ಮಂಗಳೂರು: ಮುಕುಂದ್ ರಿಯಾಲ್ಟಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ ಯೋಜನೆಯ ಅನಾವರಣ

(ನ್ಯೂಸ್‌ ಕಡಬ) newskadaba.com,ಜ.29  ಮಂಗಳೂರು: ಮಂಗಳೂರಿನ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿ ಅತ್ಯಪೂರ್ವ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್‌ನ ನೂತನ ಯೋಜನೆಯನ್ನು ತಣ್ಣೀರುಬಾವಿ ಬೀಚ್‌ನಲ್ಲಿ ಜರುಗಿದ ಡೆನ್ ಡೆನ್ ಅಂತಾರಾಷ್ಟ್ರೀಯ ಮುಕ್ತ ಈಜು ಚಾಂಪಿಯನ್‌ಶಿಪ್ ಸಂದರ್ಭ ಸಾಂಕೇತಿಕವಾಗಿ ಗಾಳಿಪಟ ಹಾರಿಸುವ ಮೂಲಕ ಅನಾವರಣಗೊಳಿಸಲಾಯಿತು. ಆಹ್ವಾನಿತ ಅತಿಥಿಗಳು, ಕ್ರೀಡಾಪಟುಗಳು ಮತ್ತು ಸಂಸ್ಥೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಮತ್ತು ಮಂಗಲದೀಪ್ ಎ.ಆರ್. ನೇತೃತ್ವದಲ್ಲಿ ರುದ್ರಾಕ್ಷ್ ಯೋಜನೆಯ ಮಾಹಿತಿ ಪತ್ರ ಅನಾವರಣಗೊಳಿಸಲಾಯಿತು. […]

ಮಂಗಳೂರು: ಮುಕುಂದ್ ರಿಯಾಲ್ಟಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ ಯೋಜನೆಯ ಅನಾವರಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ನಿಗೂಢವಾಗಿ ಕಣ್ಮರೆಯಾದ ವ್ಯಕ್ತಿ

(ನ್ಯೂಸ್‌ ಕಡಬ) newskadaba.com,ಜ.29  ಬೆಳ್ತಂಗಡಿ: ಬೆಳ್ತಂಗಡಿಯ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಪತ್ತೆಯಾದವರನ್ನು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ದೇವಸ್ಯ ನಿವಾಸಿ ರೋಶನ್ ಕಿರಣ್ ಡಿಸೋಜಾ (36) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿಯ ಚರ್ಚ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ಪಿಕಪ್ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು.ಬೆಂಗಳೂರಿನಲ್ಲಿದ್ದ ತಮ್ಮ ಪತ್ನಿಗೆ ಕರೆ ಮಾಡಿದ್ದ ರೋಶನ್, ಜನವರಿ 25 ರಂದು ತಾವು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಅಂದು ಬೆಳಿಗ್ಗೆ ಬೆಂಗಳೂರಿಗೆ

ಬೆಳ್ತಂಗಡಿ: ನಿಗೂಢವಾಗಿ ಕಣ್ಮರೆಯಾದ ವ್ಯಕ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ದುರ್ಮರಣ

(ನ್ಯೂಸ್‌ ಕಡಬ) newskadaba.com,ಜ.29  ಮಂಗಳೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಕೊಕ್ಕರಕಲ್ ಎಂಬಲ್ಲಿ ನಡೆದಿದೆ…..ಮೃತರನ್ನು ಚಿತ್ರಾಪು ಮರ್ಕುಂಜ ನಿವಾಸಿ ವನಜಾ ಪುರುಷೋತ್ತಮ ಪೂಜಾರಿ (59) ಎಂದು ಗುರುತಿಸಲಾಗಿದೆ. ವನಜಾ ಅವರು ಜೆಸಿಂತಾ ಮಚಾದೊ ಎಂಬವರ ಜೊತೆ ಕೊಕ್ಕರಕಲ್ ಸಮೀಪವಿರುವ ಹಾಲು ಸೊಸೈಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ದುರ್ಮರಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐವರ್ನಾಡು : ಕೃಷಿ ತೋಟಕ್ಕೆ ಕಾಡಾನೆ ಧಾಳಿ – ಅಪಾರ ಕೃಷಿ ನಾಶ

(ನ್ಯೂಸ್‌ ಕಡಬ) newskadaba.com,ಜ.29  ಸುಳ್ಯ:ಐವರ್ನಾಡು ಗ್ರಾಮದ ಉದ್ದಂಪಾಡಿ ಎಂಬಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆ ಧಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ನಡೆದಿದೆ. ಉದ್ದಂಪಾಡಿ ಹೊನ್ನಪ್ಪ ನಾಯ್ಕ್ ಮತ್ತು ಕರುಣಾಕರ ನಾಯ್ಕ್ ಎಂಬವರ ಕೃಷಿ ತೋಟಕ್ಕೆ ಭಾನುವಾರ ರಾತ್ರಿ ಆನೆಗಳು ಧಾಳಿ ಮಾಡಿ ಅಪಾರ ಕೃಷಿ ನಾಶಮಾಡಿದೆ. ಅಡಕೆ ಗಿಡ, ಬಾಳೆ ,ತೆಂಗಿನ ಗಿಡಗಳನ್ನು ಪುಡಿಗಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಐವರ್ನಾಡು : ಕೃಷಿ ತೋಟಕ್ಕೆ ಕಾಡಾನೆ ಧಾಳಿ – ಅಪಾರ ಕೃಷಿ ನಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನಿಧನ

(ನ್ಯೂಸ್‌ ಕಡಬ) newskadaba.com,ಜ.29  ಬೆಂಗಳೂರು: ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.‌ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅನಂತ್ ಸುಬ್ಬರಾವ್ ಅವರಿಗೆ ಬೆಂಗಳೂರಿನ ತಮ್ಮ ಮನೆಯಲ್ಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು.ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು

ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೈವಗಳ ಮೂರ್ತಿಗಳು, ಬೆಲೆಬಾಳುವ ವಸ್ತುಗಳ ಕಳವು ಆರೋಪ- ಇಬ್ಬರು ಆರೆಸ್ಟ್

(ನ್ಯೂಸ್‌ ಕಡಬ) newskadaba.com,ಜ.29  ಮಂಗಳೂರು: ಕುಳಾಯಿ ಗ್ರಾಮದ ಬೀಗ ಹಾಕಿದ ಮನೆಯಿಂದ ದೈವದ ಮೂರ್ತಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಸುಮಾರು 1.95 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಸೈಯದ್ ಅಲಿ (40), ಬಜ್ಪೆ ನಿವಾಸಿ ವಾಜಿದ್ ಜೆ ಅಲಿಯಾಸ್ ವಾಜಿ (27) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಕುಳಾಯಿ ಗ್ರಾಮದ ಯಶೋದಾ ಕ್ಲಿನಿಕ್ ಬಳಿಯ ನಿವಾಸಿ ಸುರೇಶ್ ಅವರ ಪತ್ನಿ ಅಮಿತಾ

ದೈವಗಳ ಮೂರ್ತಿಗಳು, ಬೆಲೆಬಾಳುವ ವಸ್ತುಗಳ ಕಳವು ಆರೋಪ- ಇಬ್ಬರು ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ.29:  ರಾಜ್ಯದ ಹವಾಮಾನದಲ್ಲಿ ಪ್ರತಿದಿನವೂ ಏರುಪೇರು ಉಂಟಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಮುಂದಿನ ಎರಡು ದಿನ ತುಂತುರು ಮಳೆ ಜೊತೆಗೆ ಭಾರೀ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಟ್ಟಾಯಂ ಕಾರು ಅಪಘಾತದಲ್ಲಿ ಸುರತ್ಕಲ್ ಯುವಕ ಸಾವು, 4 ಜನರಿಗೆ ಗಾಯ

(ನ್ಯೂಸ್‌ ಕಡಬ) newskadaba.com,ಜ.28  ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಬುಧವಾರ ನಡೆದ ಕಾರು ಅಪಘಾತದಲ್ಲಿ ಸುರತ್ಕಲ್‌ನ ಕಾನಾದ ಯುವಕನೊಬ್ಬ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.ಮೃತ ವ್ಯಕ್ತಿಯನ್ನು ಮುಲ್ಕಿ ತಾಲ್ಲೂಕಿನ ಅಂಗರಗುಡ್ಡೆ ಮೂಲದ ಶಾನವಾಜ್ ಅಲಿಯಾಸ್ ಶಮೀಮ್ (26) ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕಾನಾದ ಚಿರಾಗ್ ಫ್ಲಾಟ್ಸ್‌ನಲ್ಲಿ ವಾಸಿಸುತ್ತಿದ್ದರು. ಶಮೀಮ್ ಮತ್ತು ಇತರ ನಾಲ್ವರು ಕೊಟ್ಟಾಯಂನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕಾಗಿ ಬೌನ್ಸರ್‌ಗಳಾಗಿ ಹೋಗಿದ್ದರು ಎಂದು ತಿಳಿದುಬಂದಿದೆ. ಬುಧವಾರ ಬೆಳಿಗ್ಗೆ, ಅವರು ಉಪಾಹಾರ ಸೇವಿಸಲು ಪಟ್ಟಣದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅಪಘಾತ ಸಂಭವಿಸಿದೆ.

ಕೊಟ್ಟಾಯಂ ಕಾರು ಅಪಘಾತದಲ್ಲಿ ಸುರತ್ಕಲ್ ಯುವಕ ಸಾವು, 4 ಜನರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ

  (ನ್ಯೂಸ್‌ ಕಡಬ) newskadaba.com,ಜ.28  ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಭಾನುವಾರ ಮತ್ತು ಗಣರಾಜ್ಯೋತ್ಸವ(ಸೋಮವಾರ)ದ ನಿಮಿತ್ತ 2 ದಿನ ಬಿಡುವು ಪಡೆದಿದ್ದ ಉತ್ಖನನ ಕಾರ್ಯ ಮಂಗಳವಾರ ಮತ್ತೆ ಚುರುಕುಗೊಂಡಿದೆ. ಉತ್ಖನನದ 10ನೇ ದಿನವಾದ ಮಂಗಳವಾರ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ , ಅನಾದಿಕಾಲದ ಬುನಾದಿ ಪತ್ತೆಯಾಗಿ ಸಂಶೋಧಕರಲ್ಲಿಹರ್ಷ ಮೂಡಿಸಿದರೆ, ಉತ್ಖನನ ಸ್ಥಳದಲ್ಲಿ ಕಾಣಿಸಿಕೊಂಡ ಬಿರುಕು ಕಾರ್ಮಿಕರಲ್ಲಿಆತಂಕ ಸೃಷ್ಟಿಸಿದೆ. ಪ್ರಾಚ್ಯಾವಶೇಷ : ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ಸಹಯೋಗದಲ್ಲಿನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಕಳಸದಾಕಾರದ ಸಣ್ಣ ಶಿಲೆ ಲಭ್ಯವಾಗಿದೆ.

ಲಕ್ಕುಂಡಿಯಲ್ಲಿ ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಪತ್ತೆ ಆಧುನಿಕ ಕಾಲದ ಪೈಪ್‌ ಸಹ ಪತ್ತೆ Read More »

ಕರ್ನಾಟಕ

ಖಾಸಗಿ ವಿಮಾನ ಎರಡನೇ ಬಾರಿ ರನ್‌ವೇನಲ್ಲಿ ಲ್ಯಾಂಡ್‌ ಮಾಡುವ ವೇಳೆ ಪತನ

  (ನ್ಯೂಸ್‌ ಕಡಬ) newskadaba.com,ಜ.28  ಮುಂಬೈ:  ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ  ವಿಮಾನ ಲ್ಯಾಂಡ್‌ ಆಗಲು ಪ್ರಯತ್ನಿಸುತ್ತಿದ್ದ ವೇಳೆ ಪತನಗೊಂಡಿದೆ.ಫ್ಲೈಟ್‌ರಾಡರ್‌ನ ದತ್ತಾಂಶದ ಪ್ರಕಾರ ಬಾಂಬಾರ್ಡಿಯರ್ ಲಿಯರ್‌ಜೆಟ್ 45 (ವಿಟಿ-ಎಸ್‌ಎಸ್‌ಕೆ) ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ಟೇಕಾಫ್‌ ಆಗಿತ್ತು .ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದಾರೆ.ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ 2ನೇ ಬಾರಿ ವಿಮಾನ ಲ್ಯಾಂಡಿಂಗ್‌ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು

ಖಾಸಗಿ ವಿಮಾನ ಎರಡನೇ ಬಾರಿ ರನ್‌ವೇನಲ್ಲಿ ಲ್ಯಾಂಡ್‌ ಮಾಡುವ ವೇಳೆ ಪತನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top