ಮಂಗಳೂರು ಕೊರೊನಾಘತಾ 16ನೇ ಬಲಿ

(ನ್ಯೂಸ್ ಕಡಬ) newskadaba.com.ಮಂಗಳೂರು, ಜು.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಜೋರಾಗುತ್ತಿದೆ. ಸಮುದಾಯಕ್ಕೆ ಹರಡುತ್ತಿದೆ ಎಂಬ ಊಹೆಗಳಿಗೆ ಪೂರಕವೆಂಬಂತೆ ಕೊರೊನಾಗೆ ಮತ್ತೊಂದು ಬಲಿಯಾಗಿದೆ, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಯಾದವರ ಸಂಖ್ಯೆ 16ಕ್ಕೆ ಏರಿದೆ.ಮಂಗಳೂರಿನ ಬೆಂಗ್ರೆ ನಿವಾಸಿಯಾಗಿದ್ದ ಪುರುಷ ಸೋಂಕು ಪೀಡಿತ ವ್ಯಕ್ತಿ ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ […]

ಮಂಗಳೂರು ಕೊರೊನಾಘತಾ 16ನೇ ಬಲಿ Read More »

ಕರಾವಳಿ

ಕರಾವಳಿಯಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಕರಾವಳಿ ,ಜು.01: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಏಳುತ್ತಿರುವುದರಿಂದ ಇನ್ನೂ 5 ದಿನಗಳ ಕಾಲ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.    ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ತುಮಕೂರು, ಧಾರವಾಡ,ಶಿವಮೊಗ್ಗ, ಸೇರಿದಂತೆ 15 ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.  

ಕರಾವಳಿಯಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ಧರ್ಮಸ್ಥಳ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.01., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯವನ್ನು ಸೋಮವಾರ ವಿತರಿಸಲಾಯಿತು. ಉಡುಪಿ ಪ್ರಾದೇಶಿಕ ಕಛೇರಿ ಯೋಜನಾಧಿಕಾರಿ ಸುರೇಂದ್ರ ಅವರು ಯೋಜನೆಯಿಂದ ಮಂಜೂರಾದ ಧನಸಹಾಯ ಚೆಕ್‍ನ್ನು ಫಲಾನುಭವಿಗಳಾದ ಕೊಣಾಜೆ ಗ್ರಾಮದ ಈಶ್ವರ ಗೌಡ ಹಾಗೂ ಲಿಂಗಪ್ಪ ಗೌಡ, ಕೊಂಬಾರು ಗ್ರಾಮದ ಯೋಜನೆಯ ಸದಸ್ಯ ಆನಂದ ಗೌಡರ ಪತ್ನಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್., ವಲಯ ಮೇಲ್ವಿಚಾರಕರಾದ ಧರ್ಣಪ್ಪ ಗೌಡ, ಒಕ್ಕೂಟ ಅಧ್ಯಕ್ಷ

ಧರ್ಮಸ್ಥಳ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯ ವಿತರಣೆ Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ, ಜು .01. ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಪುತ್ತೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಬಿ.ಎಂ. ಅವರು ಸೋಮವಾರ ನಿರ್ಗಮನ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರಿಂದ ಅಧಿಕಾರ ವಹಿಸಿಕೊಂಡರು. ಗ್ರಾ.ಪಂ. ಸದಸ್ಯ ತೋಮಸ್ ಕೆ.ಜೆ., ಸಿಬಂದಿಗಳು ಉಪಸ್ಥಿತರಿದ್ದರು. ಪಿಡಿಒ ಆನಂದ ಎ. ಸ್ವಾಗತಿಸಿ, ಧನರಾಜ್ ವಂದಿಸಿದರು.

ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ Read More »

ಕರಾವಳಿ

ಕೆಟ್ಟ ದೃಷ್ಟಿದೋಷ ಗಳಿಂದ ರಕ್ಷಣೆ ಮತ್ತು ದಿನ ಭವಿಷ್ಯ

ಶತ್ರು ಪೀಡೆ, ಜನ ದೃಷ್ಟಿ, ಮಾಂತ್ರಿಕ ಸಮಸ್ಯೆಯಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಮನೆಯ ಯಾವುದಾದರೂ ಮೂಲೆಯಲ್ಲಿ ಸಗಣಿಯನ್ನು ಸುಡುವುದು ಒಳ್ಳೆಯದು ಇದರಿಂದ ನಿಮ್ಮ ಸಮಸ್ಯೆಗೆ ಸೂಕ್ತ ಮಟ್ಟದಲ್ಲಿ ಪರಿಹಾರ ದೊರೆಯಲಿದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ

ಕೆಟ್ಟ ದೃಷ್ಟಿದೋಷ ಗಳಿಂದ ರಕ್ಷಣೆ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬಕ್ಕೆ ಮತ್ತೆ ಕೊರೋನಾ ಆಘಾತ ➤ ಕಡಬದ ನರ್ಸ್ ಓರ್ವರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಕಡಬಕ್ಕೆ ಮತ್ತೆ ಕೊರೋನಾ ಆಘಾತ ಉಂಟಾಗಿದ್ದು, ಕಡಬದ ಕೊರೋನಾ ವಾರಿಯರ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕೊರೋನಾ ವಾರಿಯರ್, ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಓರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಿಂದ ಪ್ರತೀದಿನ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇಂದು ಅವರ ಗಂಟಲ ದ್ರವ ಮಾದರಿ ಪಾಸಿಟಿವ್ ಬಂದಿದೆ.

ಕಡಬಕ್ಕೆ ಮತ್ತೆ ಕೊರೋನಾ ಆಘಾತ ➤ ಕಡಬದ ನರ್ಸ್ ಓರ್ವರಿಗೆ ಕೊರೋನಾ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್

ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 30, ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣವು ಒಂದು ಪೂರ್ಣ ಪ್ರಮಾಣದ ರಂಗ ರೆಪರ್ಟರಿಯಾಗಿರುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಪ್ರತಿವರ್ಷ ಹತ್ತು ತಿಂಗಳ ರಂಗಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್ ಅನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ 2020-21 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 2020-21ನೇ ಸಾಲಿನ ಈ ರಂಗ ತರಬೇತಿ ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ

ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ Read More »

ಕರ್ನಾಟಕ

ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ

(ನ್ಯೂಸ್ ಕಡಬ) newskadaba.com ತೆಂಕಿಲ ,ಜೂ.30:  ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿ ಸೋಮವಾರ ಸಂಜೆ ವೇಳೆ ಭಾರಿ ಗಾತ್ರದ ಮಾವಿನ ಮರವೊಂದು  ಬುಡ ಸಹಿತ ಮುರಿದು ಬಿದ್ದು, ದೈವದ ಕಟ್ಟೆಯ ಕಾಂಪೌಂಡ್ ಹಾಗೂ ಮನೆಗೆ ಹಾನಿಯಾಗಿದ್ದು ಜೊತೆಗೆ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ಸೋಮವಾರದಂದು ನಡೆದಿದೆ. ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿರುವ ಪುರುಷೋತ್ತಮ ನಾಯ್ಕ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಇವರ ಮನೆ ಬಳಿ ಕೊಟ್ಟಿಬೆಟ್ಟು ಕುಟುಂಬದ ತರವಾಡಿನ ಗುಳಿಗ ಹಾಗೂ ಬೈರವ ದೈವದ

ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ Read More »

ಕರಾವಳಿ, ಕರ್ನಾಟಕ

ಡಿ.ಸಿ. ಕಛೇರಿಗೆ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಇಂಟರ್ನೆಟ್ ನಲ್ಲಿ ಲಭ್ಯ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 30, ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೂಡಾ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ. ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇ-ಕಚೇರಿ ತಂತ್ರಾಂಶದ ಬಳಕೆಯಿಂದ ಸಾರ್ವಜನಿಕರು ತಮಗೆ ಸಂಬಂಧಿಸಿದ ಅರ್ಜಿ ಅಥವಾ ಕಡತದ ಚಲನವಲನ ಹಾಗೂ ಸ್ಥಿತಿಗತಿಯನ್ನು ಅಂರ್ತಜಾಲದ ಮೂಲಕ ಪರಿಶೀಲಿಸಿಕೊಳ್ಳಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಸಾರ್ವಜನಿಕರು ತಾವು ಸಲ್ಲಿಸಿದ ಅರ್ಜಿಯ ಚಲನವಲನ ಹಾಗೂ ಸ್ಥಿತಿಗತಿಯನ್ನು http://eofficedcmo.karnataka.gov.in/ mysdivdcCJ?language=ku

ಡಿ.ಸಿ. ಕಛೇರಿಗೆ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಇಂಟರ್ನೆಟ್ ನಲ್ಲಿ ಲಭ್ಯ Read More »

ಕರಾವಳಿ, ಕರ್ನಾಟಕ

ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ,ಜೂ.30:  ಕೊಂಬಾರು ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಆದಿತ್ಯವಾರದಂದು ನಡೆಯಿತು.   ಗ್ರಾಮ ಪಂಚಯತ್ ಅಧ್ಯಕ್ಷರಾದ ಅಜಿತ್ ಎಸ್.ರವರು ಕಟ್ಟಡ ಉದ್ಘಾಟಿಸಿದರು. ತಾ. ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಢಾರಿ, ಕಡಬ ಕ್ಷೇತ್ರದ ಜಿ. ಪಂ ಸದಸ್ಯ ಪಿ.ಪಿ ವರ್ಗೀಸ್, ಕೋ- ಆರ್ಡಿನೇಟರ್, ಕಟ್ಟಡ ನಿರ್ಮಾಣಕ್ಕೆ ಸಮಾಗ್ರಿ ಸರಬರಾಜುದಾರರು, ಗ್ರಾಮ

ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ Read More »

ಕರಾವಳಿ, ಕರ್ನಾಟಕ
Scroll to Top