ಕೆಎಸ್ಸಾರ್ಟಿಸಿ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ➤ ಪ್ರಯಾಣಿಕ ಮಹಿಳೆ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 30. ಕೆಎಸ್ಸಾರ್ಟಿಸಿ ಬಸ್ ಚಾಲಕನೋರ್ವ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಹೊರಕ್ಕೆಸೆಯಲ್ಪಟ್ಟು ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕರವೀರ ಅಂಗನವಾಡಿ ಬಳಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ಬಂಟ್ವಾಳ ತಾಲೂಕು ಕೇಪು ಗ್ರಾಮದ ಮೈರಕವೀರದವರಾದ ಪುಷ್ಪಾವತಿ ಎಂದು ಗುರುತಿಸಲಾಗಿದೆ. ಇವರು ಫೋಟೋ ತೆಗೆಸಲೆಂದು ವಿಟ್ಲ ಪೇಟೆಗೆ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹೋಗಿ ವಾಪಸು […]

ಕೆಎಸ್ಸಾರ್ಟಿಸಿ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ➤ ಪ್ರಯಾಣಿಕ ಮಹಿಳೆ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ತಾಲೂಕು ಆರೋಗ್ಯಾಧಿಕಾರಿ ನಾಳೆ (ಜ. 31) ಸೇವೆಯಿಂದ ನಿವೃತ್ತಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 30. ತಾಲೂಕು ಆರೋಗ್ಯಾಧಿಕಾರಿಯಾಗಿ 2010ರಿಂದ ಕರ್ತವ್ಯದಲ್ಲಿದ್ದ ಡಾ.ಸುಬ್ರಹ್ಮಣ್ಯ ಎಂ.ಆರ್ ಅವರು ನಾಳೆ(ಜ. 31) ನಿವೃತ್ತಿ‌ ಹೊಂದಲಿದ್ದಾರೆ. ಕುಕ್ಕೇ ಸುಬ್ರಹ್ಮಣ್ಯದವರಾದ ಇವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಲ್ಲೇ ಪಡೆದು, ವೈದ್ಯಕೀಯ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. ಎಂ.ಬಿ.ಬಿ.ಎಸ್ ಬಳಿಕ ಮಂಡ್ಯದಲ್ಲಿ ಕೆಲ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. 1995ರಲ್ಲಿ ಸರಕಾರಿ ಸೇವೆಗೆ ನೇಮಕಾತಿ ಪಡೆದ ಇವರು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಬಳಿಕ 2006ರಲ್ಲಿ ತಾಲೂಕು

ಸುಳ್ಯ: ತಾಲೂಕು ಆರೋಗ್ಯಾಧಿಕಾರಿ ನಾಳೆ (ಜ. 31) ಸೇವೆಯಿಂದ ನಿವೃತ್ತಿ Read More »

ಕರಾವಳಿ, ಕರ್ನಾಟಕ

ಪ.ಜಾ/ ಪ.ಪಂಗಡದ ಅರ್ಹ ಕ್ರೀಡಾಪಟುಗಳಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಪ್ರಸ್ತುತ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ/ಅಂತರಾಜ್ಯ/ ಅಂತರ-ವಿಶ್ವವಿದ್ಯಾಲಯ/ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗಣನೀಯ ಸಾಧನೆ ದಾಖಲಿಸಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ (ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ) ನೋಂದಾಯಿತ ಕ್ರೀಡಾ ವಿಜ್ಞಾನ ಸಂಸ್ಥೆಗಳಲ್ಲಿ ಸೇವೆಯನ್ನು ಪಡೆಯಲು ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕ್ರೀಡಾಪಟುಗಳು ತಮ್ಮ ಹಿಂದಿನ ಕ್ಯಾಲೆಂಡರ್ ವರ್ಷದ

ಪ.ಜಾ/ ಪ.ಪಂಗಡದ ಅರ್ಹ ಕ್ರೀಡಾಪಟುಗಳಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪ.ಜಾ/ ಪ.ಪಂಗಡದ ಸಂಘ ಸಂಸ್ಥೆಗಳಿಂದ ಸಹಾಯಧನಕ್ಕೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಪ್ರಸ್ತುತ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಹೊಸದಾಗಿ ನೋಂದಾವಣಿಗೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನ ಸಂಘ ಸಂಸ್ಥೆಗಳಿಗೆ ಸಹಾಯಧನ ಹಾಗೂ ಕ್ರೀಡಾಗಂಟು ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು

ಪ.ಜಾ/ ಪ.ಪಂಗಡದ ಸಂಘ ಸಂಸ್ಥೆಗಳಿಂದ ಸಹಾಯಧನಕ್ಕೆ – ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಸಸಿ/ ಕಸಿ ಗಿಡಗಳ ಸರಬರಾಜು – ಖಾಸಗಿ ನರ್ಸರಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ ಪೌಷ್ಠಿಕ ತೋಟ ನಿರ್ಮಿಸಲು ವಿವಿಧ ಜಾತಿಯ ತೋಟಗಾರಿಕೆ ಸಸಿಗಳನ್ನು  ಸರಬರಾಜು ಮಾಡಲು ಅರ್ಹ ಖಾಸಗಿ ನರ್ಸರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನ. ಸರಬರಾಜು ಮಾಡಲು ಸಿದ್ದರಿರುವ ಹಾಗೂ ಉತ್ತಮ ಗುಣಮಟ್ಟದ ಸಸಿ /ಕಸಿ ಗಿಡಗಳ ಸಾಕಷ್ಟು ದಾಸ್ತಾನು ಹೊಂದಿರುವ ಖಾಸಗಿ ನರ್ಸರಿಗಳು ನುಗ್ಗೆ, ನಿಂಬೆ, ಕರಿಬೇವು, ಪಪ್ಪಾಯ, ಸೀಬೆ, ಮಾವು(ಕಸಿ),

ಸಸಿ/ ಕಸಿ ಗಿಡಗಳ ಸರಬರಾಜು – ಖಾಸಗಿ ನರ್ಸರಿಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ ಪ್ರವಾಸ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 30. ಮುಜರಾಯಿ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರು ಜನವರಿ 30 ಹಾಗೂ 31 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜನವರಿ 30 ರಂದು ಮಧ್ಯಾಹ್ನ 12.30ಕ್ಕೆ ಪಜೀರು ಗ್ರಾಮದ ಕೆ.ಐ.ಎ.ಡಿ.ಬಿ., ಕಂಬ್ಲಪದವು ಹತ್ತಿರ  ಭಾರಿ ವಾಹನ ಚಾಲನಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಲಿದ್ದಾರೆ. ಜನವರಿ 31

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ ಪ್ರವಾಸ Read More »

ಕರಾವಳಿ, ಕರ್ನಾಟಕ

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.31ರಿಂದ ಫೆ. 07ರವರೆಗೆ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಕಳೆದ ಕೆಲವು ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿಬರುತ್ತಿದ್ದರೂ ಯಾರೂ ಇದನ್ನು ಪರಿಗಣಿಸದೇ ಇರುವುದರ ಹಿನ್ನೆಲೆ ನಿಷೇಧ ಹೇರಿದರೂ ಕಂಡಕಂಡಲ್ಲಿ ಪ್ಲಾಸ್ಟಿಕ್ ಬಿಸಾಡುವುದನ್ನು ವಿರೋಧಿಸಿ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯನ್ನು ಸುಳ್ಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ಸುಳ್ಯ ವಲಯ ವತಿಯಿಂದ ‘ಶುಚಿಯಾದ ಪರಿಸರಕ್ಕಾಗಿ ನಾಳಿನ ತಲೆಮಾರಿಗಾಗಿ ಪ್ಲಾಸ್ಟಿಕ್ ಮುಕ್ತರಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಜ.31ರಿಂದ ಫೆ.7 ರ ವರೆಗೆ ನಡೆಯಲಿದೆ. ಜನವರಿ 31 ರಂದು ಸುಳ್ಯದ ಎಲಿಮಲೆಯಲ್ಲಿ ದ.ಕ.ಜಿಲ್ಲಾ ವಿಖಾಯ ಚೇರ್ಮನ್

ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.31ರಿಂದ ಫೆ. 07ರವರೆಗೆ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ Read More »

ಕರಾವಳಿ, ಕರ್ನಾಟಕ

ಕಲಾಪದ ವೇಳೆ ಬ್ಲೂಫಿಲಂ ವೀಕ್ಷಿಸಿದ ಕಾಂಗ್ರೆಸ್ ಶಾಸಕ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಮೊಬೈಲ್‌ ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿದ್ದ ವೇಳೆ ಕಾಂಗ್ರೆಸ್​ ಎಂ.ಎಲ್​.ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯವು ಇದೀಗ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯ ಕುರಿತು ಮಾತನಾಡಿದ ಪ್ರಕಾಶ್ ರಾತೋಡ್, ನಾನು ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ

ಕಲಾಪದ ವೇಳೆ ಬ್ಲೂಫಿಲಂ ವೀಕ್ಷಿಸಿದ ಕಾಂಗ್ರೆಸ್ ಶಾಸಕ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೇ 24ರಿಂದ ಜೂನ್.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ➤ ವೇಳಾಪಟ್ಟಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ವೇಳಾಪಟ್ಟಿಯು ಬಿಡುಗಡೆಯಾಗಿದ್ದು, ಮೇ.24 ರಿಂದ ಜೂನ್ 10ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೇ. 24ರಂದು ಭೌತಶಾಸ್ತ್ರ ಮತ್ತು ಇತಿಹಾಸ, ಮೇ 25ರಂದು ಮೈನಾರಿಟಿ ಲ್ಯಾಂಗ್ವೇಜಸ್, ಮೇ. 26 ಬೇಸಿಕ್ ಮ್ಯಾತ್ಸ್ ಮತ್ತು ಲಾಜಿಕ್ ಹೋಮ್ ಸೈನ್ಸ್, ಮೇ.27 ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ ಮೇ. 28 ಉರ್ದು, ಮೇ. 29 ರಾಜ್ಯ ಶಾಸ್ತ್ರ, ಮೇ 31

ಮೇ 24ರಿಂದ ಜೂನ್.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ➤ ವೇಳಾಪಟ್ಟಿ ಬಿಡುಗಡೆ Read More »

ಕರ್ನಾಟಕ

ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ಅಣ್ಣಾ ಹಜಾರೆ ನಾಳೆಯಿಂದ ಉಪವಾಸ ಸತ್ಯಾಗ್ರಹ..!

(ನ್ಯೂಸ್ ಕಡಬ) newskadaba.com ಅಹಮದ್ ನಗರ, ಜ. 29. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾಹಝಾರೆ ಅವರು ನಾಳೆಯಿಂದ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೇ ತಾವಿರುವ ಪ್ರದೇಶಗಳಿಂದಲೇ ರೈತರ ಪರವಾಗಿ ಪ್ರತಿಭಟನೆ ನಡೆಸುವಂತೆ ಅವರು ತಮ್ಮ ಬೆಂಬಲಿಗರಲ್ಲಿ ವಿನಂತಿಸಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ಅಣ್ಣಾ ಹಜಾರೆ ನಾಳೆಯಿಂದ ಉಪವಾಸ ಸತ್ಯಾಗ್ರಹ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top