ಕರ್ನಾಟಕ

ಸೈನಿಕರಿಗೆ ಮಾಸ್ಕ್ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ರಿಂದ ಶ್ಲಾಘನೆ

(ನ್ಯೂಸ್ ಕಡಬ) newskadaba.com ಉಡುಪಿ , ಸೆ. 25:  ಲಾಕ್‌ಡೌನ್ ಅವಧಿಯಲ್ಲಿ 300 ಮಾಸ್ಕ್‌ಗಳನ್ನು ಹೊಲಿದು ಯೋಧರಿಗೆ ಕಳುಹಿಸಿಕೊಟ್ಟಿದ್ದ ಉಡುಪಿಯ ಇಶಿತಾ ಆಚಾರ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನಾ ಪತ್ರ ಕಳುಹಿಸಿದ್ದಾರೆ. ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ಆಚಾರ್ ರಕ್ಷಣಾ ಸಚಿವರ ಅಭಿನಂದನೆಗೆ ಪಾತ್ರವಾಗಿರುವ ವಿದ್ಯಾರ್ಥಿನಿ.   ‘ಸೈನಿಕರಿಗೆ ಮಾಸ್ಕ್ ಹೊಲಿದು ಕಳುಹಿಸಿದ್ದಕ್ಕೆ ಧನ್ಯವಾದಗಳು. ಯೋಧರ ಮೇಲಿರುವ ಆಕೆಯ ಕಾಳಜಿ ಹಾಗೂ ಕೋವಿಡ್-19 ಸೋಂಕು ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರಯತ್ನ ಅಭಿನಂದನೀಯ’ […]

ಸೈನಿಕರಿಗೆ ಮಾಸ್ಕ್ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ರಿಂದ ಶ್ಲಾಘನೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಡಾ.ಎಸ್.ಎಲ್.ಭೈರಪ್ಪ ಆಯ್ಕೆ

(ನ್ಯೂಸ್ ಕಡಬ) newskadaba.com ಉಡುಪಿ , ಸೆ. 25:  ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಮತ್ತು ಕೋಟತಟ್ಟು ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುವ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಆಯ್ಕೆಯಾಗಿದ್ದಾರೆ.   ಪ್ರಶಸ್ತಿಯನ್ನು ಕಾರಂತರ ಜನ್ಮದಿನವಾದ ಅ.10ರಂದು ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿ ಸದಸ್ಯ ಯು.ಎಸ್. ಶೆಣೈ  ತಿಳಿಸಿದರು.15 ವರ್ಷದಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ

ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಡಾ.ಎಸ್.ಎಲ್.ಭೈರಪ್ಪ ಆಯ್ಕೆ Read More »

ಕರ್ನಾಟಕ

ಬೆಳ್ತಂಗಡಿ : ಸ್ವಂತ ಅಣ್ಣನಿಂದಲೇ ದೌರ್ಜನ್ಯಕ್ಕೆ ಒಳಗಾದ ತಂಗಿ ➤ ಏಳು ತಿಂಗಳ ಗರ್ಭಿಣಿಯಾದ ಬಾಲಕಿ..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 25:  ಸ್ವಂತ ಅಣ್ಣ ಹಾಗೂ ಸಂಬಂಧಿಯಿಂದ 8ನೇ ತರಗತಿ ಅಪ್ರಾಪ್ತೆಯೊಬ್ಬಳು ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ. ಅಪ್ರಾಪ್ತೆಯ ಸಹೋದರ ಹಾಗೂ ಹತ್ತಿರದ ಸಂಬಂಧಿ 17 ವರುಷದ ಹಾಗೂ 16 ವರ್ಷದ ಅಪ್ರಾಪ್ತ ಬಾಲಕರಿಬ್ಬರು ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇನ್ನು, ಬಾಲಕಿಯ ದೈಹಿಕ ಬದಲಾವಣೆಯನ್ನು ಗಮನಿಸಿದ ಆಕೆಯ ತಾಯಿ ಹಾಗೂ ಅಕ್ಕ ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ

ಬೆಳ್ತಂಗಡಿ : ಸ್ವಂತ ಅಣ್ಣನಿಂದಲೇ ದೌರ್ಜನ್ಯಕ್ಕೆ ಒಳಗಾದ ತಂಗಿ ➤ ಏಳು ತಿಂಗಳ ಗರ್ಭಿಣಿಯಾದ ಬಾಲಕಿ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಿರಿಯ ಯಕ್ಷಗಾನ ಭಾಗವತ “ಕಂಚಿನ ಕಂಠದ” ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ. 25:  ಹಿರಿಯ ಯಕ್ಷಗಾನ ಭಾಗವತ, ತಮ್ಮ ಕಂಚಿನ ಕಂಠದಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ಪ್ರಸಿದ್ಧರಾಗಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನಿಧನರಾಗಿದ್ದಾರೆ.     ಬಂಟ್ವಾಳ ತಾಲೂಕಿನ ಕರೋಪಾಡಿ ಬಳಿತೆಂಕಬೈಲು ನಿವಾಸಿಯಾಗಿದ್ದ ಅವರ ವೃದಿಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂಧಿಸದೆ ವಿಧಿವಶರಾಗಿದ್ದಾರೆ. ತನ್ನಭಾಗವತಿಕೆಯಿಂದಲೇ ಜನಮನ ಸೆಳೆದಿದ್ದ ಇವರು ಸುಮಾರು 25 ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ಹಿರಿಯ ಯಕ್ಷಗಾನ ಭಾಗವತ “ಕಂಚಿನ ಕಂಠದ” ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ

ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಶ್ರಾವ್ಯ ಆರ್.ಅಂಚನ್ ಆಯ್ಕೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಸೆ. 25:  ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃ ತಿಕ ರಂಗಗಳ ಸಾಧನೆಗಳನ್ನು ಪರಿಗಣಿಸಿ ದಾವಣಗೆರೆ-ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನವು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಪಡುಬಿದ್ರಿಯ ಶ್ರಾವ್ಯ ಆರ್.ಅಂಚನ್ ಆಯ್ಕೆಯಾಗಿದ್ದಾರೆ. ಇಲ್ಲಿನ ಸಾಗರ್ ವಿದ್ಯಾ ಮಂದಿರ ಶಾಲಾ ವಿದ್ಯಾರ್ಥಿನಿಯಾಗಿದ್ದ ಈಕೆ ಈ ಬಾರಿಯ SSLC ತರಗತಿ ಪರೀಕ್ಷೆಯಲ್ಲಿ 613(ಶೆ.98.08) ಅಂಕ ಗಳಿಸಿದ್ದು, ಶೈಕ್ಷಣಿಕ ಸಾಧನೆಯೊಂದಿಗೆ ಕ್ರೀಡಾ ಚಟುವಟಿಕೆಯಲ್ಲೂ ಅದ್ಭುತ ಸಾಧಕರು. ಕಬಡ್ಡಿ ಕ್ರೀಡೆಯಲ್ಲಿ ಪಡುಬಿದ್ರಿ ಸಾಗರ್ ವಿದ್ಯಾ

ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಶ್ರಾವ್ಯ ಆರ್.ಅಂಚನ್ ಆಯ್ಕೆ Read More »

ಕರಾವಳಿ, ಕರ್ನಾಟಕ

ತ್ರಿವಳಿ ಜಿಲ್ಲೆಗಳ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ ➤ ಪಿಎಫ್ಐ ಉಪ್ಪಿನಂಗಡಿ ವತಿಯಿಂದ ಸಂತಾಪ ಸೂಚನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 24. ಹಿರಿಯ ವಿದ್ವಾಂಸ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯ ಸಂಯುಕ್ತ ಖಾಝಿ, ಸುನ್ನಿ ಜಂಇಯ್ಯತುಲ್ ಉಲಮಾ ಇದರ ರಾಜ್ಯಾಧ್ಯಕ್ಷರಾಗಿದ್ದ ಅಲ್ಹಾಜ್ ಬೇಕಲ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಇಂದು ಬೆಳಿಗ್ಗೆ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಪಾತ್ರರಾಗಿದ್ದಾರೆ ಎನ್ನುವ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು, ಇಂದು ಸಮುದಾಯದ ಪರಿಪೂರ್ಣ ನಾಯಕತ್ವರೊಬ್ಬರನ್ನು ಕಳಕೊಂಡ ಅತೀವ ದುಃಖದಲ್ಲಿದೆ. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸಿದೆ.

ತ್ರಿವಳಿ ಜಿಲ್ಲೆಗಳ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ ➤ ಪಿಎಫ್ಐ ಉಪ್ಪಿನಂಗಡಿ ವತಿಯಿಂದ ಸಂತಾಪ ಸೂಚನೆ Read More »

ಕರಾವಳಿ, ಕರ್ನಾಟಕ

ಅಜ್ಜಾವರ: ಯಶಸ್ವಿಯಾಗಿ ನಡೆದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 24. ಎಸ್ಕೆಎಸ್ಎಸ್ಎಫ್ ವಿಖಾಯ ರಕ್ತದಾನಿ ಬಳಗ ದ.ಕ. ಜಿಲ್ಲೆ ಇದರ ನಿರ್ದೇಶನ ಪ್ರಕಾರ ಎಸ್.ಕೆ.ಎಸ್.ಎಸ್.ಎಫ್ ಅಜ್ಜಾವರ ಕ್ಲಸ್ಟರ್ ಹಾಗೂ ಅಜ್ಜಾವರ ಕ್ಲಸ್ಟರ್ ವಿಖಾಯ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಸೆ. 24 ರಂದು ಅಜ್ವಾವರ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಜ್ವಾವರ ಎಂ.ಜೆ.ಎಮ್. ಖತೀಬರಾದ ಬಹು ಜಾಫರ್ ಸಾದಿಕ್ ದಾರಿಮಿ ಉದ್ಘಾಟಿಸಿದರು. ಅಜ್ಜಾವರ ಎಸ್.ಕೆ.ಎಸ್.ಎಸ್.ಎಫ್ ಕ್ಲಸ್ಟರ್ ಅಧ್ಯಕ್ಷರಾದ

ಅಜ್ಜಾವರ: ಯಶಸ್ವಿಯಾಗಿ ನಡೆದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಹಿರಿಯ ವಿದ್ವಾಂಸ, ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಧನಕ್ಕೆ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 24. ಹಿರಿಯ ವಿದ್ವಾಂಸ, ಉಡುಪಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ನಿಧನಕ್ಕೆ ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ. ಕರ್ಮಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿರುವ ಇವರು ಸುನ್ನೀ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿ, ಜಾಮಿಯಾ ಸ-ಅದಿಯ ಅರೇಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರಾಗಿ,

ಹಿರಿಯ ವಿದ್ವಾಂಸ, ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಧನಕ್ಕೆ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ Read More »

ಕರಾವಳಿ, ಕರ್ನಾಟಕ

ಪುತ್ತೂರು: ಸೆ. 26 ರಂದು ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 24. 33ಕೆ.ವಿ ಪುತ್ತೂರು- ಕಡಬ – ಮಾಡಾವು ಕಟ್ಟೆ -ಬೆಳ್ಳಾರೆ ಈ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಸೆ. 26ರಂದು ವಿದ್ಯುತ್ ನಿಲುಗಡೆಯಾಗಲಿದೆ. ಸೆ.26ರಂದು 33 ಕೆ.ವಿ ಮಾಡಾವು ಕಟ್ಟೆ -ಬೆಳ್ಳಾರೆ ದ್ವಿಮಾರ್ಗಗೊಳಿಸುವ ಕಾಮಗಾರಿಯ ಪ್ರಗತಿ ಕಾರ್ಯ ನಡೆಯಲಿರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ 33/11 ಕೆ.ವಿ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಉಪಕೇಂದ್ರದ ವ್ಯಾಪ್ತಿಯ ಎಲ್ಲಾ 11 ಕೆವಿ ಫೀಡರ್‌ಗಳಿಂದ

ಪುತ್ತೂರು: ಸೆ. 26 ರಂದು ವಿದ್ಯುತ್ ನಿಲುಗಡೆ Read More »

ಕರಾವಳಿ, ಕರ್ನಾಟಕ

ಡ್ರಗ್ಸ್‌‌‌ ಪ್ರಕರಣ : ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್‌‌..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24:   ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.     ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್​ ಉರುಳಿನಲ್ಲಿ ಸಿಲುಕಿದ್ದು, ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರು ವಾಟ್ಸ್‌ಆಯಪ್​ ಮೂಲಕ ನೋಟಿಸ್​ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡ್ರಗ್ಸ್‌‌‌ ಪ್ರಕರಣ : ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್‌‌..!! Read More »

ಕರಾವಳಿ, ಕರ್ನಾಟಕ
Scroll to Top