ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ – News Kadaba

ಲಂಡನ್: ಗಾಳಿಯಲ್ಲಿ ಬಾಯಿಗೆ ಬಿದ್ದಿದ್ದ ಎಲೆಯನ್ನ ಉಗುಳಿದ್ದಕ್ಕೆ ವೃದ್ಧನಿಗೆ 30,000 ರೂ. ದಂಡ

(ನ್ಯೂಸ್‌ ಕಡಬ) newskadaba.com,ಡಿ.17: ಬಾಯಿಗೆ ಬಿದ್ದಿದ್ದ ಎಲೆಯನ್ನು ಉಗುಳಿದ್ದಕ್ಕೆ ವೃದ್ಧರೊಬ್ಬರಿಗೆ 30,000 ರೂ. ದಂಡ ವಿಧಿಸಿರುವ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಕನ್‌ಶೈರ್‌ನ ಸ್ಕೆಗ್ನೆಸ್‌ನಲ್ಲಿ ರಾಯ್ ಮಾರ್ಷ್ ಅವರಿಗೆ ದಂಡ ವಿಧಿಸಲಾಗಿದೆ. ಅವರು ಬೋಯಿಟಿಂಗ್ ಸರೋವರದ ಬಳಿ ಜಾಗಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಿ ಒಂದು ದೊಡ್ಡ ಎಲೆ ಅವರ ಬಾಯಿಗೆ ಹಾರಿತ್ತು. ಅವರು ತಕ್ಷಣ ಅದನ್ನು ಉಗುಳಿದ್ದರು. ಇಬ್ಬರು ಅಧಿಕಾರಿಗಳು ಕೂಡಲೇ ಅವರ ಬಳಿ ಓಡಿಬಂದರು. ಒಬ್ಬ ಅಧಿಕಾರಿ ಅವರು ನೆಲದ ಮೇಲೆ ಉಗುಳುವುದನ್ನು ನೋಡಿದೆ ಎಂದು ಹೇಳಿ ತನ್ನನ್ನು ಮೂರ್ಖ ಎಂದು ಕರೆದಿದ್ದಾಗಿ ರಾಯ್ ತಿಳಿಸಿದ್ದಾರೆ.

250 ಪೌಂಡ್‌ಗಳ (ಸುಮಾರು 30,000 ರೂ.) ದಂಡವನ್ನು ವಿಧಿಸಿದ್ದಾರೆ. ನಂತರ ಮೇಲ್ಮನವಿ ಸಲ್ಲಿಸಿದ ನಂತರ ದಂಡವನ್ನು 150 ಪೌಂಡ್ (ಸುಮಾರು 18,000 ರೂ.) ಗೆ ಇಳಿಸಲಾಯಿತು. ಅದನ್ನು ರಾಯ್ ಪಾವತಿಸಿದರು. ರಾಯ್ ಅವರ ಮಗಳು ಜೇನ್ ಮಾರ್ಷ್ ಫಿಟ್ಜ್‌ಪ್ಯಾಟ್ರಿಕ್ ಫೇಸ್‌ಬುಕ್‌ನಲ್ಲಿ ಸಂಪೂರ್ಣ ಘಟನೆಯನ್ನು ಬರೆದು ಹಂಚಿಕೊಂಡಿದ್ದಾರೆ.

ತನ್ನ ತಂದೆಗೆ ಸರಿಯಾಗಿ ನಡೆಯಲು ಆಗುವುದಿಲ್ಲ, ತೀವ್ರ ಆಸ್ತಮಾ ಮತ್ತು ಹೃದ್ರೋಗದ ಸಮಸ್ಯೆಯೂ ಇದೆ ಎಂದು ಅವರು ವಿವರಿಸಿದ್ದಾರೆ. ಆದರೂ, ಅವರು ಇನ್ನೂ ಬೋಯಿಟಿಂಗ್ ಸರೋವರದ ಸುತ್ತಲೂ ಪ್ರತಿದಿನ ನಡೆಯುತ್ತಾರೆ. ಅಧಿಕಾರಿಗಳು ಕಾರಣವಿಲ್ಲದೆ ವೃದ್ಧರಿಗೆ ಕಿರುಕುಳ ನೀಡುತ್ತಿದ್ದಾರೆ. ನಗರವನ್ನು ಸ್ವಚ್ಛವಾಗಿಡುವುದು ಮುಖ್ಯ, ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ಈ ಅಧಿಕಾರಿಗಳು ಅನಗತ್ಯವಾಗಿ ವೃದ್ಧರನ್ನು ಬೆದರಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇದು ತಪ್ಪು, ನಿಜವಾಗಿಯೂ ಅವರು ಉಗಿದಿದ್ದರೇ ಇಲ್ಲವೇ ಎಂಬುದರ ಬಗ್ಗೆ ಒಂದೇ ಒಂದು ಮಾತನ್ನೂ ಅಧಿಕಾರಿಗಳು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ತನ್ನ ತಂದೆ ಮನೆಯಿಂದ ಹೊರ ಹೋಗಲು ಕೂಡ ಭಯ ಪಡುತ್ತಿದ್ದಾರೆ ಎಂದಿದ್ದಾರೆ.

Scroll to Top