ಕರ್ನಾಟಕ

ಉಳ್ಳಾಲ : ಸಮುದ್ರ ತೀರದಲ್ಲಿ ಅಪರಿಚಿತನ ಮೃತ ದೇಹ ಪತ್ತೆ

(ನ್ಯೂಸ್‌ ಕಡಬ) newskadaba.com, ಮೇ.19:ಸಮುದ್ರ ತೀರದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವಾರಿಸುದಾರರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ವ್ಯಕ್ತಿಯನ್ನು ಯಾರಾದರೂ ಗುರುತಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಉಳ್ಳಾಲ : ಸಮುದ್ರ ತೀರದಲ್ಲಿ ಅಪರಿಚಿತನ ಮೃತ ದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನಾಭರಣ ಪ್ರಿಯರಿಗೆ ಶಾಕ್: ಮತ್ತೆ ದುಬಾರಿಯಾದ ಗೋಲ್ಡ್ | ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆ; ಗ್ರಾಹಕರಿಗೆ ಬಿಸಿ ತಟ್ಟಿದ ಬೆಲೆ

(ನ್ಯೂಸ್‌ ಕಡಬ) newskadaba.com,ಮೇ.19:ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಮತ್ತೊಮ್ಮೆ ಬಿಸಿ ತಟ್ಟಿದೆ. ಮದುವೆ ಸೀಸನ್ ಹಾಗೂ ಹೂಡಿಕೆ ಉದ್ದೇಶದ ಖರೀದಿ ಹೆಚ್ಚುತ್ತಿರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ದರ ಏರಿಕೆ ದಾಖಲಾಗಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹14,395ಕ್ಕೆ ತಲುಪಿದೆ. 18 ಕ್ಯಾರೆಟ್ ಚಿನ್ನದ ದರ ₹11,778 ಆಗಿದೆ. ಇದೇ ವೇಳೆ ಬೆಳ್ಳಿ ದರವೂ ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ ₹280 ಎಂದು ವರದಿಯಾಗಿದೆ.

ಚಿನ್ನಾಭರಣ ಪ್ರಿಯರಿಗೆ ಶಾಕ್: ಮತ್ತೆ ದುಬಾರಿಯಾದ ಗೋಲ್ಡ್ | ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆ; ಗ್ರಾಹಕರಿಗೆ ಬಿಸಿ ತಟ್ಟಿದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತ್ತೊಂದು ದಾಖಲೆ ಬರೆದ ಯಶ್ ಅಭಿನಯದ ರಾಮಾಯಣ ಸಿನಿಮಾ

(ನ್ಯೂಸ್‌ ಕಡಬ) newskadaba.com,ಮೇ.19: ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಕನ್ನಡ ಸೂಪರ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ ಸದ್ಯ ಸುದ್ದಿಯಲ್ಲಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ಅಪ್ಡೇಟ್ ಬರ್ತಾನೇ ಇದೆ. ಈ ವರ್ಷ ಬಾಲಿವುಡ್ ನ ಬಹುನಿರೀಕ್ಷಿತ ಹಾಗೂ ದೊಡ್ಡ ಬಜೆಟ್ ಚಿತ್ರಗಳಲ್ಲಿ ರಾಮಾಯಣ ಒಂದಾಗಿದೆ. ರಾಮಾಯಣ ಸಿನಿಮಾ ವೀಕ್ಷಣೆಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದು, ಈಗ ರಾಮಾಯಣ ಸಿನಿಮಾ ಬಗ್ಗೆ ಮತ್ತೊಂದು ಅಚ್ಚರಿ ವಿಷ್ಯ ಹೊರ ಬಿದ್ದಿದೆ. ರಾಮಾಯಣ ಸಿನಿಮಾ ಅಂತಿಂತ ಸಿನಿಮಾ

ಮತ್ತೊಂದು ದಾಖಲೆ ಬರೆದ ಯಶ್ ಅಭಿನಯದ ರಾಮಾಯಣ ಸಿನಿಮಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ: ಈಶ್ವರ ಖಂಡ್ರೆ

(ನ್ಯೂಸ್‌ ಕಡಬ) newskadaba.com,ಮೇ.19: ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಅವರು, ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದ

ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ: ಈಶ್ವರ ಖಂಡ್ರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಕ್ತಸಿಕ್ತವಾಗುತ್ತಿವೆ ಕರ್ನಾಟಕದ ರಸ್ತೆಗಳು – ಅಪಘಾತ ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ!

(ನ್ಯೂಸ್‌ ಕಡಬ) newskadaba.com,ಮೇ.19: ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕರ್ನಾಟಕ ಇದೀಗ ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು–2024” ವರದಿ ಆತಂಕಕಾರಿ ಚಿತ್ರಣವನ್ನು ಹೊರಹಾಕಿದೆ.2024ರಲ್ಲಿ ದೇಶಾದ್ಯಂತ ಒಟ್ಟು 4,67,967 ರಸ್ತೆ ಅಪಘಾತಗಳು ಸಂಭವಿಸಿದ್ದು, 1,75,142 ಮಂದಿ ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 500ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಲ್ಲಿ

ರಕ್ತಸಿಕ್ತವಾಗುತ್ತಿವೆ ಕರ್ನಾಟಕದ ರಸ್ತೆಗಳು – ಅಪಘಾತ ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ

(ನ್ಯೂಸ್‌ ಕಡಬ) newskadaba.com,ಮೇ.19: ಇರಾನ್ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಇಂದು ಮಂಗಳವಾರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆಯಷ್ಟು ಏರಿಸಿವೆ.ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 97.77ರೂಪಾಯಿಯಿಂದ 98.64 ರೂಪಾಯಿಗೆ ಹೆಚ್ಚಿಸಲಾಗಿದ್ದು, ಡೀಸೆಲ್ ದರವು 90.67 ರೂಪಾಯಿಯಿಂದ 91.58 ರೂಪಾಯಿಗೆ ಏರಿಕೆಯಾಗಿದೆ. ಇದಕ್ಕೂ ಮೊದಲು ಮೇ 15ರಂದು ಲೀಟರ್‌ಗೆ 3ರೂಪಾಯಿ ದರ ಏರಿಕೆ ಮಾಡಲಾಗಿತ್ತು.ಮುಂಬೈನಲ್ಲಿ ಪೆಟ್ರೋಲ್

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆನೆ ದಾಳಿಗೆ ಬಲಿಯಾದ ಪತ್ನಿ; ಸಾವಿನಲ್ಲೂ ಸಾರ್ಥಕತೆ ಮೆರೆದು ಕಣ್ಣು ದಾನ ಮಾಡಿದ ಪತಿ!

(ನ್ಯೂಸ್‌ ಕಡಬ) newskadaba.com,ಮೇ.19: ದುಬಾರೆ ಸಾಕಾನೆಗಳ ಕಾದಾಟಕ್ಕೆ ಬಲಿಯಾದ ತುಳಸಿ ಅವರ ಅಂಗಾಂಗ ದಾನ ಮಾಡಲು ಪತಿ ಜೋಯೆಲ್ ಮುಂದಾಗಿದ್ದಾರೆ. ದೇಹ ನಜ್ಜುಗುಜ್ಜಾಗಿರುವುದರಿಂದ ಕಣ್ಣುಗಳನ್ನು ಮಾತ್ರ ದಾನ ಮಾಡಲು ವೈದ್ಯರು ಸೂಚಿಸಿದ್ದಾರೆ. ಬೇರೆಯವರ ಮೂಲಕ ನನ್ನ ಪತ್ನಿ ಬದುಕಿರಲಿ” ಎಂದು ಜೋಯೆಲ್ ಭಾವುಕರಾಗಿದ್ದಾರೆ. ಇದೇ ವೇಳೆ, ಸ್ಥಳದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಹಾಗೂ ಸಮಯಕ್ಕೆ ಆಂಬ್ಯುಲೆನ್ಸ್ ಸಿಗಲಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆ ದಾಳಿಗೆ ಬಲಿಯಾದ ಪತ್ನಿ; ಸಾವಿನಲ್ಲೂ ಸಾರ್ಥಕತೆ ಮೆರೆದು ಕಣ್ಣು ದಾನ ಮಾಡಿದ ಪತಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: :ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಾಲನೆ – ವಾಹನಗಳ ಮಾಲೀಕರಿಗೆ ತಲಾ 25 ಸಾವಿರ ದಂಡ!

(ನ್ಯೂಸ್‌ ಕಡಬ) newskadaba.com,ಮೇ.19: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ 2 ಪ್ರತ್ಯೇಕ ಪ್ರಕರಣದಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000 ದಂಡವನ್ನು ವಿಧಿಸಿ ನ್ಯಾಯಾಲಯವು ಆದೇಶಿಸಿದೆ. ಏಪ್ರಿಲ್‌ 06 2026 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ನಲ್ಲಿ KA-19-HT-9694 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏಪ್ರಿಲ್‌ 28. 2026 ರಂದು ಬಿಸಿ ರೋಡ್‌ ನಲ್ಲಿ ಬಳಿ, KA05KG6785 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು

ಬಂಟ್ವಾಳ: :ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಾಲನೆ – ವಾಹನಗಳ ಮಾಲೀಕರಿಗೆ ತಲಾ 25 ಸಾವಿರ ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಇಟಿ – ಮೇ 21 ರವರೆಗೆ ಸರ್ಕಾರಿ ಪಿಯು ಕಾಲೇಜಿನಲ್ಲಿ ದಾಖಲೆ ಪರಿಶೀಲನೆ- ಕರ್ನಾಟಕ ಪರೀಕ್ಷಾ ಪ್ರಾಧಿಕಾರ

(ನ್ಯೂಸ್‌ ಕಡಬ) newskadaba.com,  ಮೇ.18: :ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಇನ್ನೂ ದಾಖಲೆ ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳ ಸಮೇತ ಹತ್ತಿರದ ಸರ್ಕಾರಿ ಪಿಯು ಕಾಲೇಜುಗಳಿಗೆ ಮೇ 21 ರ ಒಳಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಅಭ್ಯರ್ಥಿಗಳ ಕ್ಲೇಮ್ಸ್ ಸರ್ಟಿಫಿಕೇಟ್ ನಲ್ಲಿ ಕ್ಲೇಮ್ಸ್ ನಾಟ್ ವೆರಿಫೈಯ್ಡ್ ಎಂದು ಮುದ್ರಿತವಾಗಿದ್ದಲ್ಲಿ ಅಂತಹವರು ಮಾತ್ರ ಸರ್ಕಾರಿ ಪಿಯು ಕಾಲೇಜಿಗೆಹೋಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಈ

ಸಿಇಟಿ – ಮೇ 21 ರವರೆಗೆ ಸರ್ಕಾರಿ ಪಿಯು ಕಾಲೇಜಿನಲ್ಲಿ ದಾಖಲೆ ಪರಿಶೀಲನೆ- ಕರ್ನಾಟಕ ಪರೀಕ್ಷಾ ಪ್ರಾಧಿಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದುಬಾರೆ ಸಾಕಾನೆ ಶಿಬಿರದಲ್ಲಿ ಭೀಕರ ದುರಂತ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಸಿಲುಕಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮೇ.18: ಸಾಕಾನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬಳು ಸಾವಿಗೀಡಾದ ದುರ್ಘಟನೆ ಕುಶಾಲನಗರ ತಾಲೂಕಿನ ದುಬಾರೆ ಶಿಬಿರದಲ್ಲಿ ನಡೆದಿದೆ‌. ಚೆನ್ನೈ  ಮೂಲದ ಜಿನ್ಮು (33) ಸಾವನ್ನಪ್ಪಿದ್ದ ಮಹಿಳೆ. ಮೇ 18ರ ಬೆಳಿಗ್ಗೆ ಮಹಿಳೆ ಹಾಗೂ ಅವರ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು. ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಭೀಕರ ದುರಂತ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಸಿಲುಕಿ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top