ಮಂಗಳೂರು NMPTಯಲ್ಲಿ ಉದ್ಯೋಗ- 60 ಸಾವಿರ ಮಾಸಿಕ ವೇತನ – ಇಂದೇ ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಎಂಜಿನಿಯರ್ ಗ್ರೇಡ್-2 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 21, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹುದ್ದೆಯ ಕುರಿತು ಮಾಹಿತಿ:- ಸಂಸ್ಥೆ- ನವ ಮಂಗಳೂರು ಬಂದರು ಟ್ರಸ್ಟ್, ಹುದ್ದೆ- ಎಂಜಿನಿಯರ್ ಗ್ರೇಡ್-2 ಒಟ್ಟು ಹುದ್ದೆ- […]

ಮಂಗಳೂರು NMPTಯಲ್ಲಿ ಉದ್ಯೋಗ- 60 ಸಾವಿರ ಮಾಸಿಕ ವೇತನ – ಇಂದೇ ಅಪ್ಲೈ ಮಾಡಿ Read More »

ಉದ್ಯೋಗ, ಕರಾವಳಿ

ಇನ್ನುಮುಂದೆ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ – ಸರಕಾರದಿಂದ ಮಹತ್ವದ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಇನ್ನುಮುಂದೆ ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಅಧಿಕೃತ ಸಭೆ, ಸಮಾರಂಭಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ ಹಾಗೂ ಸರಬರಾಜನ್ನು ಸಂಪೂರ್ಣವಾಗಿ ನಿಷೇಧಿಸಿ, ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ

ಇನ್ನುಮುಂದೆ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ – ಸರಕಾರದಿಂದ ಮಹತ್ವದ ಆದೇಶ Read More »

ಕರ್ನಾಟಕ

ಮಂಗಳೂರು: 16 ಎಎಸ್ಐ ಗಳಿಗೆ ಪಿಎಸ್ಐ ಆಗಿ ಭಡ್ತಿ – ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ಹಲವು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿದ್ದ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ. ಭಡ್ತಿ ಪಡೆದಿರುವವರನ್ನು ವಿವಿಧ ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗಿದೆ. ಪಿಎಸ್‌ಐ ಆಗಿ ಭಡ್ತಿಯಾಗಿರುವ ಕಂಕನಾಡಿ ನಗರ ಠಾಣೆಯ ನವೀನ್ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ, ಸಿಎಸ್ಪಿಯ ಆನಂದ ಬಿ.

ಮಂಗಳೂರು: 16 ಎಎಸ್ಐ ಗಳಿಗೆ ಪಿಎಸ್ಐ ಆಗಿ ಭಡ್ತಿ – ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ Read More »

ಕರಾವಳಿ, ಕರ್ನಾಟಕ

ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ಆರೋಪ ಹಿರಿಯ ಇಂಜಿನಿಯರ್ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ರಾಯಚೂರು, ಸೆ. 20. ಜೆಸ್ಕಾಂ ಮಹಿಳಾ ಎಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹಿರಿಯ ಇಂಜಿನಿಯರ್ ನ ಅಮಾನತು ಮಾಡಿ ಆದೇಶಿಸಲಾಗಿದೆ. ಆರೋಪಿ ಜೆಸ್ಕಾಂ ಇಇ ಶ್ರೀನಿವಾಸ್ ಅಮಾನತು ಆದವರು. ರಾಯಚೂರಿನಲ್ಲಿ ಜೆಸ್ಕಾಂ ಹಿರಿಯ ಇಂಜಿನಿಯರ್ ಆಗಿರುವ ಶ್ರೀನಿವಾಸ್, ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಶ್ರೀನಿವಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂತ್ರಸ್ತ ಮಹಿಳೆ ಹಾಗೂ ಜೆಸ್ಕಾಂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು.

ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ ಆರೋಪ ಹಿರಿಯ ಇಂಜಿನಿಯರ್ ಸಸ್ಪೆಂಡ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ- ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಪ್ರಸ್ತಕ ಸಾಲಿನ ವಿವಿಧ ವೃತ್ತಿಪರ ಪದವಿ ಕೋರ್ಸ್‌ ಗಳಲ್ಲಿ ಪ್ರವೇಶ ಪಡೆದ ಮಾಜಿ ಸೈನಿಕರ ಮಕ್ಕಳಿಂದ ಪ್ರಧಾನ ಮಂತ್ರಿಗಳ ವಿದ್ಯಾರ್ಥಿ ವೇತನ ಯೋಜನೆಯಡಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ಯುಜಿಸಿಯಂತಹ ಆಯಾ ಸರ್ಕಾರಿ ನಿಯಂತ್ರಣ ಸಂಸ್ಥೆಗಳಲ್ಲಿ ಮೊದಲ ವೃತ್ತಿಪರ ಪದವಿ ಕೋರ್ಸ್ ಗಳಾದ ಬಿಇ, ಬಿಟೆಕ್, ಬಿಡಿಎಸ್, ಎಂಬಿಬಿಎಸ್, ಬಿಇಡಿ, ಬಿಬಿಎ,

ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ- ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ Read More »

ಕರ್ನಾಟಕ

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳು – ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. 2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಿ.ಎಡ್ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆಯಡಿ ಸೆಪ್ಟೆಂಬರ್ 21 ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಎಂ.ಫಿಲ್ ಹಾಗೂ ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫೆಲ್ಲೋಶಿಪ್ ಯೋಜನೆಯಡಿ ಅಕ್ಟೋಬರ್ 03 ಕೊನೆಯ ದಿನವಾಗಿದ್ದು, ವೆಬ್‌ಸೈಟ್ https://dom.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಅದೇ ರೀತಿ ಅರಿವು

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳು – ಆಸಕ್ತರಿಂದ ಅರ್ಜಿ ಆಹ್ವಾನ Read More »

ಕರ್ನಾಟಕ

ವಾಟ್ಸಾಪ್ ಚಾನೆಲ್ ಆರಂಭಿಸಿದ ಮೊದಲ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ನ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿದ್ದಾರೆ. ಸಾರ್ವಜನಿಕರು ಈ ವಾಟ್ಸಾಪ್ ಖಾತೆಯನ್ನು ಫಾಲೋ ಮಾಡಬಹುದಾಗಿದೆ. ದೇಶದಲ್ಲಿ ಈ ರೀತಿ ಚಾನೆಲ್ ಆರಂಭಿಸಿದ ಮೊದಲ ಸಿಎಂ ಸಿದ್ದರಾಮಯ್ಯ ಅವರಾಗಿದ್ದಾರೆ. ಜನ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಸಿದ್ದರಾಮಯ್ಯ ಅವರು, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನೆಲ್ ಆರಂಭಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಕಳೆದ ವಾರವಷ್ಟೇ ವಾಟ್ಸಾಪ್

ವಾಟ್ಸಾಪ್ ಚಾನೆಲ್ ಆರಂಭಿಸಿದ ಮೊದಲ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ದ್ವಿತೀಯ ಪಿಯು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಸೆ. 20. ಹದಿನಾರು 16 ವರ್ಷದ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ತಾನದ ಕೋಟ ಜಿಲ್ಲೆಯ ವಿಜ್ಞಾನ ನಗರ ಪ್ರದೇಶದಿಂದ ವರದಿಯಾಗಿದೆ. ವಿದ್ಯಾರ್ಥಿನಿಯನ್ನು ಕೂಡಲೇ ಆಕೆಯ ಸಹಪಾಠಿಗಳು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಉತ್ತರ ಪ್ರದೇಶದ ಮವು ನಿವಾಸಿ 12 ಪ್ರಿಯಾಸ್ ಸಿಂಗ್ ಎಂದು ಗುರುತಿಸಲಾಗಿದೆ. ಈಕೆ ಕೋಟಾದ ಕೋಚಿಂಗ್

ದ್ವಿತೀಯ ಪಿಯು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಜೀವಕ್ಕೆ ಕುತ್ತು ತಂದ ಮದ್ಯ ಸೇವನೆ ಚಾಲೆಂಜ್ – ಸೇವಿಸಿದ ಅರ್ಧ ಗಂಟೆಯಲ್ಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹೊಳೆನರಸೀಪುರ, ಸೆ. 20. ಮದ್ಯ ಸೇವನೆ ಸಂಬಂಧ ನಡೆದ ಪಂದ್ಯದಲ್ಲಿ ಓರ್ವ ಮೃತಪಟ್ಟ ಘಟನೆ ತಾಲೂಕಿನ ಸಿಗರನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ತಿಮ್ಮೇಗೌಡ ಎಂದು ಗುರುತಿಸಲಾಗಿದೆ. ಸಿಗರನಹಳ್ಳಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಕೃಷ್ಣೇಗೌಡ ಎಂಬವರು ನೀಡಿದ ಮದ್ಯವನ್ನು ದೇವರಾಜು ಹಾಗೂ ತಿಮ್ಮೇಗೌಡ ಎಂಬವರು ಅರ್ಧ ಗಂಟೆಯಲ್ಲಿ 90 ಎಂಎಲ್‌ನ 10 ಪ್ಯಾಕೆಟ್‌ ಕುಡಿಯುವುದಾಗಿ ಚಾಲೆಂಜ್‌ ಮಾಡಿದ್ದರು. ಅದರಂತೆ ತಿಮ್ಮೇಗೌಡರು 90 ಎಂಎಲ್‌ನ 10 ಪ್ಯಾಕೆಟ್‌ ಮದ್ಯ ಸೇವಿಸಿದ ಅರ್ಧ ಗಂಟೆ ಬಳಿಕ ರಕ್ತವಾಂತಿ ಮಾಡಿಕೊಂಡು

ಜೀವಕ್ಕೆ ಕುತ್ತು ತಂದ ಮದ್ಯ ಸೇವನೆ ಚಾಲೆಂಜ್ – ಸೇವಿಸಿದ ಅರ್ಧ ಗಂಟೆಯಲ್ಲಿ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಳೆ (ಸೆ. 20) ಮೆಟ್ರೋ ರೈಲು ಸಂಚಾರದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಮಾರ್ಗ ಸುರಕ್ಷತಾ ಪರಿಶೀಲನೆ ಹಿನ್ನೆಲೆ ನಾಳೆ (ಸೆ. 21) ಕೆ.ಆರ್ ಪುರದಿಂದ ಗರುಡಾಚಾರ್ ಪಾಳ್ಯ ಹಾಗೂ ಬೈಯಪ್ಪನಹಳ್ಳಿಯಿಂದ ಇಂದಿರಾನಗರ ನಿಲ್ದಾಣದವರೆಗೆ ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ದಿನವಿಡೀ ಕೆ.ಆರ್ ಪುರ ಹಾಗೂ ಗರುಡಾಚಾರ್ ಪಾಳ್ಯ ನಿಲ್ದಾಣದವರೆಗೆ ರೈಲು ಸೇವೆ ಲಭ್ಯವಿರುವುದಿಲ್ಲ. ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಮೆಟ್ರೋ ರೈಲು ಸೇವೆ ಇರುವುದಿಲ್ಲ. ವೈಟ್ ಫೀಲ್ಡ್ ಗರುಡಾಚಾರ್ ಪಾಳ್ಯದ ನಡುವೆ

ನಾಳೆ (ಸೆ. 20) ಮೆಟ್ರೋ ರೈಲು ಸಂಚಾರದಲ್ಲಿ ಬದಲಾವಣೆ Read More »

ಕರ್ನಾಟಕ
Scroll to Top