ಕರ್ನಾಟಕ

5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!!

(ನ್ಯೂಸ್ ಕಡಬ) newskadaba.com ರಾಯಚೂರು, ಅ.14. ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ. ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ. ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಆವರಣದಲ್ಲಿ ನಿಲ್ಲುತ್ತಿತ್ತು. ಮಳೆ ನೀರಿನ ಸಂಗ್ರಹಕ್ಕೆಂದು ಪುರಸಭೆಯವರು 5 ಅಡಿ ಆಳದ ಗುಂಡಿ ತೋಡಿದ್ದು, ಆದರೆ […]

5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!! Read More »

ಕರ್ನಾಟಕ

ಗುಂಡಿಕ್ಕಿ ಬೈಕ್ ಸವಾರನ ಹತ್ಯೆ ► ದುಷ್ಕರ್ಮಿಗಳು ಪರಾರಿ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.14. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಸಂಜೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ನಡೆದಿದೆ. ಕೃಷಿ ಹಾಗೂ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ಮುದ್ದುಕೃಷ್ಣ (41) ಗುಂಡಿನ ದಾಳಿಗೆ ಬಲಿಯಾದ ಮೃತ ದುರ್ದೈವಿ. ಮುದ್ದುಕೃಷ್ಣ ಶುಕ್ರವಾರ ಸಂಜೆ ದೊಡ್ಡ ಬೆಳವಂಗಲದಿಂದ ಚಿಕ್ಕ ಬೆಳವಂಗಲ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಫಾಲೋ ಮಾಡಿ ಏಕಾಏಕಿ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ

ಗುಂಡಿಕ್ಕಿ ಬೈಕ್ ಸವಾರನ ಹತ್ಯೆ ► ದುಷ್ಕರ್ಮಿಗಳು ಪರಾರಿ! Read More »

ಕರ್ನಾಟಕ

ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ಎರಡು ತಿಂಗಳ ಹಿಂದೆಯಷ್ಟೇ ಖರೀದಿಸಿದ ಮಗನ ಹೊಸ ಬೈಕನ್ನು ಎಕ್ಸ್ ಚೇಂಜ್ ಮಾಡಿಕೊಡಲು ಶೋ ರೂಮ್ ಸಿಬ್ಬಂದಿ ನಿರಾಕರಿಸಿದ್ದಕ್ಕಾಗಿ ಮನನೊಂದ ತಾಯಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಲ್ಲಿ ನಡೆದಿದೆ. ಸರೋಜಮ್ಮ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸರೋಜಮ್ಮರ ಮಗ ಶ್ರೀಪಾದ ರಾಘವ್ ಎರಡು ತಿಂಗಳ ಹಿಂದೆ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಿಂದ ಡೋಮಿನರ್ 400 ಸಿಸಿ

ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!! Read More »

ಕರ್ನಾಟಕ

ಜನವರಿ 1 ರಿಂದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ► ನೂತನವಾಗಿ ಆರಂಭವಾಗಲಿದೆ 246 ಕ್ಯಾಂಟೀನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು ಮಾತ್ರವಲ್ಲದೆ, ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ಪ್ರದೇಶಗಳಲ್ಲೂ ಬೆಂಗಳೂರು ಮಾದರಿಯಲ್ಲಿಯೇ 2018 ರ ಜ.1 ರಿಂದ ‘ಇಂದಿರಾ ಕ್ಯಾಂಟೀನ್’ ಪ್ರಾರಂಭಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬಡ-ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಮಹತ್ವದ ಈ ಯೋಜನೆಯ ಅನುಷ್ಠಾನಕ್ಕೆ ನವೆಂಬರ್

ಜನವರಿ 1 ರಿಂದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ► ನೂತನವಾಗಿ ಆರಂಭವಾಗಲಿದೆ 246 ಕ್ಯಾಂಟೀನ್ Read More »

ಕರ್ನಾಟಕ

ಮೂವರ ಅಪಹರಣ, ಇಬ್ಬರ ಬರ್ಬರ ಹತ್ಯೆ ► ಮಳೆಯಿಂದಾಗಿ ಸಿಕ್ಕಿಬಿದ್ದ ಆರೋಪಿಗಳು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಅ.10. ಬೆಂಗಳೂರು ನಗರದಿಂದ ಮೂವರನ್ನು ಅಪಹರಿಸಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಚಿಕ್ಕಬಳ್ಳಾಪುರ  ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿರಟೆಗೆರೆ ಗ್ರಾಮದಲ್ಲಿ ನಡೆದಿದೆ. ನೂರ್ ಅಹಮದ್ ಹಾಗೂ ಮುಬಷೀರ್ ಕೊಲೆಯಾದ ದುರ್ದೈವಿಗಳು. ಹಣಕಾಸಿನ ವಿಚಾರದ ಸಂಬಂಧದ ಜಗಳವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಜುನೈದ್ ಕೊಲೆಯ ಮೂಲ ಸೂತ್ರಧಾರನಾಗಿದ್ದು ತನ್ನ ಸಹಚರರೊಂದಿಗೆ ನೂರ್ ಅಹಮದ್, ಮುಬಷೀರ್ ಮತ್ತು ಕಾಳು ಎಂಬವರನ್ನು ಬೆಂಗಳೂರು ನಗರದಿಂದ ಅಪಹರಿಸಿ ಕೊಲೆಗೆ ಸಂಚು ರೂಪಿಸಿದ್ದನು. ಈ ಮೂವರನ್ನು ಅಪಹರಿಸಿದ ಜುನೈದ್

ಮೂವರ ಅಪಹರಣ, ಇಬ್ಬರ ಬರ್ಬರ ಹತ್ಯೆ ► ಮಳೆಯಿಂದಾಗಿ ಸಿಕ್ಕಿಬಿದ್ದ ಆರೋಪಿಗಳು Read More »

ಕರ್ನಾಟಕ

ಗಂಡನ ಮನೆಯವರ ಕಿರುಕುಳ ► ದೇವಿಯ ವಿಗ್ರಹಕ್ಕೆ ತ್ರಿಶೂಲದಿಂದ ಹೊಡೆದು ದೇವರ ಮೇಲೆ ಸೇಡು ತೀರಿಸಿಕೊಂಡ ಮಹಿಳೆ!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.9. ಗಂಡ ಮತ್ತು ಆತನ ಮನೆಯವರ ಟಾರ್ಚರ್‍ನಿಂದಾಗಿ ರೊಚ್ಚಿಗೆದ್ದ ಮಹಿಳೆಯೊಬ್ಬರು  ದೇವಾಲಯದ ಗರ್ಭಗುಡಿಗೆ ನುಗ್ಗಿ ದೇವಿಯ ವಿಗ್ರಹದ ಮೇಲೆಯೇ ದಾಳಿ ಮಾಡಿದ ಘಟನೆ ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬಾ ದೇವಿಯ ದೇವಾಲಯದಲ್ಲಿ ಸೋಮವಾರ ನಡೆದಿದೆ. ನಿಮಿಷಾಂಬಾ ದೇವಿ ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾರೆ. ಬಳಿಕ ದೇವಿಯ ತ್ರಿಶೂಲ ಕೈಗೆ ತೆಗೆದುಕೊಂಡು ದೇವಿಗೇ ಹೊಡೆದಿದ್ದಾರೆ. ಇವರನ್ನು ಹಿಡಿಯಲು ಹೋದ ಅರ್ಚಕರಿಗೆ ಹಾಗೂ ನೆರೆದಿರುವ ಭಕ್ತರಿಗೆ ತ್ರಿಶೂಲ

ಗಂಡನ ಮನೆಯವರ ಕಿರುಕುಳ ► ದೇವಿಯ ವಿಗ್ರಹಕ್ಕೆ ತ್ರಿಶೂಲದಿಂದ ಹೊಡೆದು ದೇವರ ಮೇಲೆ ಸೇಡು ತೀರಿಸಿಕೊಂಡ ಮಹಿಳೆ! Read More »

ಕರ್ನಾಟಕ

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!!

(ನ್ಯೂಸ್ ಕಡಬ) newskadaba.com ಭೋಪಾಲ್, ಅ.9. 45ಕ್ಕಿಂತ ಕಡಿಮೆ ವಯಸ್ಸಿನ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಯೊಂದನ್ನು ಮಧ್ಯ ಪ್ರದೇಶ ಸರ್ಕಾರ ರೂಪಿಸಿದೆ. ವಿಧವೆಯರ ಬಾಳು ಬಂಗಾರವಾಗಲಿ ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ತರಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಈ ಯೋಜನೆ ಅನುಷ್ಠಾನಗೊಂಡು ಬಳಿಕ ಪ್ರತಿ ವರ್ಷ ಒಂದು ಸಾವಿರ ವಿಧವೆಯರ ಬಾಳು ಬೆಳಗಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ. ವಿಧವಾ ಪುನರ್‌ ವಿವಾಹ ಪ್ರೋತ್ಸಾಹಿಸುವ ನೀತಿಯನ್ನು ರಚಿಸುವಂತೆ ಜುಲೈ ತಿಂಗಳಲ್ಲಿ

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!! Read More »

ಕರ್ನಾಟಕ

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಖಂಡಿಸಿ ► ತನ್ವೀರ್ ಸೇಠ್ ನಿವಾಸದ ಮೇಲೆ ಕರವೇ ಯುವ ಸೇನೆಯಿಂದ ಮುತ್ತಿಗೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ.7. ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಖಂಡಿಸಿ ಕರವೇ ಯುವ ಸೇನೆ ವತಿಯಿಂದ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸದ ಬಳಿ  ಶನಿವಾರ ಪ್ರತಿಭಟನಾ ಧರಣಿ ನಡೆಸಿದರು.  ಈ ವೇಳೆ ಸಚಿವ ತನ್ವೀರ್ ಸೇಠ್ ನಿವಾಸದ ಮೇಲೆ ಮುತ್ತಿಗೆ ಹಾಕಿದ ಕರವೇ ಯುವ ಸೇನೆ ಕಾರ್ಯಕರ್ತರು ಅವರ ಮನೆಯಲ್ಲಿರುವ ಪಾಟ್ ಮತ್ತು ಕಿಟಕಿ ಗಾಜುಗಳನ್ನ ಒಡೆದಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದಂತೆಯೇ ಮನೆಯಿಂದ ಹೊರಬಂದ ಸಚಿವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಏಕಾಏಕಿ ಮನಗೆ ನುಗ್ಗೋದು ಪ್ರವೃತ್ತಿ

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಖಂಡಿಸಿ ► ತನ್ವೀರ್ ಸೇಠ್ ನಿವಾಸದ ಮೇಲೆ ಕರವೇ ಯುವ ಸೇನೆಯಿಂದ ಮುತ್ತಿಗೆ Read More »

ಕರ್ನಾಟಕ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.07. ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಜೊತೆ ನಂಟು ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಐದು ಮಂದಿ ಪ್ರಮುಖ ಶಂಕಿತರಾಗಿ ಮೂಡಿಬಂದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಶಂಕಿತರನ್ನು ಮಂಗಳೂರು ಮೂಲದ ಕಡಬದ ಜಯಪ್ರಕಾಶ್, ಕೊಲ್ಹಾಪುರದ ಪ್ರವೀಣ್ ಲಿಮ್ಕರ್, ಪುಣೆಯ ಸಾರಂಗ್ ಅಕೋಲ್ಕರ್, ಸಾಂಗ್ಲಿಯ ರುದ್ರ ಪಾಟೀಲ್ ಹಾಗು ಸತಾರದ ವಿನಯ್ ಪವಾರ್ ಎಂದು ಹೇಳಲಾಗಿದೆ. ಈ ಪೈಕಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು Read More »

ಕರ್ನಾಟಕ

► ಯಕ್ಷಗಾನ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಣಿಪಾಲ, ಅ.04. ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಹಾಗೂ ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ಮಂಗಳವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಚಿಟ್ಟಾಣಿಯವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ರಾತ್ರಿ ಕೆಎಂಸಿಗೆ ದಾಖಲಾಗಿದ್ದ ಚಿಟ್ಟಾಣಿಯವರು ನ್ಯುಮೋನಿಯಾ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು

► ಯಕ್ಷಗಾನ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ Read More »

ಕರ್ನಾಟಕ
Scroll to Top