ಕರ್ನಾಟಕ

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.02. ಕೊರೋನಾ  ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡದ ನಡುವೆ ಮೈಸೂರು ದಸರಾ ನಡೆಯುವುದೇ ಇಲ್ಲವೇ ಎಂಬ ಸಂದೇಹ ಹೆಚ್ಚಾಗಿದೆ. ಕಳೆದ ತಿಂಗಳು ಕಾವೇರಿ ನದಿಗೆ ಬಾಗಿನ ಸಮರ್ಪಿಸಲು ತೆರಳುವ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಆಚರಣೆ ಬಗ್ಗೆ ತೀರ್ಮಾನಿಸಲು ಚಿಂತನೆ ನಡೆದಿದ್ದು, ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೆ.7ರಂದು ಉನ್ನತಮಟ್ಟದ ಸಭೆ ನಿಗದಿಯಾಗಿದೆ ಎಂದು […]

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ Read More »

ಕರಾವಳಿ, ಕರ್ನಾಟಕ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಸಿ.ಎ. ಬ್ಯಾಂಕ್‌ ಯೋಗಕ್ಷೇಮ ಸಂಕೀರ್ಣದಲ್ಲಿ ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್‌ ಇಂದು ಶುಭಾರಂಭಗೊಂಡಿತು. ಶುಭವತಿ ರೈ ಬೆದ್ರಾಜೆ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.   ಈ ಸಂದರ್ಭದಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್‌, ಕಡಬ ಸಿ.ಎ ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಭಟ್‌ ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಕಡಬ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್‌, ರಂಜಿತ್‌ ರೈ ಬೆದ್ರಾಜೆ ಉಪಸ್ಥಿತರಿದ್ದರು. ನೂತನ ಫ್ಯಾನ್ಸಿ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ Read More »

ಕರಾವಳಿ, ಕರ್ನಾಟಕ

ಅಕ್ರಮ ದನ ಸಾಗಾಟ ಪ್ರಕರಣ ➤ ಗೋವುಗಳನ್ನು ಹಿಂತಿರುಗಿಸುವಂತೆ ನ್ಯಾಯಾಲಯದಿಂದ ಆದೇಶ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 02. ಅಕ್ರಮ ಗೋ ಸಾಗಾಟದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಹಸು ಮತ್ತು ಕರುವನ್ನು ವಾಪಾಸು ನೀಡುವಂತೆ ನ್ಯಾಯಾಲಯ ಆದೇಶಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಎರಡು ವಾರಗಳ ಹಿಂದೆ ಓಮ್ನಿ ಕಾರೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇರ್ದೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ವಶಪಡಿಸಿಕೊಂಡು, ಆರೋಪಿಗಳಾದ ಬಾಲಕೃಷ್ಣ ಗೌಡ ಮತ್ತು ಆರ್ಲಪದವಿನ ಮೂಸಾ ಎಂಬವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಇದೀಗ ಆರೋಪಿ

ಅಕ್ರಮ ದನ ಸಾಗಾಟ ಪ್ರಕರಣ ➤ ಗೋವುಗಳನ್ನು ಹಿಂತಿರುಗಿಸುವಂತೆ ನ್ಯಾಯಾಲಯದಿಂದ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ – ಪುತ್ತೂರಿನಲ್ಲಿ ಇಂದು 51 ಕೊರೋನ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ. ಸೆ.02: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಬುಧವಾರ ಒಟ್ಟು 51 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳದ 58ರ ಪುರುಷ, 53ರ ಪುರುಷ, 30ರ ಪುರುಷ, 68ರ ಮಹಿಳೆ, ಕಡಬ ತಾಲೂಕು ಕಚೇರಿ ಸಿಬ್ಬಂದಿ 34ರ ಪುರುಷ, 102 ನೆಕ್ಕಿಲಾಡಿಯ 32 ವರ್ಷದ ಪುರುಷ, 14ರ ಬಾಲಕ, 34ರ ಮಹಿಳೆ, ಕಡಬ ಠಾಣೆಯ 27 ವರ್ಷದ ಪುರುಷ ಸಿಬ್ಬಂದಿ, ನೆಲ್ಯಾಡಿಯ 65ರ ಪುರುಷ, 50ರ ಮಹಿಳೆ, ಬಿಳಿನೆಲೆಯ 21ರ

ಕಡಬ – ಪುತ್ತೂರಿನಲ್ಲಿ ಇಂದು 51 ಕೊರೋನ ಪಾಸಿಟಿವ್ ದೃಢ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ಕಂದಕವನ್ನು ಕೆಡವಿ ತೋಟಕ್ಕೆ ನುಗ್ಗುತ್ತಿರುವ ಕಾಡಾನೆಗಳು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 02. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಮಣ್ಣಗುಂಡಿ  ಪ್ರದೇಶದಲ್ಲಿ ಕಳೆದ 8 ದಿನಗಳಿಂದ  ಬೀಡು ಬಿಟ್ಟ ಕಾಡಾನೆಯು ಕೃಷಿಕರ ತೋಟದೊಳಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿಗೊಳಿಸಿದೆ. ಅರಣ್ಯ ಇಲಾಖೆಯು ಕಾಡಿನಂಚಿನಲ್ಲಿ ಆನೆ ನಿರೋಧಕ ಕಂದಕ ನಿರ್ಮಿಸಿದ್ದು, ಆದರೆ ಆನೆಗಳ ಹಿಂಡು ಕಂದಕವನ್ನೇ ಕೆಡವಿ ದಾರಿ ಮಾಡಿಕೊಂಡು ರಸ್ತೆಯನ್ನು ದಾಟಿ  ತೋಟದೊಳಗೆ ನುಸುಳುತ್ತಿರುವುದು ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾರ ಕೃಷಿ ಹಾನಿಯಾಗುವುದನ್ನು ಅರಣ್ಯ ಇಲಾಖೆ  ತಪ್ಪಸುವ

ನೆಲ್ಯಾಡಿ: ಕಂದಕವನ್ನು ಕೆಡವಿ ತೋಟಕ್ಕೆ ನುಗ್ಗುತ್ತಿರುವ ಕಾಡಾನೆಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು. ಸೆ.02: ಗರ್ಭಿಣಿಯಾಗಿದ್ದ ನರ್ಸ್  ಬಸ್ಸಿನಡಿಗೆ ಬಿದ್ದು  ಮೃತಪಟ್ಟ ದಾರುಣ ಘಟನೆ ಕಣ್ಣೂರಿನ  ಪೆರವೂರು ಎಂಬಲ್ಲಿ ಇಂದು ಬೆಳಿಗ್ಗೆ  ನಡೆದಿದೆ.   ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್ ದಿವ್ಯಾ (27) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ಆಸ್ಪತ್ರೆಗೆ ತೆರಳಲು ಬಸ್ಸು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ದಿವ್ಯಾ ರವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಗಂಭೀರ ಗಾಯಗೊಂಡ ದಿವ್ಯಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಾಟ್ಸಾಪ್ ನಲ್ಲಿ ದೇಶದ್ರೋಹಿ ಸಂದೇಶ- ವೃತ್ತಿ ಕಳೆದುಕೊಂಡ ಶಿಕ್ಷಕಿ

(ನ್ಯೂಸ್ ಕಡಬ) newskadaba.com ರಾಯಚೂರು, ಸೆ. 02. ದೇಶದ ಹಿತ ಕಾಯುವ ಶಿಕ್ಷಕರೇ ತಪ್ಪು ಮಾಡಿದರೆ ಹೇಗೆ..? ಹೀಗೆ ಮಾಡಿದಲ್ಲಿ ಮಕ್ಕಳು ಅದನ್ನೇ ಕಲಿಯುತ್ತಾರೆ. ಹೌದು, ರಾಯಚೂರಿನ ಅಂದ್ರೂನ್ ಕಿಲ್ಲಾದ ಶಾಲೆಯ ಶಿಕ್ಷಕಿ ಖಮರುನ್ನೀಸಾ ಬೇಗಂ ತಾವು ಮಾಡಿದ ಪ್ರಧಾನಿ ಹಾಗೂ ರಕ್ಷಣಾ ವ್ಯವಸ್ಥೆಯ ಬಗ್ಗೆ ಜೊತೆಗೆ ದೇಶದ ಶಾಂತಿಗೆ ಭಂಗ ತರುವಂತಹ ಪೋಸ್ಟ್ ಸಂಬಂಧದಿಂದ ಇದೀಗ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಶಾಲಾ ಶಿಕ್ಷಕರ ವಾಟ್ಸಾಪ್ ಗ್ರೂಪ್‌ನಲ್ಲಿ ಉರ್ದು ಭಾಷೆಯಲ್ಲಿ ದೇಶದ ಶಾಂತಿಗೆ ಧಕ್ಕೆ ತರುವ ಪೋಸ್ಟ್

ವಾಟ್ಸಾಪ್ ನಲ್ಲಿ ದೇಶದ್ರೋಹಿ ಸಂದೇಶ- ವೃತ್ತಿ ಕಳೆದುಕೊಂಡ ಶಿಕ್ಷಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರಿಗೆ ಮಾತೃವಿಯೋಗ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02:  ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ ಪ್ರಶಸ್ತಿ ಪುರಸ್ಕøತ ರವಿ ಕಕ್ಕೆಪದವುರವರ ತಾಯಿ ಚಂದು ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಕಮಲರವರು ಇಂದು ಮುಂಜಾನೆ ಕಕ್ಕೆಪದವುವಿನಲ್ಲಿ ನಿಧನರಾಗಿದ್ದಾರೆ.   ಇವರಿಗೆ 71 ವರುಷ ವಯಸ್ಸಾಗಿತ್ತು. ಮೃತರು ತಮ್ಮ ಹಿರಿಯ ಪುತ್ರ ರವಿ ಕಕ್ಕೆಪದವುರವರೊಂದಿಗೆ ಸುಬ್ರಹ್ಮನ್ಯದಲ್ಲಿಯೇ ವಾಸವಾಗಿದ್ದರು. ಆದರೆ ಮೃತ ಕಮಲರವರು ಪತಿಯ ಮನೆ ಕಕ್ಕೆಪದವುಗೆ ಹೋಗಬೇಕೆಂದು ಕೇಳಿಕೊಂಡ ಮೇರೆಗೆ ಆ. 31 ರಂದು ಸುಬ್ರಹ್ಮಣ್ಯದಿಂದ ಕಕ್ಕೆಪದವುಗೆ ತೆರಳಿದ್ದರು. ಪತಿಯ ಮನೆಯಲ್ಲೆ ವಿಧಿವಶರಾಗಿದ್ದಾರೆ. ಮೃತರು

ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರಿಗೆ ಮಾತೃವಿಯೋಗ Read More »

ಕರ್ನಾಟಕ

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಸೇವೆಗೆ ಶರತ್ತು ಬದ್ಧ ಅನುಮತಿ ನೀಡಿದ ಸರಕಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02: ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳನ್ನು ಪುನರಾರಂಭಿಸಲು ಶರತ್ತು ಬದ್ದ ಅನುಮತಿಯನ್ನು ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ. ದೇವಸ್ಥಾನಗಳಲ್ಲಿ ನಡೆಸಬಹುದಾದ ಸೇವೆಗಳ ಮಟ್ಟಿ ಮಾಡಲು ಆಯಾಯ ದೇವಸ್ಥಾನಗಳ ಇಒ,ಆಡಳಿತಧಿಕಾರಿ ಹಾಗೂ ಅನುವಂಶಿಕ ಮೊಕ್ತೇಸರರಿಗೆ ಅಧಿಕಾರ ನೀಡಲಾಗಿದೆ.   ಕಳೆದ ದಿನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಆಯುಕ್ತರ ಕಾರ್ಯಾಲಯದಿಂದ ಸುತ್ತೋಲೆ ಹೊರಡಿಸಲಾಗಿದೆ. ಕಳೆದದ ದಿನದಿಂದಲೇ ಅನ್ವಯವಾಗುವಂತೆ ವೈಯಕ್ತಿಕ ಅಂತರ ಕಾಪಾಡಿ,ಸ್ಯಾನಿಟೈಸ್‌

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಸೇವೆಗೆ ಶರತ್ತು ಬದ್ಧ ಅನುಮತಿ ನೀಡಿದ ಸರಕಾರ Read More »

ಕರಾವಳಿ, ಕರ್ನಾಟಕ

ವಿದೇಶದಿಂದ ತಾಯ್ನಾಡಿಗೆ ಆಗಮಿಸುವವರಿಗೆ ಸರಕಾರದಿಂದ ಹೊಸ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ವಿದೇಶದಿಂದ ಮಂಗಳೂರಿಗೆ ಮರಳುವ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಸೂಚನೆಗಳನ್ವಯ ತಾಯ್ನಾಡಿಗೆ ಮರಳುವ ಭಾರತೀಯರು ಅಧಿಕೃತ ವೆಬ್ ಸೈಟ್ ನಲ್ಲಿ ‘ಏರ್ ಸುವಿದಾ ಸ್ವಯಂ – ವರದಿ ಫಾರ್ಮ್’ ಅನ್ನು ಭರ್ತಿ ಮಾಡಬೇಕಾಗುತ್ತದೆ. (https: //www.newdelhiairport.in/airsuvidha/APHO-registration) ಅಲ್ಲದೆ, ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಹತ್ತುವ ಮುನ್ನ ವಿಮಾನ ನಿಲ್ದಾಣದ ವರದಿಯ ಮೊದಲೇ

ವಿದೇಶದಿಂದ ತಾಯ್ನಾಡಿಗೆ ಆಗಮಿಸುವವರಿಗೆ ಸರಕಾರದಿಂದ ಹೊಸ ಸೂಚನೆ Read More »

ಕರಾವಳಿ, ಕರ್ನಾಟಕ
Scroll to Top