ಕರ್ನಾಟಕ

ಹಲವು ದಶಕಗಳ ಬೇಡಿಕೆ ಈಡೇರಿಕೆಗೆ ಹಸಿರು ನಿಶಾನೆ ► ಆಗಸ್ಟ್ 15 ರಂದು ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕೊನೆಗೂ ಕಡಬ ಪರಿಸರದ ಜನರ ಕನಸು ನನಸಾಗುವ ಕ್ಷಣ ಹತ್ತಿರವಾಗಿದ್ದು, ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿದೆ. ಕಡಬ ತಾಲೂಕು ಕೇಂದ್ರವಾಗಬೇಕೆಂಬ ಕಳೆದ ಹಲವು ದಶಕಗಳ ಬೇಡಿಕೆಯಂತೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರವು 43 ತಾಲೂಕುಗಳ ಜೊತೆಗೆ ಕಡಬವನ್ನೂ ನೂತನ ತಾಲೂಕಾಗಿ ಘೋಷಿಸಿತ್ತು. ತದನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿತ್ತು. ಆದರೆ ಉದ್ಘಾಟನಾ ಭಾಗ್ಯಕ್ಕೆ ಹಲವು ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತಾದರೂ ತಾಂತ್ರಿಕ […]

ಹಲವು ದಶಕಗಳ ಬೇಡಿಕೆ ಈಡೇರಿಕೆಗೆ ಹಸಿರು ನಿಶಾನೆ ► ಆಗಸ್ಟ್ 15 ರಂದು ನೂತನ ಕಡಬ ತಾಲೂಕು ಉದ್ಘಾಟನೆ Read More »

ಕರ್ನಾಟಕ

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯ ► ಇಂದಿನಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.02. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆ ಕೊನೆಗೂ ಸಂಚಾರಕ್ಕೆ ತೆರೆದುಕೊಳ್ಳುತ್ತಿದ್ದು, ಆಗಸ್ಟ್ 02 ರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಶಿರಾಡಿ ಘಾಟ್ ಕಾಂಕ್ರೀಟ್ ಕಾಮಗಾರಿ ಬಳಿಕ ಜುಲೈ 15 ರಂದು ರಸ್ತೆಯನ್ನು ಉದ್ಘಾಟನೆ ಮಾಡಲಾಗಿತ್ತಾದರೂ, ರಸ್ತೆಯ ಅಂಚಿನಲ್ಲಿ ಮಣ್ಣು ಹಾಕುವುದು, ಪ್ರಪಾತ ಇರುವ ಜಾಗಗಳಲ್ಲಿ ತಡೆಗೋಡೆ ಇಲ್ಲದಿರುವುದು ಅಪಾಯಕ್ಕೆ ಕಾರಣವಾಗಿತ್ತು. ಹೀಗಾಗಿ 15 ದಿನಗಳ ಕಾಲ

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯ ► ಇಂದಿನಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ಆರಂಭ Read More »

ಕರ್ನಾಟಕ

ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಹಿತ್ಯದಿಂದ ಸಾಧ್ಯ: ಜಯಂತ್ ಕಾಯ್ಕಿಣಿ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಆ.01. ಗಾಂಭೀರ್ಯ ಜಗತ್ತು ಮತ್ತು ನಮ್ಮ ಮಧ್ಯೆ ಅಡ್ಡಗೋಡೆ ನಿರ್ಮಾಣವಾದರೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಿಲ್ಲ, ಆದರೆ ಸಾಹಿತ್ಯದಿಂದ ಇಡೀ ಜಗತ್ತನ್ನು ಪ್ರೀತಿಯಿಂದ ನೋಡಲು ಸಾಧ್ಯ ಎಂದು ಖ್ಯಾತ ಸಾಹಿತಿ, ಕಥೆಗಾರ ಜಯಂತ್ ಕಾಯ್ಕಿಣಿ ಹೇಳಿದರು. ಅವರು ಸೋಮವಾರ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬದುಕಿನಲ್ಲಿ ನೋವು ನಲಿವುಗಳು ಸಾಹಿತ್ಯಕ್ಕೆ ಪ್ರೇರಣೆ ನೀಡುತ್ತವೆ, ಬದುಕಿನಲ್ಲಿ ಅದಮ್ಯ ಪ್ರೀತಿಯಿದ್ದರೆ ಸಾಹಿತ್ಯ ಸಂಭ್ರಮ ಅಲ್ಲಿ ನವಿರಾಗಿ

ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಹಿತ್ಯದಿಂದ ಸಾಧ್ಯ: ಜಯಂತ್ ಕಾಯ್ಕಿಣಿ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ Read More »

ಕರ್ನಾಟಕ

ಪುತ್ತೂರಿನಲ್ಲಿ ಇನ್ಮುಂದೆ ರಿಕ್ಷಾ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ..?! ► ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.31. ನಗರದಲ್ಲಿ ಹಲ್ಮೆಟ್ ಧರಿಸದೆ ಆಟೋ ಚಲಾಯಿಸಿದ್ದಾರೆಂಬ ಕಾರಣ ಹೇಳಿ ರಿಕ್ಷಾ ಚಾಲಕರೋರ್ವರಿಗೆ ದಂಡ ವಿಧಿಸಿದ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ. ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ರಿಕ್ಷಾವೊಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ 9 ಮಂದಿ ವಿದ್ಯಾರ್ಥಿಗಳಿದ್ದ ಕಾರಣ ಮತ್ತು ಅದರೊಂದಿಗೆ ಹೆಲ್ಮೆಟ್ ರಹಿತ ಪ್ರಯಾಣ ಎಂದು ಸೇರಿಸಿದ ಪುತ್ತೂರು ಪೊಲೀಸರು ಒಟ್ಟು 700 ರೂ.ಗಳನ್ನು ದಂಡ ವಿಧಿಸಿದ್ದಾರೆ‌. ಪೋಲೀಸರು ನೀಡಿದ ಈ ನೋಟೀಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ

ಪುತ್ತೂರಿನಲ್ಲಿ ಇನ್ಮುಂದೆ ರಿಕ್ಷಾ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ..?! ► ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು Read More »

ಕರ್ನಾಟಕ

ಗ್ರಹಣಕ್ಕೆ ಮೊದಲು ಊರು ಬಿಡದಿದ್ದಲ್ಲಿ ಸಾವು ಸಂಭವಿಸಲಿದೆಯೆಂದ ಜ್ಯೋತಿಷಿ ► ಜ್ಯೋತಿಷಿಯ ಮಾತಿಗೆ ಹೆದರಿ ಗ್ರಾಮ ತೊರೆದ 60 ಕುಟುಂಬಗಳು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು.27. ಮೂಡ ನಂಬಿಕೆಗೆ ಕಟ್ಟುಬಿದ್ದು ಜ್ಯೋತಿಷಿಯ ಮಾತನ್ನು ನಂಬಿದ ಸುಮಾರು 60 ಕುಟುಂಬಗಳು, ಊರನ್ನೇ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಊರಿನಲ್ಲಿ ನೀವು ದೇವಾಲಯವನ್ನು ಕಟ್ಟಿದ್ದು ತಪ್ಪಾಗಿದ್ದು, ಚಂದ್ರಗ್ರಹಣದ ವೇಳೆಗೆ ನೀವು ಊರನ್ನು ತೊರೆಯದಿದ್ದರೆ ಮೂರು ಸಾವು ಸಂಭವಿಸಲಿದೆ. ಕೂಡಲೇ ಊರನ್ನು ತೊರೆಯುವುದೊಳಿತು ಎಂದು ಮಲಯಾಳಿ ಜ್ಯೋತಿಷಿಯೊಬ್ಬರು ಭವಿಷ್ಯ ಹೇಳಿದ್ದನ್ನು‌ ಹೆದರಿದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್​. ಪುರ ತಾಲೂಕಿನ ಬಾಳೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸುಮಾರು 15 ವರ್ಷಗಳಿಂದ

ಗ್ರಹಣಕ್ಕೆ ಮೊದಲು ಊರು ಬಿಡದಿದ್ದಲ್ಲಿ ಸಾವು ಸಂಭವಿಸಲಿದೆಯೆಂದ ಜ್ಯೋತಿಷಿ ► ಜ್ಯೋತಿಷಿಯ ಮಾತಿಗೆ ಹೆದರಿ ಗ್ರಾಮ ತೊರೆದ 60 ಕುಟುಂಬಗಳು Read More »

ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಸುಳ್ಯದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.20. ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧಿಸಿದೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಸಂಪಾಜೆ ನಿವಾಸಿ ನಾಟಿ ವೈದ್ಯ ಮೋಹನ್ ನಾಯಕ್ ಎಂದು ಗುರುತಿಸಲಾಗಿದೆ. ಗೌರಿ ಹತ್ಯೆಯಲ್ಲಿ ಆರೋಪಿಗಳಿಗೆ ಪಿಸ್ತೂಲು ಸರಬರಾಜು ಮಾಡಿದ ಆರೋಪವು ಈತನ ಮೇಲಿದ್ದು, ಎಸ್‍ಐಟಿ ತಂಡವು ಬುಧವಾರ ತಡರಾತ್ರಿ ಈತನನ್ನು ವಶಕ್ಕೆ ಪಡೆದಿದೆ. ಗುರುವಾರ ದಿನಪೂರ್ತಿ ಈತನನ್ನು

ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಸುಳ್ಯದ ಆರೋಪಿಯ ಬಂಧನ Read More »

ಕರ್ನಾಟಕ

ಹಾಲು‌ ಖರೀದಿದಾರರಿಗೆ ಸಿಹಿ ಸುದ್ದಿ ► ಇಂದು ನಂದಿನಿ ಹಾಲು ಖರೀದಿಸಿದರೆ 180 ಮಿ.ಲೀ ‘ತೃಪ್ತಿ’ ಹಾಲು ಉಚಿತ

(ನ್ಯೂಸ್ ಕಡಬ) newskadaba.com ಉಡುಪಿ, ಜು.12. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೂ ವಿಸ್ತರಿಸುವ ಉದ್ದೇಶದಿಂದ ಗುರುವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಂದಿನಿ ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ (500 ಮಿ.ಲೀ, 1ಲೀ, 6ಲೀ) ನಂದಿನಿ ಹಾಲಿನ ಪ್ಯಾಕೆಟ್‌ನೊಂದಿಗೆ 90 ದಿನಗಳ ಕಾಲ ಬಾಳಿಕೆ ಬರುವ 180 ಮಿ.ಲೀ. ನಂದಿನಿ ತೃಪ್ತಿ ಹಾಲಿನ ಒಂದು ಪ್ಯಾಕೆಟ್‌ನ್ನು ಉಚಿತವಾಗಿ ನೀಡಲಾಗುವುದು

ಹಾಲು‌ ಖರೀದಿದಾರರಿಗೆ ಸಿಹಿ ಸುದ್ದಿ ► ಇಂದು ನಂದಿನಿ ಹಾಲು ಖರೀದಿಸಿದರೆ 180 ಮಿ.ಲೀ ‘ತೃಪ್ತಿ’ ಹಾಲು ಉಚಿತ Read More »

ಕರ್ನಾಟಕ

ಮಾಜಿ ಸಚಿವ ಬಿ.ಎ.ಮೊಹಿದಿನ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.10. ಹಿರಿಯ ರಾಜಕೀಯ ನೇತಾರ, ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್(81) ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಚೇತರಿಕೆಯ ನಂತರ ವಾರದ ಹಿಂದೆ ಬೆಂಗಳೂರಿಗೆ ತೆರಳಿದ್ದರೆನ್ನಲಾಗಿದೆ. ಅಲ್ಲಿ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿತ್ತು. ಮಂಗಳವಾರ ಮುಂಜಾನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮಾಜಿ ಸಚಿವ ಬಿ.ಎ.ಮೊಹಿದಿನ್ ವಿಧಿವಶ Read More »

ಕರ್ನಾಟಕ

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.01. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ, ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ಚಿದಾನಂದ ಪೂಜಾರಿ (45) ಹೃದಯಾಘಾತದಿಂದ ಆದಿತ್ಯವಾರ ಸಂಜೆ ನಿಧನರಾದರು. ಮೃತರು ಸಂಜೆ ಮನೆಯಲ್ಲಿ ಕುಳಿತುಕೊಂಡು ಮನೆಯವರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದರು. ತಕ್ಷಣ ಆಲಂಕಾರಿನ 108 ರಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಆಲಂಕಾರಿಗೆ ತಲುಪುವಾಗ ಕೊನೆಯುಸಿರೆಳೆದರು. ಇವರು ಕಳೆದ ಹತ್ತು ವರ್ಷಗಳಿಂದ ಶಕುಂತಳಾ ಟಿ.ಶೆಟ್ಟಿಯವರ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಒರ್ವ

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ ನಿಧನ Read More »

ಕರ್ನಾಟಕ

ಕೆಎಸ್ಸಾರ್ಟಿಸಿ ಬಸ್ಸನ್ನು ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದ ಕಾಡಾನೆ ► ಬಿಳಿನೆಲೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿಯಂತಹುದೇ ಇನ್ನೊಂದು ಘಟನೆ

(ನ್ಯೂಸ್ ಕಡಬ) newskadaba.com ಮೈಸೂರು, ಜೂ.24. ಮರಿಯಾ‌ನೆಯನ್ನು ರಕ್ಷಿಸುವ ಸಲುವಾಗಿ ತಾಯಿ ಆನೆಯೊಂದು ಬಸ್ಸೊಂದನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿ ಭಾನುವಾರದಂದು ನಡೆದಿದೆ. ಚಿಕ್ಕಮಗಳೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶಕ್ಕೆ ತಲುಪಿದಾಗ ಮರಿಯಾನೆಯೊಂದಿಗೆ ತಾಯಿ ಆನೆಯು ರಸ್ತೆಯಲ್ಲಿ ಹಾದು ಹೋಗುತ್ತಿತ್ತೆನ್ನಲಾಗಿದ್ದು, ಈ ವೇಳೆ ಮರಿಯಾನೆಯ ರಕ್ಷಣೆಗೋಸ್ಕರ ಬಸ್ಸನ್ನೇ ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಬೊಬ್ಬೆ ಹೊಡೆದಾಗ ಆನೆಯು ಹಿಂತಿರುಗಿ

ಕೆಎಸ್ಸಾರ್ಟಿಸಿ ಬಸ್ಸನ್ನು ಅಟ್ಟಾಡಿಸಿಕೊಂಡು ಬಂದು ಢಿಕ್ಕಿ ಹೊಡೆದ ಕಾಡಾನೆ ► ಬಿಳಿನೆಲೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿಯಂತಹುದೇ ಇನ್ನೊಂದು ಘಟನೆ Read More »

ಕರ್ನಾಟಕ
Scroll to Top