ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಮೃತ್ಯು

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 25. ಮನೆಯ ಎದುರಿಗಿದ್ದ ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಕಲಬುರಗಿ ನಗರದ ಮುಜಾಹಿರ್ ಬಡಾವಣೆಯಲ್ಲಿ ನಡೆದಿದೆ. ಮೃತ ಮಗುವನ್ನು ಸೋನಿಯಾ ಗಾಂಧಿ ಆಶ್ರಯ ಕಾಲನಿಯ ಮಹಮ್ಮದ್ ಬುರ್‌ಹಾನುದ್ದೀನ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (2) ಎಂದು ಗುರುತಿಸಲಾಗಿದೆ. ಗುರುವಾರದಂದು ಮಧ್ಯಾಹ್ನ ಮಗು ಆಟ ಆಡಿಕೊಂಡು ಮನೆಯ ಮುಂಭಾಗದಲ್ಲಿನ ಒಳಚರಂಡಿ ಕಡೆಗೆ ಹೋಗಿದ್ದು, ಈ ವೇಳೆ ತಿಳಿಯದೇ ಚರಂಡಿಯಲ್ಲಿ ಬಿದ್ದು, ಉಸಿರುಗಟ್ಟಿ ಕೊನೆಯುಸಿರಳೆದಿದೆ […]

ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

WWE ಸ್ಟಾರ್ ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್ ಆ. 25. ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಸ್ಟಾರ್ ಬ್ರೇ ವ್ಯಾಟ್(36) ಅವರು ಹೃದಯಾಘಾತದಿಂದ ಗುರುವಾರದಂದು ನಿಧನರಾಗಿದ್ದಾರೆ ಎಂದು ಕಂಪನಿಯ ಸಿಸಿಒ ಪಾಲ್ “ಟ್ರಿಪಲ್ ಎಚ್” ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ. ಇಎಸ್‌ಪಿಎನ್ ಪ್ರಕಾರ, ಬ್ರೇ ವ್ಯಾಟ್ ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೋಟುಂಡಾ. ಆರೋಗ್ಯ ಸಮಸ್ಯೆಯೊಂದಿಗೆ ಬಳಲುತ್ತಿದ್ದ ಅವರು ಕಳೆದ ಹಲವಾರು ತಿಂಗಳುಗಳಿಂದ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ. ವ್ಯಾಟ್ ಒಂದು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್‌ ಶಿಪ್ ಮತ್ತು ಎರಡು

WWE ಸ್ಟಾರ್ ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಲಾಂಗ್ ಹಿಡಿದು ಉಪನ್ಯಾಸಕನನ್ನೇ ಬೆದರಿಸಿದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಮಂಡ್ಯ, ಆ. 25. ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಲಾಂಗ್‌ ಹಿಡಿದು ಉಪನ್ಯಾಸಕರನ್ನೇ ಬೆದರಿಸಿದ ಘಟನೆ ನಾಗಮಂಗಲದಿಂದ ಬೆಳಕಿಗೆ ಬಂದಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದರು. ಇದರಿಂದ ಸಿಟ್ಟಾದ ವಿದ್ಯಾರ್ಥಿ ಲಾಂಗ್ ತೋರಿಸಿ ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದು, ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ವಿದ್ಯಾರ್ಥಿಯಿಂದ

ಲಾಂಗ್ ಹಿಡಿದು ಉಪನ್ಯಾಸಕನನ್ನೇ ಬೆದರಿಸಿದ ವಿದ್ಯಾರ್ಥಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದೇಶಿ ಹಾಗೂ ಇ-ಸಿಗರೇಟ್ ಮಾರಾಟ – ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವಂತೆ ಪೊಲೀಸರಿಂದ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 25. ನಿಷೇಧಿತ ಇ-ಸಿಗರೇಟ್ ಮಾರಾಟ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ನಗರದ ಮೂರು ಅಂಗಡಿಗಳ ಟ್ರೇಡ್‌ ಲೈಸನ್ಸ್‌ ನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಆ. 21ರಂದು ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನ ಮೂರು ಅಂಗಡಿಗಳಿಗೆ ದಾಳಿ ನಡೆಸಿದ್ದ ಪೊಲೀಸರು ಒಟ್ಟು 2.70 ಲಕ್ಷ ರೂ. ಮೌಲ್ಯದ ಇ-ಸಿಗರೇಟ್‌ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಕ್ಕೆ ಪಡೆದು ಮೂವರ

ವಿದೇಶಿ ಹಾಗೂ ಇ-ಸಿಗರೇಟ್ ಮಾರಾಟ – ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವಂತೆ ಪೊಲೀಸರಿಂದ ಪತ್ರ Read More »

ಕರಾವಳಿ, ಕ್ರೈಮ್ ನ್ಯೂಸ್

ಮೋಸ ವಂಚನೆ ಮಾಡದೆ ದುಡಿದು ಅಲ್ಲಾಹನ ತೃಪ್ತಿ ಪಡೆಯಿರಿ- ಬಹು | ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ

(ನ್ಯೂಸ್ ಕಡಬ) newskadaba.com ಮಾಣಿ, ಆ. 25. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಇದರ ವತಿಯಿಂದ “ಕಾರ್ಮಿಕ ಸಂಗಮ” ಕಾರ್ಯಕ್ರಮವು ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ಗುರುವಾರದಂದು ನಡೆಯಿತು. ಸರ್ಕಲ್ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿದರು. ಅಧ್ಯಕ್ಷ ಹೈದರ್ ಸಖಾಫಿ ಶೇರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರ್ಮಿಕ ಚೌಕಟ್ಟಿನಲ್ಲೇ ಹಲಾಲ್ ಆದ ವೃತ್ತಿಯನ್ನು ಯಾವುದೇ ಅನ್ಯಾಯ ಮೋಸ ವಂಚನೆ ಕಳ್ಳತನ ಇಲ್ಲದೆ ನಿರ್ವಹಿಸಿ ಅಲ್ಲಾಹನ ತೃಪ್ತಿ ಪಡೆದರೆ ಅದರಲ್ಲಿ ಬರ್ಕತ್

ಮೋಸ ವಂಚನೆ ಮಾಡದೆ ದುಡಿದು ಅಲ್ಲಾಹನ ತೃಪ್ತಿ ಪಡೆಯಿರಿ- ಬಹು | ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ Read More »

ಕರಾವಳಿ

ಬಂಧನದ ವೇಳೆ ಕೀಟನಾಶಕ ಸೇವಿಸಿದ ಆರೋಪಿ- ಅಸ್ವಸ್ಥ

(ನ್ಯೂಸ್ ಕಡಬ) newskadaba.com ಮುಲ್ಕಿ, ಆ. 25. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಬಂಧಿಸಲು ಹೋದ ಸಂದರ್ಭ ಆರೋಪಿಯೋರ್ವ ಕೀಟನಾಶಕ ಸೇವಿಸಿದ್ದು, ಪೊಲೀಸರು ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಆರೋಪಿ ಕರುಣಾಕರ್ ಎಂಬಾತ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣದ ಆರೋಪಿಯಾಗಿದ್ದು, ಈತನ ಮೇಲೆ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯ ಆದೇಶಿಸಿತ್ತು. ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿಯ ಬಾರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಖಚಿತ ಮಾಹಿತಿಯ ಮೇರೆಗೆ

ಬಂಧನದ ವೇಳೆ ಕೀಟನಾಶಕ ಸೇವಿಸಿದ ಆರೋಪಿ- ಅಸ್ವಸ್ಥ Read More »

ಕರಾವಳಿ, ಕ್ರೈಮ್ ನ್ಯೂಸ್

ಅಮೇರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬಂಧನ- ಬಿಡುಗಡೆ

(ನ್ಯೂಸ್ ಕಡಬ) newskadaba.com ಅಮೇರಿಕಾ, ಆ. 25. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ಟ್ರಂಪ್ ಟವರು ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ವರದಿಯಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ, ಪಿತೂರಿ, ವಂಚನೆ ಯತ್ನ ಆರೋಪ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್​ರನ್ನು​​​​​​ ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದರು. ಆದರೆ

ಅಮೇರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಬಂಧನ- ಬಿಡುಗಡೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವಂತೆ ಕಿರಿಕ್ – ನಗ್ನ ಚಿತ್ರ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 25. ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟು, ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿರೋರ್ವಳು ಗೂಗಲ್ ಪ್ಲೇ ಸ್ಟೋರ್‌ನ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಮೂಲಕ 10,000 ರೂ. ಸಾಲಕ್ಕೆ ಅರ್ಜಿ ಹಾಕಿದ್ದಳು. ತಕ್ಷಣ ಆಕೆಯ ಖಾತೆಗೆ 7,500 ರೂ. ಜಮೆಯಾಗಿತ್ತು. ಕೆಲವು ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದಳು.

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವಂತೆ ಕಿರಿಕ್ – ನಗ್ನ ಚಿತ್ರ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ Read More »

ಕರಾವಳಿ, ಕ್ರೈಮ್ ನ್ಯೂಸ್

ನಾಳೆ ಇಸ್ರೋ ಕಛೇರಿಗೆ ಪ್ರಧಾನಿ ಮೋದಿ ಭೇಟಿ – ವಾಹನ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 25. ಚಂದ್ರಯಾನ -3 ಯಶಸ್ಸಿಯಾದ ಹಿನ್ನೆಲೆ ನಾಳೆ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಮೋದಿಯ ಅಗಮನ ಹಿನ್ನೆಲೆ ನಗರದ ಹಲವು ರಸ್ತೆಗಳಲ್ಲಿ ಮುಂಜಾವ 4.30ರಿಂದ ಬೆಳಗ್ಗೆ 9.30ರ ವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದ ಹಳೇ ಏರ್​​ಪೋರ್ಟ್​ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ.ರಾಮನ್ ರಸ್ತೆ, ಯಶವಂತಪುರ

ನಾಳೆ ಇಸ್ರೋ ಕಛೇರಿಗೆ ಪ್ರಧಾನಿ ಮೋದಿ ಭೇಟಿ – ವಾಹನ ಸಂಚಾರ ಅಸ್ತವ್ಯಸ್ತ Read More »

ಕರ್ನಾಟಕ

ಉದ್ಯೋಗ ಹೆಸರಲ್ಲಿ 1.13 ಲಕ್ಷ ರೂ. ಹಣ ಪಡೆದು ವಂಚನೆ

(ನ್ಯೂಸ್ ಕಡಬ) newskadaba.com ಉಡುಪಿ, ಆ. 24. ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಸುಮಾರು 1,13,30 ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಮಹಿಳೆಯೊರ್ವರ ಮೊಬೈಲ್ ಗೆ ಆಗಸ್ಟ್ 19 ರಂದು ಯಾರೋ ಅಪರಿಚಿತ ವ್ಯಕ್ತಿಗಳು 8874836643 ಸಂಖ್ಯೆಯ ಮೊಬೈಲ್ ನಂಬರ್ ನಿಂದ ವಾಟ್ಸ್‌ ಆಪ್‌ ಮೆಸೆಜ್‌ ಮಾಡಿ, ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಬಳಿಕ Telegram ನಲ್ಲಿ ಲಿಂಕ್‌ನ್ನು ಕಳುಹಿಸಿ ಆಗಸ್ಟ್ 20 ರಿಂದ ಆಗಸ್ಟ್ 21 ರ ಮದ್ಯಾವಧಿಯಲ್ಲಿ

ಉದ್ಯೋಗ ಹೆಸರಲ್ಲಿ 1.13 ಲಕ್ಷ ರೂ. ಹಣ ಪಡೆದು ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top