ಕರ್ನಾಟಕ

ಮೈಸೂರು ರಾಜವಂಶಕ್ಕೆ ಹೊಸ ಕುಡಿ ಆಗಮನ ► ಗಂಡು ಮಗುವಿಗೆ ಜನ್ಮ ನೀಡಿದ ಯುವರಾಜ ಯದುವೀರ್ ಪತ್ನಿ ತ್ರಿಷಿಕಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.07. ಮೈಸೂರು ರಾಜವಂಶಕ್ಕೆ ಹೊಸ ಕುಡಿಯೊಂದರ ಆಗಮನವಾಗಿದ್ದು, ಗಂಡು ಮಗು ಹುಟ್ಟಿರುವ ಹಿನ್ನೆಲೆಯಲ್ಲಿ ಯದುವಂಶದಲ್ಲೀಗ ಸಂಭ್ರಮ ಮುಗಿಲು ಮುಟ್ಟಿದೆ. ಮೈಸೂರು ಯುವರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪತ್ನಿ ತ್ರಿಷಿಕಾ ಬುಧವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ದಂಪತಿಗೆ ಗಂಡು ಮಗು ಜನಿಸಿರುವುದರಿಂದ ಯದು ಕುಟುಂಬದ ಉತ್ತರಾಧಿಕಾರಿ ಕುಡಿ ಬಂದಂತಾಗಿದೆ.

ಮೈಸೂರು ರಾಜವಂಶಕ್ಕೆ ಹೊಸ ಕುಡಿ ಆಗಮನ ► ಗಂಡು ಮಗುವಿಗೆ ಜನ್ಮ ನೀಡಿದ ಯುವರಾಜ ಯದುವೀರ್ ಪತ್ನಿ ತ್ರಿಷಿಕಾ Read More »

ಕರ್ನಾಟಕ

ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.06. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆಯು ಬಿಜೆಪಿ ವಲಯದಲ್ಲೇ ಬೇಸರ ಸೃಷ್ಟಿಸಿದ್ದು, ಪಕ್ಷದ ಹೈಕಮಾಂಡ್‍ಗೆ ಅವರ ವಿರುದ್ಧ ರಾಜ್ಯ ಘಟಕದ ಕೆಲವರು ದೂರು ನೀಡಿದ್ದಾರೆ. ಯುವಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಹೋಗಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಪಕ್ಷದೊಳಗೆ ನಡೆದ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಮುಜುಗರ ತಂದಿದ್ದಾರೆ ಅಲ್ಲದೇ ಪಕ್ಷಕ್ಕೆ ಮತ್ತಷ್ಟು ಇರಿಸು-ಮುರಿಸು ಉಂಟಾಗುವಂತೆ

ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು Read More »

ಕರ್ನಾಟಕ

ಹಾಸನ: ಕೆಎಸ್ಸಾರ್ಟಿಸಿ ಬಸ್ – ಖಾಸಗಿ ಬಸ್ ಢಿಕ್ಕಿ ► ಮೂವರು ಮೃತ್ಯು, 25 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಹಾಸನ, ಡಿ.05. ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು 25 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಆಲೂರು ಠಾಣಾ ವ್ಯಾಪ್ತಿಯ ಯದ್ದುರ್ಗ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೃತರನ್ನು ಫಾತಿಮಾ(27), ಅಬ್ದುಲ್ ಸಲಾಂ(54) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ನಸುಕಿನ ಜಾವ 2.30. ಗಂಟೆಯ ಸುಮಾರಿಗೆ ಕೆಎಸ್ಆರ್‌ಟಿಸಿ ಅಂಬಾರಿ ಸ್ಲೀಪರ್

ಹಾಸನ: ಕೆಎಸ್ಸಾರ್ಟಿಸಿ ಬಸ್ – ಖಾಸಗಿ ಬಸ್ ಢಿಕ್ಕಿ ► ಮೂವರು ಮೃತ್ಯು, 25 ಕ್ಕೂ ಅಧಿಕ ಮಂದಿಗೆ ಗಾಯ Read More »

ಕರ್ನಾಟಕ

ದತ್ತಜಯಂತಿ ಆಚರಣೆಯ‌‌ ನಂತರ ಪೆಟ್ರೋಲ್ ಬಾಂಬ್ ಪ್ರಯೋಗ ► 5 ಪೆಟ್ರೋಲ್ ಬಾಂಬ್ ಸಹಿತ 13 ಮಂದಿ ವಶಕ್ಕೆ: ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.4. ದತ್ತಜಯಂತಿಯ ಕೊನೆಯ ದಿನವಾದ ರವಿವಾರದಂದು ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆಯೇ ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ. ಅವರು ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ತಮಿಳು ಕಾಲನಿಯ ಬಳಿಯ ಮಾರ್ಕೆಟ್ ರಸ್ತೆಯಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಿಡಿಗೇಡಿಗಳು

ದತ್ತಜಯಂತಿ ಆಚರಣೆಯ‌‌ ನಂತರ ಪೆಟ್ರೋಲ್ ಬಾಂಬ್ ಪ್ರಯೋಗ ► 5 ಪೆಟ್ರೋಲ್ ಬಾಂಬ್ ಸಹಿತ 13 ಮಂದಿ ವಶಕ್ಕೆ: ಎಸ್ಪಿ ಅಣ್ಣಾಮಲೈ Read More »

ಕರ್ನಾಟಕ

ದತ್ತಪೀಠದಲ್ಲಿನ ಗೋರಿಗಳು ನಕಲಿಗಳೇ ಹೊರತು ಅಸಲಿಗಳಲ್ಲ ► ಚಿಕ್ಕಮಗಳೂರು ಶಾಸಕ‌ ಸಿ.ಟಿ.ರವಿ ಹೇಳಿಕೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.04. ದತ್ತಪೀಠದಲ್ಲಿರುವುದು ಎಲ್ಲವೂ ನಕಲಿ ಗೋರಿಗಳಾಗಿದ್ದು, ಹಿಂದೆ ಅಲ್ಲಿ ಮುಸಲ್ಮಾನರು ಅಷ್ಟು ಜನ ಇರಲೇ ಇಲ್ಲ. ಹಾಗಿರುವಾಗ ಈ ಗೋರಿಗಳು ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಸರ್ವಧರ್ಮದ ಭಾವೈಕ್ಯತಾ ಕೇಂದ್ರವಾಗಿರುವ ದತ್ತಾತ್ರೇಯ ಬಾಬಾ ಬುಡಾನ್ ಗಿರಿಯ ವಿವಾದಿತ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಿ ಗೋರಿ ಧ್ವಂಸಕ್ಕೆ ಯತ್ನಿಸಿದ ಘಟನೆಯನ್ನು ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ. ದತ್ತಜಯಂತಿಯು ಶೇ.90 ಭಾಗ ಶಾಂತಿಯುತವಾಗಿ ನಡೆದಿದ್ದು, ಸಣ್ಣ ತಪ್ಪಿಗೆ ಹಿಂದೂಗಳ ಮೇಲೆ ಹಲ್ಲೆ ಮಾಡುವುದು

ದತ್ತಪೀಠದಲ್ಲಿನ ಗೋರಿಗಳು ನಕಲಿಗಳೇ ಹೊರತು ಅಸಲಿಗಳಲ್ಲ ► ಚಿಕ್ಕಮಗಳೂರು ಶಾಸಕ‌ ಸಿ.ಟಿ.ರವಿ ಹೇಳಿಕೆ Read More »

ಕರ್ನಾಟಕ

ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಆಯ್ತು.. ಇದೀಗ ರಮ್ಯಾ ಕ್ಯಾಂಟೀನ್ ► ಅಲ್ಲಲ್ಲಿ ತಲೆಯೆತ್ತುತ್ತಿರುವ ಅಗ್ಗದ ಬೆಲೆಯ ಕ್ಯಾಂಟೀನ್ ಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ.03. ರಾಜ್ಯ ಸರಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್, ಅಣ್ಣ ಕ್ಯಾಂಟೀನ್ ಮಾದರಿಯ ಕೆಲವು ಕ್ಯಾಂಟೀನ್‍ಗಳು ಬಡವರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸುತ್ತಿವೆ. ಇದರ ಜೊತೆಗೆ ಇದೀಗ ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ‘ರಮ್ಯಾ ಕ್ಯಾಂಟೀನ್’ ಭಾನುವಾರದಿಂದ ಸೇರ್ಪಡೆಯಾಗಿದೆ. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಕ್ಕದ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುತ್ತಿದ್ದ ರಘು ಎಂಬವರು ಜಿಲ್ಲಾಸ್ಪತ್ರೆ ಸಮೀಪ ರಮ್ಯಾ ಕ್ಯಾಂಟೀನ್ ತೆರೆದಿದ್ದು, ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ

ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಆಯ್ತು.. ಇದೀಗ ರಮ್ಯಾ ಕ್ಯಾಂಟೀನ್ ► ಅಲ್ಲಲ್ಲಿ ತಲೆಯೆತ್ತುತ್ತಿರುವ ಅಗ್ಗದ ಬೆಲೆಯ ಕ್ಯಾಂಟೀನ್ ಗಳು Read More »

ಕರ್ನಾಟಕ

ರಾಜ್ಯಕ್ಕೆ ಬರಲಿದೆ ಮಲೇಷಿಯಾ ಮರಳು ► ಅಂಗಡಿಗಳಲ್ಲಿ ಸಿಗಲಿದೆ 50 ಕೆಜಿಯ ಎಂಎಸ್ಐಎಲ್ ಮರಳು ಚೀಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.02. ರಾಜ್ಯದಲ್ಲಿ ತಲೆದೋರಿರುವ ಮರಳಿನ ಅಭಾವವನ್ನು ನೀಗಿಸಲು ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. 2018 ರ ಜನವರಿಯಿಂದ ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಂಡು ಎಂಎಸ್ಐಎಲ್ ಮೂಲಕ ಹಂಚಲಾಗುವುದು. 50 ಕೆಜಿಯ ಚೀಲಗಳಲ್ಲಿ ಮರಳನ್ನು ತುಂಬಿ ಅಗತ್ಯಕ್ಕನುಸಾರ ಹಂಚಲಾಗುವುದು ಎಂದ ಅವರು ಪ್ರತಿ ಟನ್ ಮರಳಿಗೆ ಅಂದಾಜು 3500 ರಿಂದ 3800 ರೂ. ಗಳವರೆಗೆ ದರ‌ ಇರಲಿದೆ. ಮರಳನ್ನು ಆಮದು ಮಾಡಿಕೊಳ್ಳುವ

ರಾಜ್ಯಕ್ಕೆ ಬರಲಿದೆ ಮಲೇಷಿಯಾ ಮರಳು ► ಅಂಗಡಿಗಳಲ್ಲಿ ಸಿಗಲಿದೆ 50 ಕೆಜಿಯ ಎಂಎಸ್ಐಎಲ್ ಮರಳು ಚೀಲ Read More »

ಕರ್ನಾಟಕ

ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ದಾವಣಗೆರೆ, ನ.30. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ 07 ವರ್ಷದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣ ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಇಲ್ಲಿನ ಹರಿಹರದಲ್ಲಿ ನಡೆದಿದ್ದು, ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಟಿವಿ, ಮಾಧ್ಯಮಗಳಲ್ಲಿ ಬರುವ ಕೆಲ ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ  7 ವರ್ಷ ದ ಬಾಲಕಿಯೊಬ್ಬಳು ಬಟ್ಟೆಗೆ

ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು Read More »

ಕರ್ನಾಟಕ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.29. ಈದ್ ಮಿಲಾದ್ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಡಿ.1ರಂದು ರಜೆ ಘೋಷಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಮೀಲಾದುನ್ನಬಿ ಆಚರಣೆಗೆ ಡಿ.02 ರಂದು ಸರಕಾರಿ ರಜೆ ಘೋಷಿಸಿ ರಾಜ್ಯ ಸರಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀಲಾದುನ್ನಬಿಯನ್ನು ಮುಸ್ಲಿಮರು ಡಿ.01 ರಂದು ಆಚರಿಸುತ್ತಿರುವುದರಿಂದ ಅಂದೇ ಸರಕಾರಿ ರಜೆ ಘೋಷಿಸುವಂತೆ ಆಹಾರ ಸಚಿವ ಯು.ಟಿ.ಖಾದರ್ ಅವರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮ ದಕ್ಷಿಣ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ Read More »

ಕರ್ನಾಟಕ

ಸುದ್ದಿ ಬಿಡುಗಡೆಯ ಸಂಪಾದಕರಿಗೆ ‘ಮಾಧ್ಯಮ ವಾರ್ಷಿಕ ಪ್ರಶಸ್ತಿ’ ► 40 ಮಂದಿ ಪತ್ರಕರ್ತರಿಗೆ ಒಳಿದು ಬಂತು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.28. ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡಮಿಯು 2017ನೆ ಸಾಲಿನ “ಮಾಧ್ಯಮ ವಾರ್ಷಿಕ ಪ್ರಶಸ್ತಿ”ಗೆ ರಾಜ್ಯದ 40 ಪತ್ರಕರ್ತರನ್ನು ಆಯ್ಕೆ ಮಾಡಿದ್ದು, ಈ‌ ಸಾಲಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ. ಶಿವಾನಂದ ರವರನ್ನು ಪ್ರಶಸ್ತಿ ಅರಸಿ ಬಂದಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಶಸ್ತಿ ಪ್ರಧಾನ‌ ಮಾಡಲಿದ್ದಾರೆ ಎಂದು ಕರ್ನಾಟಕ

ಸುದ್ದಿ ಬಿಡುಗಡೆಯ ಸಂಪಾದಕರಿಗೆ ‘ಮಾಧ್ಯಮ ವಾರ್ಷಿಕ ಪ್ರಶಸ್ತಿ’ ► 40 ಮಂದಿ ಪತ್ರಕರ್ತರಿಗೆ ಒಳಿದು ಬಂತು ಪ್ರಶಸ್ತಿ Read More »

ಕರ್ನಾಟಕ
Scroll to Top