10ನೇ ತರಗತಿ ಪರೀಕ್ಷೆ ಮಹತ್ವದ ನಿರ್ಧಾರ ತೆಗೆದುಕೊಂಡ ಆಂಧ್ರ ಸರ್ಕಾರ

(ನ್ಯೂಸ್ ಕಡಬ) newskadaba.com.ಆಂಧ್ರಪ್ರದೇಶ,ಜೂ.21:ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಕೊರೊನಾದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಲ್ಲಾ ರಾಜ್ಯಗಳು ತಾತ್ಕಾಲಿಕವಾಗಿ ಮುಂದೂಡಿದ್ದವು. ಈಗ ಆಂಧ್ರಪ್ರದೇಶದ ಜಗನ್‍ಮೋಹನ್ ರೆಡ್ಡಿ ಸರ್ಕಾರ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಈ ಸಂಬಂಧ ಸ್ಪಷ್ಟೀಕರಣ ನೀಡಿರುವ ಆಂಧ್ರಪ್ರದೇಶದ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್, ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತ ಬಂದಿದೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನೇ ರದ್ದು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಆಂಧ್ರ ಪ್ರದೇಶದಲ್ಲಿ ಈವರೆಗೆ […]

10ನೇ ತರಗತಿ ಪರೀಕ್ಷೆ ಮಹತ್ವದ ನಿರ್ಧಾರ ತೆಗೆದುಕೊಂಡ ಆಂಧ್ರ ಸರ್ಕಾರ Read More »

ಕರಾವಳಿ

ಬ್ರಹ್ಮಾವರ; ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ,ಜೂ.21:  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೋರ್ವ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದ ಘಟನೆ ಬಾರಕೂರು ಚೌಳಿಕೆರೆ ಬಳಿ ರವಿವಾರ ನಡೆದಿದೆ. ಮೃತ ದುರ್ದೈವಿಯನ್ನು ಉದ್ಯಮಿ ವಕ್ವಾಡಿಯ ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಮತ್ತು ಫ್ಲೈ ವುಡ್ ಶಾಪ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಬ್ರಹ್ಮಾವರ; ಬಾರಕೂರು ಚೌಳಿಕೆರೆಗೆ ಬಿದ್ದ ಕಾರು ಓರ್ವ ಸಾವು Read More »

ಕರಾವಳಿ, ಕರ್ನಾಟಕ

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್ ➤ ಹೇಗಿದೆ ಗೊತ್ತ..!?

(ನ್ಯೂಸ್ ಕಡಬ) newskadaba.com ಶಿವಮೊಗ್ಗ,ಜೂ.21: ಯುವ ಉದ್ಯಮಿ ನಿವೇದನ್ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದಾರೆ.ಹಿಂದೆ ಅಡಿಕೆಯಲ್ಲಿ ಟೀ ಪುಡಿ ತಯಾರಿಸಿದ್ದರು. ನಂತರ ಸುಗಂಧ ದ್ರವ್ಯ, ಅಡಿಕೆ ಜ್ಯೂಸ್ ತಯಾರು ಮಾಡಿದ್ದರು. ಈಗ ಅಡಿಕೆಯಲ್ಲಿ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಅಡಿಕೆಯಲ್ಲಿರುವ ಆಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು, ಗ್ಯಾಲಿಕ್ ಆಯಸಿಡ್, ಟ್ಯಾನಿಚ್ ಬಳಸಿಕೊಂಡು ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ. ಅದರಲ್ಲಿ ಶೇ 70ರಷ್ಟು‌ ಆಲ್ಕೋಹಾಲ್‌ ಅಂಶವಿದೆ. ಯಾವುದೇ ಸಿಂಥೆಟಿಕ್ ಬಳಸದೆ‌ ನೈಸರ್ಗಿಕವಾಗಿ ತಯಾರು ಮಾಡಲಾಗಿದೆ, ಪರಿಮಳ ಬರಲು ಕಿತ್ತಳೆ‌ ಆಯಿಲ್ ಬಳಸಲಾಗಿದೆ ಎಂದು

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್ ➤ ಹೇಗಿದೆ ಗೊತ್ತ..!? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಿಂಗಳ ಹಿಂದೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು‼️➤ ಕೋಡಿಂಬಾಳ – ಕೋರಿಯಾರ್ ರಸ್ತೆಯಲ್ಲಿ ಕಳಪೆ ಕಾಮಗಾರಿ..⁉️

(ನ್ಯೂಸ್ ಕಡಬ) newskadaba.com.ಕಡಬ,ಜೂ.21:ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ತಾಲೂಕಿನ ಕೋಡಿಂಬಾಳ-ಕೋರಿಯಾರ್ ಸಂಪರ್ಕ ರಸ್ತೆಯನ್ನು ಕಳೆದ ಒಂದೂವರೆ ತಿಂಗಳ ಹಿಂದೆ 2019-20ನೇ ಸಾಲಿನ 5054 ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಇದೀಗ ರಸ್ತೆ ಅಲ್ಲಲ್ಲಿ ಬಿರುಕುಬಿಡಲು ಆರಂಭಿಸಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ. ಹಲವು ವರ್ಷಗಳ ಬೇಡಿಕೆಯ ನಂತರ ರಸ್ತೆ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡು ಒಂದೂವರೆ ತಿಂಗಳು ಪೂರ್ಣಗೊಳ್ಳುವ ಮೊದಲೇ ಇದೀಗ ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಗ್ರಾಮಸ್ಥರನ್ನು ಆಕ್ರೋಶ

ತಿಂಗಳ ಹಿಂದೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು‼️➤ ಕೋಡಿಂಬಾಳ – ಕೋರಿಯಾರ್ ರಸ್ತೆಯಲ್ಲಿ ಕಳಪೆ ಕಾಮಗಾರಿ..⁉️ Read More »

ವಿಶೇಷ ಲೇಖನಗಳು

ಕಡಬ ತಾಲೂಕು ವತಿಯಿಂದ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ

(ನ್ಯೂಸ್ ಕಡಬ)newskadaba.com ಕಡಬ, ಜೂ.21, ಕಡಬ ತಾಲೂಕು ವತಿಯಿಂದ ಇಂದು ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಆನಂದ ಮಿತ್ತಬೈಲು ನೆರವೇರಿಸಿ ಹಿತವಚನ ನುಡಿದರು. ಎಸ್ಡಿಪಿಐ ಕಡಬ ತಾಲೂಕು ಅಧ್ಯಕ್ಷರಾದ ರಮ್ಲ ಸನ್ ರೈಸ್ ರವರು ಸಂದೇಶ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಉಪಾದ್ಯಕ್ಷರಾದ ನೌಷಾದ್ ಕಡಬ, ಕೋಶಾಧಿಕಾರಿ ಹಾರಿಸ್ ಕಳಾರ, ಕಮರುದ್ದೀನ್ ಅಲೆಕ್ಕಾಡಿ, ನಬಿ ಕಡಬ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅದೇ ರೀತಿ

ಕಡಬ ತಾಲೂಕು ವತಿಯಿಂದ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ Read More »

ಕರಾವಳಿ

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.21:ಬೆಳ್ಳಂಬೆಳಗ್ಗೆ ಬೈಕ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಮೂವರು ಯುವಕರು ಮೃತಪಟ್ಟ ಘಟನೆ ಯಲಹಂಕ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ರಸ್ತೆ ಖಾಲಿಯಿದೆ ಎಂದು ಬೈಕ್‍ನಲ್ಲಿ ಹೊರಟ ಯುವಕರು ಹುರುಪಿನಿಂದ ಸ್ಟಂಟ್ ಮಾಡಿದ್ದಾರೆ. ಈ ಸಂದರ್ಭ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಗೋವಿಂದಪುರ ಪ್ರದೇಶದವರು ಎಂದು ತಿಳಿದು ಬಂದಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು Read More »

ಕರ್ನಾಟಕ

ಪುಂಚತ್ತಾರು: ರೆಡ್ ಕ್ರಾಸ್ ವತಿಯಿಂದ ಮಾಸ್ಕ್ ವಿತರಣೆ

(ನ್ಯೂಸ್ ಕಡಬ)newskadaba.com ಪುಂಚತ್ತಾರು, ಜೂ.21, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಷಣ್ಮುಖ ಫ್ರೆಂಡ್ಸ್ ಕ್ಲಬ್ ನಾವೂರು ಇದರ ವತಿಯಿಂದ ಪುಣ್ಚತ್ತಾರು ಪೇಟೆಯಲ್ಲಿ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಪೋಲಿಸ್ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ, ರೆಡ್ ಕ್ರಾಸ್ ಸದಸ್ಯರಾದ ಪ್ರದೀಪ್ ಬೊಬ್ಬೆಕೇರಿ, ಚೇತನ್ ನಾವೂರು, ಬೊಬ್ಬೆಕೇರಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಬೆದ್ರಂಗಳ, ಷಣ್ಮುಖ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಮನೀಷ್ ನಾವೂರು, ಸತ್ಯಾನಂದ ನಾವೂರು, ಮೋಕ್ಷಿತ್ ನಾವೂರು, ಮಹೇಶ್ ನಾವೂರು, ರಕ್ಷಿತ್

ಪುಂಚತ್ತಾರು: ರೆಡ್ ಕ್ರಾಸ್ ವತಿಯಿಂದ ಮಾಸ್ಕ್ ವಿತರಣೆ Read More »

ಕರಾವಳಿ

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com. ಸುಳ್ಯ,ಜೂ.21: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನಲೆಯಲ್ಲಿ ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೆಯೇ, ಸ್ವದೇಶಿ ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಯೋಗ ದಿನಾಚರಣೆ ಸಂದಭ್ದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಐ ಬಿ ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನಗರ ಪಂಚಾಯತ್ ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಸುಧಾಕರ ಕುರುಂಜಿಭಾಗ್, ಬೂತ್

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಗೃಹರಕ್ಷಕದಳದ ವತಿಯಿಂದ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಮರ್ಪಣೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.21, ಚೀನಾ- ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಉಪ್ಪಿನಂಗಡಿ ಗೃಹರಕ್ಷಕ ದಳದ ವತಿಯಿಂದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗೃಹರಕ್ಷಕ ದಳದ ವತಿಯಿಂದ ನಡೆಸುವ ವಾರದ ಕವಾಯತು ವೇಳೆಯಲ್ಲಿ ಜೂ.16 ರಂದು ಭಾರತ- ಚೀನಾ ಗಡಿಯಲ್ಲಿ ಗಾಲ್ವನ್ ಕಣಿವೆಯ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಐದು ನಿಮಿಷಗಳ ಮೌನ ಪ್ರಾರ್ಥನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಉಪ್ಪಿನಂಗಡಿ: ಗೃಹರಕ್ಷಕದಳದ ವತಿಯಿಂದ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಮರ್ಪಣೆ Read More »

ಕರಾವಳಿ

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com.ಕಡಬ,ಜೂ.21: ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಶೀನಪ್ಪ ಎಂಬವರ ಪುತ್ರ ಪೃಥ್ವಿ ಮೇ 15ರಂದು  ನಾಪತ್ತೆಯಾಗಿದ್ದರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಯುವಕನ್ನು ಪತ್ತೆಹಚ್ಚಿದ್ದಾರೆ. ಇಂದು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ಯವಕನಿರುವ ಖಚಿತ ಮಾಹಿತಿ ಪಡೆದು ಅಲ್ಲಿಗೆ ತೆರಲಿದ ಹೆಡ್ ಕಾನ್ಸ್ಟೇಬಲ್ ಮೋನಪ್ಪ ಗೌಡರು ಅಲ್ಲಿಂದ ಠಾಣೆಗೆ ಕರೆತಂದು ಆತನ ತಂದೆ ತಾಯಿಯೊಂದಿಗೆ ಮನೆಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ನಾಪತ್ತೆಯಾಗಿದ್ದ ಕಡಬದ ಯುವಕ ಉಡುಪಿಯಲ್ಲಿ ಪತ್ತೆ Read More »

ಕರಾವಳಿ
Scroll to Top