2019ರ ಅಕ್ಟೋಬರ್ 31 ರಂದು ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ 737 ವಿಮಾನವು ಲ್ಯಾಂಡಿಂಗ್ ವೇಳೆ ಪೈಲಟ್ ಮಾಡಿದ ತಪ್ಪಿನಿಂದಾಗಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ಪರಿಣಾಮ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು. ಈ ಲೋಪದ

ಲ್ಯಾಂಡಿಂಗ್ ವೇಳೆ ತಪ್ಪೆಸಗಿದ ಆರೋಪ: ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆ ಅಮಾನತು Read More »

ಕರಾವಳಿ

ಕಡಬ: ಆರು ತಿಂಗಳ ಹಿಂದಿನ ಹಿಟ್ & ರನ್ ಪ್ರಕರಣ ಭೇದಿಸಿದ ಪೊಲೀಸರು ➤ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲರ ಕಾರು ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಪತ್ತೆಹಚ್ಚಿರುವ ಕಡಬ ಪೊಲೀಸರು ಹಳೆಯ ಪ್ರಕರಣವನ್ನು ಹೊರಹಾಕಿದ್ದಾರೆ. 2019 ರ ಸೆಪ್ಟೆಂಬರ್ 09ರಂದು ಸುಬ್ರಹ್ಮಣ್ಯ- ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಇನ್ನೋವಾ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತೀವೃವಾಗಿ ಗಾಯಗೊಂಡಿದ್ದ ಮಹಿಳೆ ಸುಮತಿ (48) ಎಂಬವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದರು. ಇದೀಗ ಆರು ತಿಂಗಳುಗಳ ನಂತರ ವಾಹನವನ್ನು ಪೋಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು,

ಕಡಬ: ಆರು ತಿಂಗಳ ಹಿಂದಿನ ಹಿಟ್ & ರನ್ ಪ್ರಕರಣ ಭೇದಿಸಿದ ಪೊಲೀಸರು ➤ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲರ ಕಾರು ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೂಜಿಬೈಲ್; ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸದ ಬುಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 14. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಕಸ ಸಂಗ್ರಹಿಸುವ ಬುಟ್ಟಿಯನ್ನು ಗುರುವಾರ ವಿತರಿಸಲಾಯಿತು.   ನಮ್ಮ ಶ್ರದ್ಧಾ ಕೇಂದ್ರ ಸ್ವಚ್ಚವಾಗಿರಲಿ ಎಂದ ಧ್ಯೇಯದೊಂದಿಗೆ ಯೋಜನೆಯಿಂದ ಕೊಡಮಾಡಲಾದ ಹಸಿಕಸ ಹಾಗೂ ಒಣಕಸ ಪ್ರತ್ಯೇಕವಾಗಿ ಹಾಕುವ ಕಸದ ಬುಟ್ಟಿಯನ್ನು ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಹೆಬ್ಬಾರ್, ಆಡಳಿತ ಮಂಡಳಿ ಅಧ್ಯಕ್ಷ

ನೂಜಿಬೈಲ್; ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸದ ಬುಟ್ಟಿ ವಿತರಣೆ Read More »

ಕರಾವಳಿ
Scroll to Top