ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ➤ ಬಾದೆಟ್ಟು ಪ್ರದೇಶ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜೂ.02 : ಮಹಾರಾಷ್ಟ್ರದಿಂದ ಬಂದು ಕಾರ್ಕಳ ಕ್ವಾರೈಂಟನ್ ನಲ್ಲಿದ್ದು 3 ದಿನಗಳ ಹಿಂದೆ ಬಿಡುಗಡೆಯಾಗಿ ಹೋಮ್ ಕ್ವಾರೈಂಟನ್ನಲ್ಲಿದ್ದ ಪಡುಬಿದ್ರಿ ಪಡುಹಿತ್ಲು ಬಳಿಯ ಬಾದೆಟ್ಟು ಪ್ರದೇಶದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಸೋಕು ಧೃಢವಾಗಿದೆ. 38ರ ಹರೆಯದ ಮತ್ತು 46,16 ಮತ್ತು 40ರ ವಯೋಮಾನದ ಪುರುಷರ ವರದಿ ಸೋಮವಾರ ಬಂದಿದ್ದು,       ಅವರೆಲ್ಲರನ್ನೂ ಉಡುಪಿಯ ಟಿ.ಎಮ್.ಎ ಪೈ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಗಿದ್ದ ಇನ್ನೋರ್ವ ಮಹಿಳೆ ಕುಂದಾಪುರದ ಕೋವಿಡ್ […]

ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ➤ ಬಾದೆಟ್ಟು ಪ್ರದೇಶ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ

ಹೆಂಚು ತೆಗೆದು ಒಳನುಗ್ಗಿದ ಕಾಮುಕ ➤ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ.02: ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಬಂಗಾಳಿ ಮೂಲದ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾದ ವ್ಯಕ್ತಿಯನ್ನು ಬಿಸ್ವಾಸ್(35) ಎಂದು ಗುರುತಿಸಲಾಗಿದೆ.ಕುಂದಾಫುರದ ಚಿಕನ್‌ಸಾಲ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಾಲಕಿಯ ತಂದೆ ಹಾಗೂ ಆರೋಪಿ ಬಿಸ್ವಾಸ್ ಹನ್ನೊಂದು ವರ್ಷಗಳಿಂದ ಸ್ನೇಹಿತರಾಗಿದ್ದರು ಎನ್ನಲಾಗಿದೆ.   ಸೋಮವಾರ ಬೆಳಿಗ್ಗೆ

ಹೆಂಚು ತೆಗೆದು ಒಳನುಗ್ಗಿದ ಕಾಮುಕ ➤ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪತ್ನಿ ಕಿರುಕುಳದಿಂದ ಬೇಸತ್ತು ಪತಿ ಆತ್ಮಹತ್ಯೆ ➤ ದುಡುಕಿನ ನಿರ್ಧಾರ ಕೈಗೊಂಡ ದರ್ಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.02: ಪತ್ನಿ, ಅತ್ತೆ ಕಿರುಕುಳದಿಂದ ಪತಿರಾಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರು ರಸ್ತೆಯ ಟಿಂಬರ್ ಯಾರ್ಡ್ ಲೇಔಟ್ ನಿವಾಸಿ ದರ್ಶನ್ (31) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ದರ್ಶನ್ ಪತ್ನಿ ಮತ್ತು ಅತ್ತೆಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದ ದರ್ಶನ್ 5 ತಿಂಗಳ ಹಿಂದೆ ಮದುವೆಯಾಗಿದ್ದು, ದಂಪತಿ ಕೆಂಗೇರಿಯ ಶ್ರೀನಿವಾಸಪುರದಲ್ಲಿ ವಾಸವಾಗಿದ್ದರು.   ಮದುವೆಯಾದ ಒಂದು ತಿಂಗಳ ನಂತರ ಮನೆಯಲ್ಲಿ

ಪತ್ನಿ ಕಿರುಕುಳದಿಂದ ಬೇಸತ್ತು ಪತಿ ಆತ್ಮಹತ್ಯೆ ➤ ದುಡುಕಿನ ನಿರ್ಧಾರ ಕೈಗೊಂಡ ದರ್ಶನ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಲೆ – ಕಾಲೇಜ್ ಆರಂಭ ➤ ಮಹತ್ವದ ಹೆಜ್ಜೆ ಇಟ್ಟ “ಸರ್ಕಾರ”

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.02: ಶಾಲೆ ಆರಂಭದ ಕುರಿತು ಜೂನ್ 10-12 ರ ಅವಧಿಯಲ್ಲಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭ ಮಾಡುವ ಕುರಿತು ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.ಕೇಂದ್ರದ ಸೂಚನೆಯಂತೆ ಶಾಲೆಗಳನ್ನು ಆರಂಭಿಸುವ ಕುರಿತಾಗಿ ರಾಜ್ಯ ಸರ್ಕಾರಗಳು ಪೋಷಕರ ಅಭಿಪ್ರಾಯ, ಸಲಹೆ ಪಡೆಯಬೇಕಿದೆ.

ಶಾಲೆ – ಕಾಲೇಜ್ ಆರಂಭ ➤ ಮಹತ್ವದ ಹೆಜ್ಜೆ ಇಟ್ಟ “ಸರ್ಕಾರ” Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸುಳ್ಯ ಅರಂತೋಡು ಬಳಿ ಕಾರು ಢಿಕ್ಕಿ ➤ ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.02 : ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸುಳ್ಯದ ತಾಲೂಕಿನ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.   ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಆಗಮಿಸುತ್ತಿದ್ದ ಅಡ್ಕಾರಿನ ವ್ಯಕ್ತಿಯೋರ್ವರಿಗೆ ಸೇರಿದ ಹ್ಯುಂಡೈ ಕ್ರೆಟಾ ಕಾರು ಅರಂತೋಡು ಸಮೀಪದ ಬಿಳಿಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಅಪರಿಚಿತ ಪಾದಚಾರಿಯು ರಸ್ತೆಯನ್ನು ದಾಟಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿದ್ದುದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಪಾದಚಾರಿಗೆ ಡಿಕ್ಕಿ

ಸುಳ್ಯ ಅರಂತೋಡು ಬಳಿ ಕಾರು ಢಿಕ್ಕಿ ➤ ಪಾದಚಾರಿ ಮೃತ್ಯು Read More »

ಕರಾವಳಿ, ಕರ್ನಾಟಕ

ಸಂಗಾತಿಯ ಪ್ರೇಮ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ

ಮನ ಇಚ್ಛೆಯ ಸಂಗಾತಿ ಪಡೆಯಲು ತಾವು ಬಹಳಷ್ಟು ಇಚ್ಚೆ ಪಡೆಯುವಿರಿ. ನಿಮ್ಮ ಸ್ನೇಹ-ಪ್ರೇಮ ಜೀವನದ ಭಾಗವಾಗಿ ಆನಂದಿಸಲು ಬಯಸಬಹುದು ಇಂತಹ ವಿಚಾರಗಳಿಗೆ ನಿಮ್ಮ ವಶದಲ್ಲಿ ಬರಲು ಈ ಸರಳ ತಂತ್ರ ಅನುಸರಿಸಿ. ಬಿಳಿ ಕಾಗದದಲ್ಲಿ ಹನುಮಂತ ಚಿತ್ರವನ್ನು ಬಿಡಿಸಿ ಅದಕ್ಕೆ ತಾವು ಕೆಂಪು ಹೂವುಗಳಿಂದ ಐದು ದಿನ ಪೂಜಿಸಿ ಇದು ನಿಮಗೆ ಸಫಲತೆಗೆ ನೀಡುತ್ತದೆ. ಶ್ರೀ ಚೌಡೇಶ್ವರಿ ದೇವಿಯ ಸ್ಮರಿಸುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್

ಸಂಗಾತಿಯ ಪ್ರೇಮ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಎಸಿ ಮೆಕ್ಯಾನಿಕ್ ಬಲಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.02. ವಿದ್ಯುತ್ ಆಘಾತಕ್ಕೆ ಒಳಗಾಗಿ ಎಸಿ ಮೆಕ್ಯಾನಿಕ್ ಓರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತರನ್ನು ಉಜಿರೆಯಲ್ಲಿ ಎ.ಸಿ ಮೆಕ್ಯಾನಿಕ್ ಮಳಿಗೆ ನಡೆಸುತ್ತಿದ್ದ ಅತ್ತಾಜೆ ನಿವಾಸಿ ಮುಹಮ್ಮದ್ ಸಿರಾಜುದ್ದೀನ್ ಎಂದು ಗುರುತಿಸಲಾಗಿದೆ. ಮೃತರು ಸೋಮವಾರದಂದು ಕಕ್ಕಿಂಜೆಯ ಮನೆಯೊಂದರಲ್ಲಿ ಎಸಿ ದುರಸ್ತಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಎಸಿ ಮೆಕ್ಯಾನಿಕ್ ಬಲಿ Read More »

ಕರಾವಳಿ

ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ಅಪರಿಚಿತ ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.01. ಕಾರು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಸಂಪಾಜೆ ಕಡೆಯಿಂದ ಸುಳ್ಯದತ್ತ ಆಗಮಿಸುತ್ತಿದ್ದ ಅಡ್ಕಾರಿನ ವ್ಯಕ್ತಿಯೋರ್ವರಿಗೆ ಸೇರಿದ ಹ್ಯುಂಡೈ ಕ್ರೆಟಾ ಕಾರು ಅರಂತೋಡು ಸಮೀಪದ ಬಿಳಿಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಅಪರಿಚಿತ ಪಾದಚಾರಿಯು ರಸ್ತೆ ದಾಟಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿದ್ದುದರಿಂದ ಕಾರು ನಿಯಂತ್ರಣಕ್ಕೆ ಬಾರದೆ ಪಾದಚಾರಿಗೆ ಗುದ್ದಿ ರಸ್ತೆಯ ಪಕ್ಕದ ದಿಣ್ಣೆಯ ಮೇಲೆ ತಿರುಗಿ

ಸುಳ್ಯ: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ➤ ಅಪರಿಚಿತ ಪಾದಚಾರಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಇಂದು 187 ಹೊಸ ಕೊರೋನ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ

ಬೆಂಗಳೂರು, ಜೂ.1: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ 187 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ 04 ಹಾಗೂ ಉಡುಪಿಯಲ್ಲಿ 73, ಬೆಂಗಳೂರು ನಗರದಲ್ಲಿ 28, ಕಲಬುರಗಿಯಲ್ಲಿ 24, ಹಾಸನದಲ್ಲಿ 16, ಮಂಡ್ಯದಲ್ಲಿ 15, ಶಿವಮೊಗ್ಗದಲ್ಲಿ 09, ಚಿಕ್ಕಬಳ್ಳಾಪುರದಲ್ಲಿ 05 ಹೊಸ ಕೊರೋನ ಸೋಂಕು ಪ್ರಕರಣ ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,408ಕ್ಕೆ

ರಾಜ್ಯದಲ್ಲಿ ಇಂದು 187 ಹೊಸ ಕೊರೋನ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ Read More »

ಕರ್ನಾಟಕ

ಕರ್ನಾಟಕ – ಕೇರಳ ಗಡಿ ಸದ್ಯಕ್ಕೆ ಓಪನ್ ಇಲ್ಲ…!!! ➤ ಜಿಲ್ಲಾಧಿಕಾರಿ ಸಿಂಧು ರೂಪೇಶ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.01., ಮಾಹಾಮಾರಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಕರ್ನಾಟಕ – ಕೇರಳ ಗಡಿಭಾಗದ ರಸ್ತೆಗಳನ್ನು ತೆರೆಯುವ ಲಕ್ಷಣ ಸದ್ಯಕ್ಕಿಲ್ಲ  ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮಾಹಿತಿ ನೀಡಿದ್ದಾರೆ . ಅಂತಾರಾಜ್ಯ ಗಡಿ ತೆರೆಯುವ ನಿರ್ಧಾರವನ್ನು ತೆಗೆದುಕೊಳ್ಳಲು ಆಯಾ ರಾಜ್ಯಗಳಿಗೆ ಕೇಂದ್ರ ಸರಕಾರ ಬಿಟ್ಟಿದ್ದು, ಕಾಸರಗೋಡು – ಮಂಗಳೂರು ಗಡಿಭಾಗ ತಲಪಾಡಿ ಟೋಲ್ ಗೇಟ್ ಓಪನ್ ಮಾಡುವ ಕುರಿತು ಇನ್ನೂ ನಿರ್ಧರಿಸಿಲ್ಲ ಜೂನ್ 8ರ ಬಳಿಕವೇ ಈ ಬಗ್ಗೆ ನಿರ್ಧರಿಸಲಾಗುವುದು

ಕರ್ನಾಟಕ – ಕೇರಳ ಗಡಿ ಸದ್ಯಕ್ಕೆ ಓಪನ್ ಇಲ್ಲ…!!! ➤ ಜಿಲ್ಲಾಧಿಕಾರಿ ಸಿಂಧು ರೂಪೇಶ್ Read More »

ಕರಾವಳಿ
Scroll to Top