ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ

ಹೊಸದಿಲ್ಲಿ, ಮಾ.11: ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಭಾವ, ಸೌದಿ-ರಷ್ಯಾ ತೈಲ ದರ ಸಮರದ ಕಾರಣದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರೀ ಕುಸಿತದ ಪರಿಣಾಮದಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಲ್ಲಿ ಭಾರೀ ಇಳಿಕೆ ಉಂಟಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 2.69 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಡಿಸೇಲ್ ದರ 2.33 ರೂಪಾಯಿಗಳಷ್ಟು ಇಳಿದಿದೆ. ಬುಧವಾರದಂದು ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ ಗೆ 70.29 ಇದ್ದರೆ ಡಿಸೇಲ್ ದರ ಪ್ರತೀ ಲೀಟರ್ ಗೆ 63.01 ರೂಪಾಯಿಗಳಾಗಿತ್ತು.

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಕೆಎಸ್ಸಾರ್ಟಿಸಿ ಬಸ್ ಚಾಲಕರೋರ್ವರ ಮೃತದೇಹವೊಂದು ಬಸ್ಸಿನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ಚಾಲಕನನ್ನು ಬೀದರ್ ನಿವಾಸಿ ರೇವಣ್ಣಪ್ಪ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಮಂಗಳವಾರ ಸಂಜೆ ಕಡಬಕ್ಕೆ ಆಗಮಿಸಿದ ಬಸ್ಸನ್ನು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಮೀಪ ಹೆದ್ದಾರಿಯ ಪಕ್ಕದಲ್ಲಿ ರಾತ್ರಿ ನಿಲುಗಡೆಗೊಳಿಸಲಾಗಿದ್ದು, ಬೆಳಿಗ್ಗೆ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಿತ್ತು‌. ಬೆಳಿಗ್ಗೆ ನಿರ್ವಾಹಕ ಎದ್ದು ಚಾಲಕನನ್ನು ಕರೆಯಲೆಂದು ನೋಡಿದಾಗ ಚಾಲಕ ಮುಗ್ಗರಿಸಿ ಬಿದ್ದು ಮೃತಪಟ್ಟಿರುವುದು

ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಷ್ಟಾರ್ಥ ಕಾಳಿ ತಂತ್ರ ಸಿದ್ಧಾಂತ ಅವಲೋಕನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಅನಂತಕೋಟಿ ಬ್ರಹ್ಮಾಂಡದಲ್ಲಿ ಆಕರ್ಷಣೀಯವಾಗಿ ಪರಸ್ಪರ ಕಾಯಗಳು, ಜೀವಜಂತುಗಳು, ನಿರ್ಜೀವ ವಸ್ತುಗಳು ಒಂದಕ್ಕೊಂದು ಆಸರೆಯಾಗಿ ಅವಲಂಬಿಸಿಕೊಂಡಿದೆ. ಹೀಗಿರುವಾಗ ಒಬ್ಬ ವ್ಯಕ್ತಿಯ ಸುಪ್ತ ಮನಸ್ಸನ್ನು ನಿಯಂತ್ರಿಸುವುದು ಮತ್ತು ತಾನು ನಿಯಂತ್ರಣಗೊಳ್ಳುವಂತಹ ಅಸದೃಶ್ಯ ಕಲ್ಪನಾತೀತ ಸಿದ್ಧಾಂತವಿದು. ಒಬ್ಬ ವ್ಯಕ್ತಿ ತನ್ನ ಬಯಕೆಗಳನ್ನು ಅಥವಾ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಹಲವು ಸಿದ್ಧಾಂತಗಳನ್ನು ಮತ್ತು ನೆಲೆಗಳನ್ನು ಬಳಸಿಕೊಳ್ಳುವನು. ಹಾಗೆಯೇ ತಂತ್ರ ಸಿದ್ಧಾಂತವನ್ನು ಸಹ ಆತ ಬಳಸಿಕೊಳ್ಳಲು ಬಯಸುವನು. ಪರಮಸತ್ಯಳು ಆಕಾರ ರಹಿತ ಹಾಗೂ ಸೃಷ್ಟಿಯ

ಇಷ್ಟಾರ್ಥ ಕಾಳಿ ತಂತ್ರ ಸಿದ್ಧಾಂತ ಅವಲೋಕನ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ನಂಬಿದ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ನಂಬಿಕೆಯ ವಿಷಯದಲ್ಲಿ ಮನಸ್ತಾಪವಾಗಿದೆಯೇ? ಆಪ್ತರು ನಿಮ್ಮಿಂದ ದೂರವಾಗಿದ್ದಾರೆಯೇ? ಅನಗತ್ಯವಾಗಿ ನಿಮ್ಮನ್ನು ದೂರ ಮಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ನಿಮಗೆ ಕಾಡುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ವಿಶ್ವಾಸ ಹಾಗೂ ನಂಬಿಕಸ್ತರು ಮರಳಿ ಬರಲು ಮತ್ತು ಮನ ಇಚ್ಛೆ ಕಾರ್ಯಗತವಾಗಲು ಬುಧವಾರದ ದಿನದಂದು ಎಕ್ಕದ ಗಿಡದ ಹೂವನ್ನು ಗಣಪತಿಗೆ ನೀಡಿ ಶುಭವಾಗುವುದು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ನಂಬಿದ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ರಾಜ್ಯದಲ್ಲಿ ನಾಲ್ವರಿಗೆ ಕೊರೋನ ದೃಢ

ಬೆಂಗಳೂರು, ಮಾ.10: ಮಹಾಮಾರಿ ಕೊರೋನ ವೈರಸ್‌ಗೆ ರಾಜ್ಯದಲ್ಲಿ ನಾಲ್ಕು ಮಂದಿ ಒಳಗಾಗಿರುವುದಾಗಿ ದೃಢಪಟ್ಟಿದೆ. ಸೋಮವಾರ ಸಂಜೆ ಬೆಂಗಳೂರಿನಲ್ಲಿ ಒಂದು ಪ್ರಕರಣ ಖಚಿತವಾಗಿತ್ತು. ಇದೀಗ ಮತ್ತೆ ಮೂವರಿಗೆ ಈ ಮಾರಣಾಂತಿಕ ಕೊರೋನ ವೈರಸ್ ಖಚಿತವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ. ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ

ರಾಜ್ಯದಲ್ಲಿ ನಾಲ್ವರಿಗೆ ಕೊರೋನ ದೃಢ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

Breaking news ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಗುಡ್ ಬೈ

ಹೊಸದಿಲ್ಲಿ, ಮಾ.10: ಮಧ್ಯಪ್ರದೇಶ ಕಾಂಗ್ರೆಸ್‌ನ ಪ್ರಭಾವಿ ಯುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷದಲ್ಲಿನ ತನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಂಧಿಯಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂ‍ಧಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ

Breaking news ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಗುಡ್ ಬೈ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.10. ಚರಿತ್ರೆ ಪ್ರಸಿದ್ದವಾದ ಬದ್ರಿಯಾ ಜುಮಾ ಮಸ್ಜಿದ್ ಪೆರುವಾಯಿ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಅಸ್ಸಯ್ಯಿದ್ ಅಬೂಬಕ್ಕರ್ ಹೈದ್ರೋಸ್ ಅಲ್ ಹಾದಿ ತಂಙಳ್(ಖ.ಸಿ)ರವರ ಮಖಾಂ ದರ್ಬಾರಿನ ಉರೂಸ್ ಮಹಾ ಸಂಭ್ರಮವು ಮಾರ್ಚ್ 11 ರಿಂದ 15 ರವರೆಗೆ ನಡೆಯಲಿದೆ. ಬದುಕಿನ ಭವ್ಯತೆಗೆ ತಿಲಾಂಜಲಿ ನೀಡಿ ಪಾರತ್ರಿಕ ಮೋಕ್ಷವನ್ನು ಗುರಿಯಾಗಿಸಿ ಭೌತಿಕ ಜಂಜಾಟದಿಂದ ಮುಕ್ತಿ ಪಡೆದು ತನು – ಮನ – ಧನವನ್ನು ಇಲಾಹೀ ಮಾರ್ಗದಲ್ಲಿ ವ್ಯಯಿಸುತ್ತಾ ತ್ಯಾಗದ ದೃಷ್ಟಿಯಿಂದ ತನುವನ್ನು ಕರಗಿಸಿ,

ಪೆರುವಾಯಿ ಮಖಾಂ ಉರೂಸ್ ➤ ಮಾ.11 ರಿಂದ 15 ರ ವರೆಗೆ Read More »

ಕರ್ನಾಟಕ

ಕೊರೋನಾ ಆತಂಕದ ಹಿನ್ನೆಲೆ ➤ ಮಾ.23 ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.10, ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಾ. 23ರೊಳಗೆ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಬೇಕು ಎಂಬುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಜಿಲ್ಲೆಯ ಎಲ್ಲ ಖಾಸಗಿ, ಅನುದಾನಿತ, ಅನುದಾನರಹಿತ ಹಾಗೂ ಸರಕಾರಿ ಶಾಲೆಗಳಿಗೆ ಇದು ಅನ್ವಯವಾಗಲಿದೆ. ಕೊರೊನಾ ಆತಂಕದಿಂದಾಗಿ ಜಿಲ್ಲೆಯ ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಪತ್ರದ ಮೂಲಕ ಪೋಷಕರಿಗೆ ನೀಡುವಂತೆ ತಿಳಿಸಲಾಗಿದ್ದು, ಸಾಧ್ಯವಾದರೆ ಮಾಸ್ಕ್ ತೊಡಿಸಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಿ, ಜ್ವರ, ಕೆಮ್ಮು,

ಕೊರೋನಾ ಆತಂಕದ ಹಿನ್ನೆಲೆ ➤ ಮಾ.23 ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.09. ವಿವಾಹಿತ ಮಹಿಳೆಯೋರ್ವರು ತನ್ನ ಮಗುವನ್ನು ಮನೆಯಲ್ಲೇ ಬಿಟ್ಟು ಫೆಬ್ರವರಿ 26ರಂದು ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಎನ್ ಕೂಪ್ ಸಿ.ಆರ್.ಸಿ ಕಾಲನಿ ಎಂಬಲ್ಲಿ ನಡೆದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಎನ್ ಕೂಪ್ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ರಿ ಸುಮಿತ್ರಾ(30) ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ಸುಮಿತ್ರಾಳನ್ನು ತಮಿಳುನಾಡಿಗೆ ವಿವಾಹ ಮಾಡಿಕೊಡಲಾಗಿದ್ದು, ಕೆಲವು ಸಮಯಗಳ ಕಾಲ ಗಂಡನ ಜೊತೆಗಿದ್ದು ಆ ಬಳಿಕ ತನ್ನ ತವರು

ಕಡಬ: ವಿವಾಹಿತ ಮಹಿಳೆ ನಾಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು ಗೋಲಿಬಾರ್ ಪ್ರಕರಣ: ಹಿಂಸಾಚಾರದಲ್ಲಿ 78 ಪೊಲೀಸರಿಗೆ ಗಾಯ; ಡಿಸಿಪಿ ಅರುಣಾಂಶುಗಿರಿ

ಮಂಗಳೂರು, ಮಾ.9: ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರಾದ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಘಟನೆಯಲ್ಲಿ 78 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗಳಾಗಿವೆ ಎಂದು ಹೇಳಿಕೆ ನೀಡಿದ್ದಾರೆ. ವಿಚಾರಣೆಯು ಹಂಪನಕಟ್ಟೆಯ್ಲಲಿರುವ ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು. ಐಪಿಎಸ್ ಅಧಿಕಾರಿ ಅರುಣಾಂಶುಗಿರಿ ವಿಚಾರಣಾಧಿಕಾರಿ ಎದುರು ಹಾಜರಾಗಿದ್ದು, ಲಿಖಿತ ಹೇಳಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಿದರು. ನಾನು ಡಿ.19ರಂದು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ.

ಮಂಗಳೂರು ಗೋಲಿಬಾರ್ ಪ್ರಕರಣ: ಹಿಂಸಾಚಾರದಲ್ಲಿ 78 ಪೊಲೀಸರಿಗೆ ಗಾಯ; ಡಿಸಿಪಿ ಅರುಣಾಂಶುಗಿರಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top