ಕರ್ನಾಟಕ

ಇಂದಿನಿಂದ ಶಿರಾಡಿ ಘಾಟ್ ನಲ್ಲಿ ಬಸ್ ಸಂಚಾರ ಆರಂಭ ► ಲಾರಿ ಸೇರಿದಂತೆ ಘನ ವಾಹನಗಳಿಗೆ ನಿರ್ಬಂಧ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.03. ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯು ಕೊನೆಗೂ ಬಸ್‌ ಸಂಚಾರಕ್ಕೆ ಮುಕ್ತವಾಗಿದ್ದು, ಇಂದಿನಿಂದ ಪ್ರಯಾಣಿಕ ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಆಗಸ್ಟ್ 14 ರ ನಂತರ ಘಾಟಿಯ ಅಲ್ಲಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಹೆದ್ದಾರಿಯ ಮೇಲೆ ಕುಸಿದ ಮಣ್ಣು ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಗಿದಿತ್ತಾದರೂ ರಸ್ತೆಯ ತಡೆಗೋಡೆ ಹಲವೆಡೆ ಕುಸಿದು ಹೆದ್ದಾರಿಯ ಅಡಿಭಾಗದ ಮಣ್ಣು ನೀರುಪಾಲಾಗಿದ್ದರಿಂದ ಪುನರ್‌ ನಿರ್ಮಾಣ […]

ಇಂದಿನಿಂದ ಶಿರಾಡಿ ಘಾಟ್ ನಲ್ಲಿ ಬಸ್ ಸಂಚಾರ ಆರಂಭ ► ಲಾರಿ ಸೇರಿದಂತೆ ಘನ ವಾಹನಗಳಿಗೆ ನಿರ್ಬಂಧ Read More »

ಕರ್ನಾಟಕ

ಕಡಬದ ವ್ಯಕ್ತಿ ಹಾಸನದ ಅರಕಲಗೂಡಿನಲ್ಲಿ ನಿಗೂಢ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಅ.03. ಕಡಬದ ವ್ಯಕ್ತಿಯೋರ್ವರು ಹಾಸನದ ಅರಕಲಗೂಡಿನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ಕಂಡುಬಂದಿದೆ. ಮೃತ ವ್ಯಕ್ತಿಯನ್ನು ಕಡಬ ತಾಲೂಕು ಬಂಟ್ರ ಗ್ರಾಮದ ಹಳೇಸ್ಟೇಷನ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬ್ದುಲ್ ಅಝೀಝ್ ಎಂದು ಗುರುತಿಸಲಾಗಿದೆ. ಮೃತರು ಕಳೆದೊಂದು ವಾರದಿಂದ ಅರಕಲಗೂಡು ಪರಿಸರದಲ್ಲಿ ಇದ್ದರೆನ್ನುವ ಮಾಹಿತಿಯಿದ್ದು, ಮಂಗಳವಾರ ರಾತ್ರಿ ಇವರನ್ನು ಕಂಡವರಿದ್ದಾರೆ‌. ಆದರೆ ಬುಧವಾರ ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸ್ಥಳೀಯ

ಕಡಬದ ವ್ಯಕ್ತಿ ಹಾಸನದ ಅರಕಲಗೂಡಿನಲ್ಲಿ ನಿಗೂಢ ಮೃತ್ಯು Read More »

ಕರ್ನಾಟಕ

ಇಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ► ಪುರಸ್ಕಾರಕ್ಕೆ ಆಯ್ಕೆಯಾದ ಕಡಬ ತಾಲೂಕಿನ ಏಕೈಕ ಗ್ರಾಮ ಪಂಚಾಯತ್

(ನ್ಯೂಸ್ ಕಡಬ) newskadaba.com ಕಡಬ, ಅ.02. ನೂತನ ಕಡಬ ತಾಲೂಕಿನ ವ್ಯಾಪ್ತಿಗೆ ಬರುವ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಗ್ರಾಮೀಣ ಅಭಿವದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಒಟ್ಟು ಸಾಧನೆಯನ್ನು ಪರಿಗಣಿಸಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವದ್ಧಿ ಇಲಾಖೆಯಿಂದ ನೀಡಲಾಗುವ ಈ ಪುರಸ್ಕಾರಕ್ಕೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಆಯ್ಕೆಗೊಂಡಿದೆ. ಇಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನವಾಗಲಿದೆ. ಪುರಸ್ಕಾರವು 5ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಇಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ► ಪುರಸ್ಕಾರಕ್ಕೆ ಆಯ್ಕೆಯಾದ ಕಡಬ ತಾಲೂಕಿನ ಏಕೈಕ ಗ್ರಾಮ ಪಂಚಾಯತ್ Read More »

ಕರ್ನಾಟಕ

ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ದಸರಾ ರಜೆ ಕಡಿತಕ್ಕೆ ಬಿತ್ತು ಕತ್ತರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿಯ ಮಂಗಳೂರು ದಸರಾ ರಜೆ ಕಡಿತಗೊಳಿಸಿದ್ದ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ನೀಡಿದ್ದಕ್ಕಾಗಿ ದಸರಾ ರಜೆಯನ್ನು ಕಡಿತ ಮಾಡಲಾಗಿತ್ತು. ಆದರೆ ಈ ಕುರಿತು

ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ದಸರಾ ರಜೆ ಕಡಿತಕ್ಕೆ ಬಿತ್ತು ಕತ್ತರಿ Read More »

ಕರ್ನಾಟಕ

ಬಂಟ್ವಾಳ: ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ► ಸ್ವತ್ತುಗಳೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.27. ಸರಕಾರದಿಂದ ಪಡಿತರ ಕಾರ್ಡ್ ದಾರರಿಗೆ ವಿತರಣೆ ಆಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ‘ಬಿ’ ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ನಿಯಾಜ್ ಹಸನ್ (36) ಎಂದು ಗುರುತಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ ಎಂ,ಎಸ್ ಮತ್ತು ಸಿಬಂದಿಯವರು ರಾಮಲ್ ಕಟ್ಟೆ

ಬಂಟ್ವಾಳ: ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ► ಸ್ವತ್ತುಗಳೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ Read More »

ಕರ್ನಾಟಕ

ಟಿವಿ ವರದಿಗಾರರ ಹೆಸರಲ್ಲಿ ಮರಳು ಸಾಗಾಟಗಾರರನ್ನು ಬೆದರಿಸಿ ಹಣ ಸುಲಿಗೆ ► ನೆಲ್ಯಾಡಿ ಮೂಲದ ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.26. ಟಿವಿ ಮಾಧ್ಯಮ ವರದಿಗಾರರ ಹೆಸರಲ್ಲಿ ಸುಲಿಗೆ ನಡೆಸುತ್ತಿದ್ದ ನಕಲಿ ಪತ್ರಕರ್ತನೋರ್ವನನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಮರಳು ಇರುವ ಪ್ರದೇಶಕ್ಕೆ ತೆರಳಿ ಬಿಟಿವಿ ನ್ಯೂಸ್ ಚಾನಲ್ ಹೆಸರಿನಲ್ಲಿ ಮರಳು ಸಾಗಾಟಗಾರರನ್ನು ಬೆದರಿಸಿ 15 ಸಾವಿರ, 7 ಸಾವಿರ ಹಾಗೂ 30 ಸಾವಿರ ಹಣ ಸುಲಿಗೆ ಮಾಡಿದ್ದ ನಕಲಿ ಪತ್ರಕರ್ತ ಕೊಕ್ಕಡ ಗ್ರಾಮದ ಪಟ್ರಮೆ ನಿವಾಸಿ ಸತೀಶ್ ಬುಧವಾರ ಸಂಜೆ

ಟಿವಿ ವರದಿಗಾರರ ಹೆಸರಲ್ಲಿ ಮರಳು ಸಾಗಾಟಗಾರರನ್ನು ಬೆದರಿಸಿ ಹಣ ಸುಲಿಗೆ ► ನೆಲ್ಯಾಡಿ ಮೂಲದ ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ Read More »

ಕರ್ನಾಟಕ

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ

ಸವಣೂರು : ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ  ಪುಣ್ಚಪ್ಪಾಡಿಯ ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿಯೇ ಹೆಚ್ಚು ಅಂಕಪಡೆದು  ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರಿಂದ ತರಬೇತು ಪಡೆದುಕೊಂಡಿದ್ದಾರೆ. ಎಂಎಸ್ಸಿ,ಮೆಥಮೆಟಿಕ್ಸ್,ಸಂಗೀತದಲ್ಲೂ ಸೀನಿಯರ್ ಪದವಿ ಪಡೆದುಕೊಂಡಿರುವ ಇವರು ಕೂಚುಪುಡಿ ನೃತ್ಯ ತರಬೇತಿಯನ್ನೂ ಪಡೆದುಕೊಂಡಿರುವ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿಯಾಗಿದ್ದಾರೆ. ಇವರು ಪುಣ್ಚಪ್ಪಾಡಿ

ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ Read More »

ಕರಾವಳಿ, ಕರ್ನಾಟಕ

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ

ಸವಣೂರು: ರಾಜ್ಯ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಸಾಲಮುಕ್ತರನ್ನಾಗಿಸುವ ಪ್ರಕ್ರಿಯೆಯಲ್ಲಿರುವಾಗ ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮರುಪಾವತಿಸಲು ಅಡಕೆ ಬೆಳೆಗಾರರಿಗೆ ಲೀಗಲ್ ನೊಟೀಸ್ ಕಳುಹಿಸಲಾಗುತ್ತಿದ್ದು ಇದನ್ನು ಖಂಡಿಸಿ  ಅ.1ರಂದು  ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಟೀಸ್ ಮೂಲಕ ರೈತರನ್ನು  ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ.ಎಚ್ಚರಿಕೆ ನೀಡುವ ಸಲುವಾಗಿ ಸವಣೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಕಡಬ ಪೊಲೀಸ್ ಠಾಣಾ ವಾಹನದ ಮಾಜಿ ಚಾಲಕ ಕುರಿಯಕೋಸ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ನಿವೃತ್ತ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಮರ್ಧಾಳ ಇಳಾರ ನಿವಾಸಿ ಇ.ಸಿ. ಕುರಿಯಕೋಸ್(65) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರದಂದು ನಿಧನರಾದರು. ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ಆರಂಭಿಸಿದ್ದ ಇವರು ಬಳಿಕ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ, ಕಡಬ ಠಾಣೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಬುಧವಾರ ಅಪರಾಹ್ನ 2 ಗಂಟೆಗೆ ಮರ್ಧಾಳ ಸೈಂಟ್ ಮೇರೀಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮೃತರ ಕುಟುಂಬ

ಕಡಬ ಪೊಲೀಸ್ ಠಾಣಾ ವಾಹನದ ಮಾಜಿ ಚಾಲಕ ಕುರಿಯಕೋಸ್ ನಿಧನ Read More »

ಕರ್ನಾಟಕ

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ

ಕಾಣಿಯೂರು :  ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಪ್ರಮುಖಿ ಮಹಿಳಾ ಮಂಡಲ ಕೊಲ್ಯೊಟ್ಟು ನೆಲ್ಯಾಡಿ ಇದರ ವತಿಯಿಂದ ಕೊಲ್ಯೊಟ್ಟು ಅಂಗನವಾಡಿ  ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಮಾತನಾಡಿ, ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು.ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕೊಲ್ಯೊಟ್ಟು : ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ Read More »

ಕರಾವಳಿ, ಕರ್ನಾಟಕ
Scroll to Top