ಸುರಭಿ ಬಾರ್ ಗೆ ನುಗ್ಗಿದ ಕಳ್ಳರು ➤ ಮೂರು ಲಕ್ಷ ನಗದು ಹಾಗೂ ಮದ್ಯ ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.14. ಬಾರ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವುಗೈದ  ಘಟನೆ ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ನಡೆದಿದೆ.

ಬಂಟ್ವಾಳದ ಸುರಭಿ ಎಂಬ ಹೆಸರಿನ ಬಾರ್‌ ಗೆ ಶಟರ್‌ ನ ಬೀಗ ಮುರಿದು ನುಗ್ಗಿದ ಕಳ್ಳರು ಕೌಂಟರ್‌ನಲ್ಲಿದ್ದ ಸುಮಾರು ಮೂರು ಲಕ್ಷ ರೂ. ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ನೇತೃತ್ವದ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top