ಕರ್ನಾಟಕ

ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣ: ಹ್ಯಾಕರ್ ಮೂಲ ಪತ್ತೆ

(ನ್ಯೂಸ್‌ ಕಡಬ) newskadaba.com,  ಸೆ.26 ಬೆಂಗಳೂರು: ಉಪೇಂದ್ರ ದಂಪತಿಗಳ ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್‌ಗಳ ಮೂಲ ಪತ್ತೆ ಮಾಡಿದ್ದಾರೆ.ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಳು ಬಿಹಾರದಿಂದಲೇ 4-5 ಜನರಿಂದ ಉಪೇಂದ್ರ ದಂಪತಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಹಣ ಕೇಳಿದ್ದು, ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, 4 ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.ಆ ನಾಲ್ಕು ಅಕೌಂಟ್ […]

ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣ: ಹ್ಯಾಕರ್ ಮೂಲ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕೃಷಿ ಕಾರ್ಮಿಕ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.26 ಕುಂದಾಪುರ: ತೆಂಗಿನ ತೋಟದಲ್ಲಿ ಕಾಯಿ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಬಳಿ ಬುಧವಾರ ನಡೆದಿದೆ.ಮೃತರನ್ನು ಅಚ್ಲಾಡಿ ಅಂಬೇಡ್ಕರ್ ಕಾಲೋನಿಯ ನಿವಾಸಿ ಶರತ್ (32) ಎಂದು ಗುರುತಿಸಲಾಗಿದೆ. ಶರತ್ ಅವರು ಬುಧವಾರ ತಮ್ಮ ಮನೆಯ ಸಮೀಪದ ಅಚ್ಲಾಡಿಯಲ್ಲಿ ಗುತ್ತಿಗೆದಾರರೊಬ್ಬರೊಂದಿಗೆ ತೆಂಗಿನ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಮರದಿಂದ ತೆಂಗು ಕೊಯ್ದು ಟೆಂಪೋಗೆ ತುಂಬಿಸುವ

ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕೃಷಿ ಕಾರ್ಮಿಕ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ – ಗುಡುಗು ಸಹಿತ ಭಾರಿ ಮಳೆ

(ನ್ಯೂಸ್‌ ಕಡಬ) newskadaba.com,  ಸೆ.26 ಬೆಂಗಳೂರು: ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಶುಕ್ರವಾರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ನೀಡಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವ ಇದೆ. ಕರಾವಳಿಯಲ್ಲಿ ಸೆಪ್ಟೆಂಬರ್‌ 27ರವರೆಗೆ ಗಂಟೆಗೆ 60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.  ಇನ್ನು ಮುಂದಿನ 24 ಗಂಟೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ – ಗುಡುಗು ಸಹಿತ ಭಾರಿ ಮಳೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ನಿಂತಿದ್ದ ಪಿಕ್ ಅಪ್ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ; ಪಾದಚಾರಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.26 ಉಡುಪಿ: ಟಿಪ್ಪರ್ ಲಾರಿಯೊಂದು ನಿಂತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದು, ಬಳಿಕ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ಕಾಮತ್ ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆಪ್ಟೆಂಬರ್ 25ರಂದು ಸಂಭವಿಸಿದೆ. ಮೃತರನ್ನು ಬಿಹಾರ ಮೂಲದ ರಾಜಕುಮಾರ್ ಶರ್ಮಾ (23) ಎಂದು ಗುರುತಿಸಲಾಗಿದೆ. ಮೃತರು ಎರ್ಮಾಳ್‌ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಪಘಾತ ಸಂಭವಿಸುವಾಗ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿಯ ಕಡೆಗೆ

ಉಡುಪಿ: ನಿಂತಿದ್ದ ಪಿಕ್ ಅಪ್ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ; ಪಾದಚಾರಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭರ್ಜರಿ ಹೂವುಗಳ ದರ ಕುಸಿತ

(ನ್ಯೂಸ್‌ ಕಡಬ) newskadaba.com,  ಸೆ.26 ಬೆಂಗಳೂರು: ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೂವುಗಳು ಗುಣಮಟ್ಟ ಕಳೆದುಕೊಂಡ ಹಿನ್ನೆಲೆಯಲ್ಲಿ ಹೂವುಗಳು ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕು ವಿವಿಧೆಡೆ ರೈತರು ನಾಡಹಬ್ಬದಸರಾ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಕಲರ್ ಕಲರ್ ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಪಿತೃಪಕ್ಷದ ಸಮಯದಲ್ಲಿ ಬೆಲೆ ಇಳಿಕೆ ಸಹಜ ಎಂದುಕೊಂಡರೆ ಈಗ

ಭರ್ಜರಿ ಹೂವುಗಳ ದರ ಕುಸಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯ ಕಲ್ಸಂಕ ಬಳಿ ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ – ಸವಾರರಿಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,  ಸೆ.26 ಉಡುಪಿ : ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಲ್ಸಂಕ-ಗುಂಡಿಬೈಲು ಸಮೀಪ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಹಾಗೂ ಸಹಸವಾರನಿಗೆ ಗಂಭೀರ ಗಾಯಗಳಾಗಿದೆ..ಬೈಕ್ ಸವಾರ ಗಣೇಶ್ ಕರ್ಕೇರ, ಸಹಸವಾರ ಗಜೇಂದ್ರ ಅವರನ್ನು ಸ್ಥಳೀಯರ ಸಹಕಾರದಿಂದ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿಯ ಕಲ್ಸಂಕ ಬಳಿ ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ – ಸವಾರರಿಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೆ.27ರಿಂದ ಸೆ.30ರವರೆಗೆ ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಂಭ್ರಮ

(ನ್ಯೂಸ್‌ ಕಡಬ) newskadaba.com,  ಸೆ.26 ಬಂಟ್ವಾಳ : ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ಶ್ರೀ ಶಾರದಾ ಸಮುದಾಯ ಭವನ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಶಾರದಾ ರಜತ ಸಂಭ್ರಮ 2025 ಕಾರ್ಯಕ್ರಮ ಸೆ.27ರಿಂದ ಸೆ.30 ರ ವರೆಗೆ ಶ್ರೀರಾಮ ನಗರ ರಾಮಲ್ ಕಟ್ಟೆ ತುಂಬೆ ಇಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿಯವರು ತಿಳಿಸಿದರು. ಅವರು ತುಂಬೆ

ಸೆ.27ರಿಂದ ಸೆ.30ರವರೆಗೆ ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಂಭ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆರವುಗೊಳಿಸುವಾಗ ಬಾವಿಗೆ ಬಿದ್ದು ಯುವಕನೋರ್ವ ಸಾವು

(ನ್ಯೂಸ್‌ ಕಡಬ) newskadaba.com,  ಸೆ.26  ಕಾಸರಗೋಡು : ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯಲೆತ್ನಿಸುತ್ತಿದ್ದಾಗ ಬಾವಿಗೆ ಬಿದ್ದು ಯುವಕ ಮೃತಪಟ್ಟ ಘಟನೆ ಉದುಮ ಸಮೀಪದ ವಳಿಯವಲಪ್ಪು ಎಂಬಲ್ಲಿ ನಡೆದಿದೆ. ವಳಿಯವಲಪ್ಪುವಿನ ಅಶ್ವಿನ್ ಅರವಿಂದ (18) ಮೃತಪಟ್ಟವರು. ಸರ್ವೀಸ್ ವಯರ್ ಮೇಲೆ ಬಿದ್ದಿದ್ದ ತಾಳೆಗರಿಯನ್ನು ಬಾವಿಯ ಕಟ್ಟೆಗೆ ಹತ್ತಿ ತೆಗೆಯಲೆತ್ನಿಸುತ್ತಿದ್ದಾಗ ಅಶ್ವಿನ್ ಬಾವಿಗೆ ಬಿದ್ದಿದ್ದು, ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆತ ಅದಾಗಲೇ ಸಾವನ್ನಪ್ಪಿದನು ಎಂದು ವೈದ್ಯರು ತಿಳಿಸಿದ್ದಾರೆ.

ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆರವುಗೊಳಿಸುವಾಗ ಬಾವಿಗೆ ಬಿದ್ದು ಯುವಕನೋರ್ವ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಜೇಶ್ವರದ ಕುಂಜತ್ತೂರು ಶಾಲಾ ಮೇಲ್ಛಾವಣಿ ಕುಸಿತ – ತಪ್ಪಿದ ಭಾರೀ ಅನಾಹುತ

(ನ್ಯೂಸ್‌ ಕಡಬ) newskadaba.com,  ಸೆ.26  ಮಂಜೇಶ್ವರ :  ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಸೆ.೨೫ರಂದು ಉದ್ಯಾವರ ದಲ್ಲಿರುವ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಭಾರೀ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ . ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ 2ನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಮಯದಲ್ಲಿ ಮಕ್ಕಳು ತರಗತಿಗೆ ತಲುಪಿರಲಿಲ್ಲ. ಹಂಚು ಹಾಸಿದ ಶಾಲೆಯ ಕೆಳಗೆ ಅಳವಡಿಸಲಾದ ಸ್ಲಾಬ್ ಕುಸಿದು ಬಿದ್ದಿದೆ . ಸಮೀಪದಲ್ಲಿದ್ದ

ಮಂಜೇಶ್ವರದ ಕುಂಜತ್ತೂರು ಶಾಲಾ ಮೇಲ್ಛಾವಣಿ ಕುಸಿತ – ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ-ಅಪ್ಪ ಸಾವು, ಮಗ ಪಾರು

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ಹೋಗುತ್ತಿದ್ದಾಗ ವಾಟರ್‌ಟ್ಯಾಂಕರ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟಿರುವ ಘಟನೆ ವೈಟ್‌ಫೀಲ್‌್ಡ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಕೋಲಾರದ ಮುನಿರಾಜು (52) ಮೃತಪಟ್ಟವರು. ಇವರ ಮಗ ಧನಂಜಯಗೌಡ (16) ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆ ಬೆಳಗ್ಗೆ 7.45 ರ ಸುಮಾರಿನಲ್ಲಿ ಮುನಿರಾಜು ಅವರು ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ನಾಗಗೊಂಡನಹಳ್ಳಿ ಕಡೆಯಿಂದ ಇಮಡಿಹಳ್ಳಿ ಕಡೆಗೆ ಹೋಗುತ್ತಿದ್ದರು. ಇಮಡಿಹಳ್ಳಿ ಮುಖ್ಯ ರಸ್ತೆಯ ಸಾಯಿ

ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ-ಅಪ್ಪ ಸಾವು, ಮಗ ಪಾರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top