Breaking News ಕಾಸರಗೋಡು: ಶುಕ್ರವಾರ ಒಂದೇ ದಿನ 34 ಮಂದಿಗೆ ಕೊರೋನ ಸೋಂಕು ದೃಢ

ಕಾಸರಗೋಡು, ಮಾ.27: ಕೊರೋನ ವೈರಸ್ ಕೇರಳದ್ಯಾದಂತ ಭಾರೀ ಆತಂಕ ಸೃಷ್ಟಿಸುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 34 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 81ಕ್ಕೇರಿದೆ. ಕೇರಳದಲ್ಲಿ ಇಂದು ಒಟ್ಟು 39 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 34 ಮಂದಿಯೂ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಇದರಿಂದ ಜಿಲ್ಲೆಯ ಜನರು ಭಾರೀ ಆತಂಕಗೊಳಗಾಗಿದ್ದಾರೆ.

Breaking News ಕಾಸರಗೋಡು: ಶುಕ್ರವಾರ ಒಂದೇ ದಿನ 34 ಮಂದಿಗೆ ಕೊರೋನ ಸೋಂಕು ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಕೊರೋನ ಸೋಂಕು ದೃಢ

ಲಂಡನ್, ಮಾ.27: ಕೊರೋನ ವೈರಸ್ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ. ಕಳೆದ 24 ಗಂಟೆಗಳಿಂದ ನಾನು ಕೊರೋನ ರೋಗಲಕ್ಷಣಗಳನ್ನು ಎದುರಿಸುತ್ತಿದ್ದೆ. ಈಗ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಾನು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುತ್ತಿದ್ದೇನೆ. ಆದರೆ ಸರಕಾರದ ಕೆಲಸಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಮಾ.25ರಂದು ಬ್ರಿಟನ್‌ನ ರಾಜವಂಶಸ್ಥ ಪ್ರಿನ್ಸ್ ಚಾರ್ಲ್ಸ್‌ಗೂ ಕೊರೋನ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಕೊರೋನ ಸೋಂಕು ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ದಾವಣಗೆರೆಯ ಯುವಕನಲ್ಲಿ ಕೊರೋನ ಸೋಂಕು ದೃಢ

ರಾಜ್ಯದಲ್ಲಿ 63ಕ್ಕೇರಿದ ಸೋಂಕಿತರ ಸಂಖ್ಯೆ ದಾವಣಗೆರೆ, ಮಾ.27: ಜಿಲ್ಲೆಯ ವ್ಯಕ್ತಿಯೋರ್ವನಿಗೆ ಕೊರೋನ ಸೋಂಕು ತಗಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಇದರೊಂದಿಗೆ ಇಂದು ರಾಜ್ಯದಲ್ಲಿ ಎಂಟನೇ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿದೆ. ಫ್ರಾನ್ಸ್‌ನಿಂದ ಮಾ. 17ರಿಂದ ಹೊರಟು ಅಬುಧಾಬಿ ಮೂಲಕ ಬೆಂಗಳೂರಿಗೆ ಬಂದಿದ್ದ 24 ಯುವಕ ಮಾರ್ಚ್ 18 ರಂದು ದಾವಣಗೆರೆಗೆ ಆಗಮಿಸಿದ್ದರು. ಮಾರ್ಚ್ 25ರಂದು ಕೆಮ್ಮು, ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಪರೀಕ್ಷಾ

ದಾವಣಗೆರೆಯ ಯುವಕನಲ್ಲಿ ಕೊರೋನ ಸೋಂಕು ದೃಢ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ; ಕೊರೋನ ಹರಡುವ ಭೀತಿ: ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ, ಮಾ.27: ಕೊರೋನ ವೈರಸ್ ಆತಂಕದಿಂದ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಬೆಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ನಿವಾಸಿ ಸದಾಶಿವ ಶೆಟ್ಟಿ (55)ಎಂದು ಗುರುತಿಸಲಾಗಿದೆ. ಕೊರೋನ ವೈರಸ್ ಹರಡುತ್ತಿರುವ ಬಗ್ಗೆ ಚಿಂತೆಗೀಡಾಗಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಾ.26ರ ರಾತ್ರಿ ಮನೆಯ ಗೋಡೆ ಮೇಲೆ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಕಳೆದ ಎರಡು ದಿನಗಳ ಹಿಂದೆಯೂ

ಬಂಟ್ವಾಳ; ಕೊರೋನ ಹರಡುವ ಭೀತಿ: ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನ ಸೋಂಕು ದೃಢ

ಬಂಟ್ವಾಳ, ಮಾ 27: ಇಲ್ಲಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿನಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಮಗುವಿನಲ್ಲಿ ಶಂಕಿತ ಕೊರೋನ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಮಗುವಿನ ಗಂಟಲು ದ್ರವವನ್ನು ಬುಧವಾರ ಪರೀಕ್ಷೆ ರವಾನಿಸಲಾಗಿತ್ತು. ಗುರುವಾರ ಬಂದ ವರದಿಯಲ್ಲಿ ಕೊರೋನ ಪಾಸಿಟಿವ್ ಬಂದಿತ್ತು. ಆದರೆ ಈ ಮಗುವಿನ ಕುಟುಂಬ ಕೊರೋನ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸಿರಲಿಲ್ಲ. ಮಗುವನ್ನು

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನ ಸೋಂಕು ದೃಢ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಕೆಲಸದ ವೇಳೆ ಕೊರೋನಾ ಹರಡಿರುವ ಭೀತಿ ➤ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.27. ಜಗತ್ತಿನಾದ್ಯಂತ ಇತ್ತೀಚೆಗೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ರೋಗವು ತನಗೆ ತಗುಲಿರಬಹುದು ಎಂದು ಭಯಗೊಂಡು ಪೆಟ್ರೋಲ್ ಬಂಕ್ ಉದ್ಯೋಗಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಮೇರಮಜಲು ಗ್ರಾಮದ ಅಬ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ (56) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ರೋಗವು ಪೆಟ್ರೋಲ್

ಬಂಟ್ವಾಳ: ಕೆಲಸದ ವೇಳೆ ಕೊರೋನಾ ಹರಡಿರುವ ಭೀತಿ ➤ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ ಶಾಸಕ ಎಸ್ ಅಂಗಾರ ರಕ್ತದೊತ್ತಡದಿಂದ ದಿಢೀರ್ ಅಸ್ವಸ್ಥ ➤ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಪಡಿತರ ವ್ಯವಸ್ಥೆಯ ಕುರಿತು ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಸುಳ್ಯ ಶಾಸಕ ಎಸ್.ಅಂಗಾರ ಅಸ್ವಸ್ಥಗೊಂಡ ಘಟನೆ ಶುಕ್ರವಾರದಂದು ಕಡಬದಲ್ಲಿ ನಡೆದಿದೆ. ಕಡಬದಲ್ಲಿ ನಡೆದ ಅಧಿಕಾರಿಗಳು, ವರ್ತಕರು ಹಾಗೂ ಜನಪ್ರತಿನಿಧಿಗಳ ಸಭೆಯ ಬಳಿಕ ಕಡಬದ ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದ ವೇಳೆ ದಿಢೀರ್ ರಕ್ತದೊತ್ತಡ ಕಡಿಮೆಯಾಗಿದೆ‌. ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಸುಳ್ಯ ಶಾಸಕ ಎಸ್ ಅಂಗಾರ ರಕ್ತದೊತ್ತಡದಿಂದ ದಿಢೀರ್ ಅಸ್ವಸ್ಥ ➤ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂರು ತಿಂಗಳುಗಳ ಕಾಲ ಸಾಲದ ಕಂತು ಮುಂದೂಡಿಕೆ ➤ ಆರ್ ಬಿಐ ಗವರ್ನರ್ ಮಹತ್ವದ ಆದೇಶ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ.27. ಎಲ್ಲಾ ಬ್ಯಾಂಕ್ ಗಳ ಸಾಲದ ಕಂತುಗಳನ್ನು ಮೂರು ತಿಂಗಳುಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿ ಕಾಂತ್ ದಾಸ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ ಅವರು ವೈಯಕ್ತಿಕ ಸಾಲ, ಗೃಹ ಸಾಲ, ವಾಹನಗಳ ಸಾಲಗಳ ಕಂತುಗಳನ್ನು ಜೂನ್ ತನಕ ಮೂಂದೂಡಲಾಗಿದೆ. ರಾಷ್ಟ್ರೀಕೃತ, ಸಹಕಾರಿ , ಗ್ರಾಮೀಣ ಬ್ಯಾಂಕ್ ಗಳು ಸೇರಿದಂತೆ ಇದು ಎಲ್ಲ ಬ್ಯಾಂಕ್ ಗಳಿಗೂ ಅನ್ವಯವಾಗುತ್ತದೆ ಎಂದರು. ಭಾರತೀಯ ರಿಸರ್ವ್

ಮೂರು ತಿಂಗಳುಗಳ ಕಾಲ ಸಾಲದ ಕಂತು ಮುಂದೂಡಿಕೆ ➤ ಆರ್ ಬಿಐ ಗವರ್ನರ್ ಮಹತ್ವದ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Astrology

ಮುನಿಸಿಕೊಂಡಿರುವರು ಮತ್ತೆ ವಶವಾಗುವ ಸರಳ ತಂತ್ರ ಮತ್ತು ದಿನ ಭವಿಷ್ಯ

ನಿಮ್ಮ ಸಂಗಾತಿ ಮುನಿಸಿಕೊಂಡು ಹೋಗಿರಬಹುದು ಅವರು ಮತ್ತೆ ಪ್ರೇಮದಿಂದ ನಿಮ್ಮ ಬಳಿ ಬರಲು ಉತ್ತರಾಣಿ ಗಿಡದ ಕಾಂಡಕ್ಕೆ ತಾಮ್ರದ ತಗಡಿನಲ್ಲಿ ಅವರ ಹೆಸರನ್ನು ಬರೆದು ಕಟ್ಟೆರಿ ಇದರಿಂದ ಅವರು ವಶ ವಾಗುವ ಸಾಧ್ಯತೆ ಇರುತ್ತದೆ. ಶ್ರೀ ಬನಶಂಕರಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ

ಮುನಿಸಿಕೊಂಡಿರುವರು ಮತ್ತೆ ವಶವಾಗುವ ಸರಳ ತಂತ್ರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಬಂಟ್ವಾಳ: ಸ್ನಾನಕ್ಕೆಂದು ಹೋದ ಯುವಕ ನೀರುಪಾಲು

ಬಂಟ್ವಾಳ, ಮಾ.27: ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ಹೋಗಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಾಣಿಯಲ್ಲಿ ನಡೆದಿದೆ. ಮೃತ ಯುವಕನನ್ನು ಪಾಲ್ಕೆ ನಿವಾಸಿ ರಹೀಂ (29) ಎಂದು ಗುರುತಿಸಲಾಗಿದೆ. ನೇತ್ರಾವತಿ ನದಿಯ ದಡಕ್ಕೆ ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ರಹೀಂ ತೆರಳಿದ್ದು ಮೂವರು ಸ್ನೇಹಿತರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ರಹೀಂ ಕೂಡಾ ನೀರಿಗೆ ಇಳಿದಿದ್ದು ನೀರಿನಲ್ಲಿ ಮುಳುಗಿ ಕಾಪಾಡುವಂತೆ ಕೂಗಿದ್ದಾರೆ. ಆದರೆ ಉಳಿದ ಸ್ನೇಹಿತರು ಯಾರಿಗೂ ಆಳವಾದ ನೀರಿನ ಈಜಲು ತಿಳಿಯದ ಕಾರಣದಿಂದಾಗಿ ಅವರನ್ನು ಉಳಿಸಲಾಗಲಿಲ್ಲ.

ಬಂಟ್ವಾಳ: ಸ್ನಾನಕ್ಕೆಂದು ಹೋದ ಯುವಕ ನೀರುಪಾಲು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top