ಕರ್ನಾಟಕ

ಜೇಬಿನಲ್ಲಿಟ್ಟಿದ್ದ ಮೊಬೈಲ್ ಸ್ಫೋಟ- ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸೊರಬ, ಸೆ. 17. ಬೈಕ್ ಚಲಾಯಿಸುತ್ತಿದ್ದ ವೇಳೆ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಸೊರಬ ತಾಲೂಕಿನ ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ನಡೆದಿದೆ. ಗಾಯಗೊಂಡವರನ್ನು ತವನಂದಿ ಗ್ರಾಮದ ಶರತ್(22) ಎಂದು ಗುರುತಿಸಲಾಗಿದೆ. ಈತ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದರಿಂದಾಗಿ ಗಾಬರಿಗೊಂಡ ಯುವಕ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದನ್ನು ಕಂಡ ತಕ್ಷಣ ಹಿಂಬದಿಯಲ್ಲಿದ್ದ ಬೈಕ್ ಸವಾರರು ಶರತ್ ನನ್ನು […]

ಜೇಬಿನಲ್ಲಿಟ್ಟಿದ್ದ ಮೊಬೈಲ್ ಸ್ಫೋಟ- ಯುವಕನಿಗೆ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಮೋದಿ ಜನ್ಮ ದಿನಾಚರಣೆಯ ಪ್ರಯುಕ್ತ ಯುವ ಬಿಗ್ರೇಡ್‌‌ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.17: ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಸುಬ್ರಹ್ಮಣ್ಯ ಯುವ ಬಿಗ್ರೇಡ್‌ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.     ಕುಮಾರದಾರ ಆಸುಪಾಸಿನಲ್ಲಿ ಸ್ವಚ್ಚತೆ ಮಾಡಿ, ಬಳಿಕ ನಾಗೋದ್ಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.    

ಸುಬ್ರಹ್ಮಣ್ಯ: ಮೋದಿ ಜನ್ಮ ದಿನಾಚರಣೆಯ ಪ್ರಯುಕ್ತ ಯುವ ಬಿಗ್ರೇಡ್‌‌ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಮಾರುಕಟ್ಟೆಯನ್ನು ಷರತ್ತುಗಳೊಂದಿಗೆ ತೆರೆಯಲು ಜಿಲ್ಲಾಧಿಕಾರಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.17: ಷರತ್ತುಗಳೊಂದಿಗೆ ಕಾಸರಗೋಡು ಮಾರುಕಟ್ಟೆಯನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ. ಬುಧವಾರ ನಡೆದ ಜಿಲ್ಲಾ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.     ಒಂದು ದಿನ ಬಿಟ್ಟು ಒಂದು ದಿನ ಶೇಕಡಾ 50 ರಷ್ಟು ಮಂದಿಗೆ ಮಾರಾಟಕ್ಕೆ ಅನುಮತಿ ನೀಡಲಾಗುವುದು. ಟೋಕನ್ ಮೂಲಕ ಗ್ರಾಹಕರನ್ನು ನಿಯಂತ್ರಿಸಲಾಗುವುದು . ಮಾರುಕಟ್ಟೆ ಪ್ರವೇಶಕ್ಕೆ ಹಾಗೂ ಹೊರ ಬರಲು ವಿಶೇಷ ದಾರಿಯ ವ್ಯವಸ್ಥೆ

ಕಾಸರಗೋಡು: ಮಾರುಕಟ್ಟೆಯನ್ನು ಷರತ್ತುಗಳೊಂದಿಗೆ ತೆರೆಯಲು ಜಿಲ್ಲಾಧಿಕಾರಿಯಿಂದ ಮನವಿ Read More »

ಕರ್ನಾಟಕ

ಏನೇಕಲ್ಲು : ಮರವೊಂದು ಮುರಿದು ಬಿದ್ದು ಮನೆ ಭಾಗಶಃ ಹಾನಿ.!

(ನ್ಯೂಸ್ ಕಡಬ) newskadaba.com ಏನೇಕಲ್ಲು , ಸೆ.17: ಯೇನುಕಲ್ಲು ಗ್ರಾಮದ ಮಾವಂಜಿ ದಿ. ರಾಮಚಂದ್ರರವರ ಪತ್ನಿ ಶ್ರೀಮತಿ ಚಂದ್ರಾವತಿಯವರ ಮನೆಗೆ ಕಳೆದ ದಿನ ರಾತ್ರಿ ಮರವೊಂದು ಮನೆಯ ಮುಂಭಾಗಕ್ಕೆ ಮುರಿದು ಬಿದ್ದು ಭಾಗಶಃ ಹಾನಿಯುಂಟಾಗಿದೆ.   ಚಂದ್ರಾವತಿಯವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು, ಈಗಲೋ ಆಗಲೋ ಬೀಳುವಂತಿದೆ. ಮಾಡಿಂದ ನೀರು ಜನಿಯುವುದಕ್ಕೆ  ಮನೆಯ ಮೇಲೆ ಟರ್ಪಾಲು ಹೊದಿಸಲಾಗಿದೆ. ಸರಿಯಾದ ಮಾರ್ಗದ ವ್ಯವಸ್ಥೆಯಿಲ್ಲದೆ ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ತರಲು ಅನಾನುಕೂಲವಾಗಿರುವುದರಿಂದ ಹೊಸ ಮನೆ ನಿರ್ಮಿಸಲು ಆಗಲಿಲ್ಲ ಎಂಬುದು ಚಂದ್ರಾವತಿಯವರ

ಏನೇಕಲ್ಲು : ಮರವೊಂದು ಮುರಿದು ಬಿದ್ದು ಮನೆ ಭಾಗಶಃ ಹಾನಿ.! Read More »

ಕರಾವಳಿ, ಕರ್ನಾಟಕ

ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಗೋ ಹತ್ಯೆಗೆ ಕಡಿವಾಣ ಹಾಕಲು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಯವರಿಂದ, “ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯಿದೆಯನ್ನು ತಕ್ಷಣ ಜಾರಿಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಒಂದು ವಾರದ ಹಿಂದೆ ಸಂಘಟನೆಯ ಪ್ರಮುಖರು ಸ್ವಾಮೀಜಿಯವರನ್ನು ಇದೇ ವಿಚಾರದಲ್ಲಿ ಭೇಟಿ ಮಾಡಿ

ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕರೆನ್ಸಿಗೆಂದು ಬರುತ್ತಿದ್ದ ಯುವತಿಯರಿಗೆ ಅಶ್ಲೀಲ ಸಂದೇಶ ➤ ಯುವತಿಯಿಂದ ಚಪ್ಪಲಿಯೇಟು- ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ. 17. ಉಪಾಯದಿಂದ ಯುವತಿಯರ ಮೊಬೈಲ್ ನಂಬರ್ ಪಡೆದು ಬಳಿಕ ಅವರ ಜೊತೆ ಅಶ್ಲೀಲವಾಗಿ ಚಾಟ್ ಮಾಡುತ್ತಿದ್ದ ಯುವಕನೋರ್ವನಿಗೆ ಯುವತಿ ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದಿದೆ. ಸಾರ್ವಜನಿಕರಿಂದ ಹೊಡೆಸಿಕೊಂಡ ಯುವಕನನ್ನು ಮುದ್ದಸಿರ್ ಎಂದು ಗುರುತಿಸಲಾಗಿದೆ. ಈತ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದು, ಅಲ್ಲಿಗೆ ಕರೆನ್ಸಿಗೆಂದು ಬರುವ ಯುವತಿಯರ ನಂಬರನ್ನು ಸಂಗ್ರಹಿಸಿ, ಬಳಿಕ ಅವರೊಂದಿಗೆ ಪೇಸ್ ಬುಕ್ ನಲ್ಲೂ ನಕಲಿ ಖಾತೆ ತೆರೆದು ಯುವತಿಯರಿಗೆ

ಕರೆನ್ಸಿಗೆಂದು ಬರುತ್ತಿದ್ದ ಯುವತಿಯರಿಗೆ ಅಶ್ಲೀಲ ಸಂದೇಶ ➤ ಯುವತಿಯಿಂದ ಚಪ್ಪಲಿಯೇಟು- ವಿಡಿಯೋ ವೈರಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ವಿ. ವಿ : ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಬುಧವಾರ ಆರಂಭಗೊಂಡಿದೆ. ಯುಜಿಯಲ್ಲಿ ಒಟ್ಟು 22,745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 757 ಮಂದಿ ಗೈರುಹಾಜರಾಗಿದ್ದಾರೆ. ಪಿಜಿ ವಿಭಾಗದಲ್ಲಿ 3,470 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11 ಮಂದಿ ಗೈರಾಗಿದ್ದಾರೆ.   ಗ್ರಾಮೀಣ ಭಾಗದ ಕಾಲೇಜುಗಳ ಸುಮಾರು 500 ವಿದ್ಯಾರ್ಥಿಗಳ ವಿವರ ಲಭಿಸಿಲ್ಲ. ಒಟ್ಟು 205 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಪರೀಕ್ಷೆಗೂ

ಮಂಗಳೂರು ವಿ. ವಿ : ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಆರಂಭ Read More »

ಕರಾವಳಿ, ಕರ್ನಾಟಕ

ಕಡಬ ಮೂಲದ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ *➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು ➤ ಅಶೋಕ್ ಎಂಬವರ ಸಮಯಪ್ರಜ್ಞೆಯಿಂದ ವಂಚನಾ ಜಾಲ ಬೆಳಕಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.17. ಪೊಲೀಸ್ ಅಧಿಕಾರಿಯೋರ್ವರ ಹೆಸರಿನಲ್ಲಿ‌ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಕಡಬದ ವ್ಯಕ್ತಿಗೆ ಸಂದೇಶ ರವಾನಿಸಿ ಹಣದ ಅವಶ್ಯಕತೆ ತೋಡಿಕೊಂಡ ಘಟನೆ ಸೆಪ್ಟೆಂಬರ್ 17 ರಂದು ಬೆಳಗ್ಗೆ ನಡೆದಿದೆ‌. ಕಡಬದ ಕೋಡಿಬೈಲು ನಿವಾಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಕಡಬದ ಅಶೋಕ್ ಎಂಬವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ನಂತರ ಮೆಸೆಂಜರ್ ಮೂಲಕ 30 ಸಾವಿರ ತುರ್ತು ಹಣದ

ಕಡಬ ಮೂಲದ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ *➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು ➤ ಅಶೋಕ್ ಎಂಬವರ ಸಮಯಪ್ರಜ್ಞೆಯಿಂದ ವಂಚನಾ ಜಾಲ ಬೆಳಕಿಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ

ಶುದ್ಧ ಗೋರಂಜನ ಹಾಗೂ ಹಳ್ಳದ ಮಣ್ಣನ್ನು ತೆಗೆದುಕೊಂಡು ಅದನ್ನು ಹದವಾಗಿ ಮಿಶ್ರಣ ಮಾಡುತ್ತಾ “ಓಂ ಕಾಂ ಮಾಲಿನೀ ತಃ ತಃ ಸ್ವಾಹ” ಈ ಮಂತ್ರವನ್ನು ಸಾವಿರದ ಎಂಟು ಬಾರಿ ಜಪಿಸತಕ್ಕದ್ದು ನಂತರ ಇದನ್ನು ಹಣೆಗೆ ಹಚ್ಚಿಕೊಳ್ಳಿ. ಇದರಿಂದ ಇಷ್ಟದ ಸಂಗಾತಿ ನಿಮಗೆ ವಶವಾಗಲು ಸಾಧ್ಯವಾಗುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ,

ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಹಾಡುಹಗಲೇ ಅಂಗಡಿಗೆ ನುಗ್ಗಿ ನಗದು ದೋಚಿದ ಪ್ರಕರಣ ➤ 48 ಗಂಟೆಯೊಳಗೆ ಹಣದ ಜೊತೆ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 16.ರಬ್ಬರ್ ಅಂಗಡಿಯೊಂದರ ಡ್ರಾವರ್ ನಿಂದ ಒಂದು ಲಕ್ಷ ರೂಪಾಯಿ ಕಳವುಗೈದ ಪ್ರಕರಣವನ್ನು ಕೇವಲ 48 ಗಂಟೆಯಲ್ಲಿ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಂಬೊಟ್ಟು ಮನೆ ನೇಜಿಕಾರು ನಿವಾಸಿ ಮೊಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ಕಳವುಗೈದ ಆರೋಪಿ ಪರಾರಿಯಾಗಿದ್ದು, ಈತನನ್ನು ಬಂಧಿಸಿ ಕಳವುಗೆಯ್ಯಲಾದ ಒಂದು ಲಕ್ಷ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 60,000/- ರೂಪಾಯಿ ಮೌಲ್ಯದ KA21 U 6006 ನೇ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಹಾಡುಹಗಲೇ ಅಂಗಡಿಗೆ ನುಗ್ಗಿ ನಗದು ದೋಚಿದ ಪ್ರಕರಣ ➤ 48 ಗಂಟೆಯೊಳಗೆ ಹಣದ ಜೊತೆ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top