ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ➤ ಕೆಲ ಪ್ರದೇಶ ಮತ್ತೆ ಲಾಕ್ಡೌನ್..?

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.22, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಸಮುದಾಯಕ್ಕೆ ಹಬ್ಬುವುದನ್ನು ತಪ್ಪಿಸಲು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಬೆಂಗಳೂರು ನಗರದ ಸಚಿವರು, ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ದಿನೇದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಆತಂಕಗಳು ಕೇಳಿಬಂದಿದ್ದು, ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಯಿದೆ. […]

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ➤ ಕೆಲ ಪ್ರದೇಶ ಮತ್ತೆ ಲಾಕ್ಡೌನ್..? Read More »

ಕರ್ನಾಟಕ

ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.22,. ದ.ಕ. ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ಕಾರ್ಯಕ್ರಮವು ಆದಿತ್ಯವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ರವರು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಭಾರತ-ಚೀನಾ ಗಡಿಯಲ್ಲಿ ಮಡಿದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಡಾ|| ಮುರಲೀ ಮೋಹನ ಚೂಂತಾರು ರವರು ಮಾತನಾಡಿ ಪ್ರತಿಯೊಬ್ಬ ಗೃಹರಕ್ಷಕರು ಒಂದೊಂದು ಗಿಡವನ್ನು

ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ Read More »

ಕರಾವಳಿ

ಹೂಹಾಕುವಕಲ್ಲು: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.22: ಬೈಕ್ ಗೆ ಟ್ರ್ಯಾಕ್ಟರ್‍ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಪರಿಣಾಮ ಬೈಕ್ ಸವಾರ ಟ್ರ್ಯಾಕ್ಟರ್ ನಡಿಗೆ ಸಿಲುಕಿ ದಾರುಣವಾಗಿ ಮೃತ ಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣೇ ವ್ಯಾಪ್ತಿಯ ಹೂ ಹಾಕುವ ಕಲ್ಲು ಪುಣ್ಯಕೋಟಿ ನಗರದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.   ಮೃತ ಬೈಕ್ ಸವಾರ ಅಧೇ ಟ್ರ್ಯಾಕ್ಟರ್ ಚಾಲಕನಾಗಿದ್ದು, ಸೋಮವಾರ ರಜೆ ತೆಗೆದುಕೊಂಡಿದ್ದು, ಬದಲಿ ಚಾಲಕನನ್ನು, ಕರೆಸಿಕೊಂಡಿದ್ದರು. ಮನೆಯೊಂದರ ರಸ್ತೆ ಅಗೆಯುವ ಕೆಲಸ ನಿರ್ವಹಿಸಿದ ಬದಲಿ ಚಾಲಕ ಒಳರಸ್ತೆಯಿಂದ ಮುಡಿಪು

ಹೂಹಾಕುವಕಲ್ಲು: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮತ್ತೆ 14 ದಿನ ಕ್ವಾರಂಟೈನ್ ಕಡ್ಡಾಯ ➤ ನಿಯಮ ಬದಲಾಯಿಸಿದ ಸರಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.22, ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆಯನ್ನು ಮಾಡಿದ್ದು, ಹೊರ ರಾಜ್ಯಗಳಿಂದ ಬಂದವರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಮಾಡಲು ತೀರ್ಮಾನಿಸಿದೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಹಾಗೂ ಉಳಿದ ರಾಜ್ಯದಿಂದ ಬಂದವರಿಗೆ 7 ದಿನಗಳ ಹೋಮ್ ಕ್ವಾರಂಟೈನ್ ವಿಧಿಸಲು ಸರಕಾರ ಮುಂದಾಗಿತ್ತು. ಆದರೆ ರಾಜ್ಯ ಸರಕಾರ ಕ್ವಾರಂಟೈನ್ ನಿಯಮಗಳನ್ನು ಬದಲಾವಣೆಗಳನ್ನು

ಮತ್ತೆ 14 ದಿನ ಕ್ವಾರಂಟೈನ್ ಕಡ್ಡಾಯ ➤ ನಿಯಮ ಬದಲಾಯಿಸಿದ ಸರಕಾರ Read More »

ಕರ್ನಾಟಕ

ವಿದ್ಯುತ್ ಆಘಾತಕ್ಕೆ ಕಂಬಳ ಪ್ರೇಮಿ ಬಲಿ

(ನ್ಯೂಸ್ ಕಡಬ)newskadaba.com ಕಾರ್ಕಳ, ಜೂ.22, ವಿದ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ಸಮೀಪದ ಮುಂಡ್ಲಿ ಎಂಬಲ್ಲಿ ನಡೆದಿದೆ. ಮೃತರನ್ನು ಸಾಂತ್ರಬೆಟ್ಟು ರತ್ನವರ್ಮ ಜೈನ್(48) ಎಂದು ಗುರುತಿಸಲಾಗಿದೆ. ಇವರು ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಜನರೇಟರ್ ಆಫ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಕಂಬಳ ಕ್ಷೇತ್ರದಲ್ಲೂ ಕೂಡ ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.

ವಿದ್ಯುತ್ ಆಘಾತಕ್ಕೆ ಕಂಬಳ ಪ್ರೇಮಿ ಬಲಿ Read More »

ಕರಾವಳಿ, ಕ್ರೈಮ್ ನ್ಯೂಸ್

ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ.22,. ಸೂರ್ಯಗ್ರಹಣದ ಸಂದರ್ಭದಲ್ಲಿ ಕಾಪುವಿನ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಝ್ ಮತ್ತು ದುವಾ ಪ್ರಾರ್ಥನೆ ರವಿವಾರ ನಡೆಯಿತು. ಮಸೀದಿ ಖತೀಬರಾದ ಇರ್ಷಾದ್ ಸಅದಿ ನಮಾಝ್ ನೇತೃತ್ವವನ್ನು ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ ಪ್ರವಾದಿಯವರು ಸೂರ್ಯ ಮತ್ತು ಚಂದ್ರನು ಅಲ್ಲಾಹನ ಅನುಗ್ರಹವಾಗಿದೆ. ಸೂರ್ಯಗ್ರಹಣದ ದಿವಸ ಅಲ್ಲಾಹುವಿನ‌ ಅನುಗ್ರಹವನ್ನು ಸ್ಮರಿಸುವ ಪ್ರಯುಕ್ತ ಮುಸಲ್ಮಾನರು ನಮಾಝ್ ನಿರ್ವಹಿಸುತ್ತಾರೆ. ಆದರೆ ಗ್ರಹಣದಿಂದ ವಿಪತ್ತು, ಆಪತ್ತು ಎದುರಾಗುತ್ತದೆ ಎಂಬ ಮೂಢನಂಬಿಕೆಯನ್ನು ಇಸ್ಲಾಂ

ಸೂರ್ಯಗ್ರಹಣದ ಹಿನ್ನಲೆ ➤ ಉಡುಪಿ ಪೊಲಿಪು ಜಾಮಿಯ ಮಸೀದಿಯಲ್ಲಿ ವಿಶೇಷ ನಮಾಜ್..!! Read More »

ಕರಾವಳಿ

ಕರಾವಳಿಯಲ್ಲಿ ವರುಣನ ಆರ್ಭಟ ➤ ಜೂ.23 ಮತ್ತು 24 ರಂದು ಆರೆಂಜ್ ಅಲರ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 22, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂ. 23 ಮತ್ತು 24 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇನ್ನು 5 ದಿನಗಳ ಇದೇ ರೀತಿ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಈ 5 ದಿನಗಳ ಕಾಲ

ಕರಾವಳಿಯಲ್ಲಿ ವರುಣನ ಆರ್ಭಟ ➤ ಜೂ.23 ಮತ್ತು 24 ರಂದು ಆರೆಂಜ್ ಅಲರ್ಟ್ Read More »

ಕರಾವಳಿ

ಪಿಯು ಮೌಲ್ಯಮಾಪನಕ್ಕೆ ತೆರಳದ ಮೌಲ್ಯಮಾಪಕರ ವಿರುದ್ದ ಕ್ರಮ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.22: ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲ ಪರೀಕ್ಷೆಗಳು ಮುಗಿದಿವೆ.ವಿಜ್ಞಾನ ಮೌಲ್ಯಮಾಪನದಲ್ಲಿ ಸಾಮಾಜಿಕ ಕಾಳಜಿ ಮರೆತ ಮೌಲ್ಯಮಾಪಕರು ಗೈರಾದ ಪರಿಣಾಮವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನ ತಪ್ಪಿಸುವ ಮೌಲ್ಯಮಾಪಕರಿಗೆ ಕೊರೊನಾ ಡ್ಯೂಟಿ ಹಾಕುವ ಕರಿತು ಸುತ್ತೋಲೆ ಹೊರಡಿಸಿದೆ. ಈ ಬಾರಿ ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಮೌಲ್ಯಮಾಪಕರು ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿಗೆ ಬಂದರೆ ಅವರು ಉಳಿದುಕೊಳ್ಳುವ ವ್ಯವಸ್ಥೆ. ಪ್ರಯಾಣ ಇತ್ಯಾದಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಇದೇ ಕಾರಣದಿಂದ ಮೌಲ್ಯಮಾಪನದ ಮೊದಲೇ ಪ್ರತಿಭಟನೆಗಳು

ಪಿಯು ಮೌಲ್ಯಮಾಪನಕ್ಕೆ ತೆರಳದ ಮೌಲ್ಯಮಾಪಕರ ವಿರುದ್ದ ಕ್ರಮ Read More »

ಕರ್ನಾಟಕ

ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಕೋವಿಡ್-19 ➤ 55 ವರ್ಷ ಮೇಲ್ಪಟ್ಟವರಿಗೆ ವಿಶ್ರಾಂತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.22, ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು 13 ಸುರಕ್ಷತಾ ಸೂತ್ರಗಳನ್ನು ನೀಡಿ, 55 ವರ್ಷ ಮೇಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿ ಘೋಷಣೆ ಮಾಡಿದ್ದಾರೆ. ಠಾಣೆಯ ಒಳಭಾಗಕ್ಕೆ ಯಾರೂ ಬಾರದಂತೆ ನೋಡಿಕೊಳ್ಳಬೇಕು. ಹಾಗೆಯೇ ಠಾಣೆಯ ಹೊರಗಡೆ ಸಾರ್ವಜನಿಕರ ದೂರುಗಳನ್ನು ಆಲಿಸಬೇಕು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಹ್ಯಾಂಡ್‍ಗ್ಲೌಸ್ ಹಾಗೂ ಅಗತ್ಯವಿದ್ದಲ್ಲಿ ಪಿಪಿಇ ಕಿಟ್ ಬಳಸಬೇಕು. ಅನಾವಶ್ಯಕವಾಗಿ ಠಾಣೆಯ ಒಳಗೆ ಬರಬಾರದು. ಹೊರಗಡೆ ಕೆಲಸ

ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಕೋವಿಡ್-19 ➤ 55 ವರ್ಷ ಮೇಲ್ಪಟ್ಟವರಿಗೆ ವಿಶ್ರಾಂತಿ Read More »

ಕರ್ನಾಟಕ

ಏರಿಕೆಯತ್ತ ಪೆಟ್ರೋಲ್‌, ಡೀಸೆಲ್ ದರ

(ನ್ಯೂಸ್ ಕಡಬ) newskadaba.com  ನವದೆಹಲಿ,ಜೂ.22:  ಕಳೆದ ಎರಡು ತಿಂಗಳು ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ದಾಖಲೆಯ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಲ್ಲೇ ಇದ್ದು ಸತತ 16 ನೇ ದಿನವೂ ಕೂಡಾ ದರ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 33 ಪೈಸೆ ಹೆಚ್ಚಳವಾಗಿ 79.56ರೂ. ಆಗಿದ್ದರೆ ಡೀಸೆಲ್‌ 58 ಪೈಸೆ ಹೆಚ್ಚಳವಾಗಿ 78.85 ರೂ. ಬೆಲೆಗೆ ಏರಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ

ಏರಿಕೆಯತ್ತ ಪೆಟ್ರೋಲ್‌, ಡೀಸೆಲ್ ದರ Read More »

ರಾಷ್ಟ್ರೀಯ ನ್ಯೂಸ್
Scroll to Top