ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 10 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಅಂತರ್ರಾಷ್ಟ್ರೀಯ ವಿಮಾನವೊಂದು ಪೈಲಟ್‌ ನ ಅಚಾತುರ್ಯದಿಂದಾಗಿ ನೆಲಕ್ಕಪ್ಪಳಿಸಿ 159 ಮಂದಿ ಸಜೀವ ದಹನವಾಗುವುದರೊಂದಿಗೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ಘೋರ ದುರಂತಕ್ಕೆ ಇಂದಿಗೆ 10 ವರ್ಷ ತುಂಬಿದೆ. 2010 ಮೇ 22ನೇ ತಾರೀಕು ಮುಂಜಾನೆ 6:14 ರ ಸಮಯ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ನ ಅಚಾತುರ್ಯದಿಂದಾಗಿ ಕ್ಷಣಾರ್ಧದಲ್ಲಿ ರನ್ ವೇಗೆ ಅಪ್ಪಳಿಸಿ 8 ಮಂದಿ […]

ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 10 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ

ಮಧುರ ದಾಂಪತ್ಯ ನಿಮ್ಮದಾಗಲಿ ಮತ್ತು ದಿನ ಭವಿಷ್ಯ ನೋಡಿ

ಮಧುರ ದಾಂಪತ್ಯ ನಿಮ್ಮದಾಗಲು, ನಿಮ್ಮಲ್ಲಿನ ಮನಸ್ತಾಪ ದೂರಾವಾಗಿ ಹರುಷದಿಂದ ಒಂದಾಗುವ ಸರಳ ತಂತ್ರ. ಕೆಂಪುವಸ್ತ್ರ ತೆಗೆದುಕೊಂಡು ಅರಿಶಿನದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ, ನಂತರ ಅದರಲ್ಲಿ ವಿಳ್ಳೆದೆಲೆ ಅಡಿಕೆ ಹಾಗೂ ನವಧಾನ್ಯಗಳನ್ನು ಇಟ್ಟು ಹರಿಯುವ ನೀರಿಗೆ ಬಿಡಿ. ಶ್ರೀ ತ್ರಿಪುರ ಸುಂದರಿ ಭೈರವಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ಮಧುರ ದಾಂಪತ್ಯ ನಿಮ್ಮದಾಗಲಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

ಹಾಸನ, ಮೇ 21: ಅನಾರೋಗ್ಯದಿಂದ ಬಳುತ್ತಿದ್ದ ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ (109) ಅವರನ್ನು ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ತೀವ್ರ ಹೊಟ್ಟೆ ನೋವು, ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದ ಅವರನ್ನು ಗುರುವಾರ ಸಂಜೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಜೀವಕ್ಕೆ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲಾಕ್‌ಡೌನ್ ನಿರ್ಬಂಧದಿಂದ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ಅವರ ಸ್ವಗ್ರಾಮ ಬೇಲೂರಿನ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಎರಡು ತಿಂಗಳಿಂದ ವಾಸವಾಗಿದ್ದರೆ.

ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ರಾಜ್ಯದಲ್ಲಿ ಇಂದು 143 ಮಂದಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ

ಬೆಂಗಳೂರು, ಮೇ 21: ರಾಜ್ಯದಲ್ಲಿ ಇಂದು ಒಂದೇ ದಿನ 143 ಮಂದಿ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,605ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಮುಂಬೈನಿಂದ ಆಗಮಿಸಿದ್ದವರ ಪೈಕಿ ಉಡುಪಿಯ 25 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರು ನಗರದಲ್ಲಿ 7, ಹಾಸನದಲ್ಲಿ 19, ಮಂಡ್ಯದಲ್ಲಿ 14, ದಕ್ಷಿಣ ಕನ್ನಡದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ದಾವಣಗೆರೆಯಲ್ಲಿ 3, ಬೆಳಗಾವಿಯಲ್ಲಿ 6, ವಿಜಯಪುರದಲ್ಲಿ 1, ಬೆಳಗಾವಿಯಲ್ಲಿ 2, ಶಿವಮೊಗ್ಗದಲ್ಲಿ 6, ಧಾರವಾಡದಲ್ಲಿ 5, ಮೈಸೂರಿನಲ್ಲಿ

ರಾಜ್ಯದಲ್ಲಿ ಇಂದು 143 ಮಂದಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ Read More »

ಕರ್ನಾಟಕ

ಲಾಕ್‌ಡೌನ್ ಇದ್ದರೂ ರವಿವಾರ ಮದುವೆ ಸಮಾರಂಭಗಳಿಗೆ ಅನುಮತಿ

ಬೆಂಗಳೂರು, ಮೇ 21: ಪ್ರತಿ ರವಿವಾರ ಸಂಪೂರ್ಣ ಲಾಕ್‌ಡೌನ್ ಇದ್ದರೂ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ. ಮದುವೆಯಲ್ಲಿ ಗರಿಷ್ಠ ಅತಿಥಿಗಳ ಸಂಖ್ಯೆ 50 ಇರಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಅನುಸರಿಸಿ ಸರಳ ವಿವಾಹ ನಡೆಸಬಹುದು. ಇದಲ್ಲದೆ, ರವಿವಾರಗಳೆಂದು ಅತ್ಯವಶ್ಯಕ ಚಟುವಟಿಕೆಗಳಿಗೂ ಅವಕಾಶ ನೀಡಬಹುದು ಎಂದೂ ಹೇಳಿದೆ. ಉಳಿದಂತೆ ರವಿವಾರ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಎಲ್ಲ ರೀತಿಯ ಚಟುವಟಿಕೆಗಳು, ವಾಹನ

ಲಾಕ್‌ಡೌನ್ ಇದ್ದರೂ ರವಿವಾರ ಮದುವೆ ಸಮಾರಂಭಗಳಿಗೆ ಅನುಮತಿ Read More »

ಕರ್ನಾಟಕ

ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ತತ್ತರ: 72 ಮಂದಿ ಸಾವು

ಹೊಸದಿಲ್ಲಿ, ಮೇ 21: ಅಂಫಾನ್ ಚಂಡಮಾರುತದಿಂದ ರಾಜ್ಯದಲ್ಲಿ ಸುಮಾರು 72 ಮಂದಿ ಮೃತಪಟ್ಟಿರುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಚಂಡಮಾರುತದಿಂದ ಮೃತಪಟ್ಟ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ನಂತರದ ಅತೀ ಭೀಕರ ಚಂಡಮಾರುತಗಳಲ್ಲಿ ಒಂದೆನಿಸಿರುವ ಅಂಫಾನ್ ಹೊಡೆತಕ್ಕೆ ಪಶ್ಚಿಮ ಬಂಗಾಳ ಜರ್ಜರಿತಗೊಂಡಿದೆ. ಗಂಟೆಗೆ 190 ಕಿ.ಮೀ ವೇಗದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿರುವ ಅಂಫಾನ್ ಈ ವರೆಗೆ ಅಲ್ಲಿ

ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ತತ್ತರ: 72 ಮಂದಿ ಸಾವು Read More »

ಕರಾವಳಿ

ಕಡಬ: ಹತ್ತನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ಗುರುವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೊಂಬಾರುಗದ್ದೆ ನಿವಾಸಿ ತಿಮ್ಮಪ್ಪ ಗೌಡ ಎಂಬವರ ಪುತ್ರ ನಂದನ್(16) ಎಂದು ಗುರುತಿಸಲಾಗಿದೆ. ನಂದನ್ ಹತ್ತನೆ ತರಗತಿಯಲ್ಲಿ ಓದುತ್ತಿದ್ದು ಗುರುವಾರ ಮುಂಜಾನೆ ತನ್ನ ಮನೆಯ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು

ಕಡಬ: ಹತ್ತನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕರಾವಳಿಯಲ್ಲಿ ಕೊರೋನಾ ರಣಕೇಕೆ ➤ ಒಂದೇ ದಿನ ಕರಾವಳಿಯಲ್ಲಿ 33 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು/ಉಡುಪಿ, ಮೇ.21. ಕರಾವಳಿಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 31 ಪ್ರಕರಣ ದೃಢವಾಗಿದ್ದು, ಕರಾವಳಿಗರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ರಾಜ್ಯ ಅರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಉಡುಪಿಯ 27 ಜನರಲ್ಲಿ ಪಾಸಿಟಿವ್ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ ಬಂದ 23 ಜನರಲ್ಲಿ, ತೆಲಂಗಾಣದಿಂದ ಬಂದ ಮೂವರಲ್ಲಿ

ಕರಾವಳಿಯಲ್ಲಿ ಕೊರೋನಾ ರಣಕೇಕೆ ➤ ಒಂದೇ ದಿನ ಕರಾವಳಿಯಲ್ಲಿ 33 ಮಂದಿಗೆ ಕೊರೋನಾ ದೃಢ Read More »

ಕರಾವಳಿ

ಗುರು ರಾಘವೇಂದ್ರ ಕೃಪೆಯಿಂದ ರಾಶಿ ಫಲವನ್ನು ತಿಳಿಯೋಣ

ಶ್ರೀ ರಾಘವೇಂದ್ರ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ

ಗುರು ರಾಘವೇಂದ್ರ ಕೃಪೆಯಿಂದ ರಾಶಿ ಫಲವನ್ನು ತಿಳಿಯೋಣ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಇನ್ಮುಂದೆ ರಾಜ್ಯದೊಳಗೆ ಸಂಚರಿಸಲು ಪಾಸ್ ಅಗತ್ಯವಿಲ್ಲ ➤ ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹೇಳಿದ್ದೇನು ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.20. ದೇಶದೆಲ್ಲೆಡೆ ಲಾಕ್‍ಡೌನ್ 4.0 ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಅಗತ್ಯವಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಯಾಣ ಮಾಡುವಾಗ ಅಗತ್ಯ ವಸ್ತುಗಳನ್ನು ಮತ್ತು ದಾಖಲೆಗಳನ್ನು ಜೊತೆಗೆ ಕೊಂಡೊಯ್ಯುವಂತೆ ಸೂಚನೆ ನೀಡಿದ್ದಾರೆ. ಇದೀಗ ಸರಕಾರವು ಬಹುತೇಕ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಸಿ ಆದೇಶಿಸಿದ್ದು, ರಾಜ್ಯದೊಳಗೆ ವಾಹನ ಸಂಚಾರಕ್ಕೆ ಇನ್ನು ಮುಂದೆ ಪಾಸ್ ಅಗತ್ಯವಿಲ್ಲ ಎಂದು ಹೇಳಿದೆ.

ಇನ್ಮುಂದೆ ರಾಜ್ಯದೊಳಗೆ ಸಂಚರಿಸಲು ಪಾಸ್ ಅಗತ್ಯವಿಲ್ಲ ➤ ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹೇಳಿದ್ದೇನು ಗೊತ್ತೇ..? Read More »

ಕರ್ನಾಟಕ
Scroll to Top