ಕರ್ನಾಟಕ

ಐಪಿಎಸ್ ಅಧಿಕಾರಿಗೂ ವಕ್ಕರಿಸಿದ ಕೊರೋನಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.24, ಕೊರೋನಾ ವೈರಸ್ ಮಹಾಮಾರಿ ಇದೀಗ ವಾರಿಯರ್ಸ್ ನ್ನು ಬೆಂಬಿಡದೆ ಕಾಡುತ್ತಿದೆ. ಇದೀಗ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೆಎಸ್ಆರ್ ಪಿ ಕಮಾಂಡೆಂಟ್ ಗೆ ಕೊರೋನಾ ಸೋಂಕು ದೃಢಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ. ಕೆಎಸ್ಆರ್ ಪಿಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು ದೃಢಪಡುವ ಮುನ್ನ ಹಾಗೂ ನಂತರದಲ್ಲಿ ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬುವ ಕಾರ್ಯವನ್ನು ಅವರು ಮಾಡಿದ್ದರು. […]

ಐಪಿಎಸ್ ಅಧಿಕಾರಿಗೂ ವಕ್ಕರಿಸಿದ ಕೊರೋನಾ Read More »

ಕರ್ನಾಟಕ

ಉಕ್ಕಿ ಹರಿಯುತ್ತಿರುವ ಬ್ರಹ್ಮಪುತ್ರ 30,000 ಜನರ ಜೀವನ ಅತಂತ್ರ

(ನ್ಯೂಸ್ ಕಡಬ)newskadaba.com ಜೂ.24, ಶಿವಸಾಗರ ಜಿಲ್ಲೆಯ ನಜೀರಾ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ರಾಜ್ಯದ ಇತರೆಡೆ ಸೇರಿ ಒಟ್ಟು ಹನ್ನೊಂದು ಜನ ಮೃತಪಟ್ಟಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಜೋರ್ಹತ್ ಜಿಲ್ಲೆಯ ನೀಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಮೇಲಕ್ಕೆ ಹರಿಯುತ್ತಿದ್ದರೆ, ಶಿವಸಾಗರ್, ದಿವಾಂಗ್, ಶಿವಸಾಗರ ಜಿಲ್ಲೆಯ ನಿಸಲಮುಘಾಟ್‌ನಲ್ಲಿ ಅಪಾಯದ ಮಟ್ಟಕ್ಕಿಂತ ಮೇಲಕ್ಕೆ ಹರಿಯುತ್ತಿದೆ. ಪ್ರಸ್ತುತ ಪ್ರವಾಹದಲ್ಲಿ ಧೆಮಾಜಿ, ಶಿವಸಾಗರ್, ಜೋರ್ಹತ್ ಮತ್ತು ದಿಬ್ರುಗರ್ ಜಿಲ್ಲೆಯ ಸುಮಾರು 30,000

ಉಕ್ಕಿ ಹರಿಯುತ್ತಿರುವ ಬ್ರಹ್ಮಪುತ್ರ 30,000 ಜನರ ಜೀವನ ಅತಂತ್ರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಕೋವಿಡ್ ಲ್ಯಾಬ್ ಶೀಘ್ರ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ಉಡುಪಿ,ಜೂ.24:   ಗಂಟಲು ದ್ರವ ಪರೀಕ್ಷೆಗಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಕೋವಿಡ್ ಲ್ಯಾಬ್ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಡುಪಿಯಲ್ಲಿ ನಾಲ್ಕೈದು ದಿನಗಳಲ್ಲಿ ಲ್ಯಾಬ್ ಕಾರ್ಯಾರಂಭಿಸಲಿದೆ ಎಂದು ಮುಜರಾಯಿ ಹಾಗೂ ಮೀನುಗಾರಿಕಾ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಪುರಸಭೆ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ಪರಿಣಿತರು ಸೋಂಕು ಪ್ರಮಾಣ ಹೆಚ್ಚಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಿದ್ದು, ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೌಲಭ್ಯಗಳನ್ನು

ಉಡುಪಿ: ಕೋವಿಡ್ ಲ್ಯಾಬ್ ಶೀಘ್ರ ಕಾರ್ಯ ಆರಂಭ Read More »

ಕರಾವಳಿ, ಕರ್ನಾಟಕ

ಕೊರೊನಾ ಶಂಕೆ ಹಿನ್ನೆಲೆ ➤ ಮಂಗಳೂರಿನ ಬಂದರು ‘ಬಂದ್’

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.24:  ಮಂಗಳವಾರದಂದು, ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮೀಗಾರರೇ ಸೇರಿಕೊಂಡು ದಕ್ಕೆ ಬಂದ್ ಮಾಡಿದ್ದಾರೆ.  ಮಂಗಳೂರು ನಗರದಲ್ಲಿ ದಿನ ಬೆಳಗಾಗುವ ಮುನ್ನವೇ ವ್ಯಾಪಾರ ವಹಿವಾಟು ಪೂರ್ಣಗೊಳಿಸುತ್ತಿದ್ದ ಬಂದರು ಇದೀಗ ಬಂದ್ ಆಗಿದ್ದು, ಹೊರಗಿನಿಂದ ಯಾರಿಗೂ ಬಂದರು ಪ್ರವೇಶಕ್ಕೆ ಅವಕಾಶವಿಲ್ಲ.   ಸೂರ್ಯೋದಯದ ಮುನ್ನವೇ ನಗರದಲ್ಲಿರುವ ಬಂದರಿನಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಮೀನು ರವಾನೆಯಾಗುತ್ತಿತ್ತು. ಹೊರ ರಾಜ್ಯದಿಂದಲೂ ಮೀನಿನ ವಾಹನಗಳು ದಕ್ಕೆಗೆ ಆಗಮಿಸಿ ಮೀನಿನೊಂದಿಗೆ

ಕೊರೊನಾ ಶಂಕೆ ಹಿನ್ನೆಲೆ ➤ ಮಂಗಳೂರಿನ ಬಂದರು ‘ಬಂದ್’ Read More »

ಕರಾವಳಿ, ಕರ್ನಾಟಕ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ – ರಾಶಿ ಫಲ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ ಇಂದು

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ – ರಾಶಿ ಫಲ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ರಾಜ್ಯದಲ್ಲಿಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ: ಸೋಂಕಿತರ ಒಟ್ಟು ಸಂಖ್ಯೆ 9,721ಕ್ಕೆ ಏರಿಕೆ

ಬೆಂಗಳೂರು, ಜೂ.23: ರಾಜ್ಯದಲ್ಲಿ ಇಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು (107) ಹೊರತುಪಡಿಸಿದಂತೆ ಇಂದು ಬಳ್ಳಾರಿ (53), ಬೀದರ್ (22), ಮೈಸೂರು (21), ವಿಜಯಪುರ (16), ಯಾದಗಿರಿ (13) ಹಾಗೂ ಉಡುಪಿ (11) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಇಂದು 274 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ 6,004

ರಾಜ್ಯದಲ್ಲಿಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ: ಸೋಂಕಿತರ ಒಟ್ಟು ಸಂಖ್ಯೆ 9,721ಕ್ಕೆ ಏರಿಕೆ Read More »

ಕರ್ನಾಟಕ

ಮಂಗಳೂರಿನಲ್ಲಿ ಕೊರೊನಾಗೆ 9ನೇ ಬಲಿ

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ.23:  ಮಂಗಳೂರಿನಲ್ಲಿ ಕೊರೊನಾಗೆ 9ನೇ ಬಲಿಯಾಗಿದ್ದು, 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.  ರಾಜ್ಯದಲ್ಲಿ ಕೊರೋನಾ ಕೇಸ್‌ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ‌ನಿನ್ನೆ 12 ಮಂದಿಯಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ.ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಮತ್ತೆ 14 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1077ಕ್ಕೆ ಏರಿದಂತಾಗಿದೆ. ಈವರೆಗೆ ಒಟ್ಟು 969 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸದ್ಯ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 108 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರಿನಲ್ಲಿ ಕೊರೊನಾಗೆ 9ನೇ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತುರ್ತು ಸೇವೆಗೆ ಸನ್ನದ್ಧರಾಗಿ ➤ ಡಾ. ವೀರೇಂದ್ರ ಹೆಗ್ಗಡೆಯವರಿಂದ ಕಿವಿಮಾತು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜೂ.23:  ಸರಕಾರ ವಿಪತ್ತು ನಿರ್ವಹಣೆಗೆ ಎಂದೂ ಸನ್ನದ್ಧವಾಗಿದೆ. ಆದರೆ ಪ್ರಜೆಗಳಲ್ಲಿ ಸೇವಾ ಮನೋಭಾವ ಬೆಳೆಯಬೇಕಿರುವುದು ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯು ಸ್ವಯಂ ಸೇವಕರ ತಂಡವನ್ನು ರಚಿಸಿ ವಿಪತ್ತು ನಿರ್ವಹಣೆಯ ಹೊಣೆಗಾರಿಕೆ ವಹಿಸಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ

ತುರ್ತು ಸೇವೆಗೆ ಸನ್ನದ್ಧರಾಗಿ ➤ ಡಾ. ವೀರೇಂದ್ರ ಹೆಗ್ಗಡೆಯವರಿಂದ ಕಿವಿಮಾತು Read More »

ಕರಾವಳಿ, ಕರ್ನಾಟಕ

ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.23,. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರ ಪತ್ನಿ ಹಾಗೂ ಮಗಳಿಗೂ ಕೊರೊನಾ ವೈರಸ್‌‌ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತು ಸಚಿವ ಸುಧಾಕರ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಖಚಿತಪಡಿಸಿದ್ದಾರೆ. ಸುಧಾಕರ್ ಅವರ 82 ವರ್ಷ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧಾಕರ್ ಅವರ ತಂದೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢವಾಗಿದ್ದು. ಅವರ

ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್ Read More »

ಕರ್ನಾಟಕ

ಮಡಿಕೇರಿ :ನಿವೃತ್ತಿಯಾದ ಒಂದೇ ತಿಂಗಳಿನಲ್ಲಿ ASI ಅತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಮಡಿಕೇರಿ, ಜೂ. 23: ಸಹಾಯಕ ಸಬ್‌ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಒಂದೇ ತಿಂಗಳಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ನಡೆದಿದೆ.   ಮೃತರನ್ನು ಎಂ.ಎಸ್‌ ಈರಪ್ಪ ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ ಕಳೆದ ಮೇ 30 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು.ಇಂದು ಬೆಳಿಗ್ಗೆ ತಮ್ಮ

ಮಡಿಕೇರಿ :ನಿವೃತ್ತಿಯಾದ ಒಂದೇ ತಿಂಗಳಿನಲ್ಲಿ ASI ಅತ್ಮಹತ್ಯೆ Read More »

ಕರಾವಳಿ, ಕರ್ನಾಟಕ
Scroll to Top