ಕರ್ನಾಟಕ

ಸುಳ್ಯ: ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಆಂಬ್ಯುಲೆನ್ಸ್ ಪಲ್ಟಿ ➤ ಮತ್ತೆ ಮೂವರು ಆಸ್ಪತ್ರೆಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.09. ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದು ಗುಣಮುಖರಾದ ವ್ಯಕ್ತಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ರಾತ್ರಿ ಸುಳ್ಯದಲ್ಲಿ ನಡೆದಿದೆ. ಕೊಡಗು ಶನಿವಾರಸಂತೆ ನಿವಾಸಿಯೋರ್ವರು ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದು, ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶನಿವಾರದಂದು ಅಂಬ್ಯುಲೆನ್ಸ್ ನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ಸುಳ್ಯ ಹಳೆಗೇಟು ಬಳಿಯ ತಿರುವಿನಲ್ಲಿ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಕಾರ್ತಿಕ್, ಆಸ್ಪತ್ರೆಯಿಂದ […]

ಸುಳ್ಯ: ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಆಂಬ್ಯುಲೆನ್ಸ್ ಪಲ್ಟಿ ➤ ಮತ್ತೆ ಮೂವರು ಆಸ್ಪತ್ರೆಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಇಂದು 41 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 794 ಕ್ಕೆ ಏರಿಕೆ

ಬೆಂಗಳೂರು, ಮೇ 9: ರಾಜ್ಯದಲ್ಲಿ ಇಂದು ಒಂದೇ ದಿನ 41 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದಾವಣಗೆರೆ 6, ಬೆಂಗಳೂರು 12, ತುಮಕೂರು 4, ವಿಜಯಪುರ 1, ಬೀದರ್ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 8, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ ಮತ್ತು ಚಿತ್ರದುರ್ಗ ಮೂವರಿಗೆ ಕೊರೋನ ಸೋಂಕು ಪತ್ತೆಯಾಗಿದೆ. ಈ ಪೈಕಿ ಭಟ್ಕಳದ 1.5 ವರ್ಷದ ಗಂಡು ಮಗು, 2

ರಾಜ್ಯದಲ್ಲಿ ಇಂದು 41 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 794 ಕ್ಕೆ ಏರಿಕೆ Read More »

ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನದಲ್ಲಿ 41 ಮಂದಿಗೆ ಕೊರೋನಾ ಸೋಂಕು ದೃಢ ➤ ಒಟ್ಟು ಸೋಂಕಿತರ ಸಂಖ್ಯೆ 794 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.09. ರಾಜ್ಯದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ಒಟ್ಟು 41 ಮಂದಿಯಲ್ಲಿ ಕೊರೋನ ವೈರಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 24 ಗಂಟೆಗಳ ಅವಧಿಯಲ್ಲಿ 41 ಸೋಂಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆಯ ಹೆಲ್ತ್ ಬಲೆಟಿನ್ ತಿಳಿಸಿದೆ. ಬೆಂಗಳೂರು ನಗರದಲ್ಲಿ 12, ಭಟ್ಕಳದಲ್ಲಿ 8, ದಾವಣಗೆರೆಯಲ್ಲಿ 6, ತುಮಕೂರಿನಲ್ಲಿ 4, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್‌ನಲ್ಲಿ ತಲಾ 3, ವಿಜಯಪುರ, ಚಿಕ್ಕಬಳ್ಳಾಪುರದಲ್ಲಿ

ರಾಜ್ಯದಲ್ಲಿ ಒಂದೇ ದಿನದಲ್ಲಿ 41 ಮಂದಿಗೆ ಕೊರೋನಾ ಸೋಂಕು ದೃಢ ➤ ಒಟ್ಟು ಸೋಂಕಿತರ ಸಂಖ್ಯೆ 794 ಕ್ಕೆ ಏರಿಕೆ Read More »

ಕರ್ನಾಟಕ

ರಾಜ್ಯದಲ್ಲಿ ಇಂದು 48 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ

ಬೆಂಗಳೂರು, ಮೇ 8: ರಾಜ್ಯದಲ್ಲಿ ಇಂದು ಹೊಸದಾಗಿ 48 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 753ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಳಗಾವಿಯ 11 ಮಂದಿ, ದಾವಣೆಗೆರೆಯ 14 ಮಂದಿ, ಬೆಂಗಳೂರಿನ 7 ಮಂದಿ ಚಿತ್ರದುರ್ಗ 3 ಮಂದಿ, ಉತ್ತರ ಕನ್ನಡ 12 ಮಂದಿ ಹಾಗೂ ಬಳ್ಳಾರಿಯಲ್ಲಿ ಓರ್ವನಿಗೆ ಕೊರೋನ ಸೋಂಕು ದೃಢಪಟ್ಟಿದೆ. 753 ಮಂದಿ ಸೋಂಕಿತರ ಪೈಕಿ 376 ಮಂದಿ ಸೋಂಕಿನಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ

ರಾಜ್ಯದಲ್ಲಿ ಇಂದು 48 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ Read More »

ಕರ್ನಾಟಕ

ಇಂದು ರಾಜ್ಯದಲ್ಲಿ 12 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ

ಬೆಂಗಳೂರು, ಎ.7: ರಾಜ್ಯದಲ್ಲಿ ಇಂದು ಹೊಸದಾಗಿ 12 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಈ ನಡುವೆ ದಾವಣಗೆರೆಯ 55 ವರ್ಷದ ಮಹಿಳೆಯೋರ್ವರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯ ಸರಕಾರ ಹೊರಡಿಸಿದ ಬುಲೆಟಿನ್ ನಲ್ಲಿರುವಂತೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದ್ದು, ಈ ಪೈಕಿ 30 ಮಂದಿ ಸಾವನ್ನಪ್ಪಿದ್ದರೆ, 366 ಮಂದಿ ಗುಣಮುಖರಾಗಿದ್ದಾರೆ. ಬೆಳಗ್ಗೆ 8 ಪ್ರಕರಣಗಳು ಪತ್ತೆಯಾಗಿದ್ದವು. ದಾವಣಗೆರೆಯಲ್ಲಿ ಇಂದು ಮೃತಪಟ್ಟ 55 ವರ್ಷದ ಮಹಿಳೆ, ಜ್ವರದ ಲಕ್ಷಣಗಳನ್ನು ಹೊಂದಿದ್ದ 53

ಇಂದು ರಾಜ್ಯದಲ್ಲಿ 12 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಕೊರೋನಾ ವಾರಿಯರ್ಸ್‌’ ತಂಡವನ್ನು ಗೌರವಿಸಿದ ಚಂದ್ರಶೇಖರ ಸ್ವಾಮೀಜಿ ದಂಪತಿ ➤ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಗೌರವ

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕೊರೋನಾ ಹಿನ್ನೆಲೆಯಲ್ಲಿ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊರೋನಾ ವಾರಿಯರ್ಸ್ ತಂಡವನ್ನು ಬೆಂಗಳೂರಿನ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರುವ ಉಪ್ಪಿನಂಗಡಿ ಹಾಗೂ ಕಡಬ ಠಾಣೆಯ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು, ದಾದಿಯರನ್ನು ಬೆಂಗಳೂರಿನ ಆರ್‌.ಟಿ. ನಗರದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮುಖ್ಯಸ್ಥರಾದ ಚಂದ್ರಶೇಖರ ಸ್ವಾಮೀಜಿ

‘ಕೊರೋನಾ ವಾರಿಯರ್ಸ್‌’ ತಂಡವನ್ನು ಗೌರವಿಸಿದ ಚಂದ್ರಶೇಖರ ಸ್ವಾಮೀಜಿ ದಂಪತಿ ➤ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಗೌರವ Read More »

ಕರ್ನಾಟಕ

ಬೆಳಿಗ್ಗೆ ಆಪರೇಷನ್ ಸಕ್ಸಸ್..!! ರಾತ್ರಿ ನಿಗೂಢ ಸಾವು..?? ➤ ಮಂಗಳೂರು ನಗರವನ್ನು ಸುತ್ತಾಡಿದ ಕಾಡುಕೋಣದ ಕಥೆಯಿದು..!!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.05. ಮಂಗಳವಾರ ಬೆಳ್ಳಂಬೆಳಗ್ಗೆ ಮಂಗಳೂರು ನಗರವನ್ನು ಸುತ್ತಾಡಿ ನಗರ ವಾಸಿಗಳನ್ನು ಬೆಚ್ಚಿಬೀಳಿಸಿದ್ದ ಕಾಡುಕೋಣವನ್ನು ಅರಣ್ಯಾಧಿಕಾರಿಗಳು ಅರಿವಳಿಕೆ ನೀಡಿ ಹಿಡಿಯಲಾಗಿತ್ತು. ನಗರದಲ್ಲಿ ಹಿಡಿದ ಕಾಡಕೋಣವನ್ನು ದೂರದ ಚಾರ್ಮಾಡಿ ಘಾಟ್ ನಲ್ಲಿ ಬಿಡುವ ಸಿದ್ಧತೆ ನಡೆದಿದ್ದು, ಘಾಟಿಯ 9ನೇ ತಿರುವಿನಲ್ಲಿ ಬಿಡಲಾಗಿತ್ತು. ಆದರೆ ಬೆಳಿಗ್ಗೆ ಕಾಡಕೋಣವನ್ನು ಹಿಡಿಯುವ ಆಪರೇಷನ್ ಸಕ್ಸಸ್ ಆಗಿತ್ತಾದರೂ ಸಂಜೆ ಘಾಟಿಯಲ್ಲಿ ಬಿಟ್ಟ ನಂತರ ಮಾತ್ರ ಕಾಡುಕೋಣ ನಿಗೂಢವಾಗಿ ಸಾವನ್ನಪ್ಪಿದೆ ಎಂಬ ಮಾಹಿತಿಯು ಕೇಳಿ ಬರುತ್ತಿದೆ. ಅರಿವಳಿಕೆ ಮದ್ದಿನ ಪ್ರಮಾಣ ಹೆಚ್ಚಾಗಿ

ಬೆಳಿಗ್ಗೆ ಆಪರೇಷನ್ ಸಕ್ಸಸ್..!! ರಾತ್ರಿ ನಿಗೂಢ ಸಾವು..?? ➤ ಮಂಗಳೂರು ನಗರವನ್ನು ಸುತ್ತಾಡಿದ ಕಾಡುಕೋಣದ ಕಥೆಯಿದು..!! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫಲ್ಗುಣಿ ನದಿಗೆ ವಿಷಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.05. ಫಲ್ಗುಣಿ ನದಿಗೆ ವಿಷ ಹಾಕಿ ಸಾವಿರಾರು ಮೀನುಗಳ ಮಾರಣಹೋಮ ಮಾಡಿದ್ದ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ನಿವಾಸಿಗಳಾದ ಇರ್ಷಾದ್ ಮತ್ತು ಮುಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಎಂಬಲ್ಲಿ ಫಲ್ಗುಣಿ ನದಿಗೆ ವಿಷ ಹಾಕಿ ಸಾವಿರಾರು ಮೀನುಗಳ ಮಾರಣಹೋಮಕ್ಕೆ ಕಾರಣವಾಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದರು.

ಫಲ್ಗುಣಿ ನದಿಗೆ ವಿಷಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಡಿಕೆ‌ ಕೃಷಿಕರಿಗೆ ಸಂತಸದ ಸುದ್ದಿ ನೀಡಿದ ‘ಕ್ಯಾಂಪ್ಕೋ’ ➤ ಅದೇನೆಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.05. ಅಡಿಕೆ‌ ಕೃಷಿಕರಿಗೆ ಸಂತಸದ ಸುದ್ದಿಯೊಂದು ಹೊರಬಂದಿದ್ದು, ನಾಳೆಯಿಂದ ಎಲ್ಲಾ ದಿನಗಳಲ್ಲಿಯೂ ಕ್ಯಾಂಪ್ಕೋವು ಎಲ್ಲಾ ಶಾಖೆಗಳಲ್ಲಿ ಮಿತಿ ಇಲ್ಲದೆ ಅಡಿಕೆ ಖರೀದಿ ನಡೆಸಲಿದೆ. ಆರಂಭದಲ್ಲಿ ಒಂದು ತಿಂಗಳಲ್ಲಿ ಗರಿಷ್ಠ ಒಂದು ಕ್ವಿಂಟಾಲ್ ಅಥವಾ 25 ಸಾವಿರ ದವರೆಗೆ ಅಡಿಕೆ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದ ಕ್ಯಾಂಪ್ಕೋ ಬರಬರುತ್ತಾ ಅಡಿಕೆ ಖರೀದಿಯ ಮಿತಿಯನ್ನು ಐದು ಕ್ವಿಂಟಾಲ್ ಗೆ ಏರಿಸಿತ್ತು. ಇದೀಗ ಖರೀದಿಯ ಮಿತಿಯನ್ನು ತೆಗೆದು ಹಾಕಿರುವ ಕ್ಯಾಂಪ್ಕೋ, ಗ್ರಾಹಕರು ತಮಗೆ ಇಷ್ಟ ಬಂದಷ್ಟು ಅಡಿಕೆಯನ್ನು

ಅಡಿಕೆ‌ ಕೃಷಿಕರಿಗೆ ಸಂತಸದ ಸುದ್ದಿ ನೀಡಿದ ‘ಕ್ಯಾಂಪ್ಕೋ’ ➤ ಅದೇನೆಂದು ತಿಳಿಯಬೇಕೇ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಅತಂತ್ರ ವಲಸೆ ಕಾರ್ಮಿಕರಿಗೆ ರಾಜ್ಯದ ಒಳಗಡೆ ಊರಿಗೆ ತೆರಳಲು ಸರಕಾರವು ಉಚಿತ ಅವಕಾಶ ಕಲ್ಪಿಸಿರುವುದರಿಂದ ಸೋಮವಾರ ರಾತ್ರಿ ಕಡಬದಿಂದ 7 ಬಸ್‌ಗಳಲ್ಲಿ ಸುಮಾರು 196 ಮಂದಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡಲಾಯಿತು. ಕಡಬ ತಾಲೂಕು ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಪಿಡಿಒಗಳ ಮೂಲಕ, ಊರಿಗೆ ತೆರಳಲಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಪಡೆದು ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ,

ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top