ಕೇಂದ್ರದಿಂದ ರಸ್ತೆ ಸುರಕ್ಷತೆಗೆ ಬಿಗ್ ಆಫರ್ ಅಪಘಾತದ ಗಾಯಾಳುಗಳಿಗೆ ನೆರವಾದರೆ ₹25,000 ಕ್ಯಾಶ್ ಪ್ರೈಸ್!

(ನ್ಯೂಸ್‌ ಕಡಬ) newskadaba.com, ಜೂ.11 ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಮರಣ ಪ್ರಮಾಣವನ್ನು ತಗ್ಗಿಸಲು ಎರಡು ಪ್ರಮುಖ ಸುರಕ್ಷತಾ ಯೋಜನೆಗಳನ್ನು ಘೋಷಿಸಿದೆ. ರಸ್ತೆ ಅಪಘಾತಕ್ಕೊಳಗಾದ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಸಾರ್ವಜನಿಕರನ್ನು ‘ರಾಹವೀರ್’ ಎಂದು ಗುರುತಿಸಿ, ಅವರಿಗೆ ಕೇಂದ್ರ ಸರ್ಕಾರದಿಂದ 25,000 ರೂಪಾಯಿ ನಗದು ಬಹುಮಾನ ನೀಡಲಾಗುವುದು. ಅಪಘಾತಕ್ಕೊಳಗಾದವರ ಜೀವ ಉಳಿಸಲು ಮೊದಲ 7 ದಿನಗಳ ತುರ್ತು ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ರಾಷ್ಟ್ರೀಯ ಹೆದ್ದಾರಿ […]

ಕೇಂದ್ರದಿಂದ ರಸ್ತೆ ಸುರಕ್ಷತೆಗೆ ಬಿಗ್ ಆಫರ್ ಅಪಘಾತದ ಗಾಯಾಳುಗಳಿಗೆ ನೆರವಾದರೆ ₹25,000 ಕ್ಯಾಶ್ ಪ್ರೈಸ್! Read More »

ಕರಾವಳಿ, ಕರ್ನಾಟಕ

ಮಂಗಳೂರಿನ ಪ್ರಮುಖ ಬೀಚ್‌ಗಳಲ್ಲಿ ಸಮುದ್ರಕ್ಕಿಳಿಯದಂತೆ ರೆಡ್ ಅಲರ್ಟ್!

(ನ್ಯೂಸ್‌ ಕಡಬ) newskadaba.com, ಜೂ.11 ಮಂಗಳೂರು: ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಹಾಗೂ ಮೂಲ್ಕಿಯ ಸಸಿಹಿತ್ತು ಮುಂಡಾ ಬೀಚ್‌ಗಳಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಮತ್ತು ಎಲ್ಲಾ ರೀತಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ರಕ್ಷಣೆಗಾಗಿ ಪಣಂಬೂರು ಬೀಚ್‌ನಲ್ಲಿ ಕೆಂಪು ಹಗ್ಗ ಹಾಗೂ ಅಪಾಯದ ಮುನ್ಸೂಚನೆ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.ಲೈಫ್‌ಗಾರ್ಡ್‌ಗಳು ಮತ್ತು ಕರಾವಳಿ ಕಾವಲು ಪೊಲೀಸರು 24 ಗಂಟೆಗಳ ಕಾಲ ನಿಗಾ ವಹಿಸಿದ್ದು, ನಿಯಮ

ಮಂಗಳೂರಿನ ಪ್ರಮುಖ ಬೀಚ್‌ಗಳಲ್ಲಿ ಸಮುದ್ರಕ್ಕಿಳಿಯದಂತೆ ರೆಡ್ ಅಲರ್ಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೈತರ ಗಮನಕ್ಕೆ: ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ

(ನ್ಯೂಸ್‌ ಕಡಬ) newskadaba.com, ಜೂ.11 : ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ₹2,000 ಹಣವು ಜೂನ್ ಅಥವಾ ಜುಲೈ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಯೋಜನೆಯ ಲಾಭ: ಅರ್ಹ ರೈತರಿಗೆ ವರ್ಷಕ್ಕೆ ಒಟ್ಟು ₹6,000 ಆರ್ಥಿಕ ನೆರವನ್ನು 3 ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ಮುಂದಿನ ಕಂತಿನ ಹಣ ಪಡೆಯಲು ರೈತರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ರೈತರು PM Kisan GOI ಮೊಬೈಲ್ ಆ್ಯಪ್ ಮೂಲಕ ತಮ್ಮ ಫಲಾನುಭವಿ ಸ್ಥಿತಿಯನ್ನು

ರೈತರ ಗಮನಕ್ಕೆ: ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com, ಜೂ.11  ಸುಳ್ಯ: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಅಭಿಜ್ಞಾ ಭಟ್ (19) ಅವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 10ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ನಗರದ ಖ್ಯಾತ ಇಎನ್‌ಟಿ ತಜ್ಞ ವೈದ್ಯರಾದ ಡಾ. ರವಿಶಂಕರ್ ಅವರ ಹಿರಿಯ ಪುತ್ರಿಯಾಗಿದ್ದಾರೆ. ಜಿಲ್ಲೆಗೆ ಹಾಗೂ ಸುಳ್ಯ ತಾಲ್ಲೂಕಿಗೆ ಹೆಮ್ಮೆ ತಂದಿದ್ದ ಭವಿಷ್ಯದ ಭರವಸೆಯ ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಶಿಕ್ಷಕರು

ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್‌ ಕಡಬ) newskadaba.com, ಜೂ.11  :ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಡಾಲರ್ ಮೌಲ್ಯ ವೃದ್ಧಿಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ 24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 10 ಗ್ರಾಂಗೆ 2,130 ರೂ. ಇಳಿಕೆಯಾಗಿ 1,45,640 ರೂ. ತಲುಪಿದೆ. (1 ಗ್ರಾಂಗೆ 14,564 ರೂ.) 22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 10 ಗ್ರಾಂಗೆ 1,950 ರೂ. ಕುಸಿದು 1,33,500 ರೂ. ದಾಖಲಾಗಿದೆ. ಬೆಳ್ಳಿ ದರ: ಇಂದು ಯಾವುದೇ ಬದಲಾವಣೆ ಕಾಣದೆ

ಇಂದಿನ ಚಿನ್ನದ ದರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್‌ಗೆ ಬಿಎಂಸಿಎ ಒತ್ತಾಯ

(ನ್ಯೂಸ್‌ ಕಡಬ) newskadaba.com, ಜೂ.11  : ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ ಬೆನ್ನಲ್ಲೇ, ಬಿಎಂಆರ್‌ಸಿಎಲ್ ಕೂಡ ನಮ್ಮ ಮೆಟ್ರೋದಲ್ಲಿ ಉಚಿತ ಪಾಸ್ ನೀಡಬೇಕೆಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ ಆಗ್ರಹಿಸಿದೆ. ಸಾರಿಗೆ ವೆಚ್ಚ ಶಿಕ್ಷಣಕ್ಕೆ ತಡೆಯಾಗಬಾರದು. ಉಚಿತ ಪ್ರಯಾಣದಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಲಿದ್ದು, ಸುರಕ್ಷಿತವಾಗಿ ಶಾಲೆ-ಕಾಲೇಜು ತಲುಪಬಹುದು. ಇದು ಸುಸ್ಥಿರ ಸಾರ್ವಜನಿಕ ಸಾರಿಗೆ ಸಂಸ್ಕೃತಿಯನ್ನು ಬೆಳೆಸಿ, ಖಾಸಗಿ ವಾಹನಗಳ ಅವಲಂಬನೆ ಕಡಿಮೆ ಮಾಡುತ್ತದೆ. ಅಲ್ಲದೆ, ಸಾರ್ವಜನಿಕ ಸಾರಿಗೆ ಬಳಕೆಯಿಂದ

ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್‌ಗೆ ಬಿಎಂಸಿಎ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.10. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ  ಪ್ರವಾಹ ರಕ್ಷಣಾ ತಂಡಗಳ ಪೂರ್ವಸಿದ್ಧತೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಬೂಮರಡ್ಡಿ ಅವರು ಪ್ರವಾಹ ರಕ್ಷಣಾ ತಂಡದ ಸಾಮಾಗ್ರಿಗಳಾದ ಫೈಬರ್ ಬೋಟ್, ಲೈಫ್ ಜಾಕೆಟ್, ಲೈಫ್ ಬಾಯ್ ಮತ್ತು ಹಗ್ಗಗಳನ್ನು ಪರೀಕ್ಷಿಸಿ ಪ್ರವಾಹ ರಕ್ಷಣಾ ತಂಡವನ್ನು ಸಿದ್ಧಪಡಿಸಿ, ಪ್ರವಾಹ ರಕ್ಷಣಾ ತಂಡದ ಸದಸ್ಯರುಗಳಿಗೆ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯವನ್ನು ಮಾಡುವ ಕುರಿತು

ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ Read More »

ಕರಾವಳಿ

ಹಾಸ್ಟೆಲ್ ವಾರ್ಡನ್ ಹುದ್ದೆ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.10. ಜಿ.ಟಿ.ಟಿ.ಸಿ. ಬೈಕಂಪಾಡಿ, ಮಂಗಳೂರು ಡಿಪ್ಲೋಮಾ ಕಾಲೇಜಿನ ಹಾಸ್ಟೆಲ್‍ ಗೆ ಹೊರಗುತ್ತಿಗೆ ಆಧಾರದಲ್ಲಿ 1 ವಾರ್ಡನ್ ಹುದ್ದೆಗೆ ಪುರುಷ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಸ್ಟೆಲ್ ನಿರ್ವಹಣೆ, ವಿದ್ಯಾರ್ಥಿಗಳ ಮೇಲ್ವಿಚಾರಣೆ ಮತ್ತು ಶಿಸ್ತುಪಾಲನೆ ಕಾರ್ಯಗಳಲ್ಲಿ ಅನುಭವವನ್ನು ಹೊಂದಿರುವವರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಯು ಹಾಸ್ಟೆಲ್‍ ನಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಹೆಚ್ಚಿನ ಮಾಹಿತಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ ಸಂಸ್ಥೆ (ದೂ.ಸಂ:9008263660, 08242408003) ಸಂಪರ್ಕಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸ್ಟೆಲ್ ವಾರ್ಡನ್ ಹುದ್ದೆ: ಅರ್ಜಿ ಆಹ್ವಾನ Read More »

ಉದ್ಯೋಗ, ಕರಾವಳಿ

ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

(ನ್ಯೂಸ್ ಕಡಬ) newskadaba.com ಜೂ. 10. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಮಹಾನಗರಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಂಬಂಧಿಸಿದ ಇಲಾಖೆಗಳು, ದಕ್ಷಿಣ ಕನ್ನಡ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಬೆಳಿಗ್ಗೆ 10.30 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.

ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ Read More »

ಕರಾವಳಿ

ವಿವಾಹಿತೆಯ ಮೇಲೆ ಅತ್ಯಾಚಾರ ಆರೋಪ ಪೋಸ್ಟ್ ಮ್ಯಾನ್ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಜೂ. 10. ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಗ್ರಾಮೀಣ ಅಂಚೆ ವಿತರಕರೊಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರು, 2023ರ ಡಿಸೆಂಬರ್ ತಿಂಗಳಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಜೂನ್ 7ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುತ್ತೋಡಿ ನಿವಾಸಿಯಾಗಿರುವ

ವಿವಾಹಿತೆಯ ಮೇಲೆ ಅತ್ಯಾಚಾರ ಆರೋಪ ಪೋಸ್ಟ್ ಮ್ಯಾನ್ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top