ಮುಖ್ಯಮಂತ್ರಿಯವರನ್ನು ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ…! ➤ ರೇಣುಕಾಚಾರ್ಯ ಗಂಭೀರ ಆರೋಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 14. ಸಿಎಂ ಯಡಿಯೂರಪ್ಪರ ನಾಯಕತ್ವವನ್ನು ಬದಲಾಯಿಸಬೇಕು ಎಂದು ಯಾರೆಲ್ಲ ಹೇಳಿದ್ದರೋ ಅವರೇ ಸಚಿವರಾಗಿರುವುದು ವಿಪರ್ಯಾಸ, ಶಾಸನಸಭೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಿದವರು ಇಂದು ಸಚಿವ ಸ್ಥಾನ ಪಡೆದಿರುವುದು ನೋವಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ‌. ಸಂಪುಟ ವಿಸ್ತರಣೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹತ್ತಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು […]

ಮುಖ್ಯಮಂತ್ರಿಯವರನ್ನು ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ…! ➤ ರೇಣುಕಾಚಾರ್ಯ ಗಂಭೀರ ಆರೋಪ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆ (ಜ. 15) ಸಚಿವ ವಿ. ಸೋಮಣ್ಣ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14. ಸರ್ಕಾರದ ವಸತಿ ಸಚಿವ ವಿ. ಸೋಮಣ್ಣ ಅವರು ಜನವರಿ 15 ರಂದು ದ.ಕ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜನವರಿ 15 ರಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಲಿದ್ದು, ಮದ್ಯಾಹ್ನ 12.20 ಗಂಟೆಗೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಆಯೋಜಿಸಲಾಗಿರುವ ಶ್ರೀ ವೀರಭದ್ರ ದೇವರು, ನಾಲ್ಕೈತ್ತಾಯ ಪಂಜುರ್ಲಿ, ಮಹಾಕಾಳಿ ಮತ್ತು ದೈವಂಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ನಾಳೆ (ಜ. 15) ಸಚಿವ ವಿ. ಸೋಮಣ್ಣ ಜಿಲ್ಲಾ ಪ್ರವಾಸ Read More »

ಕರಾವಳಿ, ಕರ್ನಾಟಕ

ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ವಿತರಿಸಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಹಾಗೂ ಇನ್ನಿತರ ಸಾಧನಗಳನ್ನು ಒಳಗೊಂಡ ಬ್ರೈಲ್‍ ಕಿಟ್‍ ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅಂಧ ವಿದ್ಯಾರ್ಥಿಗಳು ವಿಕಲಚೇತನತೆಯ ಪ್ರಮಾಣ ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಹಾಗೂ ನಂತರದ ಉನ್ನತ ಶಿಕ್ಷಣದ ವ್ಯಾಸಂಗ ಪ್ರಮಾಣ ಪತ್ರ, ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ

ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ವಿತರಿಸಲು ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರದ ಮಾಲಕರಿಗೆ ಪ್ರಾಧಿಕಾರದಿಂದ ‘7A’ ಕಡ್ಡಾಯ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 14. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) 2011 ಮತ್ತು ನಿಯಾಮಾವಳಿ 2012ರ ಅನ್ವಯ ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರದ ಮಾಲಕರು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನೋಂದಣಿ (7A) ಹೊಂದಿರಬೇಕಾಗುತ್ತದೆ. ಕೊಳವೆ ಬಾವಿ ಕೊರೆಸುವವರು (ಸರಕಾರಿ/ಖಾಸಗಿ) ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ‘7A’ ಹೊಂದಿರುವ ರಿಗ್ ಯಂತ್ರದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೊಳವೆ ಬಾವಿ ಕೊರೆಸಬೇಕು. ತಪ್ಪಿದ್ದಲ್ಲಿ ಇಲಾಖಾ ನಿಯಾಮಾನುಸಾರ ಕ್ರಮ ಜರಗಿಸಲಾಗುತ್ತದೆ. ಹೆಚ್ಚಿನ

ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರದ ಮಾಲಕರಿಗೆ ಪ್ರಾಧಿಕಾರದಿಂದ ‘7A’ ಕಡ್ಡಾಯ Read More »

ಕರಾವಳಿ, ಕರ್ನಾಟಕ

ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪೋಷಕರ ವಿರುದ್ಧ ಕೇಸು ದಾಖಲು…!

(ನ್ಯೂಸ್ ಕಡಬ) newskadaba.com ಕಾರ್ಕಳ, ಜ.14. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದಲ್ಲಿ ಅವರ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜ. 12ರಂದು ಕಾರು ಮತ್ತು ಟೆಂಪೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಕಾರು ಚಲಾಯಿಸುತ್ತಿದ್ದು, ಇದರಿಂದ ಎರಡೂ ವಾಹನಗಳಿಗೂ ಹಾನಿಯುಂಟಾಗಿದೆ. ಈ ಕುರಿತು ಟೆಂಪೋ ಚಾಲಕ ನಗರ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಂಡ ನಗರ ಠಾಣೆ ಪೊಲೀಸರು ಅಪ್ರಾಪ್ತ ವಯಸ್ಸಿನ ಕಾರು

ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪೋಷಕರ ವಿರುದ್ಧ ಕೇಸು ದಾಖಲು…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 14. ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ‌. ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇವರು ಸೋಮವಾರದಂದು ಪತಿ ಹಾಗೂ ತನ್ನ ಮೊದಲ ಗಂಡನಿಗೆ ಜನಿಸಿದ 7 ವರ್ಷದ ಮಗಳೊಂದಿಗೆ ರೈಲಿನಲ್ಲಿ ಚಲಿಸುತ್ತಿದ್ದ ವೇಳೆ ದಂಪತಿ ರೈಲಿನ ಬಾಗಿಲಿನ ಹತ್ತಿರ ನಿಂತಿದ್ದರು. ಈ ವೇಳೆ ಪತಿಯು ಪತ್ನಿಯನ್ನೇ ಹೊರದಬ್ಬಿದ್ದಾನೆ. ಇದನ್ನು ಗಮನಿಸಿದ ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಮಹಿಳೆಯನ್ನು

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಳೆ (ಜ.15) ಸಚಿವರಾಗಿ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಭೇಟಿ ನೀಡಲಿರುವ ಎಸ್.ಅಂಗಾರ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 14. ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಹಾಗೂ ತನ್ನ ಕ್ಷೇತ್ರವಾದ ಸುಳ್ಯಕ್ಕೆ ಪ್ರಥಮ ಬಾರಿಗೆ ನಾಳೆ (ಜ. 15)ರಂದು ಆಗಮಿಸಲಿದ್ದಾರೆ. ನಾಳೆಯ ದಿನಚರಿ ಹೀಗಿದೆ:- ಬೆಳಗ್ಗೆ 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣ, ಮಧ್ಯಾಹ್ನ 12.00ಕ್ಕೆ ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ, ಮಧ್ಯಾಹ್ನ 12.15 ಕ್ಕೆ ಮಂಗಳೂರು ಸಂಘದ ಕಾರ್ಯಾಲಯ ಸಂಘನಿಕೇತನಕ್ಕೆ ಭೇಟಿ, ಮಧ್ಯಾಹ್ನ 12.30 ಕ್ಕೆ ಮಂಗಳೂರು ಜಿಲ್ಲಾ ಬಿಜೆಪಿ

ನಾಳೆ (ಜ.15) ಸಚಿವರಾಗಿ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಭೇಟಿ ನೀಡಲಿರುವ ಎಸ್.ಅಂಗಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುರಭಿ ಬಾರ್ ಗೆ ನುಗ್ಗಿದ ಕಳ್ಳರು ➤ ಮೂರು ಲಕ್ಷ ನಗದು ಹಾಗೂ ಮದ್ಯ ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.14. ಬಾರ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವುಗೈದ  ಘಟನೆ ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ನಡೆದಿದೆ. ಬಂಟ್ವಾಳದ ಸುರಭಿ ಎಂಬ ಹೆಸರಿನ ಬಾರ್‌ ಗೆ ಶಟರ್‌ ನ ಬೀಗ ಮುರಿದು ನುಗ್ಗಿದ ಕಳ್ಳರು ಕೌಂಟರ್‌ನಲ್ಲಿದ್ದ ಸುಮಾರು ಮೂರು ಲಕ್ಷ ರೂ. ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ನೇತೃತ್ವದ ತಂಡ ಭೇಟಿ ನೀಡಿ ಪ್ರಕರಣ

ಸುರಭಿ ಬಾರ್ ಗೆ ನುಗ್ಗಿದ ಕಳ್ಳರು ➤ ಮೂರು ಲಕ್ಷ ನಗದು ಹಾಗೂ ಮದ್ಯ ದೋಚಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರಿಂದ ನೂತನ ಸಚಿವ ಎಸ್.ಅಂಗಾರ ಅವರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ರಾಜ್ಯ ಸರಕಾರದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಜೊತೆಗೆ ಅವರ ಪತ್ನಿ ಡಾಟಿ ಸದಾನಂದ ಗೌಡ, ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ ಅವರೂ ಕೂಡಾ ಅಭಿನಮದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರಿಂದ ನೂತನ ಸಚಿವ ಎಸ್.ಅಂಗಾರ ಅವರಿಗೆ ಅಭಿನಂದನೆ Read More »

ಕರ್ನಾಟಕ

ಜ. 16ರಂದು ಕೋವಿಡ್ ಲಸಿಕೆ ವಿತರಿಸುವ ಹಿನ್ನೆಲೆ ➤ ಮಂಗಳೂರು ತಲುಪಿದ 42,500 ಕೋವಿಶೀಲ್ಡ್ ಲಸಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 14. ಜ. 16ರಿಂದ ಕೋವಿಡ್ ಲಸಿಕೆ ನೀಡಲಾಗುವುದರಿಂದ ಸೋಂಕು ವಿರೋಧಿ ಕೋವಿಶೀಲ್ಡ್ ಲಸಿಕೆಯು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ತಲುಪಿದ್ದು, ಜಿಲ್ಲಾ ಔಷಧ ಉಗ್ರಾಣದಲ್ಲಿ ದಾಸ್ತಾನಿರಿಸಲಾಗಿದೆ. ಇದರಲ್ಲಿ ಒಟ್ಟು 42,500 ಲಸಿಕೆಗಳಿದ್ದು, ದ.ಕ. ಜಿಲ್ಲೆಗೆ 24,500, ಚಿಕ್ಕಮಗಳೂರು ಜಿಲ್ಲೆಗೆ 6,000 ಹಾಗೂ ಉಡುಪಿಗೆ 12,000 ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಜ. 16ರಂದು ಕೋವಿಡ್ ಲಸಿಕೆ ವಿತರಿಸುವ ಹಿನ್ನೆಲೆ ➤ ಮಂಗಳೂರು ತಲುಪಿದ 42,500 ಕೋವಿಶೀಲ್ಡ್ ಲಸಿಕೆ Read More »

ಕರಾವಳಿ, ಕರ್ನಾಟಕ
Scroll to Top