ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಮೃತ್ಯು…!

(ನ್ಯೂಸ್ ಕಡಬ) newskadaba.com ಮಣಿಪಾಲ, ಆ. 16. ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕರೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಮಣಿಪಾಲದಿಂದ ವರದಿಯಾಗಿದೆ.   ಮೃತಪಟ್ಟವರನ್ನು ಚಿಕ್ಕಮಗಳೂರಿನ ಆನಂದ(37) ಎಂದು ಗುರುತಿಸಲಾಗಿದೆ. ಆನಂದರವರು ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಾರಿನಲ್ಲಿ ಕರೆದುಕೊಂಡು ಬಂದಿದ್ದು, ರೋಗಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬಳಿಕ ರಾತ್ರಿ ಉಳಿದುಕೊಳ್ಳಲು ಯಾವುದೇ ರೂಮ್ ಸಿಗದ ಕಾರಣ ಚಾಲಕ ಆನಂದರವರು ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿಯೇ ಮಲಗಿದ್ದರು. ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದ ಇವರು, ಒಳಗಡೆ […]

ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಮೃತ್ಯು…! Read More »

ಕರಾವಳಿ, ಕ್ರೈಮ್ ನ್ಯೂಸ್

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಐಟಿಬಿಪಿಯಲ್ಲಿ ಉದ್ಯೋಗ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 16. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಒಟ್ಟು 819 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿಯಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 01ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಒಟ್ಟಾರೆ 819 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಯ್ಕೆ ಆದವರು ತಿಂಗಳಿಗೆ 69,100 ರೂ.ವರೆಗೆ ಸಂಬಳ ಪಡೆಯಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಐಟಿಬಿಪಿಯಲ್ಲಿ ಉದ್ಯೋಗ – ಅರ್ಜಿ ಆಹ್ವಾನ Read More »

ರಾಷ್ಟ್ರೀಯ ನ್ಯೂಸ್

ರೈಲ್ವೆ ಹಳಿ ಮೇಲೆ ಭೂಕುಸಿತ      ಬೆಂಗಳೂರು-ಮಂಗಳೂರು :ರೈಲು ಸಂಚಾರ ಸ್ಥಗಿತ                                                                              

(ನ್ಯೂಸ್ ಕಡಬ) newskadaba.c0m ಹಾಸನ, ಆ. 16. ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಇದೀಗ ಮತ್ತೆ ಮಣ್ಣು ಕುಸಿದಿದೆ ಎನ್ನಲಾಗಿದೆ.  

ರೈಲ್ವೆ ಹಳಿ ಮೇಲೆ ಭೂಕುಸಿತ      ಬೆಂಗಳೂರು-ಮಂಗಳೂರು :ರೈಲು ಸಂಚಾರ ಸ್ಥಗಿತ                                                                               Read More »

ಕರ್ನಾಟಕ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 16. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದ್ದು ಸೂಪರ್‌ ಹಿಟ್‌ ಚಿತ್ರ ʼಕಾಂತಾರʼದಲ್ಲಿನ ನಟನೆಗಾಗಿ ರಿಷಬ್‌ ಶೆಟ್ಟಿ ಅವರನ್ನು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಟ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ 2ʼ ಸಿನಿಮಾಗೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ. ಅಲ್ಲದೇ ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನೂ ಪಡೆದಿದೆ. ಅತ್ಯುತ್ತಮ ನಟಿ ಪ್ರಶಸ್ತಿ ನಿತ್ಯ ಮೆನನ್‌ ಹಾಗೂ ಮಾನಸಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ Read More »

ರಾಷ್ಟ್ರೀಯ ನ್ಯೂಸ್

ಬ್ಯೂಟಿಷಿಯನ್ ಹತ್ಯೆ ಪ್ರಕರಣ..!           ಆರೋಪಿಗಳು ಅರೆಸ್ಟ್..!  

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 16.  ನಗರದ ಹೊರವಲಯದ ಮಾಗಡಿಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದ 32 ವರ್ಷದ ಬ್ಯೂಟಿಷಿಯನ್ ಲಲಿತಾ ಅಲಿಯಾಸ್ ದಿವ್ಯಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಕಾರಣ ತಿಳಿದು ಬಂದಿದೆ. ಆರೋಪಿಗಳನ್ನು ಶಶಾಂಕ್, ಕಿರಣ್, ರೋಹಿತ್ ಮತ್ತು ಭರತ್ ಎಂದು ಗುರುತಿಸಲಾಗಿದೆ. ಎಲ್ಲರೂ 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳೆಲ್ಲರೂ ಮಾಗಡಿ ತಾಲೂಕಿನ ಕುರುಪಾಳ್ಯ ಮತ್ತು ಇತರ ಭಾಗಗಳ ನಿವಾಸಿಗಳಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ಪ್ರಕಟಣೆ ತಿಳಿಸಿದೆ.

ಬ್ಯೂಟಿಷಿಯನ್ ಹತ್ಯೆ ಪ್ರಕರಣ..!           ಆರೋಪಿಗಳು ಅರೆಸ್ಟ್..!   Read More »

ಕರ್ನಾಟಕ, ಕ್ರೈಮ್ ನ್ಯೂಸ್

‘ನಿರ್ಮಲಾ ತುಂಗಭದ್ರಾ ಅಭಿಯಾನ’        ನವೆಂಬರ್ 4 ರಿಂದ ಆರಂಭ             

(ನ್ಯೂಸ್ ಕಡಬ) newskadaba.c0m ಶೃಂಗೇರಿ, ಆ. 16.  ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾಯ ಟ್ರಸ್ಟ್ ಸಹಯೋಗದಲ್ಲಿ ಶೃಂಗೇರಿಯಿಂದ ಗಂಗಾವತಿ ಬಳಿಯ ಕಿಷ್ಕಿಂದವರೆಗೆ ‘ನಿರ್ಮಲಾ ತುಂಗಭದ್ರಾ ಅಭಿಯಾನ’ 400 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಲು ನವೆಂಬರ್ 4ರಿಂದ ಈ ಅಭಿಯಾನ ಆರಂಭವಾಗಲಿದೆ ಎಂದು ಪರಿಸರ ಪ್ರೇಮಿ ಮತ್ತು ಅಭಿಯಾನದ ಸಂಘಟಕ ಪ್ರೊಫೆಸರ್ ಬಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.  

‘ನಿರ್ಮಲಾ ತುಂಗಭದ್ರಾ ಅಭಿಯಾನ’        ನವೆಂಬರ್ 4 ರಿಂದ ಆರಂಭ              Read More »

ಕರ್ನಾಟಕ

ರಾಷ್ಟ್ರಧ್ವಜ ಕಂಬಕ್ಕೆ ವಿದ್ಯುತ್ ಸ್ಪರ್ಶ..!           ಚರ್ಚ್ ನ ಪಾದ್ರಿ ಮೃತ್ಯು..!                

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 16.  ಸ್ವಾತಂತ್ರ್ಯ ದಿನಾಚರಣೆಯ ಬಳಿಕ ರಾಷ್ಟ್ರಧ್ವಜವನ್ನು ಕೆಳಗಿಳಿಸುವಾಗ ಚಿಕ್ಕ ವಯಸ್ಸಿನ ಚರ್ಚ್‌ನ ಪಾದ್ರಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಮುಳ್ಳೇರಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾದರ್ ಮ್ಯಾಥ್ಯೂ ಕುಡಿಲಿಲ್ (29) ಎಂದು ಗುರುತಿಸಲಾಗಿದೆ. ಧ್ವಜ ಕಂಬ ಒಂದು ಬದಿಗೆ ವಾಲಿದಾಗ ಪಕ್ಕದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.

ರಾಷ್ಟ್ರಧ್ವಜ ಕಂಬಕ್ಕೆ ವಿದ್ಯುತ್ ಸ್ಪರ್ಶ..!           ಚರ್ಚ್ ನ ಪಾದ್ರಿ ಮೃತ್ಯು..!                 Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯುತ್ ಅವಘಡ- ದಂಪತಿ ಮೃತ್ಯು..!

(ನ್ಯೂಸ್ ಕಡಬ) newskadaba.com ದಾವಣಗೆರೆ, ಆ. 16. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿದ ಪರಿಣಾಮ ದಂಪತಿಗಳಿಬ್ಬರು ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಲತಾ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ರೈತರಾಗಿದ್ದ ದಂಪತಿ ಎಂದಿನಂತೆ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಾ ಪಕ್ಕದಲ್ಲೇ ಇದ್ದ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ವಿದ್ಯುತ್ ಅವಘಡ- ದಂಪತಿ ಮೃತ್ಯು..! Read More »

ಕರಾವಳಿ

ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ..!                  ಅಪ್ರಾಪ್ತ ಬಾಲಕರು ಆರೆಸ್ಟ್..!                           

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 16.  ಲಾಲ್‌ಬಾಗ್ ನ ಸಿದ್ದಯ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ ಹಿಡಿದಿದ್ದ ಹದಿನಾಲ್ಕು ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ವಿಜಯ್ ಅಭಿನಯದ ಭೀಮ ಚಿತ್ರ ಪ್ರದರ್ಶನದ ವೇಳೆ ರಾತ್ರಿ 11.30ರ ಸುಮಾರಿಗೆ  ಘಟನೆ ನಡೆದಿದೆ. ಮಧ್ಯಂತರ ವಿರಾಮದ ವೇಳೆ ಶೌಚಗೃಹ ಬಳಸಲು ಬಂದ 23 ವರ್ಷದ ಯುವತಿ ವಾಶ್‌ರೂಮ್ ನಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋಗಳನ್ನು ರೆಕಾರ್ಡ್ ಮಾಡುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ

ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ..!                  ಅಪ್ರಾಪ್ತ ಬಾಲಕರು ಆರೆಸ್ಟ್..!                            Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೈಬರ್ ಕ್ರೈಮ್- ಮಂಗಳೂರು: ಒಂದೇ ವರ್ಷದಲ್ಲಿ 11 ಕೋಟಿ ರೂ. ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16. ಕಳೆದ ಒಂದು ವರ್ಷದಲ್ಲಿ ನಡೆದ ಸೈಬರ್ ವಂಚನೆ ಪ್ರಕರಣಗಳ ಪೈಕಿ ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿಯೇ ವಂಚನೆಗೊಳಗಾದ ಸಂತ್ರಸ್ತರು ಸುಮಾರು 11 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಜನ ಜಾಗೃತರಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು. ಅವರು ಗುರುವಾರದಂದು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಲಾಗಿದ್ದ ಸೈಬರ್ ಅಪರಾಧವನ್ನು ತಡೆಯುವ ಕುರಿತ ಜಾಗೃತಿ ಜಾಥಾ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ಸೈಬರ್ ಕ್ರೈಮ್- ಮಂಗಳೂರು: ಒಂದೇ ವರ್ಷದಲ್ಲಿ 11 ಕೋಟಿ ರೂ. ವಂಚನೆ Read More »

ಕರಾವಳಿ, ಕರ್ನಾಟಕ
Scroll to Top