ಕರ್ನಾಟಕ

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಕರಾವಳಿ. ಆ,25: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಮ್ಮಾಜೆ, ಕಲ್ಲಬೆಟ್ಟು ನೆಲ್ಲಿತೀರ್ಥ,ಗುರುಪುರ, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ, ಬಂಟ್ವಾಳದ ವಗ್ಗ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ/ ಡಾ| ಬಿ.ಆರ್.‌ ಅಂಬೆಡ್ಕರ್‌/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆಯನ್ನು ಪುನಃ ಆರಂಭಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-08-2020 ಆಗಿತ್ತು. ಆದರೆ ದಿನಾಂಕ ಮುಂದೂಡಿಕೆಯಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2020 […]

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ Read More »

ಕರಾವಳಿ, ಕರ್ನಾಟಕ

ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ➤ ಬೆಳ್ಮಣ್ ಪೇಟೆಯಲ್ಲಿ ಆಕ್ರೋಶ ವ್ಯಕ್ತ

(ನ್ಯೂಸ್ ಕಡಬ) newskadaba.com ಬೆಳ್ಮಣ್. ಆ,25:  ಈಗಾಗಲೇ ಕೊರೊನಾದಿಂದ ಕಂಗೆಟ್ಟು ಹೋಗಿರುವ ಬೆಳ್ಮಣ್ ಗ್ರಾಮದ ಜನರನ್ನು ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ಈಗಾಗಲೇ ಬೆಳ್ಮಣ್ ಜನತೆ ಸೀಲ್‌ಡೌನ್ ಹಾಗೂ ರ‌್ಯಾಪಿಡ್ ಟೆಸ್ಟ್‌ಗಳಿಂದ ರೋಸಿ ಹೋಗಿದ್ದು ತೊಂದರೆ ಅನುಭವಿಸಿದ್ದಾರೆ. ರ‌್ಯಾಪಿಡ್ ಟೆಸ್ಟ್ ನಡೆಸುವುದಕ್ಕೆ ವಿರೋಧವಿದೆ ಎಂದು ಬೆಳ್ಮಣ್ ಪೇಟೆಯ ವರ್ತಕರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ಮಣ್‌ನಲ್ಲಿ ನಡೆದಿದೆ. ಬೆಳ್ಮಣ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಜಮಾಯಿಸಿದ ಬೆಳ್ಮಣ್ ಪೇಟೆ ಪರಿಸರದ ವರ್ತಕರು ಹಾಗೂ ನಾಗರಿಕರು

ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ➤ ಬೆಳ್ಮಣ್ ಪೇಟೆಯಲ್ಲಿ ಆಕ್ರೋಶ ವ್ಯಕ್ತ Read More »

ಕರಾವಳಿ, ಕರ್ನಾಟಕ

ಕರಾವಳಿಯಲ್ಲಿ ಮತ್ತೆ 201 ಕೊವೀಡ್-19 ಪ್ರಕರಣ ಪತ್ತೆ ➤ ಆರು ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಕರಾವಳಿ . ಆ,25:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 201 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತರ ಒಟ್ಟು ಸಂಖ್ಯೆ ಸಂಖ್ಯೆ 316ಕ್ಕೆ ಹೆಚ್ಚಳವಾಗಿದೆ.   ಮೃತರಲ್ಲಿ 255 ಮಂದಿ ದಕ ಜಿಲ್ಲೆಯವರಾದರೆ, 61 ಮಂದಿ ಹೊರಜಿಲ್ಲೆಯವರು. ಸೋಮವಾರ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳದ ಇಬ್ಬರು ಮತ್ತು ಹೊರಜಿಲ್ಲೆಯ ಒಬ್ಬರು ಸೇರಿದ್ದಾರೆ.ಪಾಸಿಟಿವ್‌ ಆದವರಲ್ಲಿ ಮಂಗಳೂರು ತಾಲೂಕಿನ 144, ಬಂಟ್ವಾಳದ 22, ಪುತ್ತೂರಿನ 5, ಸುಳ್ಯದ 5,

ಕರಾವಳಿಯಲ್ಲಿ ಮತ್ತೆ 201 ಕೊವೀಡ್-19 ಪ್ರಕರಣ ಪತ್ತೆ ➤ ಆರು ಮಂದಿ ಮೃತ್ಯು Read More »

ಕರಾವಳಿ, ಕರ್ನಾಟಕ

ಮಗ SSLC ಪರೀಕ್ಷೆಯಲ್ಲಿ ಫೇಲ್ ➤ ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com ಕೊಡಗು . ಆ,25:  ಮಗ SSLC ಪರೀಕ್ಷೆಯಲ್ಲಿ ಫೇಲಾದ ಎಂಬ ಬೇಸರದಿಂದ ತಂದೆಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. 39 ವರ್ಷದ ತಂದೆ, ಕೂಲಿ ಕಾರ್ಮಿಕ ರಘು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪತ್ನಿಯ ವೇಲ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. SSLC  ಪರೀಕ್ಷೆಯ ನಾಲ್ಕು ವಿಷಯದಲ್ಲಿ ಮಗ ಪ್ರಶಾಂತ್​ ಅನುತೀರ್ಣನಾಗಿದ್ದ. ಮಗ ಫೇಲ್ ಆಗಿದ್ದಕ್ಕೆ ತಂದೆ ಕುಡಿತದ ದಾಸನಾಗಿದ್ದ ಎಂದು ಆತನ ಪತ್ನಿ ಮಂಜುಳಾ ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಸಿದ್ದಾಪುರ

ಮಗ SSLC ಪರೀಕ್ಷೆಯಲ್ಲಿ ಫೇಲ್ ➤ ಆತ್ಮಹತ್ಯೆಗೆ ಶರಣಾದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್ಗೆ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 25. ಕಾಲು ಬೆರಳಿನ ಮೂಲಕ ಪರೀಕ್ಷೆ ಬರೆದು ರಾಜ್ಯದ ಜನತೆಯ ಗಮನ ಸೆಳೆದಿದ್ದ ಬಂಟ್ವಾಳ ಕಂಚಿಕಾರ ನಿವಾಸಿ ಕೌಶಿಕ್ ನ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆಯಂತೆ ನೆರವಾಗಿದ್ದು, ಇದೀಗ ವಿದ್ಯಾರ್ಥಿಯನ್ನು ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆ ಮಾಡಲಾಗಿದೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ. ಮೋಹನ್ ಆಳ್ವ ಅವರ ಜೊತೆ ಮಾತನಾಡಿ ಶಾಸಕರು ದಾಖಲಾತಿಗೆ ಕ್ರಮ ಕೈಗೊಂಡಿದ್ದಾರೆ.

ಬಂಟ್ವಾಳ: ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್ಗೆ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ Read More »

ಕರಾವಳಿ, ಕರ್ನಾಟಕ

ಕಿರುಕುಳ ತಡೆಯಲಾರದೆ ಯುವ ವಕೀಲ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬಳ್ಳಾರಿ, ಆ. 25. ಸೆಲ್ಫಿ ವೀಡಿಯೋ ಮಾಡಿಕೊಂಡು ಯುವ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಕೀಲರನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಮಹೇಶ್ (28) ಎಂದು ಗುರುತಿಸಲಾಗಿದೆ. ಇವರು ಹೊಸಪೇಟೆಯ ಬಳ್ಳಾರಿ ಸರ್ಕಲ್‌ನಲ್ಲಿರುವ ಈಕ್ವಿಟಾಸ್‌‌‌ ಸ್ಮಾಲ್‌‌‌‌‌ ಫೈನಾನ್ಸ್‌‌‌‌ ಬ್ಯಾಂಕ್‌ನಲ್ಲಿ ಲೀಗಲ್‌‌ ಅಡ್ವೈಸರ್‌‌ ಆಗಿದ್ದರು. ಇನ್ನು ಮಹೇಶ್‌ ಮೃತಪಟ್ಟ ಸ್ಥಳದಲ್ಲಿ ಡೆತ್‌ ನೋಟ್‌ ದೊರೆತ್ತಿದ್ದು, ನನ್ನ ಸಾವಿಗೆ ಈಕ್ವಿಟಾಸ್ ಬ್ಯಾಂಕ್​ನ ಡಿ.ಡಿ.ಎಂ. ರಾಘವೇಂದ್ರ, ಜನರಲ್ ಮ್ಯಾನೇಜರ್ ರಮೇಶ್, ಬಸವರಾಜ್​,

ಕಿರುಕುಳ ತಡೆಯಲಾರದೆ ಯುವ ವಕೀಲ ಆತ್ಮಹತ್ಯೆಗೆ ಶರಣು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪರಸ್ಪರ ಡಿಕ್ಕಿಯಾದ ಬೈಕುಗಳು ➤ ಗಾಯಗೊಂಡ ಸವಾರ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ. ಆ,25: ಎರಡು ಬೈಕುಗಳ ಮಧ್ಯೆ ಅಪಘಾತ ಸಂಭವಿಸಿ, ಸವಾರರಿಬ್ಬರು ಗಾಯಗೊಂಡ ಘಟನೆಯೊಂದು ಕನಕಮಜಲಿನಲ್ಲಿ ಆ.25 ರಂದು ಸಂಭವಿಸಿದೆ. ಕನಕಮಜಲಿನ ಕುತ್ತಿಮುಂಡ ಶೇಷಪ್ಪ ಗೌಡ ಎಂಬವರು ತಮ್ಮ ಬೈಕ್‌ ನಲ್ಲಿ ದೇರ್ಕಜೆ ರಸ್ತೆಯಿಂದ ಮುಖ್ಯರಸ್ತೆ ಕಡೆಗೆ ಬರುತ್ತಿದ್ದಾಗೆ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಪ್ರಸನ್ನ ಅಡ್ಕಾರು ಎಂಬವರ ಬೈಕ್‌ ಗೆ ಢಿಕ್ಕಿ ಹೊಡೆದ ಪರಿಣಾಮದಿಂದಾಗಿ ಬೈಕ್‌ ನಿಂದ ರಸ್ತೆಗೆ ಎಸೆಯಲ್ಪಟ್ಟ ಶೇಷಪ್ಪ ಗೌಡರು ಕಾಲಿಗೆ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.

ಪರಸ್ಪರ ಡಿಕ್ಕಿಯಾದ ಬೈಕುಗಳು ➤ ಗಾಯಗೊಂಡ ಸವಾರ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ

ತಡರಾತ್ರಿ ಬೆಂಕಿಗಾಹುತಿಯಾದ ಮಾರುತಿ ಇಂಡಸ್ಟ್ರೀಸ್ ➤ 1.5 ಕೋಟಿ ರೂ ಮೌಲ್ಯದ ನಷ್ಟ

(ನ್ಯೂಸ್ ಕಡಬ) newskadaba.com ಕಾರ್ಕಳ. ಆ,25: ಕಾರ್ಕಳದ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿ ಮಾರುತಿ ಇಂಡಸ್ಟ್ರೀಸ್ ಗೆ ಕಳೆದ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಹಾನಿಯಾಗಿ ನಷ್ಟವುಂಟಾಗಿದೆ.     ಪ್ರಕಾಶ್ ಪುತ್ರನ್ ಎಂಬುವರಿಗೆ ಸೇರಿದ ಮಾರುತಿ ಇಂಡಸ್ಟ್ರೀಸ್ ಇದು ಗೇರುಬೀಜದ ಎಣ್ಣೆ ತೆಗೆಯುವ ಕಂಪನಿಯಾಗಿದ್ದು, ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಫ್ಯಾಕ್ಟರಿ ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಇನ್ನು ಎರಡು ಲಾರಿಗಳು ಭಾಗಶ: ಭಸ್ಮವಾಗಿದೆ. ಸರಿ ಸುಮಾರು ಅಂದಾಜು

ತಡರಾತ್ರಿ ಬೆಂಕಿಗಾಹುತಿಯಾದ ಮಾರುತಿ ಇಂಡಸ್ಟ್ರೀಸ್ ➤ 1.5 ಕೋಟಿ ರೂ ಮೌಲ್ಯದ ನಷ್ಟ Read More »

ಕರಾವಳಿ, ಕರ್ನಾಟಕ

ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆ ➤ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ…

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,25 : ರಾಜ್ಯಕ್ಕೆ ಆಗಮಿಸುವ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಹಿಂದಿನ ಎಲ್ಲ ಸುತ್ತೋಲೆಗಳನ್ನು ರದ್ದುಗೊಳಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಪರಿಷ್ಕೃತ ಸುತ್ತೋಲೆ ಅನ್ವಯ, ಕೋವಿಡ್-19 ರೋಗ ಲಕ್ಷಣಗಳಿಲ್ಲದಿದ್ದಲ್ಲಿ 14 ದಿನಗಳ ಕ್ವಾರಂಟೈನ್ ಅಗತ್ಯವಿರುವುದಿಲ್ಲ, ಸೇವಾ ಸಿಂಧು ಆಪ್‌ನಲ್ಲಿ ರಿಜಿಸ್ಟರ್ ಅಗತ್ಯವಿಲ್ಲ. ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಆದರೆ, ಅವರು ರಾಜ್ಯಕ್ಕಾಗಮಿಸಿದ ದಿನದಿಂದ 14 ದಿನಗಳವರೆಗೆ ಕೊರೋನಾ ರೋಗದ ಲಕ್ಷಣಗಳಾದ ಜ್ವರ,

ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆ ➤ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ… Read More »

ಕರಾವಳಿ, ಕರ್ನಾಟಕ

ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ➤ ಅವಧಿ ವಿಸ್ತರಣೆ

(ನ್ಯೂಸ್ ಕಡಬ) ಮಂಗಳೂರು, ಆ. 24.  2020-21 ನೇ ಸಾಲಿನ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಪಡೆಯುವ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು  ಆಗಸ್ಟ್ 29 ರಂದು ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆನ್-ಲೈನ್ ನಾನ್ ಇಂಟರಾಕ್ಟಿವ್ ಕೌನ್ಸಿಲ್

ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ➤ ಅವಧಿ ವಿಸ್ತರಣೆ Read More »

ಕರಾವಳಿ, ಕರ್ನಾಟಕ
Scroll to Top