ಶೇ. 2.8ಕ್ಕೆ ಕುಸಿದ ನಿರುದ್ಯೋಗ ದರ: ದೇಶದಲ್ಲೇ ಕರ್ನಾಟಕಕ್ಕೆ 2ನೇ ಸ್ಥಾನ..!

(ನ್ಯೂಸ್‌ ಕಡಬ) newskadaba.com,ಡಿ.17: ಉದ್ಯೋಗ ಕ್ಷೇತ್ರದಲ್ಲಿ ದೇಶದ ಇತರೆ ರಾಜ್ಯಗಳ ಪೈಕಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದ್ದು, ಅತಿ ಕಡಿಮೆ ನಿರುದ್ಯೋಗ ದರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ’ (PLFS – ಜುಲೈ-ಸೆಪ್ಟೆಂಬರ್ 2025) ವರದಿಯಲ್ಲಿ ಈ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಲೋಕಸಭೆಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ […]

ಶೇ. 2.8ಕ್ಕೆ ಕುಸಿದ ನಿರುದ್ಯೋಗ ದರ: ದೇಶದಲ್ಲೇ ಕರ್ನಾಟಕಕ್ಕೆ 2ನೇ ಸ್ಥಾನ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಬೆಳಗಾವಿ ಸದನದ ಅವಧಿ ಒಂದು ವಾರ ವಿಸ್ತರಿಸಲು ಛಲವಾದಿ ನಾರಾಯಣಸ್ವಾಮಿ ಒತ್ತಾಯ’

(ನ್ಯೂಸ್‌ ಕಡಬ) newskadaba.com,ಡಿ.17: ಇಷ್ಟು ದಿನಗಳಾದರೂ ಉತ್ತರ ಕರ್ನಾಟಕದ ವಿಚಾರಗಳು ಸರಿಯಾಗಿ ಚರ್ಚೆಗೆ ಬಂದಿಲ್ಲ. ಆದ್ದರಿಂದ ಇಲ್ಲಿ ನಡೆಯುತ್ತಿರುವ ಸದನದ ಅವಧಿಯನ್ನು ಒಂದು ವಾರ ವಿಸ್ತರಿಸಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ನಾಳೆ ಜನರು ಕೇಳುವಂತಾಗಲಿದೆ ಎಂದು ನುಡಿದರು. ಒಂದು ವಾರ ಸದನದ ಅವಧಿ ವಿಸ್ತರಿಸಿ; ಸಮಸ್ಯೆಗಳಿಗೆ ಪರಿಹಾರ ಕೊಡೋಣ ಎಂದು ತಿಳಿಸಿದರು. ಇಲ್ಲಿ ಸಮಸ್ಯೆ ಹೆಚ್ಚಾಗಿದೆ.

‘ಬೆಳಗಾವಿ ಸದನದ ಅವಧಿ ಒಂದು ವಾರ ವಿಸ್ತರಿಸಲು ಛಲವಾದಿ ನಾರಾಯಣಸ್ವಾಮಿ ಒತ್ತಾಯ’ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ

(ನ್ಯೂಸ್‌ ಕಡಬ) newskadaba.com,ಡಿ.17: ಬಾಯಿಗೆ ಬಿದ್ದಿದ್ದ ಎಲೆಯನ್ನು ಉಗುಳಿದ್ದಕ್ಕೆ ವೃದ್ಧರೊಬ್ಬರಿಗೆ 30,000 ರೂ. ದಂಡ ವಿಧಿಸಿರುವ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಕನ್‌ಶೈರ್‌ನ ಸ್ಕೆಗ್ನೆಸ್‌ನಲ್ಲಿ ರಾಯ್ ಮಾರ್ಷ್ ಅವರಿಗೆ ದಂಡ ವಿಧಿಸಲಾಗಿದೆ. ಅವರು ಬೋಯಿಟಿಂಗ್ ಸರೋವರದ ಬಳಿ ಜಾಗಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಿ ಒಂದು ದೊಡ್ಡ ಎಲೆ ಅವರ ಬಾಯಿಗೆ ಹಾರಿತ್ತು. ಅವರು

ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 9292 ಬೋಧಕ – ಬೋಧಕೇತರ ಹುದ್ದೆಗಳು ಬಾಕಿ

(ನ್ಯೂಸ್‌ ಕಡಬ) newskadaba.com,ಡಿ.17: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 32 ಸಾರ್ವಜನಿಕ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, 2997 ಬೋಧಕ ಹಾಗೂ 6295 ಬೋಧಕೇತರ ಹುದ್ದೆಗಳು ಖಾಲಿ ಇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಪಿ ಸುಧಾಕರ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿ.ಟಿ.ರವಿ ಅವರು, ವಿಧಾನಪರಿಷತ್‌ ಕಲಾಪದಲ್ಲಿ ರಾಜ್ಯದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯಗಳ ಕುರಿತು ತಾನು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆಂದು ತಿಳಿಸಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ವಿಷಯವನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳ ಆರ್ಥಿಕ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 9292 ಬೋಧಕ – ಬೋಧಕೇತರ ಹುದ್ದೆಗಳು ಬಾಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ತೆಗೆದುಹಾಕುವ ಕೇಂದ್ರದ ನಡೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ!

(ನ್ಯೂಸ್‌ ಕಡಬ) newskadaba.com,ಡಿ.17: ಕೇಂದ್ರ ಸರ್ಕಾರವು ಅಸ್ತಿತ್ವದಲ್ಲಿರುವ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಕ್ರಮ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ನಾಯಕರ ವಿರುದ್ಧ ‘ದ್ವೇಷ ರಾಜಕೀಯ’ ನಡೆಸುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಬೃಹತ್

ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ತೆಗೆದುಹಾಕುವ ಕೇಂದ್ರದ ನಡೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿಗೆ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿ ಪ್ರಧಾನ

(ನ್ಯೂಸ್‌ ಕಡಬ) newskadaba.com,ಡಿ.17: ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೆಗೆ ಇಥಿಯೋಪಿಯಾದ ಅತ್ಯುನ್ನತ ಗೌರವ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ನೀಡಿ ಗೌರವಿಸಿದ್ದಾರೆ. ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ, ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆಗಾಗಿ ಮತ್ತು ಜಾಗತಿಕ ರಾಜಕಾರಣಿಯಾಗಿ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ ಎಂದು

ಪ್ರಧಾನಿ ಮೋದಿಗೆ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿ ಪ್ರಧಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕೋರ್ಟ್ ಟ್ರಯಲ್ ಇಂದು ಪ್ರಾರಂಭ

(ನ್ಯೂಸ್‌ ಕಡಬ) newskadaba.com,ಡಿ.17: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಯಲ್ ಇಂದು ಪ್ರಾರಂಭ ಆಗುತ್ತಿದೆ. ಪ್ರಕರಣದಲ್ಲಿ ಮೊದಲ ಹಂತವಾಗಿ ಇಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಸಾಕ್ಷಿ ಹೇಳಲಿದ್ದಾರೆ. ಈಗಾಗಲೇ ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಎರಡು ಸಾಕ್ಷಿಗೂ ಸಮನ್ಸ್ ನೀಡಲಾಗಿತ್ತು. ಇಂದು ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು, ಘಟನಾವಳಿಯ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ನುಡಿಯಲಿದ್ದಾರೆ. ರೇಣುಕಾಸ್ವಾಮಿ ಯಾವಾಗ ಮನೆಯಿಂದ ಹೊರಟ, ಮಧ್ಯಾಹ್ನ ಊಟಕ್ಕೆ ಬರೋದಿಲ್ಲ ಅಂದಿದ್ದು, ಬಳಿಕ ಸಾವಿನ ವಿಚಾರ ತಿಳಿದಿದ್ದು, ಈ ಎಲ್ಲಾ ಮಾಹಿತಿಯನ್ನು

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕೋರ್ಟ್ ಟ್ರಯಲ್ ಇಂದು ಪ್ರಾರಂಭ Read More »

ಕರ್ನಾಟಕ

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ

(ನ್ಯೂಸ್‌ ಕಡಬ) newskadaba.com,ಡಿ.17: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಮೈ ಕೊರೆಯುವ ಚಳಿಯ ವಾತಾವರಣವಿತ್ತು. ಇದೀಗ ಹಿಂಗಾರು ಮಾರುತಗಳು ಚುರುಕುಗೊಂಡಿದ್ದು, ಬಂಗಾಳ ಕೊಲ್ಲಿಯ ಕಡೆಯಿಂದ ಬೀಸುತ್ತಿವೆ. ಹೀಗಾಗಿ, ಮಳೆಯ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಇನ್ನೂ

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ Read More »

ಕರ್ನಾಟಕ

ಮಂಗಳೂರು: ಬೈಕ್ಕಳ್ಳತನ ಮತ್ತು ಸರಗಳ್ಳತನದ ಇಬ್ಬರು ಅಂತರ್ ರಾಜ್ಯ ಆರೋಪಿಗಳ ಬಂಧನ

(ನ್ಯೂಸ್‌ ಕಡಬ) newskadaba.com,ಡಿ.17: ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ  ಯಮಹಾ  FZ ಬೈಕ್‌ ಕಳ್ಳತನ ಮತ್ತು ವಯೋವೃದ್ದೆಯ ಮಹಿಳೆಯಿಂದ ಚಿನ್ನದ ಸರ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್‌ ರಾಜ್ಯ ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಬಂಧಿತ ಆರೋಪಿಗಳು ಉಳ್ಳಾಲದ ನ್ಯೂ ತೋಟ   ಹೌಸ್ ನ ಪೈಸಲ್‌, ಮೈಸೂರಿನ ವಿನಾಯಕ ನಗರದ ನಿತೀನ್  ಕುಮಾರ್ ಎಂದು ಗುರುತಿಸಲಾಗಿದೆ. ಡಿ.೧೨ ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ

ಮಂಗಳೂರು: ಬೈಕ್ಕಳ್ಳತನ ಮತ್ತು ಸರಗಳ್ಳತನದ ಇಬ್ಬರು ಅಂತರ್ ರಾಜ್ಯ ಆರೋಪಿಗಳ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚಿಕ್ಕಮಗಳೂರು: ಬಿ.ಕಾಂ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ

(ನ್ಯೂಸ್‌ ಕಡಬ) newskadaba.com,ಡಿ.17: ರಾಜ್ಯದಲ್ಲಿ ಹೃದಯಾಘಾತದಸಾವಿನ ಪ್ರಮಾಣ ಮುಂದುವರಿದಿದೆ. ಬಾಳಿ ಬದುಕಬೇಕಾದವರು ಪ್ರಾಣ ಕಳೆದುಕೊಳ್ತಿದ್ದಾರೆ. ಅದೇ ರೀತಿ 22 ವರ್ಷದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನ ದಿಶಾ (22) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ದಿಶಾ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಡಿಕೊಂಡು, ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ.

ಚಿಕ್ಕಮಗಳೂರು: ಬಿ.ಕಾಂ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top