ಯಶಸ್ವಿಯಾಗಿ 100 ದಿನಗಳನ್ನು ಪೂರ್ಣಗೊಳಿಸಿದ “ಶಕ್ತಿ ಯೋಜನೆ” – 62 ಕೋಟಿ ಮಹಿಳೆಯರ ಉಚಿತ ಪ್ರಯಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ರಾಜ್ಯ ಸರಕಾದ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಅರಂಭಿಸಿದ ಶಕ್ತಿ ಯೋಜನೆಯು ಯಶಸ್ವಿಯಾಗಿ 100 ದಿನ ಪೂರ್ಣಗೊಳಿಸಿದೆ. ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. 100 ದಿನದಲ್ಲಿ ರಾಜ್ಯ ಸಾರಿಗೆ ಬಸ್ ಗಳಲ್ಲಿ 62.55 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪ್ರಯಾಣ ದರದ ಒಟ್ಟು ಮೊತ್ತ 1,456 ಕೋಟಿ ರೂ. ಆಗಿದೆ. ಜೂನ್ 11 ರಿಂದ ಸೆಪ್ಟೆಂಬರ್ 19ರ ವರೆಗೆ ಕೆಎಸ್‌ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ […]

ಯಶಸ್ವಿಯಾಗಿ 100 ದಿನಗಳನ್ನು ಪೂರ್ಣಗೊಳಿಸಿದ “ಶಕ್ತಿ ಯೋಜನೆ” – 62 ಕೋಟಿ ಮಹಿಳೆಯರ ಉಚಿತ ಪ್ರಯಾಣ Read More »

ಕರ್ನಾಟಕ

ರಾಜ್ಯದ ಮೂರನೇ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ಷಣಗಣನೆ – ಸೆ. 24ರಂದು ಪ್ರಧಾನಿ ಮೋದಿ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದ್ದು, ಸೆ. 24ರಂದು ಪ್ರಧಾನಿ ಮೋದಿ ಹೈದರಾಬಾದ್ -ಕಾಚಿಗುಡ -ಯಶವಂತಪುರ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದೆ. ಹೈದರಾಬಾದ್ ಮತ್ತು ಬೆಂಗಳೂರು ದಕ್ಷಿಣ ಭಾರತದ ಐಟಿ ನಗರಗಳಾಗಿದ್ದು, ಇವುಗಳ ನಡುವೆ ಮೊದಲ ವಂದೇ ಭಾರತ್ ರೈಲು ಸಂಚರಿಸಲಿದೆ. ಗುರುವಾರ ಬೆಳಿಗ್ಗೆ ಕಾಚಿಗುಡದಿಂದ ಹೊರಟು

ರಾಜ್ಯದ ಮೂರನೇ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ಷಣಗಣನೆ – ಸೆ. 24ರಂದು ಪ್ರಧಾನಿ ಮೋದಿ ಚಾಲನೆ Read More »

ಕರ್ನಾಟಕ

ಮಠದ ಪಲ್ಲಕ್ಕಿಯ ಕೆಳಗಡೆ 50 ಲಕ್ಷ ರೂ. ಪತ್ತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ಚೈತ್ರಾ ಕುಂದಾಪುರ ಅವರ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದ್ದು, ಹಾಲಶ್ರೀ ಸ್ವಾಮೀಜಿ ಅವರನ್ನು ಬಂಧಿಸಿದ ಸಿಸಿಬಿ ಪೊಲೀಸರು ಹಣದ ಮೂಲ ಪತ್ತೆ ಹಚ್ಚುತ್ತಿದ್ದಾರೆ. ತನಿಖೆಯ ವೇಳೆ ಹಾಲಶ್ರೀ ಮಠದಲ್ಲಿ ಪಲ್ಲಕ್ಕಿ ಕೆಳಗೆ ಇರಿಸಲಾಗಿದ್ದ 500 ರೂ. ಮುಖಬೆಲೆಯ 50 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಇದನ್ನು ಟಿಕೆಟ್‌ಗಾಗಿ ಪಡೆದ ಹಣ ಎಂದು ಸೀಜ್ ಮಾಡಲಾಗಿದೆ. ಚೈತ್ರ ಬಂಧನದ ಬಳಿಕ ಕಳೆದ ವಾರದಿಂದ ಸಿಸಿಬಿ

ಮಠದ ಪಲ್ಲಕ್ಕಿಯ ಕೆಳಗಡೆ 50 ಲಕ್ಷ ರೂ. ಪತ್ತೆ..! Read More »

ಕರ್ನಾಟಕ

ದರ್ಶನ್ ಬೆನ್ನಲ್ಲೇ ಕಾವೇರಿ ಪರ ಧ್ವನಿ ಎತ್ತಿದ ನಟ ಸುದೀಪ್

(ನ್ಯೂಸ್ ಕಡಬ) newskadaba.com. ಬೆಂಗಳೂರು, ಸೆ. 21. ಕರ್ನಾಟಕದ ಜೀವನದಿ ಕಾವೇರಿಯನ್ನು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಡೆಯ ವಿರುದ್ಧ ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ನಡೆಯುತ್ತಿದ್ದರೂ, ಕನ್ನಡ ಸಿನಿಮಾ ನಟರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ನಟರ ವಿರುದ್ಧ ಧಿಕ್ಕಾರ ಕೂಗಿ, ಕರ್ನಾಟಕ ಚಲನಚಿತ್ರ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದವು. ಇದರ ಬೆನ್ನಲ್ಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ ಕಾವೇರಿ ಹೋರಾಟಕ್ಕೆ ಬೆಂಬಲಿಸಿದ್ದರು. ಅದರಂತೆ ಇದೀಗ ಕರುನಾಡ ಚಕ್ರವರ್ತಿ ಸುದೀಪ್‌

ದರ್ಶನ್ ಬೆನ್ನಲ್ಲೇ ಕಾವೇರಿ ಪರ ಧ್ವನಿ ಎತ್ತಿದ ನಟ ಸುದೀಪ್ Read More »

ಕರ್ನಾಟಕ

ಕಾವೇರಿ ಪರ ಧ್ವನಿ ಎತ್ತಿದ ನಟ ದರ್ಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಕನ್ನಡ ಪರ ಹೋರಾಟಗಾಗರು ಖಂಡಿಸಿದ್ದು, ಇದೀಗ ಸ್ಯಾಂಡಲ್ ವುಡ್ ನಟ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಕೂಡಾ ಕಾವೇರಿ ಪರ ಧ್ವನಿ ಎತ್ತಿದ್ದಾರೆ. ಈ ಕುರಿತು ನಟ ದರ್ಶನ್‌ ಟ್ವೀಟ್‌ ಮಾಡಿದ್ದಾರೆ. ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ

ಕಾವೇರಿ ಪರ ಧ್ವನಿ ಎತ್ತಿದ ನಟ ದರ್ಶನ್ Read More »

ಕರ್ನಾಟಕ

ಸುಳ್ಯ: ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ- ನಗದು ದರೋಡೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 20. ಆಟೋದಲ್ಲಿ ಬಂದು ಪ್ರಯಾಣಿಕನಿಗೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ದರೋಡೆ ಮಾಡಿರುವ ಘಟನೆ ತಾಲೂಕಿನ ಹಳೆಗೇಟು ಬಳಿ‌ ನಡೆದಿದೆ. ಹಲ್ಲೆಗೊಳಗಾದವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್‌ ‌ಎಂದು ಗುರುತಿಸಲಾಗಿದೆ. ದರ್ಶನ್ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದು, ಮಂಗಳವಾರ ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ

ಸುಳ್ಯ: ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ- ನಗದು ದರೋಡೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ಪಾಳ್ಯ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಈ ಸಂಜೆ ಪತ್ರಿಕೆಯ ಹಿರಿಯ ವರದಿಗಾರ ರಮೇಶ್ ಎಂ.ಪಾಳ್ಯ ಅವರು ಆಯ್ಕೆಯಾಗಿದ್ದಾರೆ. ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್‍ ಪಾಳ್ಯ ಅವರು 7 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ವಿನೋದ್‍ ಕುಮಾರ್ ಅವರನ್ನು ಒಂದು ಮತಗಳ ಅಂತರದಿಂದ ಸೋಲಿಸಿದ್ದಾರೆ. ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಅವರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಹಿರಿಯ ಛಾಯಾಗ್ರಾಹಕ ಮೋಹನ್‍ ಕುಮಾರ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ಪಾಳ್ಯ ಆಯ್ಕೆ Read More »

ಕರ್ನಾಟಕ

ಉದ್ಯಮಿಗೆ ವಂಚನೆ ಪ್ರಕರಣ – ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಒಡಿಶಾದಲ್ಲಿ ಸಿಕ್ಕಿಬಿದ್ದ ಹಾಲಶ್ರೀ ಸ್ವಾಮೀಜಿಯನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುತ್ತೇವೆಂದು ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮೊದಲ ಆರೋಪಿಯಾದರೆ, ಹಾಲಶ್ರೀ ಸ್ವಾಮೀಜಿ ಮೂರನೇ ಆರೋಪಿಯಾಗಿದ್ದ ಸ್ವಾಮೀಜಿ ಒಂದೂವರೆ ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಚೈತ್ರಾ ಕುಂದಾಪುರ ಸೇರಿ

ಉದ್ಯಮಿಗೆ ವಂಚನೆ ಪ್ರಕರಣ – ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ Read More »

ಕರ್ನಾಟಕ

ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಪೊಲೀಸ್ ಠಾಣೆಯ ಮೊರೆಹೋದ ಶಿಕ್ಷಕಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 20. ಶಾಲಾ ಶಿಕ್ಷಕಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕುವುದಲ್ಲದೇ 10 ಲಕ್ಷ ರೂಪಾಯಿ ಹಣ ನೀಡದೇ ಇದ್ರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬ್ಲ್ಯಾಕ್​ ಮೇಲ್ ಮಾಡಿರುವ ಆರೋಪಿಗಳು ಅಸೀಮ್ ಹಾಗೂ ಮಯೂರ್ ಎಂದು ಗುರುತಿಸಲಾಗಿದೆ. ಅಸೀಮ್ ಹಾಗೂ ಮಯೂರ್ ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ

ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಪೊಲೀಸ್ ಠಾಣೆಯ ಮೊರೆಹೋದ ಶಿಕ್ಷಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು NMPTಯಲ್ಲಿ ಉದ್ಯೋಗ- 60 ಸಾವಿರ ಮಾಸಿಕ ವೇತನ – ಇಂದೇ ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಎಂಜಿನಿಯರ್ ಗ್ರೇಡ್-2 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 21, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹುದ್ದೆಯ ಕುರಿತು ಮಾಹಿತಿ:- ಸಂಸ್ಥೆ- ನವ ಮಂಗಳೂರು ಬಂದರು ಟ್ರಸ್ಟ್, ಹುದ್ದೆ- ಎಂಜಿನಿಯರ್ ಗ್ರೇಡ್-2 ಒಟ್ಟು ಹುದ್ದೆ-

ಮಂಗಳೂರು NMPTಯಲ್ಲಿ ಉದ್ಯೋಗ- 60 ಸಾವಿರ ಮಾಸಿಕ ವೇತನ – ಇಂದೇ ಅಪ್ಲೈ ಮಾಡಿ Read More »

ಉದ್ಯೋಗ, ಕರಾವಳಿ
Scroll to Top