ತೈಲ ಬೆಲೆ ಏರಿಕೆ ➤ ಕಾಂಗ್ರೆಸ್ ನಿಂದ ಸೈಕಲ್ ರ್‍ಯಾಲಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.29:  ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ವಿರುದ್ಧ ದಕ್ಷಿಣ ಕನ್ನಡ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಮಂಗಳೂರು ಪುರಭವನ ಮುಂದೆ ನಡೆಯಿತು.ನಗರದ ಜ್ಯೋತಿ ವೃತ್ತದಿಂದ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೈಕಲ್ ರ್ಯಾಲಿ ನಡೆಸಿ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಬೆಲೆ ಏರಿಕೆ ವಿರೋಧಿಸಿ ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ್ ಕಾಮತ್ ಅವರ ಮುಖವಾಡ ಧರಿಸಿ […]

ತೈಲ ಬೆಲೆ ಏರಿಕೆ ➤ ಕಾಂಗ್ರೆಸ್ ನಿಂದ ಸೈಕಲ್ ರ್‍ಯಾಲಿ Read More »

ಕರಾವಳಿ, ಕರ್ನಾಟಕ

ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜೂ.29, ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಶಿರ್ಲಾಲು ನಿವಾಸಿ ಚಂಚಲ ಎಂದು ಗುರುತಿಸಲಾಗಿದೆ. ಈಕೆ ಮದುವೆಯಾಗಿ ಒಂದು ಗಂಡು ಮಗು ಇದ್ದು, ಆಳದಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತಿದ್ದರು. ಇಂದು ತನ್ನ ಬಾಡಿಗೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ತಾಯಿ ಸಹೋದರಿಯರು, ಪತಿ, ಗಂಡು ಮಗು ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ವೇಣೂರ್ ಠಾಣಾ

ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ ಪೆಟ್ರೋಲ್ ಪಂಪ್‍ಗೆ ಬಂದ ಮೊಸಳೆ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಜೂ.29: ಇಲ್ಲಿನ ಪೆಟ್ರೋಲ್ ಪಂಪ್ ಒಂದರಲ್ಲಿ ರಾತ್ರಿ ವೇಳೆ ಮೊಸಳೆ ಮರಿಯೊಂದು ಸ್ಥಳೀಯರ ಕಣ್ಣಿಗೆ ಬಿದ್ದು ನಾಪತ್ತೆಯಾಗಿರುವುದು ವರದಿಯಾಗಿದೆ. ಕುಮಾರಧಾರ ನದಿ ಸಮೀಪವಿರುವ ಪೆಟ್ರೋಲ್ ಪಂಪ್‍ನ ಬದಿಯಲ್ಲಿ ಪ್ರತ್ಯಕ್ಷಗೊಂಡ ಮೊಸಳೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬರುವ ಮೊದಲೇ ಮೊಸಳೆ ಮೆಲ್ಲನೆ ಪಲಾಯನಗೊಂಡಿತು. ಸುಬ್ರಹ್ಮಣ್ಯ ಪರಿಸರದಲ್ಲಿ ಎರಡು ವಾರಗಳ ಹಿಂದೆ ಜಿಂಕೆಗಳು ಕಂಡುಬಂದಿದ್ದವು ಇದೀಗ ಮೊಸಳೆ ಕಾಣಸಿಕ್ಕಿದೆ. ಕುಮಾರಧಾರ ನದಿ ದಟ್ಟಾರಣ್ಯದಲ್ಲಿ ಹರಿದುಬರುತ್ತಿದ್ದು, ಹೀಗಾಗಿ ಮೊಸಳೆ

ಸುಬ್ರಹ್ಮಣ್ಯ ಪೆಟ್ರೋಲ್ ಪಂಪ್‍ಗೆ ಬಂದ ಮೊಸಳೆ Read More »

ಕರಾವಳಿ

ಮಂಗಳೂರು: ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ ವಿಕಾಸ್ ಕುಮಾರ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ 29. ನಗರದ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅವರು ಜೂ.29 ರ ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.   ಈ ಮೊದಲು ಪೊಲೀಸ್ ಆಯುಕ್ತರಾಗಿದ್ದ ಡಾ.ಪಿ.ಎಸ್. ಹರ್ಷ ಅವರು ಈಗಾಗಲೇ ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಬೆಳಗ್ಗೆ ನೂತನ ಮಂಗಳೂರು ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಕಾಸ್ ಕುಮಾರ್ ಅವರು ಹಿಂದೆ ಚಿಕ್ಕಮಂಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್

ಮಂಗಳೂರು: ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ ವಿಕಾಸ್ ಕುಮಾರ್ Read More »

ಕರಾವಳಿ, ಕರ್ನಾಟಕ

ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ “ಕೊರೋನಾ” ಭೀತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.29, ದುಬೈನಿಂದ ಖಾಸಗಿ ವಿಮಾನದಲ್ಲಿ ಮಂಗಳೂರಿಗೆ ಹೊರಟಿದ್ದ 150 ಮಂದಿ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಪ್ರವೇಶ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅವರಿಗೆ ಕಾಸರಗೋಡು ಜಿಲ್ಲಾಡಳಿತ ಕಾಸರಗೋಡಿನ ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಈ ವೇಳೆ 20 ಮಂದಿ ದುಬೈ ಯಾನಿಗಳು ಕ್ವಾರಂಟೈನ್ ಆಗದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲಾಡಳಿತಕ್ಕೆ ಇದು ಹೊಸ ತಲೆನೋವು ತಂದಿಟ್ಟಿದ್ದು, ಪರಾರಿಯಾದವರು ಕೊಡಗು ಮತ್ತು ಮಂಗಳೂರಿಗೆ

ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ “ಕೊರೋನಾ” ಭೀತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜು.5 ರಿಂದ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಫಿಕ್ಸ್ ➤ ಸರ್ಕಾರದಿಂದ ಅಧಿಕೃತ ಆದೇಶ..!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.29: ಕೋವಿಡ್ 19 ನಿಯಂತ್ರಣಕ್ಕಾಗಿ ಕೆಲ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಇದೀಗ ಅಧಿಕೃತ ಆದೇಶವನ್ನು ಸಹ ಹೊರಡಿಸಿದೆ.ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಜುಲೈ 5 ರಿಂದ ಮುಂದಿನ ನಾಲ್ಕು ಭಾನುವಾರ ಪೂರ್ಣ ದಿನದ ಲಾಕ್‌ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಜುಲೈ 5 ರಿಂದ ಆಗಸ್ಟ್ 2ರ ವರೆಗಿನ ಎಲ್ಲಾ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಆದ್ರೆ ಅಗತ್ಯ ಸರಕು ಸಾಗಣೆಗೆ ಯಾವುದೇ

ಜು.5 ರಿಂದ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಫಿಕ್ಸ್ ➤ ಸರ್ಕಾರದಿಂದ ಅಧಿಕೃತ ಆದೇಶ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಗರಸಭೆಯ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ದೃಢ

(ನ್ಯೂಸ್ ಕಡಬ)newskadaba.com ಪುತ್ತೂರು, ಜೂ.29, ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಇಂದು ಓರ್ವರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿದೆ. ಪುತ್ತೂರು ನಗರಸಭೆಯ ಹೊರಗುತ್ತಿಗೆ ನೌಕರರಾಗಿದ್ದ ಇವರಿಗೆ ಕೊರೋನಾ ಇರುವುದು ದೃಢವಾಗಿದೆ. ಇವರು ನಗರಸಭೆಯ ಕಸ ಸಂಗ್ರಹದ ವಾಹನ ಚಾಲಕರಾಗಿದ್ದಾರೆ.

ನಗರಸಭೆಯ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ದೃಢ Read More »

ಕರಾವಳಿ

ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಬಾಗಲಕೋಟೆ, ಜೂ.29, ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಬಾಗಲಕೋಟೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮೂವರು ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕಿಗೆ ಸೋಂಕು ದೃಢಪಟ್ಟಿದೆ. ಬಾಗಲಕೋಟೆಯ ನವನಗರದಲ್ಲಿರುವ ಆದರ್ಶ ವಿದ್ಯಾಲಯದ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಕ್ಷಕಿಯೇ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಗಂಟಲು ಮಾದರಿ ದ್ರವ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ.

ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕಿಗೆ ಕೊರೋನಾ ಪಾಸಿಟಿವ್ Read More »

ಕರ್ನಾಟಕ

ಪುತ್ತೂರು: ಪ್ರಥಮ ಕೊವೀಡ್ ಸೋಂಕಿತ ವ್ಯಕ್ತಿ ಗುಣಮುಖ

(ನ್ಯೂಸ್ ಕಡಬ) newskadaba.com ಸುಳ್ಯ,ಜೂ.29: ನಗರ ಸಭೆ ವ್ಯಾಪ್ತಿಯಲ್ಲಿ ಪ್ರಥಮ ಕೊರೋನಾ ಪ್ರಕರಣ ಬೆಳಕಿಗೆ ಬಂದಿದ್ದ ನಗರಸಭಾ ಸದಸ್ಯೆಯ ಮಾನವಾದ ಚಿಕ್ಕಮುಡ್ನೂರು ನಿವಾಸಿಯೊಬ್ಬರು ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಜೂ. 20 ರಂದು ಅವರಿಗೆ ಕೊರೋನಾ ದೃಢಗೊಂಡ ಕುರಿತು ವರದಿ ಬಂದಿದ್ದು, ಇದೀಗಾ 7 ದಿನಗಳ ಬಳಿಕ ಅವರ ವರದಿಯಲ್ಲಿ ಕೊರೋನಾ ನೆಗೆಟಿವ್ ಆಗಿರುವ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.     ಜ್ವರ ಶೀತ , ಕೆಮ್ಮು ಭಾದೆಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಜೂ. 18

ಪುತ್ತೂರು: ಪ್ರಥಮ ಕೊವೀಡ್ ಸೋಂಕಿತ ವ್ಯಕ್ತಿ ಗುಣಮುಖ Read More »

ಕರಾವಳಿ, ಕರ್ನಾಟಕ

ರಿಕ್ಷಾ ಪಲ್ಟಿ: ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಾಯ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜೂ.29, ಎಸ್ಸೆಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಸೋಮವಾರ ನಡೆದಿದೆ. ಗಾಯಗೊಂಡವರನ್ನು ಶಂಭೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇದರ ಪೈಕಿ ಅಕ್ಷಿತ್ ಗೆ ತೀವ್ರ ತರದ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ವಿದ್ಯಾರ್ಥಿನಿಯರಿಗೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು

ರಿಕ್ಷಾ ಪಲ್ಟಿ: ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top