➤➤Breaking News? ಉಳ್ಳಾಲ: ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆತಂದ ಕಾರು ಚಾಲಕ ಸಮುದ್ರಪಾಲು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 15. ಉಳ್ಳಾಲ ಸಮ್ಮರ್ ಸ್ಟ್ಯಾಂಡ್ ಬೀಚ್ ರೆಸಾರ್ಟ್ ಗೆಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ಕಾರಿನ ಚಾಲಕ ಸಮುದ್ರ ಪಾಲಾದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ನಾಗರಾಜ್ (31) ಎಂದು ಗುರುತಿಸಲಾಗಿದೆ. ಈತ ಕ್ಯಾಬ್ ಚಾಲಕನಾಗಿದ್ದು, ಇಂದು ಮಧ್ಯಾಹ್ನ ಬೆಂಗಳೂರಿನಿಂದ ಪ್ರವಾಸಿಗರನ್ನು ಉಳ್ಳಾಲದ ಸಮ್ಮರ್ ಸ್ಟ್ಯಾಂಡ್ ಬೀಚ್ ಗೆ ಕರೆದುಕೊಂಡು ಬಂದಿದ್ದರೆನ್ನಲಾಗಿದೆ. ಇವರು ಸಮುದ್ರಕ್ಕಿಳಿದು ಆಟವಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು […]

➤➤Breaking News? ಉಳ್ಳಾಲ: ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆತಂದ ಕಾರು ಚಾಲಕ ಸಮುದ್ರಪಾಲು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಾರಕಾಸ್ತ್ರಗಳಿಂದ ಕೊಚ್ಚಿ ಸಹೋದರರಿಬ್ಬರ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಜ. 15. ಹಳೆ ವೈಷಮ್ಯದ ಕಾರಣ ಇಬ್ಬರು ಸಹೋದರರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಎಂಬಲ್ಲಿ ನಡೆದಿದೆ. ಮೃತರನ್ನು ನಿಲೇಶ್(39) ಹಾಗೂ ರಾಜಶೇಖರ (35) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದು, ಕೊಲೆಗೆ ಹಳೆ ವೈಷಮ್ಯವೇ ಕಾರಣವೆಂದು ಶಂಕಿಸಲಾಗಿದೆ. ಸದ್ಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಸಹೋದರರಿಬ್ಬರ ಬರ್ಬರ ಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ

(ನ್ಯೂಸ್ ಕಡಬ) newskadaba.com ಪಂಜ, ಜ. 15. ಇಲ್ಲಿನ ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದು ಭೇಟಿ ನೀಡಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಅವರನ್ನು ಶಾಲು ಹೊದಿಸುವ ಮೂಲಕ ಗೌರವಿಸಿದರು. ಈ ಸಂದರ್ಭದಲ್ಲಿ ಶಿವರಾಮಯ್ಯ ಕರ್ಮಾಜೆ, ಲಿಗೋಧರ ಆಚಾರ್ಯ, ಕಾರ್ಯಪ್ಪ ಗೌಡ ಚಿದ್ಗಲ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ ರೆಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್

ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ Read More »

ಕರಾವಳಿ, ಕರ್ನಾಟಕ

ಜ. 17: ದ.ಕ ಜಿಲ್ಲಾ ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ನೇತ್ರ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರಕ್ಷಣಾ ಪಡೆ  ಹಾಗೂ  ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ (Human Rights Federation of India) ಇದರ ಸಂಯುಕ್ತ ಆಶ್ರಯದಲ್ಲಿ  ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ (ಜ. 17) ಭಾನುವಾರದಂದು ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರು ಇಲ್ಲಿ  ಬೆಳಗ್ಗೆ 9.30 ರಿಂದ 1.30 ರವರೆಗೆ ನೇತ್ರ ತಪಾಸಣಾ ಶಿಬಿರ

ಜ. 17: ದ.ಕ ಜಿಲ್ಲಾ ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ನೇತ್ರ ತಪಾಸಣಾ ಶಿಬಿರ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 15. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮಂಗಲ್ಪಾಡಿ ಚುಕ್ರಿಯಡ್ಕದ ಅಬ್ದುಲ್ ಫಯಾಜ್ (22) ಎಂದು ಗುರುತಿಸಲಾಗಿದೆ. ಈತ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಸಂಶಯಗೊಂಡ ಅಬಕಾರಿ ದಳದ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಈತನ ಬಳಿ 128 ಗ್ರಾಂ ಗಾಂಜಾ ಪತ್ತೆಯಾಗಿದೆ. ಈತನ ಜೊತೆಗಿದ್ದ ಮತ್ತೋರ್ವ ನೌಫಾಲ್ ಎಂಬಾತ ಪರಾರಿಯಾಗಾಗಿದ್ದಾನೆ.  

ಕಾಸರಗೋಡು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 15. ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಸ್ಥಳೀಯರು ಹಿಡಿದು ಧರ್ಮದೇಟು ನೀಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಟ್ಯದಲ್ಲಿ ನಡೆದಿದೆ. ಆರೋಪಿ ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಪ್ರಾಪ್ತ ಬಾಲಕನಾಗಿದ್ದು, ಈತನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈತ ಬೆಳಗ್ಗಿನ ಹೊತ್ತಲ್ಲಿ ಸ್ಕೂಟರಿನಲ್ಲಿ ಬಂದು ಕಾಲೇಜು ಹಾಗೂ ಹೈಸ್ಕೂಲ್ ಗೆ ತೆರಳುವ ಹುಡುಗಿಯರ ಎದೆ ಹಾಗೂ ಹಿಂಬಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದು, ಇದಕ್ಕೆ ಹೆದರಿದ

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಅಪ್ರಾಪ್ತ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಒಳ ಉಡುಪಿನಲ್ಲಿ 2 ಕೆ.ಜಿ ಅಕ್ರಮ ಚಿನ್ನ ಸಾಗಾಟ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ಒಳುಡುಪಿನಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿಗಳನ್ನು ಕಾಸರಗೋಡಿನ ಫೈಝಲ್ ತೊಟ್ಟಿ ಮೇಲ್ಪರಂಬ(37) ಹಾಗೂ ಮೊಹಮ್ಮದ್ ಶುಹೈಬ್(31) ಎಂದು ಗುರುತಿಸಲಾಗಿದೆ. ಇವರಿಬ್ಬರು ಶಾರ್ಜಾದಿಂದ ಮಂಗಳೂರಿಗೆ ಬಂದಿಳಿದಿದ್ದು, ಸಂಶಯದ ಮೇರೆಗೆ ಇವರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ 24 ಕ್ಯಾರೆಟ್ ನ 2.154 ಕೆ.ಜಿ ಚಿನ್ನ ಪತ್ತೆಯಾಗಿದೆ. ಇದೀಗ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, 1.09 ಕೋ.ರೂ

ಮಂಗಳೂರು: ಒಳ ಉಡುಪಿನಲ್ಲಿ 2 ಕೆ.ಜಿ ಅಕ್ರಮ ಚಿನ್ನ ಸಾಗಾಟ ➤ ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: 1490 ಕೋವಿಡ್ ಲಸಿಕೆ ಪೂರೈಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 15. ಕೊರೋನಾ ವಿರೋಧಿ ಲಸಿಕಾ ವಿತರಣೆ ಎಲ್ಲೆಡೆ ಆರಂಭವಾಗಿದ್ದು, ಸುಳ್ಯದ ತಾಲೂಕು ಕೇಂದ್ರಕ್ಕೂ 1490 ಲಸಿಕೆಗಳು ಬಂದು ತಲುಪಿವೆ. ಈಗಾಗಲೇ ಸುಳ್ಯದಲ್ಲಿ ಲಸಿಕೆ ಪಡೆಯುವವರ ಪಟ್ಟಿ ಸಿದ್ದಪಡಿಸಿದ್ದು, ಸರಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಸಿಬ್ಬಂದಿಗಳಿಗೆ ಸೇರಿ 100 ಮಂದಿಗೆ ವಿತರಣೆಯಾಗಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳು ಸೇರಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ

ಸುಳ್ಯ: 1490 ಕೋವಿಡ್ ಲಸಿಕೆ ಪೂರೈಕೆ Read More »

ಕರಾವಳಿ, ಕರ್ನಾಟಕ

ಉಡುಪಿ: ಹಾವು ಕಡಿದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಶಂಕರನಾರಾಯಣ, ಜ. 15. ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಂದಾಪುರದ ಹೆಂಗವಳ್ಳಿಯಲ್ಲಿ ನಡೆದಿದೆ. ಮೃತರನ್ನು ಮುಹಮ್ಮದ್ ಆಲಂ ಎಂದು ಗುರುತಿಸಲಾಗಿದೆ‌. ಹೆಂಗವಳ್ಳಿ ನಿವಾಸಿಯೋರ್ವರ ಮನೆ ಸಮೀಪ ಹಾವನ್ನು ಹಿಡಿಯುತ್ತಿದ್ದ ವೇಳೆ ಹಾವು ಕಚ್ಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆನ್ನಲಾಗಿದೆ.

ಉಡುಪಿ: ಹಾವು ಕಡಿದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನೂತನ ಸಚಿವ ಎಸ್.ಅಂಗಾರಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 15. ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅಂಗಾರ ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಮೇಯರ್ ದಿವಾಕರ್ ಪಾಂಡೇಶ್ವರ, ಶಾಸಕರಾದ ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ ಮೊದಲಾದವರು ಬರಮಾಡಿಕೊಂಡರು.

ಮಂಗಳೂರು: ನೂತನ ಸಚಿವ ಎಸ್.ಅಂಗಾರಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ Read More »

ಕರಾವಳಿ, ಕರ್ನಾಟಕ
Scroll to Top