ಕರ್ನಾಟಕ

ಖ್ಯಾತ ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ಒಲಿಂಡಾ ಪಿರೇರಾ ಇನ್ನಿಲ್ಲ➤ ಜೂನ್ 1 ರಂದು ಅಂತಿಮ ಸಂಸ್ಕಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.31: ಖ್ಯಾತ ಸಮಾಜ ಸೇವಕಿ ಹಾಗೂ ಸ್ಕೂಲ್ ಆಫ್ ಸೋಷಿಯಲ್ ವರ್ಕ್ನ ಮಾಜಿ ಪ್ರಾಂಶುಪಾಲೆ ರೋಶ್ನಿ ನಿಲಯ, ಡಾ. ಒಲಿಂಡಾ ಪಿರೇರಾ (95) ಅವರು ಭಾನುವಾರ ನಿಧನರಾದರು. ಅಗಸ್ಟ್ 15, 1925 ರಂದು ಜನಿಸಿದ ಡಾ. ಒಲಿಂಡಾ ಪಿರೇರಾ ಅವರು , ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ವೃದ್ದರ ಆರೈಕೆಗೆ ಸಹಾಯ ಮಾಡುವಲ್ಲಿ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರವರ್ತಕ ಶಿಕ್ಷಣ ತಜ್ಞೆಯಾದ ಇವರು ದೇಶದ ವಿವಿಧ […]

ಖ್ಯಾತ ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ಒಲಿಂಡಾ ಪಿರೇರಾ ಇನ್ನಿಲ್ಲ➤ ಜೂನ್ 1 ರಂದು ಅಂತಿಮ ಸಂಸ್ಕಾರ Read More »

ಕರಾವಳಿ, ಕರ್ನಾಟಕ

ಮುಂದಿನ 4 ದಿನ ಗುಡುಗು ಸಹಿತ ಮಳೆ ➤ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.31: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೇ 31 ಮತ್ತು ಜೂನ್ 1ರಂದು ವೇಗವಾಗಿ ಗಾಳಿ ಬೀಸಲಿದ್ದು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೂ.1ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.   ಉತ್ತರ ಒಳನಾಡಿನಲ್ಲಿ ಜೂ.2 ರಂದು ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ

ಮುಂದಿನ 4 ದಿನ ಗುಡುಗು ಸಹಿತ ಮಳೆ ➤ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ Read More »

ಕರಾವಳಿ, ಕರ್ನಾಟಕ

ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧ ವಿತರಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಮೇ.31: ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸರಕಾರದ ಆಯುಷ್‌ ಇಲಾಖೆ ವತಿಯಿಂದ ಚ್ಯವನಪ್ರಾಶ್‌ ಆಯುರ್ವೇದ ಲೇಹ್ಯ ವನ್ನು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಶನಿವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿ ಯಲ್ಲಿ ಸಾಂಕೇತಿಕವಾಗಿ ವಿತರಿಸಿದರು.ಆಯುಷ್‌ ಇಲಾಖೆಯ ವೈದ್ಯಾಧಿಕಾರಿ ಡಾ| ಮಣಿಕರ್ಣಿಕ ಅವರು ನೇತೃತ್ವ ವಹಿಸಿದ್ದರು. ಚ್ಯವನಪ್ರಾಶ್‌ ಲೇಹ್ಯವು ಆಯುರ್ವೇದದಲ್ಲಿ ಉಲ್ಲೇಖ ವಾಗಿರುವಂತೆ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಈಗಾಗಲೇ ಕೋವಿಡ್-19 ವಿರುದ್ಧ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ರೋಗ ನಿರೋಧಕ ಶಕ್ತಿಯನ್ನು

ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧ ವಿತರಣೆ Read More »

ಕರಾವಳಿ, ಕರ್ನಾಟಕ

SSLC ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ದ ➤ ಸಚಿವ ಸುರೇಶ್ ಕುಮಾರ್

(ನ್ಯೂಸ್ ಕಡಬ) newskadaba.com ತುಮಕೂರು,ಮೇ.31: SSLC ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಅಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪರಿಕ್ಷಾ ಕೇಂದ್ರ ಗಳಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗ ಬಾರದು ರಾಜ್ಯದಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಾಸ್ಕ್ಗಳನ್ನು ನೀಡಲು ಈಗಾಗಲೇ ಎಂಟುವರೆ ಲಕ್ಷ ಮಾಸ್ಕ್ ಗಳನ್ನು ನೀಡಲು ಮುಂದೆ

SSLC ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ದ ➤ ಸಚಿವ ಸುರೇಶ್ ಕುಮಾರ್ Read More »

ಕರ್ನಾಟಕ

ಕಡಬ: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ,ಮೇ.31: ಕಡಬ ತಾಲೂಕಿನ ಐತ್ತೂರು ಗ್ರಾಮದ 72 ಕಾಲೋನಿಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.   ಘಟನೆ ಇಂದು(ಮೇ.31) ನಡೆದಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವಕನ್ನು ದಿ.ರಾಜೇಂದ್ರನ್ ಅವರ ಪುತ್ರ ಗೌತಮ್ ಎಂದು ಗುರುತಿಸಲಾಗಿದೆ. ಯುವಕನ ಆತ್ಮಹತ್ಯೆ ಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿಡಲಾಗಿದೆ.    

ಕಡಬ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ.ಕ.ದಲ್ಲಿ 184 ಮಂದಿಯ ಕೊರೊನಾ ವರದಿ ನೆಗೆಟಿವ್ ➤ ಸುರಕ್ಷತಾ ಕ್ರಮಗಳತ್ತ ಕರಾವಳಿಗರು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.31: ದ.ಕ. ಜಿಲ್ಲೆಯಲ್ಲಿ ಶನಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ದಿನದಂದು ಸುಮಾರು 184 ಮಂದಿಯ ವರದಿ ನೆಗೆಟಿವ್ ಬಂದಿದೆ. ಆ ಮೂಲಕ ಕರಾವಳಿ ಭಾಗದ ಜನರಲ್ಲಿ ಸ್ವಲ್ಪ ಆತಂಕ ದೂರವಾಗಿದೆ. ಇನ್ನು ಸೋಂಕು ಪತ್ತೆಯಾದವರ ಪೈಕಿ 13 ಮಂದಿ ಮುಂಬೈನಿಂದ ಮರಳಿದವರಾಗಿದ್ದಾರೆ. ಉಳಿದಂತೆ ಓರ್ವ ವ್ಯಕ್ತಿ ಉಳ್ಳಾಲದ ಸೋಮೇಶ್ವರ ಮೂಲದವರಾಗಿದ್ದು, ಸೋಂಕಿತರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಶನಿವಾರದಂದು ಒಟ್ಟು 198 ಮಂದಿಯ ಕೋವಿಡ್ ಪರೀಕ್ಷಾ ವರದಿ

ದ.ಕ.ದಲ್ಲಿ 184 ಮಂದಿಯ ಕೊರೊನಾ ವರದಿ ನೆಗೆಟಿವ್ ➤ ಸುರಕ್ಷತಾ ಕ್ರಮಗಳತ್ತ ಕರಾವಳಿಗರು Read More »

ಕರಾವಳಿ, ಕರ್ನಾಟಕ

ಕಡಬ, ಬೆಳ್ತಂಗಡಿ ತಲುಪಿದೆ ಮಿಡತೆ ಹಿಂಡು ➤ ಆತಂಕದಲ್ಲಿ ಕೃಷಿಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.30. ದೇಶಾದ್ಯಂತ ರೈತರನ್ನು ಚಿಂತೆಗೀಡಾಗುವಂತೆ ಮಾಡಿದ್ದ ಮಿಡತೆ ಹಾವಳಿಯು ರಾಜ್ಯಕ್ಕೆ ಕಾಲಿಟ್ಟಿದ್ದು, ಇದೀಗ ಕಡಬ ಪರಿಸರದಲ್ಲೂ ಕಂಡುಬಂದಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಿಡತೆ ಹಾವಳಿ ಆರಂಭಗೊಂಡಿದ್ದು, ರೈತರನ್ನು ಕಂಗೆಡಿಸಿದೆ. ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ಆನಂದ ಏರಾ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ಗುಂಪು, ಗುಂಪಾಗಿ ಆಗಮಿಸುವ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಈ ಮಿಡತೆಗಳ ಗುಂಪು ಕಾಣಸಿಗುತ್ತಿದ್ದು, ಪರಿಸರವಾಸಿಗಳನ್ನು ಆತಂಕಕ್ಕೀಡುಮಾಡಿದೆ. ಅಲ್ಲದೆ

ಕಡಬ, ಬೆಳ್ತಂಗಡಿ ತಲುಪಿದೆ ಮಿಡತೆ ಹಿಂಡು ➤ ಆತಂಕದಲ್ಲಿ ಕೃಷಿಕರು Read More »

ಕರ್ನಾಟಕ

ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ: 141 ಹೊಸ ಪ್ರಕರಣ ಪತ್ತೆ

ಬೆಂಗಳೂರು, ಮೇ 30: ರಾಜ್ಯದಲ್ಲಿ ಕೊರೋನ ವೈರಸ್‌ಗೆ ಶನಿವಾರ ಮತ್ತೊಂದು ಬಲಿಯಾಗಿದ್ದು, 141 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ಪತ್ತೆಯಾದ 141 ಸೋಂಕಿತರ ಪೈಕಿ 90 ಜನರು ಹೊರರಾಜ್ಯದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಬೆಂಗಳೂರು ನಗರ 33, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಶಿವಮೊಗ್ಗ 6,ಕಲಬುರಗಿಯಲ್ಲಿ 2, ಬೆಳಗಾವಿ 1, ದಾವಣಗೆರೆಯಲ್ಲಿ 4, ಬೀದರ್ ನಲ್ಲಿ 10,

ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ: 141 ಹೊಸ ಪ್ರಕರಣ ಪತ್ತೆ Read More »

ಕರ್ನಾಟಕ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿದು ಉಗುಳುವುದು ನಿಷೇಧ: ಆರೋಗ್ಯ ಇಲಾಖೆ ಆದೇಶ

ಬೆಂಗಳೂರು, ಮೇ 30: ಕೊರೋನ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಸಿಎಂಆರ್ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಕೊರೋನ ಹೆಚ್ಚುತ್ತಿದೆ ಎಂಬ ಕುರಿತು ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ತಂಬಾಕು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ನಿಯಮ ಉಲ್ಲಂಘಿಸಿದಲ್ಲಿ,

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿದು ಉಗುಳುವುದು ನಿಷೇಧ: ಆರೋಗ್ಯ ಇಲಾಖೆ ಆದೇಶ Read More »

ಕರ್ನಾಟಕ

ಜೂನ್ 15 ರಿಂದ ಮೀನುಗಾರಿಕೆ ನಿಷೇಧ ➤ ಪರಿಷ್ಕೃತ ಆದೇಶ ಪ್ರಕಟ

(ನ್ಯೂಸ್ ಕಡಬ) newskadaba.com ಉಡುಪಿ, ಮೇ .30: ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆ, ಹಾಗೂ ಕರ್ನಾಟಕ ಸರ್ಕಾರದ ಮೇ 29 ರ ಅಧಿಸೂಚನೆ ಯಂತೆ, ಉಡುಪಿ ಜಿಲ್ಲೆಯನ್ನು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯ ನಿಷೇಧವನ್ನು ಪ್ರಸಕ್ತ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ

ಜೂನ್ 15 ರಿಂದ ಮೀನುಗಾರಿಕೆ ನಿಷೇಧ ➤ ಪರಿಷ್ಕೃತ ಆದೇಶ ಪ್ರಕಟ Read More »

ಕರಾವಳಿ, ಕರ್ನಾಟಕ
Scroll to Top