ವಾಯು ಪಡೆಯ ಪೈಲಟ್‌ ಆದ ಚಹಾ ವ್ಯಾಪಾರಿಯ ಮಗಳು

(ನ್ಯೂಸ್ ಕಡಬ) newskadaba.com ಭೋಪಾಲ್,ಜೂ.24: ಬಸ್‌ ನಿಲ್ದಾಣದಲ್ಲಿ ಚಹಾ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬರ ಪುತ್ರಿ ಭಾರತೀಯ ವಾಯುಪಡೆಯ ಫ್ಲೈಯಿಂಗ್‌‌‌ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನೀಮುಚ್‌‌ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಚಹಾ ಅಂಗಡಿ ಹೊಂದಿರುವ ಸುರೇಶ್‌ ಗಂಗ್ವಾಲ್‌‌ ಅವರ ಪುತ್ರಿ ಅಂಚಲ್‌ ಗಂಗ್ವಾಲ್‌(24) ಅವರು ವಾಯುಪಡೆಯ ಫ್ಲೈಯಿಂಗ್‌‌‌ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ.   ಅಂಚಲ್‌ ಅವರ ತಂದೆ ಚಹಾ ವ್ಯಾಪಾರಿಯಾಗಿದ್ದು, ತನ್ನ ಪುತ್ರಿಯ ಶಿಕ್ಷಣದ ಶುಲ್ಕ ಪಾವತಿ ಮಾಡಲು ಕೂಡಾ ಅವರಲ್ಲಿ ಹಣ ಇರುತ್ತಿರಲಿಲ್ಲ. ಇಂತಹ ಬಡತನದಲ್ಲಿಯೂ ಅಂಚಲ್‌‌ ಅವರು ತಮ್ಮ […]

ವಾಯು ಪಡೆಯ ಪೈಲಟ್‌ ಆದ ಚಹಾ ವ್ಯಾಪಾರಿಯ ಮಗಳು Read More »

ರಾಷ್ಟ್ರೀಯ ನ್ಯೂಸ್

ಕಡಬ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಬಡ ಮಹಿಳೆಯ ಮನೆ ರಿಪೇರಿ

(ನ್ಯೂಸ್ ಕಡಬ)newskadaba.com ಕಡಬ, ಜೂ.24, ತಾಲೂಕಿನ ಹಳೆಸ್ಟೇಷನ್ ಸಮೀಪದ ಬಡ ಮಹಿಳೆಯೋರ್ವರ ಮನೆ ರಿಪೇರಿಯು ಕರ್ಣಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕಡಬ ತಾಲೂಕು ಅಧ್ಯಕ್ಷರಾದ ಜಲೀಲ್ ಬೈತಡ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಸಿಫ್ ಹಾಜಿ ತಂಬುತ್ತಡ್ಕ, ನಾಸಿರ್ ಕುರಿಮಲೆ ನಿಡ್ಪಳ್ಳಿ, ವಸಂತ ನಿಡ್ಪಳ್ಳಿ, ಶಶಿ ಇರ್ದೆ, ಕಡಬ ತಾಲೂಕು ಕಾರ್ಯದರ್ಶಿ ಫೈಝಲ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

ಕಡಬ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಬಡ ಮಹಿಳೆಯ ಮನೆ ರಿಪೇರಿ Read More »

ಕರಾವಳಿ

ತೆಂಗು ಫಸಲು- ಬಹಿರಂಗ ಹರಾಜು ಪ್ರಕ್ರಿಯೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 24, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕಾ ಕ್ಷೇತ್ರಗಳಲ್ಲಿನ 2020-21ನೇ ಸಾಲಿನ ತೆಂಗು ಫಸಲನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಜುಲೈ 21 ರಂದು ಬೆಳಿಗ್ಗೆ ಕಚೇರಿ ನರ್ಸರಿ ಬಂಟ್ವಾಳ, ಮಧ್ಯಾಹ್ನ ವಿಟ್ಲ ತೋಟಗಾರಿಕೆ ಕ್ಷೇತ್ರ, ಜುಲೈ 22 ರಂದು ಬೆಳಿಗ್ಗೆ ಕಚೇರಿ ನರ್ಸರಿ ಬೆಳ್ತಂಗಡಿ, ಮಧ್ಯಾಹ್ನ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರ, ಜುಲೈ 23 ರಂದು ಬೆಳಿಗ್ಗೆ ಕಬಕ ತೋಟಗಾರಿಕೆ ಕ್ಷೇತ್ರ, ಮಧ್ಯಾಹ್ನ ಕಚೇರಿ ನರ್ಸರಿ ಸುಳ್ಯ ಹಾಗೂ ಹೊಸಗದ್ದೆ ತೋಟಗಾರಿಕೆ

ತೆಂಗು ಫಸಲು- ಬಹಿರಂಗ ಹರಾಜು ಪ್ರಕ್ರಿಯೆ Read More »

ಕರಾವಳಿ, ಕರ್ನಾಟಕ

ಕಾರ್ ಸ್ಟ್ರೀಟ್ ಕಾಲೇಜಿನ ಬಂಗಾಲಿ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 24, ಡಾ.ಪಿ.ದಯಾನಂದ ಪೈ, ಪಿ.ಸತೀಶ ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್.ಡಬ್ಲ್ಯೂ ಪದವಿ ವ್ಯಾಸಂಗ ಮಾಡುತ್ತಿರುವ, ಮೂಲತಃ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಹತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿ ವಿಮಾನಯಾನದ ಮೂಲಕ ತಮ್ಮ ಹುಟ್ಟೂರಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್-19 ಬಿಕ್ಕಟ್ಟು ಹಾಗೂ ರಾಷ್ಟ್ರವ್ಯಾಪ್ತಿ ಬೀಗ ಮುದ್ರೆಯಿಂದಾಗಿ, ಮಂಗಳೂರಿನ ರಥಬೀದಿಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಶ್ಚಿಮ ಬಂಗಾಳದ ನಿವಾಸಿಗಳಾದ ಹತ್ತು ಜನ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ಹಿಂತಿರುಗಲು ಸಾಧ್ಯವಾಗದೆ ಸಿಕ್ಕಿ

ಕಾರ್ ಸ್ಟ್ರೀಟ್ ಕಾಲೇಜಿನ ಬಂಗಾಲಿ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ Read More »

ಕರ್ನಾಟಕ

ಕೊರೋನಾ ಅತಂಕದ ನಡುವೆ ವಿದ್ಯಾರ್ಥಿಗಳು ➤ ನಾಳೆಯಿಂದ SSLC ಅಗ್ನಿ ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.24:  ಕೊರೋನಾ ಭಯದ ನಡುವೆ SSLC ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆ ಆತಂಕ ಶುರುವಾಗಿದೆ.ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಿಕೆ ಸಾದ್ಯವಿಲ್ಲ ಅಂತ ಶಿಕ್ಷಣ ಇಲಾಖೆ ಹೇಳಿದೆ,ಜೊತೆಗೆ ಅಗತ್ಯ ಕ್ರಮಗಳನ್ನ ತಗೆದುಕೊಂಡು SSLC . ಪರೀಕ್ಷೆ ಸಿದ್ದತೆ ಕೂಡ ನಡೆದಿದೆ.ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ಆರ್ಭಟದ ನಡುವೆಯೂ ನಿಗದಿಯಂತೆ SSLC ಪರೀಕ್ಷೆ ಮಾಡಿಯೇ ತೀರಲು ಶಿಕ್ಷಣ ಇಲಾಖೆ ಪಣ ತೊಟ್ಟಿದೆ. ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ ಆರಂಭವಾಗಲಿದೆ. ಕೊರೋನಾ ಆತಂಕದ ನಡುವೆಯೇ 8.5 ಲಕ್ಷ ವಿದ್ಯಾರ್ಥಿಗಳು SSLC

ಕೊರೋನಾ ಅತಂಕದ ನಡುವೆ ವಿದ್ಯಾರ್ಥಿಗಳು ➤ ನಾಳೆಯಿಂದ SSLC ಅಗ್ನಿ ಪರೀಕ್ಷೆ Read More »

ಕರಾವಳಿ, ಕರ್ನಾಟಕ

ಪದ್ಮಶ್ರೀ ಪ್ರಶಸ್ತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು ಜೂ, 24, ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2021ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನದ ಹಿಂದಿನ ದಿನಾಂಕದಂದು ಕೇಂದ್ರ ಸರಕಾರದಿಂದ ಪ್ರಕಟಿಸಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಅತ್ಯುತ್ತಮ ಗುಣಮಟ್ಟ ಹೊಂದಿರಬೇಕು. ಅಲ್ಲದೆ ಆ ವ್ಯಕ್ತಿಯು ಜೀವನ ಪರ್ಯಂತ ಸಾಧಿಸಿರುವ ಪ್ರಗತಿಯನ್ನು ಹಾಗೂ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅರ್ಹ ಅರ್ಜಿದಾರರು ನಿಗದಿತ ನಮೂನೆಯನ್ನು

ಪದ್ಮಶ್ರೀ ಪ್ರಶಸ್ತಿ- ಅರ್ಜಿ ಆಹ್ವಾನ Read More »

ಕರಾವಳಿ

ಉಳ್ಳಾಲದ ಮಹಿಳೆಯನ್ನು ಬಲಿ ಪಡೆದ ಕೊರೊನಾ !

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.25 ಬೇಧಿಯ ಕಾರಣದಿಂದ 8 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಉಳ್ಳಾಲದ ಅಝಾದ್‍ನಗರದ ಮಹಿಳೆಗೆ ನಿನ್ನೆ ಕೊರೊನಾ ದೃಢ ಪಟ್ಟಿತ್ತು ಆದರೆ ಇಂದು ಮಹಿಳೆ ಮೃತ ಪಟ್ಟಿರುವುದು ವರದಿಯಾಗಿದೆ. ಉಲ್ಳಾಲದ ಅಝಾದ್‍ನಗರದ 57ರ ಹರೆಯದ ಮಹಿಳೆಗೆ 10 ದಿನಗಳ ಹಿಂದೆ ಬೇದಿ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಸಂದರ್ಭದಲ್ಲಿ ಮಹಿಳೆಯ ಗಂಟಲುದ್ರವ ಪರೀಕ್ಷೆ ತೆಗೆದುಕೊಂಡಿದ್ದು ನಿನ್ನೆ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ವೆನ್‍ಲಾಕ್

ಉಳ್ಳಾಲದ ಮಹಿಳೆಯನ್ನು ಬಲಿ ಪಡೆದ ಕೊರೊನಾ ! Read More »

ಕರಾವಳಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ➤ ಎಸ್ಕೆಎಸ್ಸೆಸ್ಸೆಫ್ ಕರಾಯ ಶಾಖಾ ವತಿಯಿಂದ ಪರೀಕ್ಷಾ ಹಾಲ್ ಹಾಗೂ ಪರಿಸರ ಸ್ವಚ್ಛತೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.24, ಎಸ್ಕೆಎಸ್ಸೆಸ್ಸೆಫ್ ಕರಾಯ ಶಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಂಡ ಕರಾಯ ಪ್ರೌಢ ಶಾಲಾ ಕೊಠಡಿ ಹಾಗೂ ಪರಿಸರ ವನ್ನು ಎಸ್ಕೆಎಸ್ಸೆಸ್ಸೆಫ್ ಕರಾಯ ವಿಖಾಯ ಸೇವಾ ತಂಡದ ಸಾರಥಿಗಳು ಸ್ವಚ್ಛಗೊಳಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿ, ನಾಡಿನ ನಾನಾ ಭಾಗದಲ್ಲಿ ತುರ್ತು ಸೇವಾ ರಂಗದಲ್ಲಿ ಮಿಂಚುತ್ತಿರುವ ವಿಖಾಯ ತಂಡದ ‘ವಿಂಗ್’ ನಮ್ಮೂರಲ್ಲಿ ಕಾರ್ಯ ರಚಿಸುತ್ತಿದ್ದು ಅಭಿಮಾನವಿದೆ ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಶಿವಬಾಲ್ ಮಾತನಾಡಿ ತಂಡದ ಕಾರ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ➤ ಎಸ್ಕೆಎಸ್ಸೆಸ್ಸೆಫ್ ಕರಾಯ ಶಾಖಾ ವತಿಯಿಂದ ಪರೀಕ್ಷಾ ಹಾಲ್ ಹಾಗೂ ಪರಿಸರ ಸ್ವಚ್ಛತೆ Read More »

ಕರಾವಳಿ

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಎರಡನೇ ವರ್ಷದ ಮಹಾಸಭೆ ➤ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ)newskadaba.comಮಂಗಳೂರು, ಜೂ.24, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಎರಡನೇ ವರ್ಷದ ಮಹಾಸಭೆಯು ತೊಕ್ಕೊಟ್ಟು ಎ.ಕೆ ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಸಂಸ್ಥೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಮುಖ್ಯ ಸಲಹೆಗಾರರಾದ ಶೇಖ್ ಫಯಾಝ್ ಅಲಿ ಬೈಂದೂರು ಮಾತನಾಡಿದರು‌. ವ್ಯವಸ್ಥಾಪಕರಾದ ಸಂಶುದ್ದೀನ್ ಬಳ್ಕುಂಜೆ ಸದಸ್ಯರಿಗೆ

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಎರಡನೇ ವರ್ಷದ ಮಹಾಸಭೆ ➤ ನೂತನ ಪದಾಧಿಕಾರಿಗಳ ಆಯ್ಕೆ Read More »

ಕರಾವಳಿ

ಆಲಂಕಾರು ಮೆಸ್ಕಾಂ ನೂತನ ಜೆ.ಇ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com ಕಡಬ,ಜೂ.25:ಆಲಂಕಾರು ಮೆಸ್ಕಾಂಗೆ ನೂತನ ಜೆ.ಇ ಯಾಗಿ ಪ್ರೇಮ್ ಕುಮಾರ್ ಎಸ್. ಜೂ.22ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಿಟ್ಟೆಹಳ್ಳಿ ಗ್ರಾಮದವರಾದ ಇವರು ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪುತ್ತೂರು ಕೆಪಿಟಿಸಿಎಲ್ನಲ್ಲಿ 6ವರ್ಷದಿಂದ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ವರ್ಗಾವಣೆಗೊಂಡು ಆಲಂಕಾರು ಮೆಸ್ಕಾ ಶಾಖೆಗೆ ಕರ್ತವ್ಯಕ್ಕೆ ಆಗಮಿಸಿದ್ದಾರೆ.

ಆಲಂಕಾರು ಮೆಸ್ಕಾಂ ನೂತನ ಜೆ.ಇ ಕರ್ತವ್ಯಕ್ಕೆ ಹಾಜರು Read More »

ಕರಾವಳಿ
Scroll to Top