ಇ-ಆಟೋ ರಿಕ್ಷಾ ಪರವಾನಿಗೆ : ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com ಮಾ. 17. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ನೋಂದಣಿಗೊಂಡಿರುವ ಎಲ್ಲಾ ಇ-ಆಟೋ ರಿಕ್ಷಾದ ಮಾಲಕರು ಮಾರ್ಚ್ 31 ರೊಳಗಾಗಿ ಇ-ಆಟೋ ರಿಕ್ಷಾ ಪರವಾನಿಗೆಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು. ಈ ಕುರಿತು ಮಾಹಿತಿಗೆ ಮಂಗಳೂರು  ಆರ್.ಟಿ.ಓ ಕಛೇರಿಯನ್ನು ಸಂಪರ್ಕಿಸುವಂತೆ ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಪ್ರಕಟಣೆ  ತಿಳಿಸಿದೆ.

ಇ-ಆಟೋ ರಿಕ್ಷಾ ಪರವಾನಿಗೆ : ಅರ್ಜಿ ಆಹ್ವಾನ Read More »

ಕರಾವಳಿ

​ಗ್ರಾಮೀಣ ಭಾಗದ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್? 25 ದಿನದ ಮರು ಬುಕ್ಕಿಂಗ್ ನಿಯಮಕ್ಕೆ ಅಶ್ರಫ್ ಗುಂಡಿ ಮನವಿ.

(ನ್ಯೂಸ್‌ ಕಡಬ) newskadaba.com,  ಮಾ.16: ನಗರ ಪ್ರದೇಶದ ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ ಮರು ಬುಕ್ಕಿಂಗ್ ಅವಧಿಯನ್ನು 25 ದಿನಗಳು ನಿಗಧಿಪಡಿಸಿದಂತೆ ಗ್ರಾಮೀಣ ಪ್ರದೇಶದಲ್ಲಿಯು 45 ದಿನಗಳ ಬದಲು 25 ದಿನಗಳಿಗೆ ಸೀಮಿತಗೊಳಿಸಬೇಕೆಂದು ಸುಳ್ಯ ತಾಲೂಕು ಕೆ.ಡಿಪಿ ಸದಸ್ಯ ಅಶ್ರಫ್ ಗುಂಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಅಲ್ಲದೆ ಮುಂದೆ ಬರುವ ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ..

​ಗ್ರಾಮೀಣ ಭಾಗದ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್? 25 ದಿನದ ಮರು ಬುಕ್ಕಿಂಗ್ ನಿಯಮಕ್ಕೆ ಅಶ್ರಫ್ ಗುಂಡಿ ಮನವಿ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ಸವಾರನಿಗೆ ದಂಡ, 15 ದಿನ ಜನಜಾಗೃತಿ ಸೇವೆ

(ನ್ಯೂಸ್‌ ಕಡಬ) newskadaba.com,  ಮಾ.16 ಮಂಗಳೂರು: ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದ ಸವಾರನೊಬ್ಬನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ. ದಿನಾಂಕ 12/03/2026 ರಂದು ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬುವವರು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಸತತವಾಗಿ ಉಲ್ಲಂಘಿಸಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಐಎಂವಿ ಕಾಯ್ದೆಯಡಿ (IMV Act) ವಿವಿಧ ಕಲಂಗಳಡಿ (119

ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ಸವಾರನಿಗೆ ದಂಡ, 15 ದಿನ ಜನಜಾಗೃತಿ ಸೇವೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾರ್ಚ್ 28ರಂದು ಹಜ್ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com ಮಾ. 16. 2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮವು ಮಾರ್ಚ್ 28ರಂದು ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಯೆನೆಪೋಯ ಶಾಲಾ ಆವರಣದಲ್ಲಿ ನಡೆಯಲಿದೆ. ಈ ವೇಳೆ ಯಾತ್ರಾರ್ಥಿಗಳು ಇತ್ತೀಚೆಗೆ ಭಾರತ ಸರ್ಕಾರದಿಂದ ನೀಡಲಾದ ಮೆಡಿಕಲ್ ಕಾರ್ಡ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿ ಯೆನೆಪೋಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 28ರಂದು ಹಜ್ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮ Read More »

ಕರಾವಳಿ

ವಿಶೇಷ ಲೇಖನ “ಹೀಟ್ ಸ್ಟ್ರೋಕ್” ಡಾ.ಮುರಲೀ ಮೋಹನ ಚೂಂತಾರು

(ನ್ಯೂಸ್‌ ಕಡಬ) newskadaba.com ಮಾ. 16. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಅರ್ಭಟ ಜೋರಾಗಿದೆ, ಬಾಹ್ಯ ವಾತಾವರಣದ ಉಷ್ಣತೆ 42 ಡಿಗ್ರಿ ಸೆಲ್ಸಿಯಸ್‍ ಗಿಂತಲೂ ಹೆಚ್ಚಾಗಿದೆ. ಇಂತಹ ಬಿಸಿಲಿನ ಹೊಡೆತಕ್ಕೆ ನಮ್ಮ ದೇಹ ಬಳಲಿ ಬೆಂಡಾಗಿ ಹೀಟ್ ಸ್ಟ್ರೋಕ್‍ ಗೆ ತುತ್ತಾಗುತ್ತದೆ. ಈ ವಿಪರೀತ ಬಿಸಿಲಿನ ಕಾರಣದಿಂದ ದೇಹಕ್ಕೆ ಉಂಟಾಗುವ ಆಘಾತವನ್ನು ಸನ್‍ ಸ್ಟ್ರೋಕ್ ಅಥವಾ ಶಾಖಾಘಾತ ಎಂದೂ ಕರೆಯುತ್ತಾರೆ.   ನಮ್ಮ ದೇಹದಲ್ಲಿ ನಿರಂತರವಾಗಿ ಚಯಾಪಚಯ ಜೈವಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಜೈವಿಕ ಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ

ವಿಶೇಷ ಲೇಖನ “ಹೀಟ್ ಸ್ಟ್ರೋಕ್” ಡಾ.ಮುರಲೀ ಮೋಹನ ಚೂಂತಾರು Read More »

ವಿಶೇಷ ಲೇಖನಗಳು

ರಕ್ತದಾನವೇ ಶ್ರೇಷ್ಟ ದಾನ- ಡಾ ಚೂಂತಾರು

(ನ್ಯೂಸ್‌ ಕಡಬ) newskadaba.com ಮಾ. 16. ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಭಾನುವಾರದಂದು ಜರುಗಿತು. ಪೋಲಿಸ್ ಇಲಾಖೆಯ  ಶ್ರೀ ಬಾಲಕೃಷ್ಣ ಭಟ್ ಕೊಂಚಾಡಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಚೂಂತಾರು ಸರೋಜಿನಿ ಪ್ರತಿಷ್ಟಾನದ ಕಾರ್ಯದರ್ಶಿ ಡಾ ಮುರಲೀ ಮೋಹನ್ ಚೂಂತಾರು ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಟ ದಾನ. ಅದಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ನಿರಂತರವಾಗಿ ಮೂರು ತಿಂಗಳಿಗೊಮ್ಮೆ

ರಕ್ತದಾನವೇ ಶ್ರೇಷ್ಟ ದಾನ- ಡಾ ಚೂಂತಾರು Read More »

ಕರಾವಳಿ

ಕಡಬ: ನಾಟಿವೈದ್ಯ, ಮುಟ್ಟಾಳ ತಯಾರಕ ಕಾಂತಪ್ಪ ಕಲ್ಲುಗುಡ್ಡೆ ನಿಧನ

(ನ್ಯೂಸ್‌ ಕಡಬ) newskadaba.com ಮಾ. 16. ಅಸೌಖ್ಯದಿಂದಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ನಿವಾಸಿ ಕಾಂತಪ್ಪ ಕಲ್ಲುಗುಡ್ಡೆ (63) ಅವರು ಮಾ.15ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.   ಕಾಂತಪ್ಪ ಅವರು ಕಟ್ಟಡ ಕಾರ್ಮಿಕರಾಗಿದ್ದು, ಅಡಿಕೆ ಹಾಳೆಯಲ್ಲಿ ಮುಟ್ಟಾಳೆ ಕಟ್ಟುವ ಕಾಯಕವನ್ನೂ ಮಾಡುತ್ತಿದ್ದರು. ನಾಟಿ ವೈದ್ಯರೂ ಗಿದ್ದ ಅವರು ಮೂಲವ್ಯಾಧಿ  ಹಾಗೂ ಹಲ್ಲು ನೋವಿಗೆ ಔಷಧಿಯನ್ನು ನೀಡುತ್ತಿದ್ದರು.   ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪಾ, ಭವಿತಾ, ಪುತ್ರರಾದ ಪ್ರಸಾದ್, ನಿತಿನ್, ಸಹೋದರರಾದ ದೈವ ನರ್ತಕ

ಕಡಬ: ನಾಟಿವೈದ್ಯ, ಮುಟ್ಟಾಳ ತಯಾರಕ ಕಾಂತಪ್ಪ ಕಲ್ಲುಗುಡ್ಡೆ ನಿಧನ Read More »

ಕರಾವಳಿ

ಇಂದು ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಮಾ.16: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 45 ರೂ. ಇಳಿಕೆಯಾಗಿ 14,590 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 49 ರೂ. ಇಳಿಕೆಯಾಗಿ 15,917 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,16,720 ರೂ. ಆದರೆ, 10 ಗ್ರಾಂಗೆ ನೀವು 1,45,900 ರೂ. ಹಾಗೂ 100 ಗ್ರಾಂ

ಇಂದು ಚಿನ್ನದ ದರದಲ್ಲಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು

 (ನ್ಯೂಸ್‌ ಕಡಬ) newskadaba.com,  ಮಾ.16: ಎಸ್ಸೆಸ್ಸೆಲ್ಸಿ ಬಳಿಕ ದೂರದ ಪ್ರದೇಶಗಳಲ್ಲಿರುವ ಕಾಲೇಜುಗಳಿಗೆ ತೆರಳಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರಿಗೆ ಸರಕಾರ ಹೊಸ ಯೋಜನೆ ಮೂಲಕ ಸಿಹಿ ಸುದ್ದಿ ನೀಡಿದೆ. ರಾಜ್ಯದ 50 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಪರಿವರ್ತಿಸಲು ಅನುಮೋದನೆ ನೀಡಿದೆ. ಈ ಬಾರಿ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣಗೊಳಿಸಿರುವ ಸರಕಾರ ಈಗ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ನೀಡಿದೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಆಯ್ದ 50 ಪ್ರೌಢಶಾಲೆಗಳಲ್ಲಿ ಮೊದಲ ಹಂತದಲ್ಲಿ ಒಂದೆರಡು

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ

 (ನ್ಯೂಸ್‌ ಕಡಬ) newskadaba.com,  ಮಾ.16: ದೇಶದಲ್ಲೇ ಪ್ರಥಮವಾಗಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಘಟಕವನ್ನು ಆರಂಭಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದ್ದು, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಉಪಯೋಗಿಸಿ ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯ ಮೂಲಕ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಪರ್ಯಾಯ ಇಂಧನ ಉತ್ಪಾದನೆಗೂ

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top