ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ➤ ಮೀನಾಡಿಯಲ್ಲಿ ಮನೆಗೆ ಸಿಡಿಲು ಬಡಿತ, ಇಚಿಲಂಪಾಡಿಯಲ್ಲಿ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಎ.26. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡ ಎಂಬವರ ಮನೆಗೆ ಸಿಡಿಲು ಬಡಿದಿದೆ. ಬೆಂಕಿಯ ಉಂಡೆಯೊಂದು‌ ಮನೆಗೆ ಅಪ್ಪಳಿಸಿದ್ದು, ಮನೆಯ ಒಂದು ಪಾರ್ಶ್ವ ಹಾನಿಗೀಡಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದೆಡೆ ಭಾನುವಾರ ಸಂಜೆ‌ ಸುರಿದ ಮಳೆಗೆ ಇಚಿಲಂಪಾಡಿಯ ಪಾದೆ‌ ನಿವಾಸಿ ಸಾಂತಪ್ಪ ಗೌಡ ಎಂಬವರ ಮನೆಗೆ ಹಾನಿಯಾಗಿದೆ. […]

ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ➤ ಮೀನಾಡಿಯಲ್ಲಿ ಮನೆಗೆ ಸಿಡಿಲು ಬಡಿತ, ಇಚಿಲಂಪಾಡಿಯಲ್ಲಿ ಮನೆಗೆ ಹಾನಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹೆಚ್ಚುತ್ತಿರುವ ಕೊರೋನ ಹಿನ್ನೆಲೆ: ಕಠಿಣ ಕ್ರಮಕ್ಕೆ ಸಚಿವ ಕೋಟ ಸೂಚನೆ

ಮಂಗಳೂರು, ಎ.26: ದ.ಕ. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಂಟ್ವಾಳದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಸಚಿವರು ಹಾಗೂ ಸಂಸದರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್‌ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಸಬಾ ಹೋಬಳಿಯ 92 ಮನೆಗಳು ಹಾಗೂ ನರಿಕೊಂಬು ಗ್ರಾಮಪಂಚಾಯತ್

ಹೆಚ್ಚುತ್ತಿರುವ ಕೊರೋನ ಹಿನ್ನೆಲೆ: ಕಠಿಣ ಕ್ರಮಕ್ಕೆ ಸಚಿವ ಕೋಟ ಸೂಚನೆ Read More »

ಕರಾವಳಿ

ರಾಜ್ಯದಲ್ಲಿ ಇಂದು ಮೂವರಿಗೆ ಕೊರೋನ ಸೋಂಕು ದೃಢ

ಬೆಂಗಳೂರು, ಎ.26: ರಾಜ್ಯದಲ್ಲಿ ರವಿವಾರ ಹೊಸದಾಗಿ ಮೂವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೊರೋನ ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದ.ಕ. ಜಿಲ್ಲೆಯಲ್ಲಿ ಓರ್ವ ಮಹಿಳೆ ಹಾಗೂ ಕಲಬುರಗಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. 182 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು ಮೂವರಿಗೆ ಕೊರೋನ ಸೋಂಕು ದೃಢ Read More »

ಕರ್ನಾಟಕ

ಹೆಚ್ಚು ಪರೀಕ್ಷೆ ನಡೆಸದೆ ಕೊರೋನ ಗೆಲ್ಲಲು ಅಸಾಧ್ಯ: ಮನಮೋಹನ್ ಸಿಂಗ್

ಹೊಸದಿಲ್ಲಿ, ಎ.26: ಭಾರತದಲ್ಲಿ ಹೆಚ್ಚು ಪರೀಕ್ಷೆಗಳು ನಡೆಯದಿದ್ದರೆ ಕೊರೋನ ವಿರುದ್ಧ ಜಯ ಸಾಧಿಸಲು ಅಸಾಧ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಾತನಾಡಿದ ಅವರು, ಕೊರೋನ ವೈರಸ್‌ಗೆ ಪರೀಕ್ಷೆ ಹಾಗೂ ಪತ್ತೆ ಹಚ್ಚುವಿಕೆ ಮುಖ್ಯ ಅಸ್ತ್ರಗಳಾಗಿವೆ. ಆಕ್ರಮಣಕಾರಿಯಾಗಿ ಪರೀಕ್ಷೆಗಳು ನಡೆಯದಿದ್ದಲ್ಲಿ ಕೊರೋನ ವಿರುದ್ಧ ಜಯ ಸಾಧಿಸಲು ಆಗುವುದಿಲ್ಲ ಎಂದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರ ಸಮಸ್ಯೆಯ ವಿಚಾರದ ಬಗ್ಗೆ ಮಾತನಾಡಿದ್ದು, ಪಕ್ಷವು ವಲಸೆ

ಹೆಚ್ಚು ಪರೀಕ್ಷೆ ನಡೆಸದೆ ಕೊರೋನ ಗೆಲ್ಲಲು ಅಸಾಧ್ಯ: ಮನಮೋಹನ್ ಸಿಂಗ್ Read More »

ರಾಷ್ಟ್ರೀಯ ನ್ಯೂಸ್

ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ

ಟ್ರೋಲಿಗರಿಗೆ ಆಹಾರವಾಗಲಿದೆ ಓವರ್ ಬ್ರಿಡ್ಜ್ ಮಂಗಳೂರು, ಎ.26: ಶನಿವಾರ ಸುರಿದ ಭಾರೀ ಮಳೆಗೆ ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಮಳೆ ಸುರಿದ ಬಳಿಕ ಮೇಲ್ಸೇತುವೆಯ ಇಕ್ಕಡೆಗಳ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿಕೊಂಡಿದ್ದು ಕೂಡಲೇ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಲಾಕ್‌ಡೌನ್ ಕಾರಣದಿಂದಾಗಿ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಇಳಿಕೆಯಾಗಿದ್ದು, ಲಾಕ್‌ಡೌನ್ ತೆರವಿನ ಬಳಿಕ ಬಿರುಕುಗೊಂಡ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಅಪಾಯಕ್ಕೆ ಕಾರಣವಾಗಬಹುದು ಎಂದು ಸಾರ್ವಜನಿಕರು ಆತಂಕ

ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ Read More »

ಕರಾವಳಿ

Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು

ಮಂಗಳೂರು, ಎ.26: ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯ 47 ವರ್ಷದ ಸಿಬ್ಬಂದಿ ಮಹಿಳೆಗೆ ಕೊರೋನ ದೃಢಪಟ್ಟಿದೆ. ರಾಜ್ಯದಲ್ಲಿ ಏಕೈಕ ಪ್ರಕರಣ ಇದಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ಧೆ ಎ.21ರಂದು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ನಾಯಿಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ವೃದ್ಧೆ ಮೃತಪಟ್ಟ ತಕ್ಷಣ ಆಸ್ಪತ್ರೆ ಸಿಬ್ಬಂದಿಯನ್ನು

Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ 26 ಸಾವಿರ ದಾಟಿದ ಕೊರೋನ ಸೋಂಕಿತರು: 824 ಮಂದಿ ಸಾವು

ಹೊಸದಿಲ್ಲಿ, ಎ.26: ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರಿದಿದ್ದು ಸೋಂಕಿತರ ಸಂಖ್ಯೆ 26 ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ, ಗುಜರಾತ್ ನಲ್ಲಿ ಸೋಂಕು ಪೀಡಿತರ ಸಂಖ್ಯೆ ದ್ವಿಗುಣಗೊಂಡಿರುವುದು ಕಳವಳವನ್ನು ಹೆಚ್ಚಿಸಿದೆ. ಕೋವಿಡ್ -19 ಹೊಸ 5,000 ಪ್ರಕರಣಗಳು ಕೇವಲ 4 ದಿನಗಳಲ್ಲಿ ದಾಖಲಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಶನಿವಾರ ಭಾರತದಾದ್ಯಂತ 1,834 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲೇ 811 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 602

ದೇಶದಲ್ಲಿ 26 ಸಾವಿರ ದಾಟಿದ ಕೊರೋನ ಸೋಂಕಿತರು: 824 ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ.

ಸಾಧನೆ ಮತ್ತು ಸಾಹಸದಿಂದ ಮಾತ್ರ ಉದ್ಯಮ ರಂಗದಲ್ಲಿ ಬೆಳವಣಿಗೆ ಸಾಧಿಸಬಹುದು. ತಮ್ಮಲ್ಲಿನ ಕೀಳರಿಮೆ ಭಾವನೆ ಅಥವಾ ಭಯಗ್ರಸ್ತ ವಾತಾವರಣ ಇವುಗಳು ನಿಮ್ಮ ಸಾಧನೆಗೆ ಹೆಚ್ಚಿನ ಮಾರಕ ತಂದೊಡ್ಡುತ್ತದೆ. ಇವುಗಳನ್ನು ನೀವು ಆದಷ್ಟು ಮೆಟ್ಟಿ ನಿಲ್ಲಬೇಕು. ಪ್ರತಿನಿತ್ಯ ಆಂಜನೇಯ ದೇಗುಲಕ್ಕೆ ಪೂಜೆಯನ್ನು ಸಲ್ಲಿಸಿ ಇದರಿಂದ ನಿಮ್ಮಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ,

ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಸೀಲ್ ಡೌನ್ ಆದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ಕಡಬಕ್ಕೆ ಆಗಮನ ➤ ಆತಂಕದಲ್ಲಿ ಗ್ರಾಮಸ್ಥರು..!! ಯುವಕನಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ) newskadaba.com ಕಡಬ, ಎ.25. ಕಡ್ಯ ಕೊಣಾಜೆ ಗ್ರಾಮದ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದು ಆಸ್ಪತ್ರೆ ಕಂಟೈನ್ಮೆಂಟ್ ಝೋನ್ ಆಗಿರುವ ಬೆನ್ನಲ್ಲೇ ಯುವಕ ತನ್ನ ಮನೆಗೆ ಬಂದಿದ್ದು ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಅವರ ಮನೆಗೆ ಭೇಟಿ ನೀಡಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಎಚ್ಚರಿಕೆ ನೀಡಿದ ಘಟನೆ ಏ.24ರಂದು ನಡೆದಿದೆ. ಕಡ್ಯ ಕೊಣಾಜೆ ಗ್ರಾಮದ ಕಲ್ಲೂರು ನಿವಾಸಿಯಾಗಿರುವ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ

ಸೀಲ್ ಡೌನ್ ಆದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ಕಡಬಕ್ಕೆ ಆಗಮನ ➤ ಆತಂಕದಲ್ಲಿ ಗ್ರಾಮಸ್ಥರು..!! ಯುವಕನಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪತ್ರಕರ್ತ ಸೇರಿ ರಾಜ್ಯದಲ್ಲಿ 15 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ

ಬೆಂಗಳೂರು, ಎ.25: ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಶನಿವಾರ ಮಧ್ಯಾಹ್ನ 12ರವರೆಗೆ 15 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 6, ಬೆಳಗಾವಿ 6, ಮಂಡ್ಯ 1, ಚಿಕ್ಕಬಳ್ಳಾಪುರ 1, ದ.ಕ. 1 ಪ್ರಕರಣ ವರದಿಯಾಗಿದೆ. ಬೆಂಗಳೂರಿನ ಬಿಬಿಎಂಪಿಯ ಕಂಟೈನ್ಮೆಂಟ್ ವಲಯಕ್ಕೆ ಭೇಟಿ ನೀಡಿದ ಪತ್ರಕರ್ತರೋರ್ವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಪ್ರಸ್ತುಕ ಸೋಂಕಿಗೊಳಗಾಗಿರುವ ಪತ್ರಕರ್ತ ಕರ್ತವ್ಯದ ಮೇರೆಗೆ ಸೂಕ್ಷ್ಮ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಲಕ್ಷಣಗಳು

ಪತ್ರಕರ್ತ ಸೇರಿ ರಾಜ್ಯದಲ್ಲಿ 15 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ Read More »

ಕರ್ನಾಟಕ
Scroll to Top