ನಾಳೆ (ಜ.16) ಕೊರೋನಾ ಲಸಿಕೆ ವಿತರಣೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 15. ದೇಶದಾದ್ಯಂತ ನಾಳೆಯಿಂದ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದ್ದು, ಈ ಕುರಿತು ಕೇಂದ್ರ ಸರಕಾರ ಕೊರೋನಾ ಲಸಿಕಾ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಗಸೂಚಿಗಳು ಈ ರೀತಿಯಾಗಿದೆ:- ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ನೀಡುವಂತಿಲ್ಲ, ಹೈ ಬಿಪಿ, ಉಸಿರಾಟದ ತೊಂದರೆ ಇರುವವರ ಮೇಲೆ ನಿಗಾ ಇಡಲಾಗುತ್ತೆ, ಮೊದಲ ಬಾರಿ ಪಡೆದ ಲಸಿಕೆಯನ್ನೇ ಮತ್ತೊಂದು ಬಾರಿ ತೆಗೆದುಕೊಳ್ಳುವಂತದ್ದು, ಉದಾಹರಣೆಗೆ ಮೊದಲ ಬಾರಿ ಕೋವಾಕ್ಸಿನ್‌ ಲಸಿಕೆ ಸ್ವೀಕರಿಸಿದ್ದಲ್ಲಿ 2ನೇ ಬಾರಿಯೂ ಅದೇ ಕಂಪನಿಯ ಡೋಸ್‌ ತೆಗೆದುಕೊಳ್ಳಬೇಕು, ಮಕ್ಕಳಿಗೆ […]

ನಾಳೆ (ಜ.16) ಕೊರೋನಾ ಲಸಿಕೆ ವಿತರಣೆಗೆ ಚಾಲನೆ Read More »

ಕರಾವಳಿ

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ತಾಯಿ – ಮಗಳು ದುರ್ಮರಣ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜ.15. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಿದ್ದ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮೃತರನ್ನು ಮಡಿಕೇರಿ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಬಬಿತಾ ಹಾಗೂ ಪುತ್ರಿ ಪಲ್ಲವಿ ಎಂದು ಗುರುತಿಸಲಾಗಿದೆ. ವೆಂಕಟೇಶ್ ತನ್ನ ಕುಟುಂಬದೊಂದಿಗೆ ಕುಶಾಲನಗರ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮಡಿಕೇರಿ ಸಮೀಪದ ಬಾಳೆಕಾಡು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ವೆಂಕಟೇಶ್ ಈಜಿ ದಡ

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ತಾಯಿ – ಮಗಳು ದುರ್ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಬಕದಲ್ಲಿ ಚಿನ್ನಾಭರಣ ಕಳ್ಳತನ ➤ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 15. ಕಬಕದ ಮನೆಯೊಂದರಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕಬಕ ವಿದ್ಯಾಪುರ ನಿವಾಸಿ ಸಂಸೀರ್(23) ಹಾಗೂ ಮುಬಾರಕ್ (26) ಎಂದು ಗುರುತಿಸಲಾಗಿದೆ. ಉರಿಮಜಲು ನಿವಾಸಿ ಮೊಹಮ್ಮದ್ ನೌಫಲ್ ಅವರ ಪತ್ನಿ ರಝೀನ ಎಂಬವರು ಜ. 7 ರಂದು ಕಬಕದ ತನ್ನ ತಂದೆ ಮನೆಗೆ ಬಂದಿದ್ದು, ಚಿನ್ನವನ್ನು ಬೀರುವಿನಲ್ಲಿಟ್ಟಿದ್ದರು. ಆದರೆ ಜ. 10ರಂದು ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರ

ಕಬಕದಲ್ಲಿ ಚಿನ್ನಾಭರಣ ಕಳ್ಳತನ ➤ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೆಚ್ಚಿದ ಲೋನ್ ಆ್ಯಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳದ ➤ ನೂರಾರು ಆ್ಯಪ್ ಗಳನ್ನು ರದ್ದು ಮಾಡಿದ ಪ್ಲೇಸ್ಟೋರ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 15. ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಲೋನ್ ಆಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಬಳಕೆದಾರರ ದೂರುಗಳು ಮತ್ತು ಸರ್ಕಾರ ನೀಡಿದ ಎಚ್ಚರಿಕೆಯ ನೆಲೆಯಲ್ಲಿ ವೈಯಕ್ತಿಕ ಲೋಲ್ ಆಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ತಿಳಿಸಿದೆ. ಇಂತಹ ಆ್ಯಪ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರಚನೆ ಮಾಡಿ

ಹೆಚ್ಚಿದ ಲೋನ್ ಆ್ಯಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳದ ➤ ನೂರಾರು ಆ್ಯಪ್ ಗಳನ್ನು ರದ್ದು ಮಾಡಿದ ಪ್ಲೇಸ್ಟೋರ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾರಿ- ಟೆಂಪೊ ನಡುವೆ ಭೀಕರ ಅಪಘಾತ ➤ 11 ಮಂದಿಯ ದುರ್ಮರಣ

(ನ್ಯೂಸ್ ಕಡಬ) newskadaba.com ಧಾರವಾಡ, ಜ. 15. ಟೆಂಪೋ ಹಾಗೂ ಲಾರಿಯ ನಡುವೆ ಢಿಕ್ಕಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟ ಘಟನೆ ತಾಲ್ಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ನಸುಕಿನ ಜಾವ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಹಾಗೂ ಲಾರಿ ನಡುವೆ ಧಾರವಾಡ ಸಮೀಪ ಈ ಅಪಘಾತ ಸಂಭವಿಸಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಲಾರಿ- ಟೆಂಪೊ ನಡುವೆ ಭೀಕರ ಅಪಘಾತ ➤ 11 ಮಂದಿಯ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದುರ್ಮರಣ

(ನ್ಯೂಸ್ ಕಡಬ) newskadaba.com ಮುಂಬೈ, ಜ. 15.‌ ಗಾಳಿಪಟ ಹಾರಿಸುವ ವೇಳೆ ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕಾಂಡಿವಾಲಿ ಎಂಬಲ್ಲಿ ನಡೆದಿದೆ. ಬಾಲಕ ಗಾಳಿಪಟ ಹಾರಿಸುತ್ತಿದ್ದ ವೇಳೆ ದಾರ ಕತ್ತರಿಸಲ್ಪಟ್ಟು ಅದು ಸೆಗಣಿ ಗುಂಡಿಗೆ ಬಿದ್ದಿತ್ತು. ಅದನ್ನು ಮೇಲೆತ್ತಲೆಂದು ಬಾಲಕ ಬಗ್ಗಿದಾಗ ಆಕಸ್ಮತ್ತಾಗಿ ಗುಂಡಿಗೆ ಬಿದ್ದಿದ್ದಾನೆ. ಸಮೀಪದಲ್ಲಿಯೇ ಕಟ್ಟಡ ಕಾರ್ಮಿಕರು ಬಾಲಕನ ಬೊಬ್ಬೆ ಕೇಳಿ ಓಡಿ ಬಂದರೂ ಗುಂಡಿಯಿಂದ ಮೇಲೆತ್ತಲು ಸಾಧ್ಯವಾಗಿಲ್ಲ. ಗುಂಡಿ ಬಹಳ ಆಳವಾಗಿದ್ದು, ಊರವರು, ಪೊಲೀಸರು ಮತ್ತು

ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದುರ್ಮರಣ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಅಕ್ರಮ ಮರಳುಗಾರಿಕೆ ➤ ಅನಧಿಕೃತ ರಸ್ತೆಗಳನ್ನು ಮುಚ್ಚಿಸಿ ಕಡಬ ಎಸ್.ಐ ರುಕ್ಮ ನಾಯಕ್ ಅವರಿಂದ ಖಡಕ್ ವಾರ್ನಿಂಗ್

(ನ್ಯೂಸ್ ಕಡಬ) newskadaba.com ಕಡಬ, ಜ. 15. ತಾಲೂಕಿನ ಇಚಿಲಂಪಾಡಿ ಸೇತುವೆ ಸಮೀಪದಿಂದ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಇದೀಗ ಕಡಬ ಠಾಣಾ ಎಸ್.ಐ ರುಕ್ಮ ನಾಯಕ್ ಬ್ರೇಕ್ ಹಾಕಿದ್ದಾರೆ. ಕಳೆದ ಒಂದು ತಿಂಗಳಿನಿಂದ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೂ ಗ್ರಾ.ಪಂ ಅಧಿಕಾರಿಗಳಾಗಲಿ, ಕಂದಾಯ ಇಲಾಖೆಯಾಗಲಿ ತಡೆಯುವಲ್ಲಿ ಸಫಲವಾಗಿಲ್ಲ. ಮರಳು ಸಾಗಾಟಗಾರರು ಪೊಲೀಸರ ಹೆಸರು ದುರ್ಬಳಕೆ ಮಾಡಿಕೊಂಡು ವಾಹನಗಳಲ್ಲಿ ನಿರಂತರ ಮರಳು ಸಾಗಾಟದಲ್ಲಿ ನಿರತರಾಗಿದ್ದರು. ಈ ವಿಚಾರ ಸಾರ್ವಜನಿಕರ ಮೂಲಕ ಪೊಲೀಸ್

ಕಡಬ: ಅಕ್ರಮ ಮರಳುಗಾರಿಕೆ ➤ ಅನಧಿಕೃತ ರಸ್ತೆಗಳನ್ನು ಮುಚ್ಚಿಸಿ ಕಡಬ ಎಸ್.ಐ ರುಕ್ಮ ನಾಯಕ್ ಅವರಿಂದ ಖಡಕ್ ವಾರ್ನಿಂಗ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಳಿಯಾರು ಸೇತುವೆ ಬಳಿ ಸತ್ತ ಕುರಿಯನ್ನು ಬಿಸಾಕಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬಿಳಿಯಾರು, ಜ. 15. ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ವಾರದ ಐದು ದಿನವು ಎಸ್.ಎಲ್.ಆರ್.ಎಮ್ ತಂಡವು ಸ್ವಚ್ಛತೆಯನ್ನು ಮಾಡುತ್ತಾ ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ತರಕಾರಿ ಸಾಗಾಟಗಾರರು ಕೋಳಿ ಸಾಗಾಟಗಾರರು ಜನರ ವಾಸವಿಲ್ಲದ ಸ್ಠಳಗಳಲ್ಲಿ ಕೊಳೆತ ವಸ್ತುವನ್ನು ಬಿಸಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಅರಂತೋಡು ಕುಲ್ಚಾರ್ ಸೇತುವೆಯ ಬಳಿ ದುರ್ನಾತ ಬೀರುವ ಕಟ್ಟೊಂದು ಪತ್ತೆಯಾಗಿದೆ. ಪಂಚಾಯತ್ ಸದಸ್ಯ ಪುಷ್ಪಾಧರ್ ಎಂಬವರ ಗಮನಕ್ಕೆ ತಂದು ಅವರು ಸ್ಥಳೀಯರೊಂದಿಗೆ ತೆರಳಿ ಗ್ರಾಮ ಪಂಚಾಯತ್ ಪಿಡಿಓ ಮುಖಾಂತರ ಸುಳ್ಯ ಪೋಲಿಸರಿಗೆ

ಬಿಳಿಯಾರು ಸೇತುವೆ ಬಳಿ ಸತ್ತ ಕುರಿಯನ್ನು ಬಿಸಾಕಿದ ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ

(ನ್ಯೂಸ್ ಕಡಬ) newskadaba.com ಪಾಟ್ನಾ, ಜ. 15. ಇಪ್ಪತ್ತು ತಿಂಗಳ ಮಗುವಿನ ಅಂಗಾಗಳನ್ನು ದಾನ ಮಾಡುವ ಮೂಲಕ ದೇಶದ ಅತೀ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ. ದಿಲ್ಲಿಯ ಒಂದು ದಂಪತಿಯ 20 ತಿಂಗಳ ಧನಿಷ್ಠಾ ಎಂಬ ಮಗುವೊಂದು ಜನವರಿ 8ರ ಸಂಜೆ ಮನೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಆಡುತ್ತಿದ್ದ ಸಂದರ್ಭ ಕೆಳಗೆ ಬಿದ್ದಿತ್ತು. ತಕ್ಷಣವೇ ಮಗುವನ್ನು ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಆದರೆ, ಜನವರಿ 11ರಂದು ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದರು. ಧನಿಷ್ಟಾಳಿಗೆ ಚಿಕಿತ್ಸೆ ಮುಂದುವರಿದಿದ್ದರೂ

ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್…!

(ನ್ಯೂಸ್ ಕಡಬ) newskadaba.com ಲಕ್ನೋ, ಜ. 15. ಸಹೋದ್ಯೋಗಿಯೋರ್ವ ತನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾನ್‌ಸ್ಟೇಬಲ್ ದೂರು ದಾಖಲಿಸಿದ್ದಾರೆ. ಪೊಲೀಸ್ ಕಾನ್ ಸ್ಟೇಬಲ್ ಓರ್ವ ತನ್ನ ಮನೆಯನ್ನು ತೋರಿಸುವುದಾಗಿ ಹೇಳಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದು, ಅಲ್ಲದೇ ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಕೆ ನೀಡಿದ್ದಾನೆ ಎಂದು ಮಹಿಳಾ ಕಾನ್ ಸ್ಟೇಬಲ್ ದೂರು ನೀಡಿದ್ದಾರೆ. ಆರೋಪಿ ಪೊಲೀಸ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top