ನಿಮ್ಮ ಪ್ರೇಮದ ಸಫಲತೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ಪ್ರೇಮದ ವಿಷಯವಾಗಿ ನೀವು ಮೋಸ ಹೋಗಿದ್ದರೆ ಅಥವಾ ನಂಬಿದವರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೆ, ಮರಳಿ ಸಫಲತೆಯ ಹಾದಿ ಪಡೆಯಬೇಕೆಂಬ ನಿಮ್ಮಲ್ಲಿ ಬಯಕೆಯಿದ್ದರೆ ರವಿವಾರದ ದಿನದಂದು ಸಣ್ಣ ಗಾತ್ರದ ಮಣ್ಣಿನ ಗಣಪತಿಯ ಮೂರ್ತಿಯನ್ನು ನಿಮ್ಮ ಕೈಯಿಂದಲೇ ಮಾಡಿ ನಲವತ್ತೆಂಟು ದಿನಗಳ ಕಾಲ ನಿರಂತರವಾಗಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ […]

ನಿಮ್ಮ ಪ್ರೇಮದ ಸಫಲತೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ

ಹೊಸದಿಲ್ಲಿ, ಫೆ.22: ತಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ತನಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ನಿರ್ಭಯಾ ಪ್ರಕರಣ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಶನಿವಾರ ವಜಾಗೊಳಿಸಿದೆ. ತಾನು ಮಾನಸಿಕ ಅಸ್ವಸ್ಥ, ತಲೆ ಹಾಗೂ ತೋಳಿಗೆ ಗಾಯವಾಗಿದೆ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಅಪರಾಧಿ ವಿನಯ್ ಶರ್ಮಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ವಿನಯ್ ಶರ್ಮಾನ ಅರ್ಜಿಯನ್ನು

ವೈದ್ಯಕೀಯ ಚಿಕಿತ್ಸೆ ಕೋರಿ ನಿರ್ಭಯಾ ಅಪರಾಧಿ ಸಲ್ಲಿಸಿದ ಅರ್ಜಿ ವಜಾ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತವನ್ನು ಸೇಲ್ ಮಾಡಿ ಜೈಲ್ ಮಾಡಲಾಗುತ್ತಿದೆ: ಸಾಹಿತಿ ದೇವನೂರು ಮಹಾದೇವ

ಬೆಂಗಳೂರು, ಫೆ.22: ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮುಖಾಂತರ ಭಾರತವನ್ನು ಸೇಲ್ ಮಾಡಲಾಗುತ್ತಿದೆ. ಇನ್ನೊಂದೆಡೆ ಸಿಎಎ, ಎನ್‌ಆರ್‌ಸಿಯಂತಹ ಕರಾಳ ಕಾನೂನು ತರುವ ಮುಖಾಂತರ ದೇಶದ ಪೌರರಿಗೆ ಸಂಕಷ್ಟ ತಂದು, ಜೈಲ್ ಮಾಡುವ ತಯಾರಿ ಮಾಡಲಾಗುತ್ತಿದೆ ಎಂದು ಸಾಹಿತಿ ದೇವನೂರು ಮಹಾದೇವ ಆತಂಕ ವ್ಯಕ್ತಪಡಿಸಿದ್ದಾರೆ. ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಐದನೇ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಸತತವಾಗಿ ಐದು ವರ್ಷಗಳಿಂದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸರಾಸರಿ 5 ಸಾವಿರ ಕೋಟಿಗಳಿಗೂ ಅಧಿಕ

ಭಾರತವನ್ನು ಸೇಲ್ ಮಾಡಿ ಜೈಲ್ ಮಾಡಲಾಗುತ್ತಿದೆ: ಸಾಹಿತಿ ದೇವನೂರು ಮಹಾದೇವ Read More »

ಕರ್ನಾಟಕ

ಪ್ರವಾದಿ ನಿಂದನೆ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯದಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ. ಫೆ.22. ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರನ್ನು ನಿಂದಿಸಿ ಅವಹೇಳನಕಾರಿ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಬಗ್ಗೆ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಎಸ್ಕೆಎಸ್ಸೆಸ್ಸೆಪ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್ ಬುಕ್ ಪೇಜೊಂದರಲ್ಲಿ ಮದುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತ ಹಲವು ಬಾರಿ ಇದೇ ರೀತಿ ಜಾಲತಾಣದಲ್ಲಿ ಅನಾವಶ್ಯಕ ಆರೋಪಗಳನ್ನು ಮಾಡಿ ಮುಸ್ಲಿಂ ಧರ್ಮಕ್ಕೆ ಅವಮಾನ

ಪ್ರವಾದಿ ನಿಂದನೆ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯದಿಂದ ದೂರು ದಾಖಲು Read More »

ಕರಾವಳಿ

ಕಾರ್ಕಳ: ಓಮ್ನಿ ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕಾರ್ಕಳ, ಫೆ.22: ಓಮ್ನಿ ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಗುರ್ಗಲ್ ಗುಡ್ಡೆ ಎಂಬಲ್ಲಿ ನಡೆದಿದೆ. ಮೃತರನ್ನು ಕರ್ಕಳ ನಿವಾಸಿ ಸುಧಾಕರ ಶೆಟ್ಟಿ(51) ಎಂದು ಗುರುತಿಸಲಾಗಿದೆ. ತಾಲೂಕಿನ ನಲ್ಲೂರು ಗ್ರಾಮದ ಗುರ್ಗಲ್ ಗುಡ್ಡೆ ಎಂಬಲ್ಲಿ ಹಾದು ಹೋಗಿರುವ ಕಾರ್ಕಳ-ಬೆಳ್ತಂಗಡಿ ಹೆದ್ದಾರಿ ರಸ್ತೆಯ ಬದಿ ಮಣ್ಣು ರಸ್ತೆಯಲ್ಲಿ ಸುಧಾಕರ ಶೆಟ್ಟಿ ಅವರ ಸಂಬಂಧಿ ಹರಿಪ್ರಸಾದ್ ಶೆಟ್ಟಿ ಎಂಬುವವರೊಂದಿಗೆ ಮಾತನಡುತ್ತಿದ್ದರು. ಈ ಸಂದರ್ಭ ಅತೀ

ಕಾರ್ಕಳ: ಓಮ್ನಿ ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು Read More »

ಕರಾವಳಿ, ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್

ಗಡಿಯಾರ: ಕಂಟೈನರ್ ಢಿಕ್ಕಿ ಆಟೊ ಚಾಲಕ ಸಹಿತ ಇಬ್ಬರು ಪಾರು

ವಿಟ್ಲ, ಫೆ.22: ಕಂಟೈನರ್ ಲಾರಿಯೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಚಾಲಕ ಸಹಿತ ಇಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು-ಬೆಂಗಳೂರು ರಾ.ಹೆ.ಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಸಂಭವಿಸಿದೆ. ಆಟೊ ರಿಕ್ಷಾ ಗಡಿಯಾರದಿಂದ ಪೇರಮೊಗೇರು ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಚಾಲಕ ಕಂಟೈನರ್ ಸಹಿತವಾಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸಾರ್ವಜನಿಕರು ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರು ಆಟೊದೊಳಗಡೆ ಇದ್ದರು.

ಗಡಿಯಾರ: ಕಂಟೈನರ್ ಢಿಕ್ಕಿ ಆಟೊ ಚಾಲಕ ಸಹಿತ ಇಬ್ಬರು ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಸ್ ಕಾಯುತ್ತಿದ್ದವರಿಗೆ ಬೈಕ್ ಢಿಕ್ಕಿ: ಮೂವರು ಮೃತ್ಯು

ಮೈಸೂರು, ಫೆ.22: ಬಸ್‌ಗಾಗಿ ಕಾದು ನಿಂತಿದ್ದವರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ದ್ವಿಚಕ್ರ ವಾಹನ ಸವಾರ ಸೇರಿದಂತೆ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿರುವ ಘಟನೆ ನರಸಿಂಹಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಲೂಕಿನ ಕರೋಹಟ್ಟಿ ಗ್ರಾಮದ ಬಸವರಾಜು ಅಲಿಯಾಸ್ ಬಸವಣ್ಣ, ಮೂಗೂರು ಹೊಸಳ್ಳಿ ಗ್ರಾಮದ ಚಿಕ್ಕಮ್ಮ ಹಾಗೂ ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮದ ಗೋವಿಂದಶೆಟ್ಟಿ ಎಂದು ತಿಳಿದು ಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹದೇವಶೆಟ್ಟಿ ಹಾಗೂ ಢಿಕ್ಕಿ ಹೊಡೆದ ಬೈಕ್ ಸವಾರ ಕೇರಳ

ಬಸ್ ಕಾಯುತ್ತಿದ್ದವರಿಗೆ ಬೈಕ್ ಢಿಕ್ಕಿ: ಮೂವರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.22. ಮೀನು ಹಿಡಿಯಲೆಂದು ತೆರಳಿದ‌ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಶನಿವಾರದಂದು ನಡೆದಿದೆ. ನಾಪತ್ತೆಯಾಗಿರುವವರನ್ನು ಶಿರಾಡಿ ಗ್ರಾಮದ ಬಾಕಿಲ ಗದ್ದೆ ನಿವಾಸಿ ಚೋಮ ಮುಗೇರ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ಹರೀಶ್ ಮೀನು ಹಿಡಿಯಲೆಂದು ಗುಂಡ್ಯ ಹೊಳೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿರುವುದಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದಾರೆ.

ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವಾರ್ಷಿಕ ಕೌನ್ಸಿಲ್ ➤ ಅಧ್ಯಕ್ಷರಾಗಿ ಹಾರಿಸ್ ಸಖಾಫಿ, ಪ್ರ.ಕಾರ್ಯದರ್ಶಿಯಾಗಿ ಸಿರಾಜ್ ಆತೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ 22. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಉಪ್ಪಿನಂಗಡಿಯಲ್ಲಿ ನಡೆಯಿತು. ಸಭೆಯನ್ನು ಸೆಕ್ಟರ್ ಸದಸ್ಯರಾದ ಸಿರಾಜುದ್ದೀನ್ ಸಖಾಫಿ ಉದ್ಘಾಟನೆ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಆತೂರು ವರದಿ ವಾಚಿಸಿ ಸೆಕ್ಟರ್ ಕೋಶಾದಿಕಾರಿ ನಾಸಿರ್ ಆತೂರು ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭ ವೀಕ್ಷಕರಾಗಿ ಆಗಮಿಸಿದ ಉಪ್ಪಿನಂಗಡಿ ಡಿವಿಶನ್ ನಾಯಕರಾದ ರಫೀಕ್ ಝೈನಿ, ಮುಸ್ತಫಾ ಉರುವಾಲುಪದವು, ಅಶ್ರಫ್

ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವಾರ್ಷಿಕ ಕೌನ್ಸಿಲ್ ➤ ಅಧ್ಯಕ್ಷರಾಗಿ ಹಾರಿಸ್ ಸಖಾಫಿ, ಪ್ರ.ಕಾರ್ಯದರ್ಶಿಯಾಗಿ ಸಿರಾಜ್ ಆತೂರು Read More »

ಕರಾವಳಿ

ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ಬೆಳ್ತಂಗಡಿ ಧರ್ಮಪ್ರಾಂತ್ಯ ➤ ಇಂದು ಶ್ರೀ ಸಾಮಾನ್ಯರ ಬೃಹತ್ ಸಮಾವೇಶ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಫೆ. 22. ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧೀನದಲ್ಲಿ ಶ್ರೀ ಸಾಮಾನ್ಯರ ಬೃಹತ್ ಸಮಾವೇಶ ಇಂದು ಉಜಿರೆಯ ಅನುಗ್ರಹ ಸಭಾಂಗಣದಲ್ಲಿ ನಡೆಯಲಿದೆ. KSMCA ಅಧ್ಯಕ್ಷರಾದ ಸೆಬಾಸ್ಟಿಯನ್ ಕೆ.ಕೆ ಅಧ್ಯಕ್ಷತೆಯನ್ನು ವಹಿಸಲಿದ್ದು, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಸಮಾವೇಶದ ಉದ್ಗಾಟನೆ ಮಾಡಲಿದ್ದಾರೆ. ಭದ್ರಾವತಿ ಧರ್ಮಪ್ರಾಂತ್ಯದ ಪರಮಪೂಜ್ಯ ಬಿಷಪ್ ಮಾರ್ ಜೋಸೆಫ್ ಅರುಮಚ್ಚಾಡತ್ತ್ ಧ್ವಜಾರೋಹಣ ಮಾಡುವುದರೊಂದಿಗೆ ಆಶೀರ್ವಚನ ನೀಡಲಿದ್ದಾರೆ. ಮಾನ್ಯ ಐವಾನ್ ಡಿಸೋಜ, ತೋಮಸ್ ಕುಮಳಿ, ಭಾರತ ಕ್ಯಾಥೋಲಿಕ್

ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ಬೆಳ್ತಂಗಡಿ ಧರ್ಮಪ್ರಾಂತ್ಯ ➤ ಇಂದು ಶ್ರೀ ಸಾಮಾನ್ಯರ ಬೃಹತ್ ಸಮಾವೇಶ Read More »

ಕರಾವಳಿ
Scroll to Top