ಕರ್ನಾಟಕ

ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯದಲ್ಲಿ ಸೆ.1 ರಿಂದ ಮೊಬೈಲ್ ಫೋನ್ ಸಂಪೂರ್ಣ ನಿಷೇಧ!

(ನ್ಯೂಸ್‌ ಕಡಬ) newskadaba.com,  ಆ.22: ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 1ರಿಂದ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ದೇವಾಲಯದ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಗರ್ಭಗುಡಿ ಸೇರಿದಂತೆ ದೇವಾಲಯದೊಳಗೆ ಫೋಟೋ, ವಿಡಿಯೋ ಮತ್ತು ರೀಲ್ಸ್ ಚಿತ್ರೀಕರಣವನ್ನು ತಡೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ದರ್ಶನದ ಸಂದರ್ಭದಲ್ಲಿ ಭಕ್ತರು ಮೊಬೈಲ್ ಅಥವಾ ಕ್ಯಾಮೆರಾ ಬಳಸುವುದರಿಂದ ಸಮಯ ವ್ಯರ್ಥವಾಗುವುದರ […]

ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯದಲ್ಲಿ ಸೆ.1 ರಿಂದ ಮೊಬೈಲ್ ಫೋನ್ ಸಂಪೂರ್ಣ ನಿಷೇಧ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ‘ಅನಲಾಗ್ ಪನ್ನೀರ್’ ನಿಷೇಧ: ಆಹಾರ ಸುರಕ್ಷತಾ ಇಲಾಖೆಯಿಂದ ಕಠಿಣ ಕ್ರಮ

(ನ್ಯೂಸ್‌ ಕಡಬ) newskadaba.com,  ಆ.22: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ‘ಅನಲಾಗ್ ಪನ್ನೀರ್’ ಬಳಕೆಯನ್ನು 1 ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ.ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ  ಮತ್ತು ಕೆಮಿಕಲ್‌ಗಳನ್ನು ಬಳಸಿ ಕೃತಕ ಪನ್ನೀರ್ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೃತಕ ಪನ್ನೀರ್‌ನಲ್ಲಿರುವ ರಾಸಾಯನಿಕಗಳು ಮತ್ತು ಕಳಪೆ ಕೊಬ್ಬಿನಾಂಶದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುವ ಸಾಧ್ಯತೆಯಿದೆ. ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ

ರಾಜ್ಯದಲ್ಲಿ ‘ಅನಲಾಗ್ ಪನ್ನೀರ್’ ನಿಷೇಧ: ಆಹಾರ ಸುರಕ್ಷತಾ ಇಲಾಖೆಯಿಂದ ಕಠಿಣ ಕ್ರಮ Read More »

ಅಡುಗೆ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಬ್ಬು ಬೆಳೆ ಹಾನಿಯಿಂದ ಸಕ್ಕರೆ ಉತ್ಪಾದನೆ ಕುಸಿತ; ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದ ಕೇಂದ್ರ

(ನ್ಯೂಸ್‌ ಕಡಬ) newskadaba.com,  ಆ.22: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣ ಎಂಬ ಆರೋಪಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ತಳ್ಳಿಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಇಳಿಕೆ, ಹಬ್ಬದ ಋತುವಿನ ಬೇಡಿಕೆ ಹಾಗೂ ಜಾಗತಿಕ ಪೂರೈಕೆಯ ಬಿಗಿ ಕ್ರಮಗಳೇ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಎಥೆನಾಲ್ ಉತ್ಪಾದನೆಗೆ ಬಳಸುವ ಸಕ್ಕರೆಯ ಪ್ರಮಾಣವು 2022-23ರಲ್ಲಿ ಶೇ. 12 ರಷ್ಟಿದ್ದು, 2025-26ರ ಋತುವಿನಲ್ಲಿ ಶೇ. 9ಕ್ಕೆ ಇಳಿಕೆಯಾಗಿದೆ.

ಕಬ್ಬು ಬೆಳೆ ಹಾನಿಯಿಂದ ಸಕ್ಕರೆ ಉತ್ಪಾದನೆ ಕುಸಿತ; ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದ ಕೇಂದ್ರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ರೈಲು ಜಾಲ ಸೇರ್ಪಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

(ನ್ಯೂಸ್‌ ಕಡಬ) newskadaba.com,  ಆ.22:ದಕ್ಷಿಣ ಕನ್ನಡ ಜನರ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು ಭಾಗದ ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ, ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಕುರಿತು ಅಧಿಕೃತ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ ಮಂಗಳೂರು ರೈಲ್ವೆ ಜಾಲವು ದಕ್ಷಿಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ನಡುವೆ ಹಂಚಿಹೋಗಿದ್ದರಿಂದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ

ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ರೈಲು ಜಾಲ ಸೇರ್ಪಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ: ಬೆಂಗಳೂರಿನ FSLನಲ್ಲಿ ನಾರ್ಕೋ, ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಆರಂಭ

(ನ್ಯೂಸ್‌ ಕಡಬ) newskadaba.com, ಆ.22: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯ ನಿವಾಸಿ, 15 ವರ್ಷದ ವಿದ್ಯಾರ್ಥಿ ಸುಮಂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ಪ್ರಾರಂಭಿಸಲಾಗಿದೆ. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಸುಮಂತ್, 2026ರ ಜನವರಿ 14ರಂದು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದರು.ಬೆಳ್ತಂಗಡಿ ವೃತ್ತ

ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ: ಬೆಂಗಳೂರಿನ FSLನಲ್ಲಿ ನಾರ್ಕೋ, ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ!

(ನ್ಯೂಸ್‌ ಕಡಬ) newskadaba.com,  ಆ.21: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ರಿಂದ ₹1,20,000 ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ.ಭೌತಿಕ ಪರಿಶೀಲನೆ ನಂತರ ₹1.20 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಪುನರಾರಂಭ. ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ನಡೆಸಿದ ಪರಿಶೀಲನೆಯಲ್ಲಿ 23,14,544 ಸಂದೇಹಾಸ್ಪದ ಖಾತೆಗಳು ಪತ್ತೆಯಾಗಿದ್ದವು.ಸೂಕ್ತ ದಾಖಲೆ ಹಾಗೂ ವಿಳಾಸ ನೀಡದ ಕಾರಣ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಗ್ರಾಮ ಆಡಳಿತಾಧಿಕಾರಿಗಳ ವರದಿ ಆಧಾರದ ಮೇಲೆ

ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಬೆಂಕಿ ಅವಘಡ- ದಿನಸಿ ಅಂಗಡಿ ಸಂಪೂರ್ಣ ಭಸ್ಮ

(ನ್ಯೂಸ್‌ ಕಡಬ) newskadaba.com,  ಆ.21: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳದಲ್ಲಿ ಬುಧವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ದಿನಸಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂದ್ರಾಳ ನಿವಾಸಿ ಶರೀಫ್ ಅವರ ಒಡೆತನದ ಅಂಗಡಿಯಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, . ಜ್ವಾಲೆಗಳು ಅಂಗಡಿ ಮತ್ತು ಕಟ್ಟಡವನ್ನು ಬೇಗನೆ ವ್ಯಾಪಿಸಿದ್ದರಿಂದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾದರು. ಅವರ ಸಕಾಲಿಕ ಕಾರ್ಯಚರಣೆಯಿಂದ ಬೆಂಕಿ ಮತ್ತಷ್ಟು ಹರಡುವುದನ್ನು ತಡೆಯಲು

ಬೆಳ್ತಂಗಡಿ: ಬೆಂಕಿ ಅವಘಡ- ದಿನಸಿ ಅಂಗಡಿ ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಕಲಿ ಔಷಧ ಜಾಲಕ್ಕೆ ಬ್ರೇಕ್: ಸಿ. ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ಆದೇಶ

(ನ್ಯೂಸ್‌ ಕಡಬ) newskadaba.com,  ಆ.21: ಬೆಂಗಳೂರು ದಕ್ಷಿಣದ ದೊಡ್ಡೇರಿ ಹಾಗೂ ಬಿದದಿ ಸಮೀಪದ ಕುರುಬರಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ ಬೃಹತ್ ನಕಲಿ ಔಷಧ ತಯಾರಿಕಾ ಮತ್ತು ಪೂರೈಕೆ ಜಾಲ ಪತ್ತೆಯಾಗಿದೆ. ಆಗಸ್ಟ್ 18ರಂದು ಕರ್ನಾಟಕ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ನಡೆಸಿದ ದಾಳಿಯಲ್ಲಿ ಸುಮಾರು 5.05 ಕೋಟಿ ರೂ. ಮೌಲ್ಯದ ನಕಲಿ ಔಷಧಗಳು, ಯಂತ್ರೋಪಕರಣಗಳು ಹಾಗೂ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರತಿಷ್ಠಿತ MNC ಕಂಪನಿಗಳ ಹೆಸರಿನಲ್ಲಿ ಜೀವಕ್ಕೆ ಅಪಾಯ ತರುವ ನಕಲಿ ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ಈ ಅಂತಾರಾಜ್ಯ ಜಾಲ ಪೂರೈಸುತ್ತಿತ್ತು.. ಪ್ರಕರಣವನ್ನು

ನಕಲಿ ಔಷಧ ಜಾಲಕ್ಕೆ ಬ್ರೇಕ್: ಸಿ. ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಸೆಂಟ್ರಲ್: ವಂದೇ ಭಾರತ್ ರೈಲಿನ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ

(ನ್ಯೂಸ್‌ ಕಡಬ) newskadaba.com,  ಆ.21:  ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆಹಾರ ಪೂರೈಸುವ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ನೈರ್ಮಲ್ಯ, ಆಹಾರ ತಯಾರಿಕೆ, ಸಾಗಣೆ ವಾಹನಗಳ ಶುಚಿತ್ವ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು.ಆಹಾರ ಸುರಕ್ಷತಾ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ರಾಜ್ಯ ಸರ್ಕಾರ ‘QR

ಮಂಗಳೂರು ಸೆಂಟ್ರಲ್: ವಂದೇ ಭಾರತ್ ರೈಲಿನ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳದಲ್ಲಿ ಹಾಡಹಗಲೇ ಭೀಕರ ದರೋಡೆ: ₹8 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾದ ಮುಸುಕುಧಾರಿಗಳು!

(ನ್ಯೂಸ್‌ ಕಡಬ) newskadaba.com,  ಆ.20: ಬಂಟ್ವಾಳದ ಗ್ರಾಮೀಣ ಭಾಗದ ಮುಲ್ಕಾಜೆ ಮಾಡದಲ್ಲಿ ಬೈಕ್ ಸವಾರನನ್ನು ಅಡ್ಡಗಟ್ಟಿ ಹಾಡಹಗಲೇ ಭೀಕರ ದರೋಡೆ ನಡೆಸಲಾಗಿದೆ.ಸುರತ್ಕಲ್ ನಿವಾಸಿ ಮಯ್ಯದಿ. ವಿವಿಧ ಅಂಗಡಿಗಳಿಂದ ಸಿಮೆಂಟ್ ಪೂರೈಕೆಯ ಹಣ ವಸೂಲಿ ಮಾಡಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ.ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಮಯ್ಯದಿಯವರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಬೆದರಿಸಿ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ನಗದು ಹಣವಿತ್ತು ಎಂದು ಶಂಕಿಸಲಾಗಿದೆ.ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್

ಬಂಟ್ವಾಳದಲ್ಲಿ ಹಾಡಹಗಲೇ ಭೀಕರ ದರೋಡೆ: ₹8 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾದ ಮುಸುಕುಧಾರಿಗಳು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top