ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪುತ್ತೂರಿನಲ್ಲಿ ಇನ್ಮುಂದೆ ರಿಕ್ಷಾ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ..?! ► ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು – News Kadaba

ಪುತ್ತೂರಿನಲ್ಲಿ ಇನ್ಮುಂದೆ ರಿಕ್ಷಾ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ..?! ► ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.31. ನಗರದಲ್ಲಿ ಹಲ್ಮೆಟ್ ಧರಿಸದೆ ಆಟೋ ಚಲಾಯಿಸಿದ್ದಾರೆಂಬ ಕಾರಣ ಹೇಳಿ ರಿಕ್ಷಾ ಚಾಲಕರೋರ್ವರಿಗೆ ದಂಡ ವಿಧಿಸಿದ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ.

ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ರಿಕ್ಷಾವೊಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ 9 ಮಂದಿ ವಿದ್ಯಾರ್ಥಿಗಳಿದ್ದ ಕಾರಣ ಮತ್ತು ಅದರೊಂದಿಗೆ ಹೆಲ್ಮೆಟ್ ರಹಿತ ಪ್ರಯಾಣ ಎಂದು ಸೇರಿಸಿದ ಪುತ್ತೂರು ಪೊಲೀಸರು ಒಟ್ಟು 700 ರೂ.ಗಳನ್ನು ದಂಡ ವಿಧಿಸಿದ್ದಾರೆ‌. ಪೋಲೀಸರು ನೀಡಿದ ಈ ನೋಟೀಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಇನ್ಮುಂದೆ ಪುತ್ತೂರು ನಗರದಲ್ಲಿ ಅಟೋ ಚಲಾಯಿಸುವವರು ಸಮವಸ್ತ್ರ ಮಾತ್ರವಲ್ಲದೆ ಹೆಲ್ಮೆಟನ್ನೂ ಧರಿಸಬೇಕು ಎನ್ನುವ ಹೊಸ ನಿಯಮವೊಂದನ್ನು ಪುತ್ತೂರು ಪೊಲೀಸರು ರೂಪುಗೊಳಿಸಿದ್ದಾರೆಯೇ ಎನ್ನುವ ಗೊಂದಲ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ.

Scroll to Top