ಸುಳ್ಯ : ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ನ.29: ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸುಳ್ಯದ ಸಂಪಾಜೆಯ ಚೌಕಿ ಬಳಿ ಗುರುವಾರ ಸಂಭವಿಸಿದೆ. ಮೂಲತಃ ಚೆಂಬು ಗ್ರಾಮದ ಉಂಬಳೆ ನಿವಾಸಿ ಆಗಿರುವ ಪ್ರಸ್ತುತ ಸಂಪಾಜೆಯ ಚೌಕಿ ಬಳಿಯ ಕಮಲ (85) ತನ್ನ ಮನೆಯ ಮಹಡಿಯಿಂದ ಇಳಿದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು […]

ಸುಳ್ಯ : ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಕಿರಣ್ ಬೇಡಿ ಪತ್ರ

(ನ್ಯೂಸ್‌ ಕಡಬ) newskadaba.com,  ನ.29: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಹಲವೆಡೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 369ರಷ್ಟು ದಾಖಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಪುದುಚೇರಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಿರಣ್ ಬೇಡಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಕುರಿತು ಬರೆಯುತ್ತಾ, ಪ್ರಧಾನಿ ಮೋದಿ

ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಕಿರಣ್ ಬೇಡಿ ಪತ್ರ Read More »

ರಾಷ್ಟ್ರೀಯ ನ್ಯೂಸ್

ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ

(ನ್ಯೂಸ್‌ ಕಡಬ) newskadaba.com,  ನ.29: ದೇಶದಲ್ಲಿ ಕಾರ್ಯ ನಿರ್ವಹಿಸುವ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸುವ ಹಲವಾರು ವಿಮಾನಗಳು ತಮ್ಮ ಎ320 ಸಾಫ್ಟ್‌ವೇರ್‌ನಲ್ಲಿ ಉಂಟಾದ ದೋಷದಿಂದಾಗಿ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ. ತಾಂತ್ರಿಕ ದೋಷದಿಂದ ಸುಮಾರು 200 ರಿಂದ 250 ವಿಮಾನಗಳ ಹಾರಾಟ ರದ್ದಾಗುವ ಅಥವಾ ವಿಮಾನ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಫ್ರೆಂಚ್ ವಿಮಾನಯಾನ ಕಂಪನಿ ಏರ್‌ಬಸ್, ಅತಿಯಾದ ಸೌರ ವಿಕಿರಣವು ಎ320 ಸರಣಿಯ ವಿಮಾನಗಳ ಹಾರಾಟ ನಿಯಂತ್ರಣಗಳಿಗೆ ಅಗತ್ಯವಾದ ನಿರ್ಣಾಯಕ ಡೇಟಾವನ್ನ ನಾಶಪಡಿಸಬಹುದು.

ಎ320 ಸಾಫ್ಟ್ವೇರ್ನಲ್ಲಿ ದೋಷ: 250ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ/ರದ್ದಾಗುವ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ‘ಲಕ್ಷ ಕಂಠ ಗೀತಾ ಗಾಯನ’ಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ

(ನ್ಯೂಸ್‌ ಕಡಬ) newskadaba.com,  ನ.29: ಉಡುಪಿಯಲ್ಲಿ ನಡೆದ ಭವ್ಯವಾದ “ಲಕ್ಷ ಕಂಠ ಗೀತಾ ಗಾಯನ” ಕಾರ್ಯಕ್ರಮವು ಅಧಿಕೃತವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಸಂಕಲ್ಪದಂತೆ, ಈ ಐತಿಹಾಸಿಕ ಕಾರ್ಯಕ್ರಮವು ನವೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನೆರವೇರಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥರಾದ ಡಾ. ಮನೀಶ್ ಕುಮಾರ್ ವಿಶ್ನೋಯ್ ಅವರು ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ

ಉಡುಪಿ: ‘ಲಕ್ಷ ಕಂಠ ಗೀತಾ ಗಾಯನ’ಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಇಂದಿನ ಹವಮಾನ ವರದಿ

(ನ್ಯೂಸ್‌ ಕಡಬ) newskadaba.com,  ನ.29: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಒಣ ಹವೆ ಕಂಡುಬರುತ್ತಿದೆ. ಆದರೆ, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ದಿತ್ವಾ ಚಂಡಮಾರುತ ಪರಿಣಾಮದಿಂದ ನ.29 ಮತ್ತು 30ರಂದು ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25°C

ಇಂದಿನ ಹವಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತ

(ನ್ಯೂಸ್‌ ಕಡಬ) newskadaba.com,  ನ.29: ಬೆಂಗಳೂರಿನಿಂದ ಗುರುರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಗ್ರಾಮದ ಕೋಟೆಕಲ್ ಬಳಿ ಜರುಗಿದೆ. ಮೃತರೆಲ್ಲಾ ಬೆಂಗಳೂರು ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಗ್ರಾಮದ ಕೋಟೆಕಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂನಿಂದ ಆದೋನಿ ಕಡೆಗೆ ಹೊರಟಿದ್ದ ಫಾರ್ಚುನರ್ ಕಾರು ಹಾಗೂ ಬೆಂಗಳೂರಿನಿಂದ ಮಂತ್ರಾಲಯ ಕಡೆಗೆ

ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತ Read More »

ಕರ್ನಾಟಕ

ಕೆಂಪಳ್ಳ: ಸರಕು ಸಾಗಿಸುತ್ತಿದ್ದ ಟೆಂಪೋ ಪಲ್ಟಿ-ಚಾಲಕನಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ನ.29: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಪರಿಸರದ ಕೆಂಪಳ್ಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿ, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು, ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  

ಕೆಂಪಳ್ಳ: ಸರಕು ಸಾಗಿಸುತ್ತಿದ್ದ ಟೆಂಪೋ ಪಲ್ಟಿ-ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಫ್ ಸಿರಪ್ ಕಳ್ಳಸಾಗಣೆ: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.29: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದರ ಭಾಗವಾಗಿ ಕಾರ್ಯಾಚರಣೆ ಮುಂದುವರಿಸಿದ್ದು, 12 ಅನುಮಾನಾಸ್ಪದ ಕಂಪನಿಗಳು ಕಂಡುಬಂದಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ತಿಳಿಸಿದ್ದಾರೆ. “ಈ 12 ಅನುಮಾನಾಸ್ಪದ ಕಂಪನಿಗಳ ಕುರಿತು

ಕಾಫ್ ಸಿರಪ್ ಕಳ್ಳಸಾಗಣೆ: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು Read More »

ಬ್ರೇಕಿಂಗ್ ನ್ಯೂಸ್

ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ : ಮೋದಿ

(ನ್ಯೂಸ್‌ ಕಡಬ) newskadaba.com,  ನ.28: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರು ವುದು ನನಗೆ ಸಿಕ್ಕ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಉಡುಪಿ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ

ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ : ಮೋದಿ Read More »

ಕರಾವಳಿ, ಕರ್ನಾಟಕ

ಮಂಗಳೂರಿನಿಂದ ಪ್ರಧಾನಿ ನಿರ್ಗಮನ

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ನಿರ್ಗಮಿಸಿದರು. ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪ್ರಧಾನಿ ಅವರು, ಬಳಿಕ ವಾಯುಪಡೆ ವಿಮಾನದಲ್ಲಿ ಗೋವಾ ತೆರಳಿದರು. ವಿಮಾನ ನಿಲ್ದಾಣದಲ್ಲಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಗಳನ್ನು ಬೀಳ್ಕೊಟ್ಟರು.

ಮಂಗಳೂರಿನಿಂದ ಪ್ರಧಾನಿ ನಿರ್ಗಮನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top