ಮಾಣಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ – ಹಿಂದೂ ಬಾಂಧವರಿಂದ ತಂಪು ಪಾನೀಯ ನೀಡಿ ಶುಭಹಾರೈಕೆ

(ನ್ಯೂಸ್ ಕಡಬ) newskadaba.com ಮಾಣಿ, ಸೆ. 29. ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಲೋಕ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮದಿನಾಚರಣೆ ಪ್ರಯುಕ್ತ ಮೀಲಾದುನ್ನಬಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಎರಡು ದಿನಗಳ ಮದ್ರಸಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ ಪ್ರಭಾಷಣ, ಬುರ್ದಾ ಮಜ್ಲಿಸ್, ಮೌಲಿದ್ ಮತ್ತು ಆಕರ್ಷಕ ಮೀಲಾದ್ ರ‌್ಯಾಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿ ಖತೀಬರಾದ ಹನೀಫ್ ಸ‌ಅದಿ ಕುಂತೂರು, ಸದರ್ ಇಬ್ರಾಹಿಂ ರಝಾ ಅಲ್ ಫುರ್ಖಾನಿ ವಿಟ್ಲ, ಅಧ್ಯಾಪಕರಾದ ನವಾಝ್ ಹನೀಫಿ ಅಲ್ ಅಶ್‌ಹರಿ […]

ಮಾಣಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ – ಹಿಂದೂ ಬಾಂಧವರಿಂದ ತಂಪು ಪಾನೀಯ ನೀಡಿ ಶುಭಹಾರೈಕೆ Read More »

ಕರಾವಳಿ

ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ- ಆಕರ್ಷಕ ರ‍್ಯಾಲಿ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 29. ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಮತ್ತು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್(ಸ.ಅ) ಪೈಗಂಬರರ ಜನ್ಮ ದಿನಾಚರಣೆಯ ಈದ್ ಮಿಲಾದನ್ನು ಸಂಭ್ರಮದಿಂದ ಆಚರಿಸಲಾಯಿತು ಮತ್ತು ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ಪ್ರವಾದಿ ಕುರಿತ ಕೀರ್ತನೆಗಳು, ಆಲಾಪನೆ, ಪ್ಲವರ್ ಶೋ, ದಫ್ ಸ್ಪರ್ದೆ, ಬುರ್ಧಾ ಮಜ್ಲೀಸ್ ಕಾರ್ಯಕ್ರಮವು ಮರ್ ಹೂಮ್ ಡಾ|ಕೆ.ಎಂ. ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ

ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ- ಆಕರ್ಷಕ ರ‍್ಯಾಲಿ Read More »

ಕರಾವಳಿ

ಕೆಂದ್ರ ಸರಕಾರದಿಂದ ಸಿಹಿಸುದ್ದಿ- ಯಾವುದೇ ಮೇಲಾಧಾರವಿಲ್ಲದೇ 10 ಲಕ್ಷ ರೂ. ವರೆಗೆ ಸಾಲ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 29. ಕೇಂದ್ರ ಸರ್ಕಾರದಿಂದ ವಿವಿಧ ಸಮುದಾಯಗಳಿಗೆ ವಿವಿಧ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಅದರಂತೆ ಇದೀಗ ಕೇಂದ್ರ ಸರಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ಜನತೆಗೆ ನೀಡಿದ್ದು, ದೇಶದಲ್ಲಿ ವ್ಯವಹಾರವನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ನೀವು ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು

ಕೆಂದ್ರ ಸರಕಾರದಿಂದ ಸಿಹಿಸುದ್ದಿ- ಯಾವುದೇ ಮೇಲಾಧಾರವಿಲ್ಲದೇ 10 ಲಕ್ಷ ರೂ. ವರೆಗೆ ಸಾಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಏರ್ಪೋರ್ಟ್ ಗೆ ಮುತ್ತಿಗೆ ಹಾಕಲು ಯತ್ನ – ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 29. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಸುಪ್ರೀಂಕೋರ್ಟ್​ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅದರಂತೆ ಇಂದು(ಸೆ.29) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಬೆಳಿಗ್ಗೆಯಿಂದಲೇ ಬಂದ್​ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಅದರಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಘೋಷಣೆ ಕೂಗುತ್ತಾ ಏರ್ಪೋರ್ಟ್ ಗೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅರೈವಲ್ ಗೇಟ್

ಏರ್ಪೋರ್ಟ್ ಗೆ ಮುತ್ತಿಗೆ ಹಾಕಲು ಯತ್ನ – ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ವಿದ್ಯಾರ್ಥಿನಿಗೆ ಕಿರುಕುಳ – ಯುವಕನ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 29. ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣದಡಿ ಯುವಕನ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಯುವಕನೋರ್ವ ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಇತ್ತೀಚೆಗೆ ಶಾಲೆ ಸಮೀಪ ಬಂದು ಬಾಲಕಿಯನ್ನು ಬೈಕ್ ನಲ್ಲಿ ಕೂರುವಂತೆ ಹೇಳಿದ್ದು, ಈ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದೂ ಬೆದರಿಸಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಭಯಗೊಂಡ

ಶಾಲಾ ವಿದ್ಯಾರ್ಥಿನಿಗೆ ಕಿರುಕುಳ – ಯುವಕನ ವಿರುದ್ದ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಕಾಡಾನೆ ದಾಳಿ- ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಸೆ. 28. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ಸುಳ್ಯ ಎಂಬಲ್ಲಿ ಗುರುವಾರದಂದು ರಾತ್ರಿ ಸಂಭವಿಸಿದೆ. ಕಾಡಾನೆ ತುಳಿತಕ್ಕೊಳಗಾದವರನ್ನು ನೇಲ್ಯಡ್ಕ ನಿವಾಸಿ ಚೋಮ(52) ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಸಮೀಪ ಏಕಾಏಕಿ ಪ್ರತ್ಯಕ್ಷಗೊಂಡ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಗಂಭೀರ ಗಾಯಗೊಂಡ ಚೋಮರವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ

ಕಡಬ: ಕಾಡಾನೆ ದಾಳಿ- ವ್ಯಕ್ತಿ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಬ್ರೈಟ್ ಭಾರತ್’ ಪರಿಚಯಿಸುತ್ತಿದೆ ಅತೀ ದೊಡ್ಡ ಪ್ರಾಜೆಕ್ಟ್; ಮಾಸಿಕ ಕೇವಲ ಒಂದು ಸಾವಿರದಂತೆ ಪಾವತಿಸಿ- ಎರಡು ಬೆಡ್‌ ರೂಂನ ಮನೆ ಜೊತೆಗೆ ಕಾರು, ಆಕ್ಟಿವಾ, ಚಿನ್ನ, ಬೆಳ್ಳಿ, ವಜ್ರ ನಿಮ್ಮದಾಗಿಸಿ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 26. ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಎಂಬ ಸಂಸ್ಥೆಯು ಪುತ್ತೂರಿನಲ್ಲಿ ಆರಂಭಿಸಿದೆ. ಈ ಯೋಜನೆಗೆ ಸೇರಿದ ಯಾವುದೇ ಗ್ರಾಹಕರು ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳನ್ನು ಪಡೆಯುವ ವಿಭಿನ್ನ ಯೋಜನೆ ಇದಾಗಿದ್ದು, ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ ನ ಈ ಯೋಜನೆಯು ನನಸು ಮಾಡಲಿದೆ.   ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ? ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು,

ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಬ್ರೈಟ್ ಭಾರತ್’ ಪರಿಚಯಿಸುತ್ತಿದೆ ಅತೀ ದೊಡ್ಡ ಪ್ರಾಜೆಕ್ಟ್; ಮಾಸಿಕ ಕೇವಲ ಒಂದು ಸಾವಿರದಂತೆ ಪಾವತಿಸಿ- ಎರಡು ಬೆಡ್‌ ರೂಂನ ಮನೆ ಜೊತೆಗೆ ಕಾರು, ಆಕ್ಟಿವಾ, ಚಿನ್ನ, ಬೆಳ್ಳಿ, ವಜ್ರ ನಿಮ್ಮದಾಗಿಸಿ Read More »

ಕರಾವಳಿ

ಪುತ್ತೂರು: ಕಾರು ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ -ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 26. ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಎಂಬಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ಆಟೋ ಚಾಲಕ ರಾಧಾಕೃಷ್ಣ ಸಫಲ್ಯ, ಪ್ರಯಾಣಿಕರಾದ ಬಾಬು ನಾಯ್ಕ ಹಾಗೂ ಶ್ವೇತಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಕಾರು ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ -ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು ಬಂದ್ ಹಿನ್ನೆಲೆ – ವಿಮಾನ ಪ್ರಯಾಣವನ್ನು‌ ರದ್ದುಗೊಳಿಸಿದ ಏರ್ ಲೈನ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 26. ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ ಮಾಡಿ ರೈತ ಪರ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಪರಿಣಾಮ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹೋರಾಟವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ಬಂದ್ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವ ಹಾಗೂ ಬೆಂಗಳೂರಿನಿಂದ ಬೇರೆ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದು ಮಾಡಿರುವ ಹಿನ್ನೆಲೆ ಕೊನೆ ಕ್ಷಣದಲ್ಲಿ ಸುಮಾರು 13 ವಿಮಾನಗಳ ಹಾರಾಟವನ್ನು ಏರ್ ಲೈನ್ಸ್

ಬೆಂಗಳೂರು ಬಂದ್ ಹಿನ್ನೆಲೆ – ವಿಮಾನ ಪ್ರಯಾಣವನ್ನು‌ ರದ್ದುಗೊಳಿಸಿದ ಏರ್ ಲೈನ್ಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶೇಷ ಪೊಲೀಸ್ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಜಮ್ಮು, ಸೆ. 26. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರ ಮೃತದೇಹವು ಕಾಂಕೋಟೆ ಗ್ರಾಮದ ಬಳಿಯ ಮುಖ್ಯ ರಸ್ತೆಯಿಂದ 10 ಅಡಿ ಕೆಳಗೆ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಮೃತರನ್ನು ಎಸ್‍ಪಿಒ ಖಾಲಿಕ್ ಹುಸೇನ್ ಎಂದು ಗುರುತಿಸಲಾಗಿದೆ. ಪೂಂಚ್ ಜಿಲ್ಲಾ ಪೊಲೀಸ್ ಲೈನ್ಸ್‍ನಲ್ಲಿ ನಿಯೋಜಿಸಲಾಗಿದ್ದ ಹುಸೇನ್ ಅವರ ತಲೆಗೆ ಗಾಯಗಳಾಗಿದ್ದು, ಪ್ರಾಥಮಿಕ ತನಿಖೆಯಿಂದ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ವಿಶೇಷ ಪೊಲೀಸ್ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top