ಕರ್ನಾಟಕ

ಏರ್‌ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ₹51 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್‌ ಬೆಸ್ಟ್!

(ನ್ಯೂಸ್‌ ಕಡಬ) newskadaba.com,  ಜು.09 ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಸೂಕ್ತವಾದ ಡೇಟಾ ಮತ್ತು ಕರೆ ಸೌಲಭ್ಯ ನೀಡಲು ಟೆಲಿಕಾಂ ಕಂಪನಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಏರ್‌ಟೆಲ್, ಜಿಯೋ ಮತ್ತು ಬಿಎಸ್‌ಎನ್‌ಎಲ್ ಕಂಪನಿಗಳ ₹51 ಆಸುಪಾಸಿನ ಪ್ಲಾನ್‌ಗಳ ಹೋಲಿಕೆ ಇಲ್ಲಿದೆ: 1. ಬಿಎಸ್‌ಎನ್‌ಎಲ್‌ (BSNL) – ₹51 ಪ್ಲಾನ್: ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಉಚಿತ SMS. ದಿನಕ್ಕೆ 2GB ಹೈ-ಸ್ಪೀಡ್ ಡೇಟಾ (28 ದಿನಗಳಿಗೆ ಒಟ್ಟು 56GB ಡೇಟಾ).ವ್ಯಾಲಿಡಿಟಿ: 28 ದಿನಗಳು.   […]

ಏರ್‌ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ₹51 ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್‌ ಬೆಸ್ಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ದುರ್ಮರಣ

(ನ್ಯೂಸ್‌ ಕಡಬ) newskadaba.com,  ಜು.09 ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲುನಲ್ಲಿ ಲಾರಿ ಹಾಗೂ ಕ್ರೂಸರ್ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ತೀವ್ರತೆಗೆ ಆರು ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಧಾರವಾಡ ಮೂಲದ ಬಸವರಾಜ್, ಮಂಜುನಾಥ್ ಚುಲ್ಲಕ್ಕಿ, ಅಭಿಷೇಕ್ ಮಲ್ಲೇಶ್ ಮಡಬಾವಿ ಮತ್ತು ಅಕ್ಷಯ್ ಮಲ್ಲಣ್ಣನವರ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಇನ್ನು ಪತ್ತೆಯಾಗಬೇಕಿದೆ. ಕ್ರೂಸರ್ ವಾಹನವು ಧಾರವಾಡದಿಂದ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿದ್ದಾಗ, ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಈ

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ದುರ್ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ರಾಹಕರಿಗೆ ಶಾಕ್: ಪ್ರತಿ ಗ್ರಾಂ ಚಿನ್ನದ ದರದಲ್ಲಿ ಹೆಚ್ಚಳ; ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ಹೀಗಿದೆ

(ನ್ಯೂಸ್‌ ಕಡಬ) newskadaba.com,  ಜು.09  : 24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯಾಗಿದ್ದು, 14,324 ರೂ. ತಲುಪಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,43,240 ರೂ. ಆಗಿದೆ. 22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 1 ಗ್ರಾಂಗೆ 10 ರೂ. ಹೆಚ್ಚಳದೊಂದಿಗೆ 13,130 ರೂ. ಹಾಗೂ 10 ಗ್ರಾಂ ಆಭರಣ ಚಿನ್ನದ ಬೆಲೆ 1,31,300 ರೂ. ದಾಖಲಾಗಿದೆ.

ಗ್ರಾಹಕರಿಗೆ ಶಾಕ್: ಪ್ರತಿ ಗ್ರಾಂ ಚಿನ್ನದ ದರದಲ್ಲಿ ಹೆಚ್ಚಳ; ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ಹೀಗಿದೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್!

(ನ್ಯೂಸ್‌ ಕಡಬ) newskadaba.com,  ಜು.09  : ರಾಜ್ಯದ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಹಾಗೂ ಮರ ಉರುಳುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್‌ಗೆ ಜುಲೈ 10ರಿಂದ 12ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ತಲಕಾವೇರಿ ಹಾಗೂ ಭಾಗಮಂಡಲ

ಕೊಡಗಿನಲ್ಲಿ ಮಳೆ ಅಬ್ಬರ: ಜುಲೈ 10 ರಿಂದ 12 ರವರೆಗೆ ಪ್ರಸಿದ್ಧ ಪ್ರವಾಸಿ ತಾಣ ‘ರಾಜಾಸೀಟ್’ ಪ್ರವೇಶ ಬಂದ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ

(ನ್ಯೂಸ್‌ ಕಡಬ) newskadaba.com,  ಜು.09  ಕೇಂದ್ರ ಲೋಕಸೇವಾ ಆಯೋಗವು (UPSC) ವೈದ್ಯಾಧಿಕಾರಿ, ಡ್ರಗ್ ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡ್ರಗ್ ಇನ್‌ಸ್ಪೆಕ್ಟರ್ (186), ಅಸಿಸ್ಟೆಂಟ್ ಪ್ರೊಫೆಸರ್ (104), ಕಂಪನಿ ಪ್ರಾಸಿಕ್ಯೂಟರ್ (18), ಲೀಗಲ್ ಆಫೀಸರ್ (12), ವೈದ್ಯಾಧಿಕಾರಿ (3) ಹಾಗೂ ಇತರೆ ಆಡಳಿತಾತ್ಮಕ/ತಾಂತ್ರಿಕ ಹುದ್ದೆಗಳು. ಹುದ್ದೆಗಳಿಗೆ ಅನುಗುಣವಾಗಿ MBBS, B.Pharm, BE/B.Tech, LLB, ಅಥವಾ ಯಾವುದೇ ಮಾನ್ಯತೆ ಪಡೆದ

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೇಂದ್ರ ಲೋಕಸೇವಾ ಆಯೋಗದಿಂದ 450 ವಿವಿಧ ಪ್ರತಿಷ್ಠಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ

(ನ್ಯೂಸ್‌ ಕಡಬ) newskadaba.com,  ಜು.09  ಪುತ್ತೂರು: ಪುತ್ತೂರು ಭೂ ನ್ಯಾಯಮಂಡಳಿ ಸದಸ್ಯ ಹಾಗೂ ಪ್ರಸಿದ್ಧ ಕಂಬಳ ವ್ಯಾಖ್ಯಾನಕಾರರಾದ ನಿರಂಜನ್ ರೈ ಮಠಂದಬೆಟ್ಟು (ಜುಲೈ 8) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರ (AC) ಕಚೇರಿಯಲ್ಲಿ ಎಸಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಭೂ ನ್ಯಾಯಮಂಡಳಿ ಸಭೆ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಭೆಯ ನಡುವೆ ನಿರಂಜನ್ ರೈ ಅವರು ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಇತರೆ

ಕಂಬಳ ಲೋಕದ ಧ್ವನಿ ನಿರಂಜನ್ ರೈ ಮಠಂದಬೆಟ್ಟು ಇನ್ನಿಲ್ಲ: ಸಭೆಯ ನಡುವೆಯೇ ಹೃದಯಾಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ಎಲ್ಲಾ ಎಪಿಎಲ್ ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆ ವಿಸ್ತರಣೆ: ಸಚಿವ ಯು.ಟಿ.ಖಾದರ್

(ನ್ಯೂಸ್‌ ಕಡಬ) newskadaba.com,  ಜು.09  ಸುಳ್ಯ: ರಾಜ್ಯದ ಎಲ್ಲಾ ಎಪಿಎಲ್ (APL) ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಕಟಿಸಿದ್ದಾರೆ. “ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರವಿರುವಾಗ ಜಾತಿ, ಧರ್ಮ ಹಾಗೂ ಪಕ್ಷ ರಹಿತವಾಗಿ ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ನಿಜವಾದ ಸೇವೆ” ಎಂದು ಅವರು ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಸುಳ್ಯ ತಾಲೂಕು

ರಾಜ್ಯದ ಎಲ್ಲಾ ಎಪಿಎಲ್ ಕಾರ್ಡ್‌ದಾರರಿಗೂ ಶೀಘ್ರದಲ್ಲೇ ಆಯುಷ್ಮಾನ್ ಆರೋಗ್ಯ ಯೋಜನೆ ವಿಸ್ತರಣೆ: ಸಚಿವ ಯು.ಟಿ.ಖಾದರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ

(ನ್ಯೂಸ್‌ ಕಡಬ) newskadaba.com,  ಜು.09:  ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ರೆಡಿಯಂಟ್ ಸ್ಟಾರ್ ಹೋಟೆಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯೋಧರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕೊಯಿಲಾ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಜುಲೈ 3ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಜುಲೈ 8ರಂದು ಮಧ್ಯಾಹ್ನ ಕೊಯಿಲಾದಿಂದ ತಮ್ಮ ಬೈಕ್ (KA-21-K-7558) ನಲ್ಲಿ ಹೊರಟಿದ್ದಾಗ ಸಂಜೆ 3:40ರ

ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಯನಾಡು ಭೂಕುಸಿತ: ಮೂವರ ಮೃತ್ಯು ಇಂಜಿನಿಯರ್ ಸೇರಿ ಐವರು ನಾಪತ್ತೆ – ಬಿರುಸಿನ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com, ಜು.09: ಕೇರಳದ ಮೆಪ್ಪಾಡಿಯ ಕಲ್ಲಾಡಿ ಬಳಿ ಸುರಂಗ ರಸ್ತೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ಕೇರಳದ ಜಿಲ್ಲಾಧಿಕಾರಿ (ಡಿಸಿ) ಮೇಘಶ್ರೀ ತಿಳಿಸಿದ್ದಾರೆ. ಮಧ್ಯಪ್ರದೇಶದ ಜೆಸಿಬಿ ಆಪರೇಟರ್ ಚಂದ್ರಬಾನ್, ಬಿಹಾರದ ಬಿಕಾಶ್ ಕುಮಾರ್ ಮತ್ತು ಜಾರ್ಖಂಡ್‌ನ ಕಾರ್ಮಿಕ ಅನ್ಮೋಲ್ ಎಂದು ಗುರುತಿಸಲಾಗಿದೆ.ವಿವಿಧ ರಾಜ್ಯಗಳ ಮೂಲದ ಇಂಜಿನಿಯರ್ ಹಾಗೂ ಸರ್ವೇಯರ್ ಸೇರಿದಂತೆ ಒಟ್ಟು ಐವರು ನಾಪತ್ತೆಯಾಗಿದ್ದಾರೆ.ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನ 200ಕ್ಕೂ ಹೆಚ್ಚು ಸಿಬ್ಬಂದಿ ಬಿರುಸಿನ ಶೋಧ

ವಯನಾಡು ಭೂಕುಸಿತ: ಮೂವರ ಮೃತ್ಯು ಇಂಜಿನಿಯರ್ ಸೇರಿ ಐವರು ನಾಪತ್ತೆ – ಬಿರುಸಿನ ಶೋಧ ಕಾರ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಆಲೆಟ್ಟಿ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ; ವ್ಯಾಪಕ ಕೃಷಿ ನಾಶ, ರೈತರಲ್ಲಿ ಆತಂಕ!

(ನ್ಯೂಸ್‌ ಕಡಬ) newskadaba.com,  ಜು.09:   ಸುಳ್ಯತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿ 275ನ್ನು ದಾಟಿ ಬಂದು ವ್ಯಾಪಕ ಕೃಷಿ ನಾಶ ಮಾಡಿರುವ ಘಟನೆ ನಡೆದಿದೆ.ರಾತ್ರಿ ಸುಮಾರು 10:45ರ ವೇಳೆಗೆ ಏಳು ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಅದರಲ್ಲಿ ಐದು ಆನೆಗಳು ಸ್ಥಳೀಯರಾದ ಎಸ್.ಎನ್. ಮಾಸ್ಟರ್ ಅವರ ತೋಟಕ್ಕೆ ನುಗ್ಗಿ ಬೆಳೆಯನ್ನು ಸಂಪೂರ್ಣ ನಾಶಪಡಿಸಿವೆ. ಮುಂಜಾನೆ 4 ಗಂಟೆಯ ಸುಮಾರಿಗೆ ಬಂದ ದಾರಿಯಲ್ಲೇ ವಾಪಸ್ ತೆರಳಿದ ಆನೆಗಳು, ಸರ್ಕಾರಿ ಸಾಗುವಾನಿ ನೆಡುತೋಪನ್ನು ಪ್ರವೇಶಿಸಿವೆ. ಬೆಳಿಗ್ಗೆ 7

ಸುಳ್ಯ: ಆಲೆಟ್ಟಿ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ; ವ್ಯಾಪಕ ಕೃಷಿ ನಾಶ, ರೈತರಲ್ಲಿ ಆತಂಕ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top