ಕರ್ನಾಟಕ

ವೀಸಾ ಇದ್ದರೂ ಹೈದರಾಬಾದ್ ವಿದ್ಯಾರ್ಥಿ ಭಾರತಕ್ಕೆ ವಾಪಸ್: ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಬಿಗ್ ಶಾಕ್!

(ನ್ಯೂಸ್‌ ಕಡಬ) newskadaba.com,  ಜೂ.25;  ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಮಾನ್ಯ F-1 ವೀಸಾ ಹೊಂದಿದ್ದರೂ, ನೆದರ್‌ಲ್ಯಾಂಡ್ಸ್‌ನ ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಯುಎಸ್ ಕಸ್ಟಮ್ಸ್ಅಧಿಕಾರಿಗಳು ಆತನನ್ನು ತಡೆದು ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ.ತಿಂಗಳುಗಳ ಹಿಂದೆಯೇ ಆತನ ವೀಸಾವನ್ನು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ಇಲ್ಲದೆ ರದ್ದುಗೊಳಿಸಲಾಗಿತ್ತು ಎಂಬ ವಿಷಯ ವಿಮಾನ ನಿಲ್ದಾಣದಲ್ಲಿ ತಿಳಿದುಬಂದಿದೆ. ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆ ಅಥವಾ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿಲ್ಲ ಎಂದು ವಿದ್ಯಾರ್ಥಿ ಆಘಾತ ವ್ಯಕ್ತಪಡಿಸಿದ್ದಾನೆ.ಘಟನೆಯ ನಂತರ ವಿದ್ಯಾರ್ಥಿ ಪರಿಶೀಲಿಸಿದಾಗ ಅಚ್ಚರಿಯ ವಿಷಯ ಹೊರಬಿದ್ದಿದೆ:ಅಮೆರಿಕದ […]

ವೀಸಾ ಇದ್ದರೂ ಹೈದರಾಬಾದ್ ವಿದ್ಯಾರ್ಥಿ ಭಾರತಕ್ಕೆ ವಾಪಸ್: ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಬಿಗ್ ಶಾಕ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಒಂದು ವರ್ಷ ಜಾಮೀನು ಅರ್ಜಿ ನಿಷೇಧಕ್ಕೆ ಸವಾಲು: ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ತುರ್ತು ಅರ್ಜಿ

(ನ್ಯೂಸ್‌ ಕಡಬ) newskadaba.com,  ಜೂ.25 ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ತಮಗೆ ವಿಧಿಸಲಾಗಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಗಳಿಗೆ ಅನ್ವಯವಾಗುವಂತೆ ಈ ಆದೇಶವನ್ನು ಬದಲಿಸಬೇಕು ಎಂದು ವಕೀಲರ ಮೂಲಕ ಮನವಿ ಮಾಡಿದ್ದಾರೆ. ಒಂದು ವರ್ಷದವರೆಗೆ ಜಾಮೀನು ನಿರಾಕರಿಸುವುದರಿಂದ ವೈದ್ಯಕೀಯ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ.ದೀರ್ಘಾವಧಿಯ ಬಂಧನವು

ಒಂದು ವರ್ಷ ಜಾಮೀನು ಅರ್ಜಿ ನಿಷೇಧಕ್ಕೆ ಸವಾಲು: ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ತುರ್ತು ಅರ್ಜಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ರಾಮಮಂದಿರ ಉಡಾಯಿಸಲು ಸ್ಕೆಚ್: ಹರಿಹರ ಪೊಲೀಸರ ಕಾರ್ಯಾಚರಣೆಗೆ ಸಿಕ್ಕಿಬಿದ್ದ ಯುಪಿ ಮೂಲದ ಯುವಕ

(ನ್ಯೂಸ್‌ ಕಡಬ) newskadaba.com,  ಜೂ.25 ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಎಂಬಾತನನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ರಾಮ ಮಂದಿರವನ್ನು ಸ್ಫೋಟಿಸುವ ತನ್ನ ಉದ್ದೇಶವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಈತನ ಮೊಬೈಲ್‌ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ವಾಟ್ಸಾಪ್ ಗ್ರೂಪ್‌ಗಳು, ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಹಾಗೂ ‘ರಾಣಾ ಬಾಯ್’ ಎಂಬ ಹೆಸರಿನ

ರಾಮಮಂದಿರ ಉಡಾಯಿಸಲು ಸ್ಕೆಚ್: ಹರಿಹರ ಪೊಲೀಸರ ಕಾರ್ಯಾಚರಣೆಗೆ ಸಿಕ್ಕಿಬಿದ್ದ ಯುಪಿ ಮೂಲದ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

“ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ”: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

(ನ್ಯೂಸ್‌ ಕಡಬ) newskadaba.com,  ಜೂ.25:   “ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕ್ರೌರ್ಯ ಮತ್ತು ಲೈಂಗಿಕ ದುರ್ಬಳಕೆಯ ಗಂಭೀರ ಆರೋಪ ಎದುರಿಸುತ್ತಿರುವ ಬೆಂಗಳೂರಿನ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಎಂಬಾತನಿಗೆ, ರಕ್ಷಿಸಲಾದ 9 ನಾಯಿಗಳ ಕಸ್ಟಡಿಯನ್ನು ಮರಳಿ ನೀಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು “ಆಘಾತಕಾರಿ” ಎಂದು ಕಟುವಾಗಿ ಟೀಕಿಸಿತು. “ಪ್ರಾಣಿಗಳಿಗೆ

“ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ”: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ

(ನ್ಯೂಸ್‌ ಕಡಬ) newskadaba.com,  ಜೂ.22 ನೀಟ್ -ಯುಜಿ ಮರು ಪರೀಕ್ಷೆ 2026 ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ಹೇರಿದ್ದ ನಿಷೇಧವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆರವುಗೊಳಿಸಿದೆ. ಇಂದಿನಿಂದ ಭಾರತದಲ್ಲಿ ಟೆಲಿಗ್ರಾಮ್ ಮೇಲಿನ ನಿಷೇಧ ಹಿಂಪಡೆಯಲಾಗಿದ್ದು, ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ‘ಮೆಸೇಜ್-ಎಡಿಟಿಂಗ್’ ಮೇಲಿನ ನಿರ್ಬಂಧವನ್ನು ಜೂನ್ 30 ರವರೆಗೆ ಮುಂದುವರಿಸಲು ಸರ್ಕಾರ ಆದೇಶಿಸಿದೆ.ಸದ್ಯ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಆ್ಯಪ್ ಇನ್ನು ಲಭ್ಯವಾಗಿಲ್ಲದಿದ್ದರೂ, ಇಂಟರ್ನೆಟ್ ಸೇವಾ ಪೂರೈಕೆದಾರರು ಹಂತಹಂತವಾಗಿ ನಿಷೇಧವನ್ನು

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ

(ನ್ಯೂಸ್‌ ಕಡಬ) newskadaba.com,  ಜೂ.22 ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಬಿಜೆಪಿ ಹೈಡ್ರಾಮಾವೊಂದಕ್ಕೆ ವೇದಿಕೆ ಸಿದ್ಧಪಡಿಸಿದೆ.ಪಕ್ಷದ ಎಲ್ಲಾ 63 ಶಾಸಕರನ್ನು ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಕರೆದೊಯ್ದು, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಆಣೆ-ಪ್ರಮಾಣ ಮಾಡಿಸಲು ಕಮಲ ಪಾಳಯ ನಿರ್ಧರಿಸಿದೆ. ಇದೇ ಗುರುವಾರ ಅಥವಾ ಶುಕ್ರವಾರ ಧರ್ಮಸ್ಥಳದಲ್ಲೇ ಮಹತ್ವದ ಬಿಜೆಪಿ ಶಾಸಕಾಂಗ

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ: ಸಿಎಂಗೆ ಸಾರಿಗೆ ನಿಗಮಗಳ ಪ್ರಸ್ತಾವನೆ

(ನ್ಯೂಸ್‌ ಕಡಬ) newskadaba.com,  ಜೂ.22 : ರಾಜ್ಯದ ಸಾರಿಗೆ ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ದರ ಪರಿಷ್ಕರಣೆಗೆ ಕೋರಿ KSRTC, BMTC, ಕಲ್ಯಾಣ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಶಕ್ತಿ ಯೋಜನೆ ,ಗಣನೀಯವಾಗಿ ಏರಿಕೆಯಾಗಿರುವ ಡೀಸೆಲ್ ದರ ಹಾಗೂ ನೌಕರರ ಸಂಬಳ ಹೆಚ್ಚಳದಿಂದಾಗಿ ನಿಗಮಗಳ ಮೇಲೆ ಭಾರಿ ಆರ್ಥಿಕ ಹೊರೆ ಬಿದ್ದಿದೆ. ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ

ರಾಜ್ಯದಲ್ಲಿ ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ: ಸಿಎಂಗೆ ಸಾರಿಗೆ ನಿಗಮಗಳ ಪ್ರಸ್ತಾವನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.2ರಷ್ಟು ದಿಢೀರ್ ಏರಿಕೆ!

(ನ್ಯೂಸ್‌ ಕಡಬ) newskadaba.com,  ಜೂ.22  ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯಿಂದ ಇರಾನ್ ನಿಯೋಗ ಹೊರನಡೆದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 2 ರಷ್ಟು ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82.30 ಡಾಲರ್ (ಅಂದಾಜು ₹7,700) ತಲುಪಿದ್ದರೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ತೈಲದ ಬೆಲೆ ಬ್ಯಾರೆಲ್‌ಗೆ 78 ಡಾಲರ್ (ಅಂದಾಜು ₹7,300) ಗಡಿ ದಾಟಿದೆ.

ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.2ರಷ್ಟು ದಿಢೀರ್ ಏರಿಕೆ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ – ಮಂಗಳೂರು ಮಾರ್ಗದಲ್ಲಿ ಹೆಚ್ಚಿದ ಬಸ್ ಸಮಸ್ಯೆ: ಸರ್ಕಾರಿ ವೇಗದೂತ ಬಸ್ ಸಂಚಾರಕ್ಕೆ ಸಾರ್ವಜನಿಕರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಜೂ.22  ಪ್ರತಿನಿತ್ಯ ವಿಟ್ಲದಿಂದ ಮಂಗಳೂರಿಗೆ ಸಂಚರಿಸುವ ನೂರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸೂಕ್ತ ಬಸ್ ಸೌಕರ್ಯವಿಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಸರ್ಕಾರಿ ವೇಗದೂತ ಬಸ್‌ಗಳನ್ನು ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪ್ರಸ್ತುತ ಚಾಲ್ತಿಯಲ್ಲಿರುವ ಕಪ್ಪು ನಾಮಫಲಕದ ಶಟಲ್ ಬಸ್‌ಗಳು ಹಳೆಯದಾಗಿದ್ದು, ವಿಟ್ಲದಿಂದ ಮಂಗಳೂರು ತಲುಪಲು ಸುಮಾರು ಒಂದೂವರೆಯಿಂದ ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿವೆ. ಬೆಳಗ್ಗಿನ ಅವಧಿಯಲ್ಲಿ ಬಸ್‌ಗಳು ವಿಟ್ಲದಿಂದ ಹೊರಡುವಾಗಲೇ ಭರ್ತಿಯಾಗುತ್ತಿದ್ದು, ಮಂಗಿಲಪದವು, ಕೆಲಿಂಜ, ವೀರಕಂಬ ತಲುಪುವಾಗ ಕಾಲಿಡಲು ಜಾಗವಿಲ್ಲದಂತಾಗುತ್ತಿವೆ. ಶೇ. 90ರಷ್ಟು ಪ್ರಯಾಣಿಕರು ನೇರವಾಗಿ ಮಂಗಳೂರಿಗೇ

ವಿಟ್ಲ – ಮಂಗಳೂರು ಮಾರ್ಗದಲ್ಲಿ ಹೆಚ್ಚಿದ ಬಸ್ ಸಮಸ್ಯೆ: ಸರ್ಕಾರಿ ವೇಗದೂತ ಬಸ್ ಸಂಚಾರಕ್ಕೆ ಸಾರ್ವಜನಿಕರ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಎಕ್ಕೂರು ರೈಲ್ವೆ ಮೇಲ್ಸೇತುವೆ ಬಳಿ ಅಪಘಾತ: ಎಸಿ ಮೆಕ್ಯಾನಿಕ್ ಸುಧೀಶ್ ನಿಧನ

(ನ್ಯೂಸ್‌ ಕಡಬ) newskadaba.com,  ಜೂ.22  ಮಂಗಳೂರು: ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಜೂನ್ 21ರ ಭಾನುವಾರ ಬೆಳಿಗ್ಗೆ ಇಲ್ಲಿನ ಎಕ್ಕೂರು ರಾಷ್ಟ್ರೀಯ ಹೆದ್ದಾರಿ 66ರ ರೈಲ್ವೆ ಮೇಲ್ಸೇತುವೆಯ ಮೇಲೆ ಸಂಭವಿಸಿದೆ. ಮೃತರನ್ನು ಮಂಜೇಶ್ವರದ ಪಾತೂರಿನ ನಿವಾಸಿ, ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಧೀಶ್ ಸಿ.ಕೆ. (26) ಎಂದು ಗುರುತಿಸಲಾಗಿದೆ. ಅವರು ಮನೆಯಿಂದ ಕೆಲಸದ ನಿಮಿತ್ತ ಮಂಗಳೂರು ನಗರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಮೇಲ್ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿಗೆ

ಮಂಗಳೂರು ಎಕ್ಕೂರು ರೈಲ್ವೆ ಮೇಲ್ಸೇತುವೆ ಬಳಿ ಅಪಘಾತ: ಎಸಿ ಮೆಕ್ಯಾನಿಕ್ ಸುಧೀಶ್ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top