ಕರ್ನಾಟಕ

ಸುಳ್ಯ : 3 ಕಾರುಗಳ ನಡುವೆ ಸರಣಿ ಅಪಘಾತ – ಕಾರುಗಳು ಜಖಂ

(ನ್ಯೂಸ್‌ ಕಡಬ) newskadaba.com,  ಮೇ.18: ದೇವರಕೊಲ್ಲಿ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತ ಉಂಟಾಗಿ ಕಾರುಗಳು ಜಖಂಗೊಂಡಿರುವ ಘಟನೆ ಸಂಭವಿಸಿದೆ. ಸುಳ್ಯ ಕಡೆಯಿಂದ ಮಡಿಕೇರಿಯತ್ತ ಹೋಗುತ್ತಿದ್ದ ಕಾರಿಗೆ ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಬ್ರೇಕ್ ಹಾಕಿದಾಗ ಅದರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೂರೂ ಕಾರುಗಳು ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯ : 3 ಕಾರುಗಳ ನಡುವೆ ಸರಣಿ ಅಪಘಾತ – ಕಾರುಗಳು ಜಖಂ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಲಸ ಮಾಡದಿದ್ರೆ ವೇತನ ಇಲ್ಲ: ಮುಷ್ಕರಕ್ಕೆ ಸಿದ್ಧವಾಗಿರೋ ಸಾರಿಗೆ ನೌಕರರಿಗೆ KSRTC ವಾರ್ನಿಂಗ್‌

(ನ್ಯೂಸ್‌ ಕಡಬ) newskadaba.com,  ಮೇ.18:  ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರಕ್ಕೆ ಸಿದ್ಧವಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ (KSRTC) ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ. ನಾಡಿದ್ದು ಕೆಲಸ ಮಾಡದಿದ್ದರೆ ‘ನೋ ವರ್ಕ್‌, ನೋ ಪೇ’ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಮೇ 20 ರಂದು ಹೋರಾಟದಲ್ಲಿ ಭಾಗಿಯಾಗಲು ಸಿದ್ಧವಾಗಿರುವ ಸಾರಿಗೆ ನೌಕರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್‌ ಪಾಷಾ ಎಚ್ಚರಿಸಿದ್ದಾರೆ. ಎಲ್ಲಾ ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರತಿಭಟನೆಯಲ್ಲಿ ಭಾಗಿಯಾದರೆ ಸೇವಾ ನಿಯಮಗಳ ಅನ್ವಯ ಕಠಿಣ

ಕೆಲಸ ಮಾಡದಿದ್ರೆ ವೇತನ ಇಲ್ಲ: ಮುಷ್ಕರಕ್ಕೆ ಸಿದ್ಧವಾಗಿರೋ ಸಾರಿಗೆ ನೌಕರರಿಗೆ KSRTC ವಾರ್ನಿಂಗ್‌ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಬಾವಿ ನೀರಲ್ಲಿ ಡೀಸೆಲ್‌ – ನಿವಾಸಿಗಳು ಕಂಗಾಲು!

(ನ್ಯೂಸ್‌ ಕಡಬ) newskadaba.com,  ಮೇ.18: ಈ ಭಾಗದಲ್ಲಿ ಇರೋದು ಬಾವಿಗಳಾ ಅಥವಾ ಡೀಸೆಲ್ ಗುಂಡಿಗಳಾ ಅನ್ನೋ ಅನುಮಾನ ಈಗ ಶುರುವಾಗಿದೆ. ಯಾಕಂದ್ರೆ ಬಾವಿಯಿಂದ ನೀರು ಸೇದಿದರೆ ನೀರಿನ ಬದಲು ಡೀಸೆಲ್ ವಾಸನೆ ಮೂಗಿಗೆ ಅಪ್ಪಳಿಸುತ್ತದೆ. ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಕುಳಿತಿದ್ದಾರೆ. ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಬಲಿಪಗುರಿ ರಸ್ತೆಯ ನಿವಾಸಿಗಳಿಗೆ ಈಗ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆಯಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಕೆಲವು ಮನೆಗಳ ಬಾವಿ

ಮಂಗಳೂರು : ಬಾವಿ ನೀರಲ್ಲಿ ಡೀಸೆಲ್‌ – ನಿವಾಸಿಗಳು ಕಂಗಾಲು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೈಟೆಕ್‌ ಟಚ್‌; 1,000ಕ್ಕೂ ಹೆಚ್ಚು ನೂತನ ಕೊಠಡಿಗಳ ನಿರ್ಮಾಣ!

(ನ್ಯೂಸ್‌ ಕಡಬ) newskadaba.com ಮೇ.18: ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಭಕ್ತರಿಗೆ ಇನ್ನಷ್ಟು ಆಧುನಿಕ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಭಾರೀ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಕ್ಷೇತ್ರಕ್ಕೆ ಬರುವ ಲಕ್ಷಾಂತರ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 1,000ಕ್ಕೂ ಹೆಚ್ಚು ಅತ್ಯಾಧುನಿಕ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಇದರ ಜೊತೆಗೆ, ಸುಮಾರು ₹77.25 ಕೋಟಿ ವೆಚ್ಚದಲ್ಲಿ ಏಕಕಾಲದಲ್ಲಿ 6,000 ಭಕ್ತರು ಪ್ರಸಾದ ಸ್ವೀಕರಿಸಬಹುದಾದ ‘ಜಿ+2’ ಮಾದರಿಯ ಬೃಹತ್ ಅನ್ನದಾಸೋಹ ಭವನ ನಿರ್ಮಾಣವಾಗಲಿದೆ. ಭಕ್ತರಿಗೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೈಟೆಕ್‌ ಟಚ್‌; 1,000ಕ್ಕೂ ಹೆಚ್ಚು ನೂತನ ಕೊಠಡಿಗಳ ನಿರ್ಮಾಣ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಔಷಧಗಳ ಬೆಲೆ 15% ಏರಿಕೆ

(ನ್ಯೂಸ್‌ ಕಡಬ) newskadaba.com ಮೇ.18: ಮಧ್ಯಪ್ರಾಚ್ಯ ಯುದ್ಧದ ಬಿಸಿ ಪೆಟೋಲ್, ಡೀಸೆಲ್‌ಗೆ ಅಷ್ಟೇ ಅಲ್ಲದೆ ಔಷಧಗಳಿಗೂ ತಟ್ಟಿದೆ. ಔಷಧಗಳ ಬೆಲೆ ಶೇ. 15 ರಷ್ಟು ಏರಿಕೆಯಾಗುತ್ತಿದೆ.ಔಷಧಗಳ ಮಾತ್ರೆಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಸಪ್ಲೈ ಚೈನ್ ಮೇಲೆ ಯುದ್ಧದ ಪರಿಣಾಮ ಬೀರಿದ ಕಾರಣ ಔಷಧಗಳ ದರ ಸರಾಸರಿ 15 ರಷ್ಟು ಔಷಧ ದರಗಳು ಹೆಚ್ಚಳವಾಗಿದೆ. ಬಿಪಿ, ಸಕ್ಕರೆ ಕಾಯಿಲೆಯಿಂದ ಹಿಡಿದು ಸಾಮಾನ್ಯ ಜ್ವರದ ಮಾತ್ರೆಗಳ ಬೆಲೆ ಏರಿಕೆಯಾಗಿದೆ. ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫ್

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಔಷಧಗಳ ಬೆಲೆ 15% ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು – ಹಲವರಿಗೆ ಗಾಯ

(ನ್ಯೂಸ್‌ ಕಡಬ) newskadaba.com ಮೇ.18: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಮಾರುತಿ ಆಲ್ಟೊ ಕಾರೊಂದು ಕಾರ್ಕಳದ ಮುನಿಯಾಲಿನ ರಾಜ್ಯ ಹೆದ್ದಾರಿಯ ಸಮೀಪದ ಚರಂಡಿಗೆ ಮಗುಚಿ ಬಿದ್ದ ಘಟನೆ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ಇಬ್ಬರು ಪುರುಷರು ಸೇರಿ ಒಟ್ಟು ಏಳು ಮಂದಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದರು. ಅನಂತರ ಕ್ರೇನ್ ಸಹಾಯದಿಂದ ಅಪಘಾತಕ್ಕೊಳಗಾದ ಕಾರನ್ನು ಮೇಲಕ್ಕೆತ್ತಲಾಯಿತು. ಘಟನೆಯಲ್ಲಿ ಕಾರು ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು – ಹಲವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ : ಹೂಳೆತ್ತುವ ವೇಳೆ ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು

(ನ್ಯೂಸ್‌ ಕಡಬ) newskadaba.com ಮೇ.18: ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ಜಾರಿ ಬಿದ್ದು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ ಕುಕ್ಕಾಜೆ ಎಂಬಲ್ಲಿ ಮೇ. 17 ರ ಸಂಜೆ ವೇಳೆ ನಡೆದಿದೆ. ಕುರಿಯಾಳ ಗ್ರಾಮದ ಕುಕ್ಕಾಜೆ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಎಂಬವರು ಬಾವಿಗೆ ಬಿದ್ದಿದ್ದು, ಅದರಲ್ಲಿ ಓರ್ವರ ಕಾಲಿಗೆ ಗಾಯವಾಗಿದೆ. ಇವರು ಬಾವಿಯ ಹೂಳೆತ್ತುವ ಕೆಲಸ ಮುಗಿಸಿ, ವಾಪಸು ಬಾವಿಯೊಳಗಿನಿಂದ

ಬಂಟ್ವಾಳ : ಹೂಳೆತ್ತುವ ವೇಳೆ ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ಬಂಧನ

(ನ್ಯೂಸ್‌ ಕಡಬ) newskadaba.com,ಮೇ.16: ಕಡಬದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ಬಂಧನ ಕಡಬ: ನೆರೆಮನೆಯ ಮನೆಗೆ ಟಿವಿ ನೋಡಲು ತೆರಳಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಡಬ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಅಲಂಕಾರು ಗ್ರಾಮದ ಜಗದೀಶ ಕುಂಬಾರ @ ಜಗ್ಗ (43) ಎಂದು ಗುರುತಿಸಲಾಗಿದೆ. 14 ವರ್ಷದ ಬಾಲಕಿ ನೆರೆಹೊರೆಯ ಮನೆಗೆ ಟಿವಿ ವೀಕ್ಷಣೆಗೆ ತೆರಳಿದ್ದ ವೇಳೆ ಅಲ್ಲಿಗೆ ಬಂದ ಆರೋಪಿ, ಬಾಲಕಿಯ ಕೈ ಹಿಡಿದು ಎಳೆದು

ಕಡಬದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಇರಾನ್-ಅಮೆರಿಕದ ಸಂಘರ್ಷದಲ್ಲಿ ಭಾರತ ಸಮರ್ಥ ಮಧ್ಯವರ್ತಿ’: ರಷ್ಯಾ ವಿದೇಶಾಂಗ ಸಚಿವ

(ನ್ಯೂಸ್‌ ಕಡಬ) newskadaba.com,ಮೇ.16: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತ ಸಮರ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಹುದು. ಭಾರತಕ್ಕೆ ಅಂತಹ ವಿಶಾಲ ರಾಜತಾಂತ್ರಿಕ ಸಾಮರ್ಥ್ಯ ಇದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ತಿಳಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, “ತುರ್ತು ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಸಂವಾದಗಳನ್ನು ಸ್ಥಾಪಿಸಲು ಪಾಕಿಸ್ತಾನ ಸಹಾಯ ಮಾಡುತ್ತಿದೆ. ಇರಾನ್ ಮತ್ತು ಅದರ ಅರಬ್ ಸ್ನೇಹಿತರ ನಡುವೆ ದೀರ್ಘಾವಧಿಯ ಮಧ್ಯವರ್ತಿಯನ್ನು ಅವರು ಹುಡುಕಿದರೆ, ಭಾರತವು ತನ್ನ ಅಪಾರ

‘ಇರಾನ್-ಅಮೆರಿಕದ ಸಂಘರ್ಷದಲ್ಲಿ ಭಾರತ ಸಮರ್ಥ ಮಧ್ಯವರ್ತಿ’: ರಷ್ಯಾ ವಿದೇಶಾಂಗ ಸಚಿವ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಜೂ.30 ರಿಂದ ಎಸ್‌ಐಆರ್ ಅಭಿಯಾನ ಆರಂಭ

(ನ್ಯೂಸ್‌ ಕಡಬ) newskadaba.com,  ಮೇ.16: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್‌ಗೆ (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ದಿನಾಂಕ ಘೋಷಣೆ ಆಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30 ರಿಂದ ಜು.29 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಈಗಾಗಲೇ ಎಸ್‌ಐಆರ್ ಗಾಗಿ ಮ್ಯಾಪ್

ರಾಜ್ಯದಲ್ಲಿ ಜೂ.30 ರಿಂದ ಎಸ್‌ಐಆರ್ ಅಭಿಯಾನ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top