ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ – ಕಡ್ಡಾಯ ದಂಡ ವಿಧಿಸಲು ಡಿ.ಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಶಾಲಾ,ಕಾಲೇಜುಗಳಲ್ಲಿ ಸಿಗರೇಟ್ ಹಾಗೂ ತಂಬಾಕು ಬಳಕೆಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಬೋರ್ಡ್‍ಗಳನ್ನು ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆಯ ಅಪರಾಧಕ್ಕೆ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್. ಕೆ ಸಲಹೆ ನೀಡಿದರು. ಅವರು ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ, […]

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ – ಕಡ್ಡಾಯ ದಂಡ ವಿಧಿಸಲು ಡಿ.ಸಿ ಸೂಚನೆ Read More »

ಕರಾವಳಿ

ವಿಶ್ವ ಆಹಾರ ದಿನ ಅಕ್ಟೋಬರ್-16 – ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಅ.16. ಪ್ರತಿ ವರ್ಷ ಅಕ್ಟೋಬರ್-16 ರಂದು ವಿಶ್ವ ಆಹಾರ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. 1945 ಅಕ್ಟೋಬರ್-16 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಅಮೇರಿಕಾದಲ್ಲಿ ಪ್ರಾರಂಭಿಸಲಾಯಿತು. ಆಹಾರದ ರಕ್ಷಣೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಎಂದು ಆಚರಿಸಿ ಜನರಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.   ನಮ್ಮ ಆಹಾರ ಎಷ್ಟು ಸುರಕ್ಷಿತ ? ಒಬ್ಬ ವ್ಯಕ್ತಿಯ

ವಿಶ್ವ ಆಹಾರ ದಿನ ಅಕ್ಟೋಬರ್-16 – ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಬಂಟ್ವಾಳ: ಅಪರೂಪದ ಉಡ’ವನ್ನು ಬೇಟೆಯಾಡಿ ಫೋಟೋಗೆ ಪೋಸ್‌ – ಯುವಕನ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 16. ಅಪರೂಪದ ವನ್ಯ ಜೀವಿಗಳಲ್ಲಿ ಒಂದಾದ ಉಡ’ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದರೊಂದಿಗೆ ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆ ಬಂಟ್ವಾಳದ ವಗ್ಗದಲ್ಲಿ ನಡೆದಿದೆ. ಉಡ’ವನ್ನು ಕೊಂದ ವ್ಯಕ್ತಿಯನ್ನು ವಗ್ಗ ನಿವಾಸಿ ಸುಧಾಕರ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ವನ್ಯ ಜೀವಿ ಸಂರಕ್ಷಣ ಕಾಯಿದೆ 1972 ಅನ್ವಯ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅ. 11 ರಂದು ಘಟನೆ ಬೆಳಕಿಗೆ ಬಂದಿದ್ದು, ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು

ಬಂಟ್ವಾಳ: ಅಪರೂಪದ ಉಡ’ವನ್ನು ಬೇಟೆಯಾಡಿ ಫೋಟೋಗೆ ಪೋಸ್‌ – ಯುವಕನ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ತಲೆಮರೆಸಿಕೊಂಡಿದ್ದ ಹಳೆಯ ಪ್ರಕರಣಗಳ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಗಲಾಟೆ, ದೊಂಬಿ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೋರ್ವನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ರವಿವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಜಾಲ್ ಫೈಸಲ್ ನಗರದ ತೌಸೀಫ್ (27)ಎಂದು ಗುರುತಿಸಲಾಗಿದೆ. 2016ರಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಯು ಕಳೆದ ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈ‌ ಬಗ್ಗೆ ‌ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಆರೋಪಿಯ ಬಗ್ಗೆ ಮಾಹಿತಿ ಪಡೆದ

ತಲೆಮರೆಸಿಕೊಂಡಿದ್ದ ಹಳೆಯ ಪ್ರಕರಣಗಳ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ರಿಕೆಟ್ ಬೆಟ್ಟಿಂಗ್ ಆರೋಪ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್, ಅ. 16. ವಾಟ್ಸಾಪ್ ಗ್ರೂಪ್ ಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತರನ್ನು ಸುರತ್ಕಲ್ ಕಟ್ಲ ನಿವಾಸಿ ಮೂಡ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಪ್ರವೀಣ ಮತ್ತು ಚೊಕ್ಕಬೆಟ್ಟು ಕ್ರಾಸ್ ವಿಶಾಲ್ ಮಾರ್ಟ್ ಬಳಿಯ ನಿವಾಸಿ ಮೂಡ ಮಾರುಕಟ್ಟೆಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುನವ್ವರ್ ಎಂದು ಗುರುತಿಸಲಾಗಿದೆ. ಆರೋಪಿ ಪ್ರವೀಣ್ ಎಂಬಾತ ವಾಟ್ಸಾಪ್ ಗ್ರೂಪ್ ಗಳನ್ನು ಮಾಡಿಕೊಂಡು ಅದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ

ಕ್ರಿಕೆಟ್ ಬೆಟ್ಟಿಂಗ್ ಆರೋಪ- ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರ ಚಿನ್ನಾಭರಣ ನಾಪತ್ತೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 16. ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಲಾದ ಚಿನ್ನಾಭರಣಗಳು ನಾಪತ್ತೆಯಾಗಿರುವ ಕುರಿತು ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ವೇಳೆ ಭಕ್ತರೊಬ್ಬರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು. ಇದಲ್ಲದೇ ಎರಡು ಪವನಿನ

ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರ ಚಿನ್ನಾಭರಣ ನಾಪತ್ತೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಈಜಲು ಹೋಗಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 16. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಯ್ಯೂರು ಗ್ರಾಮದ ಎರಕ್ಕಲ ಬಳಿ ಸ್ನೇಹಿತರೊಂದಿಗೆ ಈಜಲು ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ತಸ್ಲೀಮ್ ಎಂಬಾತರ ಮೃತದೇಹ ಸೋಮವಾರದಂದು ಮುಂಜಾನೆ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲೀಮ್ (17) ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ರಜೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ. ಈತ ಭಾನುವಾರದಂದು ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದನು. ಜೊತೆಗಿದ್ದ ಸ್ನೇಹಿತರು ತಕ್ಷಣವೇ

ಪುತ್ತೂರು: ಈಜಲು ಹೋಗಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ – ಲಾರಿ ಸಹಿತ ಮರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 15. ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಮುಟ್ಟು ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಹಚ್ಚಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯಾ ಗ್ರಾಮದ ಲಾವತಡ್ಕ ಎಂಬಲ್ಲಿ ನಡೆದಿದೆ. ವಿವಿಧ ಜಾತಿಯ ಮರಗಳನ್ನು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಪಾಸಣೆ ವೇಳೆ ಲಾರಿಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಶಾಹುಲ್‌ ಹಮೀದ್‌ ಪರಾರಿಯಾಗಿದ್ದಾನೆ

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ – ಲಾರಿ ಸಹಿತ ಮರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮತ್ತೊಂದು ಮೈಲಿಗಲ್ಲಿಗೆ ಸಜ್ಜಾದ ಇಸ್ರೋ – ಮಾನವ ಸಹಿತ ಗಗನಯಾನಕ್ಕೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಚಂದ್ರಯಾನದ ನಂತರ ಮತ್ತೊಂದು ಮೈಲುಗಲ್ಲಿಗೆ ಇಸ್ರೋ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಮುಂದಾಗಿದ್ದು, ಇದರ ಪರೀಕ್ಷಾರ್ಥ ಇದೇ ತಿಂಗಳಲ್ಲಿ ಉಡಾವಣೆ ಪ್ರಕ್ರಿಯೆ ನಡೆಯಲಿರುವುದಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಈಗಾಗಲೇ ಚಂದ್ರಯಾನ ಹಾಗೂ ಸೂರ್ಯಯಾನ ಯೋಜನೆಗಳನ್ನು ಯಶಸ್ವಿಗೊಳಿಸಿ ಇತಿಹಾಸ ನಿರ್ಮಿಸಿದೆ. ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿರುವ ಇಸ್ರೋ, ಮಾನವ ಸಹಿತ ಗಗನಯಾನದ ಯೋಜನೆಗೆ ಸಿದ್ಧತೆ ಮಾಡಿದೆ. ಇದಕ್ಕೂ ಮುನ್ನ ನಡೆಯುವ ಪರೀಕ್ಷಾರ್ಥ

ಮತ್ತೊಂದು ಮೈಲಿಗಲ್ಲಿಗೆ ಸಜ್ಜಾದ ಇಸ್ರೋ – ಮಾನವ ಸಹಿತ ಗಗನಯಾನಕ್ಕೆ ಕ್ಷಣಗಣನೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ – 11 ಸ್ಟಾಲ್ ಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ಇಲ್ಲಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಸ್ಟಾಲ್ ಗಳ ಹರಾಜು ಸಂಬಂಧಿಸಿದಂತೆ 11 ಸ್ಟಾಲ್‌ಗ‌ಳ ಹರಾಜು ಪ್ರಕ್ರಿಯೆ ಶನಿವಾರದಂದು ನಡೆದಿದ್ದು, ಈ ವೇಳೆ ಆರು ಸ್ಟಾಲ್‌ಗ‌ಳನ್ನು ಅನ್ಯ ಸಮುದಾಯದವರು ಪಡೆದುಕೊಂಡಿದ್ದು, ಉಳಿದ ಐದು ಸ್ಟಾಲ್‌ಗ‌ಳು ಹಿಂದೂ ವ್ಯಾಪಾರಸ್ಥರ ಪಾಲಾಗಿದೆ. ದೇವಸ್ಥಾನದ ಆಡಳಿತ ಸಮಿತಿಯು ಮೂರು ದಿನಗಳ ಹಿಂದೆಯೇ ವ್ಯಾಪಾರಕ್ಕೆ ಸಂಬಂಧಿಸಿ ಟೆಂಡರ್‌ ಕರೆದು ಅಂತಿಮಗೊಳಿಸಿದ್ದು, ಈ ಸಂದರ್ಭ 125 ಸ್ಟಾಲ್‌ಗ‌ಳ ಪೈಕಿ 71 ಮಂದಿ ಮಾತ್ರ

ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ – 11 ಸ್ಟಾಲ್ ಗಳ ಹರಾಜು Read More »

ಕರಾವಳಿ, ಕರ್ನಾಟಕ
Scroll to Top